logo
ಕನ್ನಡ ಸುದ್ದಿ  /  ಜೀವನಶೈಲಿ  /  ಬ್ಯಾಂಕ್‌ಗಳಲ್ಲಿ ಕಡಿಮೆ ಆಗ್ತಿದೆ ಭಾರತೀಯರ ಉಳಿತಾಯ; ಹಾಗಾದ್ರೆ ಎಲ್ಲಿಗೆ ಹೋಗುತ್ತಿದೆ ದುಡ್ಡು?

ಬ್ಯಾಂಕ್‌ಗಳಲ್ಲಿ ಕಡಿಮೆ ಆಗ್ತಿದೆ ಭಾರತೀಯರ ಉಳಿತಾಯ; ಹಾಗಾದ್ರೆ ಎಲ್ಲಿಗೆ ಹೋಗುತ್ತಿದೆ ದುಡ್ಡು?

Meghana B HT Kannada

Jan 05, 2024 10:46 AM IST

ಹಣ ಉಳಿತಾಯ (ಪ್ರಾತಿನಿಧಿಕ ಚಿತ್ರ)

    • Savings of Indians: ಕಳೆದೆರಡು ವರ್ಷಗಳಿಂದ ಭಾರತೀಯರು ಬ್ಯಾಂಕ್‌ಗಳಲ್ಲಿ ಉಳಿತಾಯ ಕಡಿಮೆ ಮಾಡುತ್ತಿದ್ದಾರೆ. ಹಾಗಾದ್ರೆ ದುಡಿದ ಹಣವೆಲ್ಲಾ ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಇಲ್ಲಿದೆ ಉತ್ತರ.
ಹಣ ಉಳಿತಾಯ (ಪ್ರಾತಿನಿಧಿಕ ಚಿತ್ರ)
ಹಣ ಉಳಿತಾಯ (ಪ್ರಾತಿನಿಧಿಕ ಚಿತ್ರ)

"ಹೆಚ್ಚು ಉಳಿಸಿ, ಕಡಿಮೆ ಖರ್ಚು ಮಾಡಿ" ಎಂಬುದಕ್ಕೆ ವಿರುದ್ಧವಾಗಿ ಭಾರತೀಯರು ನಡೆದುಕೊಳ್ಳುತ್ತಿದ್ದಾರಾ? ಕೆಲ ವರದಿಗಳು ಹೌದು ಎನ್ನುತ್ತಿವೆ. ಇತರ ಕೆಲ ದೇಶಗಳಿಗೆ ಹೋಲಿಸಿದರೆ ಭಾರತೀಯರು ಬ್ಯಾಂಕ್‌ಗಳಲ್ಲಿ ಉಳಿತಾಯ ಕಡಿಮೆ ಮಾಡುತ್ತಿದ್ದಾರೆ. ಹಾಗಾದ್ರೆ ದುಡಿದ ಹಣವೆಲ್ಲಾ ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಇಲ್ಲಿದೆ ಉತ್ತರ.

ಟ್ರೆಂಡಿಂಗ್​ ಸುದ್ದಿ

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್‌ ಹೋಗುವ ಪ್ಲಾನ್‌ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್‌ ಮಾಡದೇ ಬರಬೇಡಿ

Yoga Asanas: ತೂಕ ಇಳಿಯುವ ಜೊತೆಗೆ ದೇಹ ಫಿಟ್‌ ಆಗಿರಬೇಕಾ? ಈ ಸರಳ ಯೋಗಾಸನಗಳನ್ನ ಮನೆಯಲ್ಲೇ ಅಭ್ಯಾಸ ಮಾಡಿ

2023ರ ಸೆಪ್ಟೆಂಬರ್​ ತಿಂಗಳಲ್ಲಿ ಬಿಡುಗಡೆಯಾದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಲೆಟಿನ್‌ನ ಇತ್ತೀಚಿನ ಮಾಹಿತಿಯ ಪ್ರಕಾರ, ಬ್ಯಾಂಕ್ ಉಳಿತಾಯ, ನಗದು ಮತ್ತು ಹೂಡಿಕೆಗಳನ್ನು ಒಳಗೊಂಡಿರುವ ಭಾರತೀಯರ ಉಳಿತಾಯವು ಹಣಕಾಸು ವರ್ಷ 2023ರಲ್ಲಿ (FY23) ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ 5.1 ಪ್ರತಿಶತಕ್ಕೆ ಕುಸಿದಿದೆ ಎಂದು ಬಹಿರಂಗಪಡಿಸಿದೆ. ಹಣಕಾಸು ವರ್ಷ 202ರಲ್ಲಿ ಈ ಪ್ರಮಾಣ ಶೇ. 7.1 ರಷ್ಟಿತ್ತು. ಇದೀಗ ಶೇ 2ರಷ್ಟು ಕುಸಿದಿದೆ.

