logo
ಕನ್ನಡ ಸುದ್ದಿ  /  ಜೀವನಶೈಲಿ  /  Mutton Tikka Biryani: ಒಂದೇ ರುಚಿಯ ಬಿರಿಯಾನಿ ತಿಂದು ಬೇಸರ ಆಗಿದ್ರೆ ಮಟನ್‌ ಟಿಕ್ಕಾ ಬಿರಿಯಾನಿ ಟ್ರೈ ಮಾಡಿ; ತಯಾರಿಸುವ ವಿಧಾನ ಇಲ್ಲಿದೆ

Mutton Tikka Biryani: ಒಂದೇ ರುಚಿಯ ಬಿರಿಯಾನಿ ತಿಂದು ಬೇಸರ ಆಗಿದ್ರೆ ಮಟನ್‌ ಟಿಕ್ಕಾ ಬಿರಿಯಾನಿ ಟ್ರೈ ಮಾಡಿ; ತಯಾರಿಸುವ ವಿಧಾನ ಇಲ್ಲಿದೆ

Reshma HT Kannada

May 09, 2024 05:18 PM IST

ಮಟನ್‌ ಟಿಕ್ಕಾ ಬಿರಿಯಾನಿ

    • ನಾನ್‌ವೆಜ್‌ ಪ್ರಿಯರಿಗೆ ಬಿರಿಯಾನಿ ಮೇಲೆ ವಿಶೇಷ ಒಲವು. ಚಿಕನ್‌, ಮಟನ್‌ ಬಿರಿಯಾನಿ ಎಂದರೆ ಬೇಡ ಅಂತ ಹೇಳಲು ಸಾಧ್ಯವೇ ಇಲ್ಲ. ಆದ್ರೆ ಒಂದೇ ರುಚಿಯ ಬಿರಿಯಾನಿ ತಿಂದ್ರೆ ಏನ್‌ ಮಜಾ ಇರುತ್ತೆ, ಅದಕ್ಕಾಗಿ ನೀವು ಡಿಫ್ರೆಂಟ್‌ ರುಚಿಯ ಮಟನ್‌ ಟಿಕ್ಕಾ ಬಿರಿಯಾನಿ ಟ್ರೈ ಮಾಡಿ. ರೆಸಿಪಿ ಇಲ್ಲಿದೆ.
ಮಟನ್‌ ಟಿಕ್ಕಾ ಬಿರಿಯಾನಿ
ಮಟನ್‌ ಟಿಕ್ಕಾ ಬಿರಿಯಾನಿ

ಬಿರಿಯಾನಿ ಪ್ರಿಯರು ನೀವಾಗಿದ್ದರೆ ಬಗೆ ಬಗೆಯ ಬಿರಿಯಾನಿ ರುಚಿ ಸವಿಯಬೇಕು ಅನ್ನಿಸುವುದು ಸಹಜ. ಯಾವಾಗಲೂ ಚಿಕನ್‌ ಬಿರಿಯಾನಿ ತಿಂತಾ ಇರ್ತೀರಿ, ಅಪರೂಪಕ್ಕೊಮ್ಮೆ ಮಟನ್‌ ಬಿರಿಯಾನಿಯನ್ನೂ ತಿಂತೀರಿ. ಆದರೆ ಅದು ಕೂಡ ನಿಮಗೆ ಬೇಸರ ತರಿಸಿರಬಹುದು. ಹಾಗಿದ್ರೆ ನೀವು ಮಟನ್‌ ಟಿಕ್ಕಾ ಬಿರಿಯಾನಿ ಟ್ರೈ ಮಾಡಿ. ಇದನ್ನು ಸುಲಭವಾಗಿ ಮನೆಯಲ್ಲೂ ಟ್ರೈ ಮಾಡಬಹುದು. ಸಖತ್‌ ಟೇಸ್ಟಿ ಮಟನ್‌ ಟಿಕ್ಕಾ ಬಿರಿಯಾನಿ ರೆಸಿಪಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

Personality Test: ಚಿತ್ರದಲ್ಲಿ ಮೊದಲು ಕಂಡಿದ್ದೇನು? ನೀವು ನೇರ ಸ್ವಭಾವದವರಾ, ಮೌನಪ್ರೇಮಿಯೇ, ನಿಮ್ಮ ವ್ಯಕ್ತಿತ್ವ ತಿಳಿಸುವ ಚಿತ್ರವಿದು

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಮಟನ್‌ ಟಿಕ್ಕಾ ಬಿರಿಯಾನಿಗೆ ಬೇಕಾಗುವ ಸಾಮಗ್ರಿಗಳು

