Biscuit Bonda: ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬಿಸಿಬಿಸಿಯಾಗಿ ಮಾಡಿಕೊಡಿ ಬಿಸ್ಕತ್ ಬೊಂಡಾ, ಇಲ್ಲಿದೆ ಸ್ಪೆಷಲ್ ರೆಸಿಪಿ
May 07, 2024 06:04 PM IST
ಬಿಸ್ಕತ್ ಬೋಂಡಾ
- ಬೇಸಿಗೆ ರಜೆಯ ಕಾರಣ ಮನೆಯಲ್ಲೇ ಇರುವ ಮಕ್ಕಳು ತಿಂಡಿಯಾಗಿ ಹಠ ಮಾಡುವುದು ಸಹಜ. ಹಾಗಂತ ದಿನಾ ಒಂದೇ ರೀತಿ ತಿಂಡಿ ಮಾಡಿಕೊಟ್ಟರೆ ಮಕ್ಕಳಿಗೆ ಇಷ್ಟವಾಗೋದಿಲ್ಲ. ಅದಕ್ಕಾಗಿ ನೀವು ಡಿಫ್ರೆಂಟ್ ಆಗಿರೋ ಬಿಸ್ಕತ್ತು ಬೊಂಡಾ ರೆಸಿಪಿ ಟ್ರೈ ಮಾಡಬಹುದು. ಇದನ್ನು ಮಕ್ಕಳು ಇಷ್ಟಪಟ್ಟು ತಿನ್ನೋದು ಪಕ್ಕಾ.
ಬೇಸಿಗೆ ರಜೆಯಲ್ಲಿ ಮಕ್ಕಳು ತಿಂಡಿಗಾಗಿ ಹಂಬಲಿಸುವುದು ಸಹಜ. ಪ್ರತಿದಿನ ಹೊರಗಡೆಯಿಂದ ತಿಂಡಿ ಕೊಟ್ರೆ ಆರೋಗ್ಯ ಕೆಡುತ್ತೆ. ಹಾಗಂತ ಒಂದೇ ಥರ ತಿಂಡಿ ಮಾಡಿದ್ರೆ ಮಕ್ಕಳಿಗೆ ಇಷ್ಟವಾಗೋದಿಲ್ಲ. ಅದಕ್ಕೆ ಹೊಸ ಹೊಸ ತಿಂಡಿಗಳನ್ನು ಕೇಳುತ್ತಾರೆ. ನಿಮ್ಮ ಮನೇಲೂ ಅಂತಹ ಮಕ್ಕಳಿದ್ರೆ ನೀವು ಬಿಸ್ಕತ್ ಬೋಂಡಾ ಟ್ರೈ ಮಾಡಬಹುದು. ಇದು ಮಕ್ಕಳಿಗೆ ಸಿಕ್ಕಾಪಟ್ಟೆ ಇಷ್ಟ ಆಗೋದ್ರಲ್ಲಿ ಎರಡು ಮಾತಿಲ್ಲ.
ಇದು ಸಂಜೆಯ ಸ್ನ್ಯಾಕ್ಸ್‌ಗೆ ಹೇಳಿ ಮಾಡಿಸಿದ ರೆಸಿಪಿ. ಇದನ್ನು ಮಕ್ಕಳು ಮಾತ್ರವಲ್ಲ ದೊಡ್ಡವರು ತಿನ್ನಬಹುದು. ನಿಮ್ಮ ಬಿಡುವಿನ ವೇಳೆಯಲ್ಲಿ ಕಾಫಿ-ಟೀ ಜೊತೆ ತಿನ್ನಲು ಈ ಬಿಸ್ಕತ್ ಬೋಂಡಾ ಹೇಳಿ ಮಾಡಿಸಿದ್ದು. ಈ ರೆಸಿಪಿ ಮಾಡಲು ಸುಲಭ ಹಾಗೂ ತಿನ್ನಲು ಸಖತ್ ಟೇಸ್ಟಿಯಾಗಿರುತ್ತದೆ. ಹಾಗಾದರೆ ಬಿಸ್ಕತ್ ಬಳಸಿ ಬೋಂಡಾ ಮಾಡುವುದು ಹೇಗೆ? ಅದರ ತಯಾರಿಕೆಗೆ ಬೇಕಾದ ಪದಾರ್ಥಗಳು ಯಾವುವು? ವಿಧಾನ ಯಾವುದು? ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಬಿಸ್ಕತ್ತು ಬೋಂಡಾಗೆ ಬೇಕಾಗುವ ಸಾಮಗ್ರಿಗಳು
ಕಡಲೆಹಿಟ್ಟು - 1 ಕಪ್, ಬಿಸ್ಕತ್ತು - 1 ಪ್ಯಾಕೆಟ್, ಕೊತ್ತಂಬರಿ - 2 ಚಮಚ, ಮೆಣಸಿನ ಪುಡಿ - 1 ಟೀ ಚಮಚ, ಅರಿಶಿನ ಪುಡಿ - 1/4 ಟೀ ಚಮಚ, ಕರಿಬೇವು - 1 ಚಮಚ, ಅಡಿಗೆ ಸೋಡಾ - 1/4 ಟೀ ಚಮಚ, ಅಡುಗೆ ತುಪ್ಪ, ರುಚಿಗೆ ಉಪ್ಪು
ಬಿಸ್ಕೆಟ್ ಬೋಂಡಾ ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ಕಡಲೆಹಿಟ್ಟನ್ನು ತೆಗೆದುಕೊಂಡು ಸೋಡಾ ಪುಡಿ, ಧನಿಯಾ ಪುಡಿ, ಅರಿಶಿನ, ಖಾರದಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೊದಲು ನೀರು ಸೇರಿಸದೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ. ಈ ಹಿಟ್ಟು ಸ್ವಲ್ಪ ದಪ್ಪವಾಗಿರಬೇಕು. ಹಿಟ್ಟು ದೋಸೆ ಹಿಟ್ಟಿನ ಹದಕ್ಕಿರಲಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲೆ ಇಡಿ. ನಂತರ ಬಿಸ್ಕತ್ತುಗಳನ್ನು ಎರಡೂ ಬದಿಗಳಲ್ಲಿ ಹಿಟ್ಟಿನಲ್ಲಿ ಅದ್ದಿ. ಇದನ್ನು ಎಣ್ಣೆಯಲ್ಲಿ ಕರಿಯಿರಿ. ಬಿಸ್ಕತ್ತು ಎರಡೂ ಬದಿಗಳಲ್ಲಿ ಗೋಲ್ಡನ್ ಆಗುವವರೆಗೆ ಕಾಯಿಸಿ. ನಿಮ್ಮ ನೆಚ್ಚಿನ ಬಿಸ್ಕೆಟ್ ಬೋಂಡಾ ನಿಮ್ಮ ಮುಂದೆ ಸಿದ್ಧ. ಇದು ಚಹಾ-ಕಾಫಿಯೊಂದಿಗೆ ಚೆನ್ನಾಗಿ ಹೊಂದುತ್ತದೆ. ಈ ಬಿಸ್ಕತ್ತು ಬೋಂಡಾ ಮಾಡಲು 50 50ಯಂತಹ ಉಪ್ಪಿನಾಂಶ ಇರುವ ಬಿಸ್ಕತ್ತು ಆಯ್ದುಕೊಳ್ಳಿ. ಸಿಹಿ ಬಿಸ್ಕತ್‌ನಲ್ಲಿ ಮಾಡಿದರೆ ರುಚಿ ಚೆನ್ನಾಗಿರುವುದಿಲ್ಲ. ಆದರೆ ಇದನ್ನು ಉಪ್ಪಿನ ಬಿಸ್ಕತ್‌ನಿಂದ ಮಾಡಲಾಗಿರುವುದರಿಂದ ಉಪ್ಪನ್ನು ಸಹ ಸರಿಯಾದ ಪ್ರಮಾಣದಲ್ಲಿ ಸೇರಿಸಬೇಕು, ಹೆಚ್ಚು ಉಪ್ಪು ಹಾಕುವುದರಿಂದ ರುಚಿ ಕೆಡಬಹುದು.
ಈ ರೀತಿ ಬಿಸ್ಕತ್ ಬೋಂಡಾ ಮಾಡಿಕೊಟ್ಟರೆ ನಿಮ್ಮ ಮನೆಯ ಮಕ್ಕಳು ಖಂಡಿತ ಇಷ್ಟಪಟ್ಟು ತಿಂತಾರೆ, ಇದನ್ನು ಕಡಿಮೆ ಇಂಗ್ರಿಂಡಿಯೆಂಟ್ಸ್‌ನಲ್ಲಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಕಾರಣ ಸಮಯವೂ ಉಳಿಸುತ್ತದೆ. ನೀವು ಮನೆಯಲ್ಲಿ ಟ್ರೈ ಮಾಡಿ.
ವಿಭಾಗ