ಹಾಗಾದರೆ, ಹಣ ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಕೋವಿಡ್​ ಸಾಂಕ್ರಾಮಿಕ ಬಳಿಕ ಜನರು ಕಡಿಮೆ ಬಡ್ಡಿದರದ ಲಾಭವನ್ನು ಪಡೆದುಕೊಂಡು ಮನೆಗಳು ಮತ್ತು ವಾಹನಗಳಂತಹ ಭೌತಿಕ ಆಸ್ತಿಗಳಿಗಾಗಿ ಹೆಚ್ಚು ಖರ್ಚು ಮಾಡಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದೆ.

ಇದೇ ವಿಚಾರವನ್ನು ಎಸ್‌ಬಿಐ ತನ್ನ ಸಂಶೋಧನಾ ವರದಿಯಲ್ಲಿ ಕೂಡ ಹೇಳಿದೆ. ಭೌತಿಕ ಸ್ವತ್ತುಗಳ ಮೇಲಿನ ಹೆಚ್ಚಿನ ಖರ್ಚು ಭಾರತೀಯ ಕುಟುಂಬಗಳಲ್ಲಿ ಆರ್ಥಿಕ ಬಾಧ್ಯತೆಗಳ ತೀವ್ರ ಏರಿಕೆಗೆ ಕಾರಣವಾಗಿದೆ. ಆದರೆ ಕೂಡ ಇದನ್ನು ಭೌತಿಕ ಮತ್ತು ಆರ್ಥಿಕ ಉಳಿತಾಯದ ಒಟ್ಟು ಮೊತ್ತವಾಗಿ ಪರಿಗಣಿಸಬೇಕು ಎಂದು ಹೇಳಿದೆ.

ಕಳೆದ ಎರಡು ವರ್ಷಗಳಲ್ಲಿ 50 ಪ್ರತಿಶತದಷ್ಟು ಚಿಲ್ಲರೆ ಸಾಲವು ಮನೆ, ವಸತಿ, ಶಿಕ್ಷಣ ಮತ್ತು ವಾಹನ ಖರೀದಿಗೆ ಹೋಗಿದೆ ಎಂದು ಎಸ್‌ಬಿಐ ವರದಿ ಎತ್ತಿ ತೋರಿಸಿದೆ. ಒಟ್ಟಾರೆಯಾಗಿ ಭೌತಿಕ ಆಸ್ತಿಗಳಿಗೆ ಹೆಚ್ಚು ವೆಚ್ಚ ಮಾಡುತ್ತಿರುವ ಕಾರಣ ಭಾರತೀಯ ಕುಟುಂಬಗಳು ಬ್ಯಾಂಕ್​​​ಗಳಲ್ಲಿ ನಗದು ಉಳಿತಾಯವು ತೀವ್ರವಾಗಿ ಕುಸಿದಿದೆ. ರಿಯಲ್ ಎಸ್ಟೇಟ್ ವಲಯದಲ್ಲಿ ಸುಧಾರಣೆ ಮತ್ತು ಆಸ್ತಿ ಬೆಲೆಗಳ ಹೆಚ್ಚಳದಿಂದೂ ಭೌತಿಕ ಆಸ್ತಿಗಳ ಸೃಷ್ಟಿಗೆ ಕಾರಣವಾಗಿದೆ.

ಈ ವರದಿಗಳ ಹೊರತಾಗಿ ನೋಡುವುದಾರೆ ಬಡ ಹಾಗೂ ಮಧ್ಯಮ ಕುಟುಂಬಗಳಿಗೆ ಆಸ್ಪತ್ರೆಯ ಖರ್ಚುಗಳೇ ಹೊರೆಯಾಗಿವೆ. ಮಕ್ಕಳ ಶಿಕ್ಷಣಕ್ಕೂ ಹೆಚ್ಚು ಖರ್ಚಾಗುತ್ತಿದೆ. ದುಡಿದಿದ್ದು ಸಾಲದೆ ಸಾಲದ ಮೊರೆ ಹೋಗಿದ್ದಾರೆ. ಹೀಗಿರುವಾಗ ಉಳಿತಾಯ ಹೇಗೆ ಸಾಧ್ಯ. ಶ್ರೀಮಂತರು ಚಿನ್ನ ಖರೀದಿ, ಐಷಾರಾಮಿ ಕಾರುಗಳ ಖರೀದಿಗೆ ಹೆಚ್ಚು ಹಣ ಸುರಿಯುತ್ತಾರೆ.

    ಹಂಚಿಕೊಳ್ಳಲು ಲೇಖನಗಳು