ಮಟನ್‌ ತುಂಡುಗಳು - ಅರ್ಧ ಕೆಜಿ, ಬಾಸುಮತಿ ಅಕ್ಕಿ - 2 ಕಪ್‌, ಮೊಸರು - 1 ಕಪ್‌, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ - 2 ಚಮಚ, ಖಾರದಪುಡಿ - 1 ಚಮಚ, ಅರಿಸಿನ ಪುಡಿ - ಅರ್ಧ ಚಮಚ, ಗರಂ ಮಸಾಲ - 1 ಚಮಚ, ಉಪ್ಪು - ರುಚಿಗೆ, ರೋಸ್‌ ವಾಟರ್‌- ಸ್ವಲ್ಪ, ಹುರಿದುಕೊಂಡ ಈರುಳ್ಳಿ, ಪುದಿನಾ ಸೊಪ್ಪು, ನಿಂಬೆ

ಮಟನ್‌ ಟಿಕ್ಕಾ ಬಿರಿಯಾನಿ ತಯಾರಿಸುವ ವಿಧಾನ 

 ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಖಾರದಪುಡಿ, ಅರಿಸಿನ ಪುಡಿ, ಗರಂಮಸಾಲೆ ಮತ್ತು ಉಪ್ಪು ಈ ಎಲ್ಲವನ್ನೂ ಕಲೆಸಿ ಒಂದು ಮಿಶ್ರಣ ತಯಾರಿಸಿ. ಇದರಲ್ಲಿ ಮಟನ್‌ ತುಂಡು ಹಾಕಿ ಚೆನ್ನಾಗಿ ಕಲೆಸಿ 2 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಮಟನ್‌ ತುಂಡುಗಳನ್ನು ಗ್ರಿಲ್‌ ಮಾಡಿ, ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಬಾಸುಮತಿ ಅಕ್ಕಿಯನ್ನು ಶೇ 70ರಷ್ಟು ಬೇಯಿಸಿಕೊಳ್ಳಿ. ಇದರಿಂದ ನೀರು ಸೋಸಿ ಒಂದೆಡೆ ಇರಿಸಿ.

ಈ ಅಗಲವಾದ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ, ಚಕ್ಕೆ, ದಾಲ್ಚಿನ್ನಿ ಎಲೆ, ಏಲಕ್ಕಿ, ಲವಂಗ ಎಲ್ಲವನ್ನೂ ಸೇರಿಸಿ ಹುರಿದುಕೊಳ್ಳಿ. ನಂತರ ಬೇಯಿಸಿಕೊಂಡ ಅಕ್ಕಿ ಹಾಕಿ. ಅದರ ಮೇಲೆ ನೆನೆಸಿಟ್ಟುಕೊಂಡ ಮಟನ್‌ ತುಂಡುಗಳನ್ನು ಹಾಕಿ. ಅದರ ಮೇಲೆ ಮತ್ತೆ ಅಕ್ಕಿ ಹಾಕಿ. ನಂತರ ಮತ್ತೆ ಮಟನ್‌ ತುಂಡುಗಳನ್ನು ಹರಡಿ. ಪಾತ್ರೆಯ ಮುಚ್ಚಳವನ್ನು ಸಂಪೂರ್ಣವಾಗಿ ಮುಚ್ಚಿ. ಇದನ್ನು ಅರ್ಧ ಗಂಟೆ ಬೇಯಿಸಿ. ಈಗ ನಿಮ್ಮ ಮುಂದೆ ರುಚಿಯಾದ ಮಟನ್‌ ಟಿಕ್ಕಾ ಬಿರಿಯಾನಿ ತಿನ್ನಲು ಸಿದ್ಧ.

ಇದನ್ನೂ ಓದಿ

ಹೋಟೆಲ್‌ ಶೈಲಿಯ ಹೈದ್ರಾಬಾದಿ ಮಟನ್‌ ಬಿರಿಯಾನಿಯನ್ನ ಮನೆಯಲ್ಲೇ ಮಾಡ್ಕೊಳ್ಳಿ; ಸಖತ್‌ ಸಿಂಪಲ್‌ ರೆಸಿಪಿ ಇದು

ಬಿರಿಯಾನಿಗೆ ಕೇರಾಫ್‌ ಅಡ್ರೆಸ್‌ ಅಂದ್ರೆ ಹೈದ್ರಾಬಾದಿ ಬಿರಿಯಾನಿ. ಅದ್ರಲ್ಲೂ ಹೈದ್ರಾಬಾದಿ ಮಟನ್‌ ಬಿರಿಯಾನಿ ತುಂಬಾನೇ ಫೇಮಸ್‌. ಒಮ್ಮೆ ಇದರ ರುಚಿ ನೋಡಿದ್ರೆ ಮತ್ತೆ ಮತ್ತೆ ಬೇಕು ಅನ್ನಿಸುತ್ತೆ. ಹೋಟೆಲ್‌ನಲ್ಲಿ ತಿಂದ ಮಟನ್‌ ಬಿರಿಯಾನಿ ರುಚಿಯನ್ನು ಮನೆಯಲ್ಲೂ ಟ್ರೈ ಮಾಡಬೇಕು ಅಂದ್ರೆ ಇಲ್ಲಿದೆ ರೆಸಿಪಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು