ಕನ್ನಡ ಸುದ್ದಿ  /  ಜೀವನಶೈಲಿ  /  Drumstick Biryani: ಹೊಸ ರುಚಿಯ ಬಿರಿಯಾನಿ ಮಾಡ್ಬೇಕು ಅಂತ ಯೋಚಿಸಿದ್ರೆ ನುಗ್ಗೆಕಾಯಿ ಬಿರಿಯಾನಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Drumstick Biryani: ಹೊಸ ರುಚಿಯ ಬಿರಿಯಾನಿ ಮಾಡ್ಬೇಕು ಅಂತ ಯೋಚಿಸಿದ್ರೆ ನುಗ್ಗೆಕಾಯಿ ಬಿರಿಯಾನಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಬಿರಿಯಾನಿ ಎಂದಾಕ್ಷಣ ಮಾಂಸಾಹಾರಿಗಳೇ ನೆನಪಾಗುತ್ತಾರೆ. ಆದರೆ ವೆಜ್‌ನಲ್ಲೂ ಬಗೆ ಬಗೆ ಬಿರಿಯಾನಿ ಮಾಡಬಹುದು. ಹಲವರಿಗೆ ಫೇವರಿಟ್‌ ತರಕಾರಿ ಎನ್ನಿಸಿಕೊಂಡ ನುಗ್ಗೆಕಾಯಿಯಿಂದಲೂ ಸಖತ್‌ ಟೇಸ್ಟಿ ಬಿರಿಯಾನಿ ಮಾಡಬಹುದು. ಹೇಗೆ ಮಾಡೋದು ಅಂತ ವಿವರ ಇಲ್ಲಿದೆ ನೋಡಿ.

ನುಗ್ಗೆಕಾಯಿ ಬಿರಿಯಾನಿ
ನುಗ್ಗೆಕಾಯಿ ಬಿರಿಯಾನಿ

ಬೇಸಿಗೆ ಕಾಲದಲ್ಲಿ ಮಾಂಸಾಹಾರಿಗಳು ಕೂಡ ಮಾಂಸ ತಿನ್ನಲು ಇಷ್ಟಪಡುವುದಿಲ್ಲ. ಮಾಂಸ ತಿನ್ನುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚುತ್ತದೆ. ಹಾಗಂತ ನಾಲಿಗೆ ಕೇಳಬೇಕಲ್ಲ. ಅದು ರುಚಿ ರುಚಿಯಾದ ಖಾದ್ಯಗಳನ್ನು ಬಯಸುವುದು ಸಹಜ. ಈ ಸಮಯದಲ್ಲಿ ನಿಮಗೆ ಬಿರಿಯಾನಿ ತಿನ್ನಬೇಕು ಅನ್ನಿಸಿದ್ರೆ ವೆಜ್‌ ಬಿರಿಯಾನಿ ಮಾಡಬಹುದು, ಆದ್ರೆ ಇದರಲ್ಲೇ ಡಿಫ್ರೆಂಟ್‌ ಆಗಿರೋದು ಟ್ರೈ ಮಾಡಬೇಕು ಅನ್ನಿಸಿದ್ರೆ ನುಗ್ಗೆಕಾಯಿ ಬಿರಿಯಾನಿ ಟ್ರೈ ಮಾಡಿ. ಇದು ನಿಮಗೆ ಹೊಸ ರುಚಿ ನೀಡುತ್ತದೆ, ಆರೋಗ್ಯಕ್ಕೂ ಒಳ್ಳೆಯದು. ನುಗ್ಗೆಕಾಯಿ ಹಲವರಿಗೆ ಫೇವರಿಟ್‌ ಆಗಿರುವ ಕಾರಣ ಇದರಿಂದ ಬಿರಿಯಾನಿ ಮಾಡಿದ್ರೆ ಖಂಡಿತ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಸಖತ್‌ ಟೇಸ್ಟಿ ಆಗಿರುವ ನುಗ್ಗೆಕಾಯಿ ಬಿರಿಯಾನಿ ಚಿಕನ್‌, ಮಟನ್‌ ಬಿರಿಯಾನಿಗೆ ಕಮ್ಮಿಯೇನಲ್ಲ ಅಂತಲೇ ಹೇಳಬಹುದು. ಶಾಖಾಹಾರಿಗಳಿಗಂತೂ ಈ ಬಿರಿಯಾನಿ ರುಚಿ ಇಷ್ಟ ಆಗೋದ್ರಲ್ಲಿ ಎರಡು ಮಾತಿಲ್ಲ. ಹಾಗಾದ್ರೆ ನುಗ್ಗೆಕಾಯಿ ಬಿರಿಯಾನಿ ಮಾಡೋಕೇ ಏನೆಲ್ಲಾ ಸಾಮಗ್ರಿಗಳು ಬೇಕು, ಇದನ್ನು ತಯಾರಿಸೋದು ಹೇಗೆ ಎಂಬಿತ್ಯಾದಿ ವಿವರಗಳನ್ನು ನೋಡೋಣ.

ನುಗ್ಗೆಕಾಯಿ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಬಾಸ್ಮತಿ ಅಕ್ಕಿ - 400 ಗ್ರಾಂ, ನುಗ್ಗೆಕಾಯಿ - 3, ದಾಲ್ಚಿನ್ನಿ ಎಲೆ- 2, ಚಕ್ಕೆ - 2, ಏಲಕ್ಕಿ - 4, ಲವಂಗ - 8, ಈರುಳ್ಳಿ - 4, ಟೊಮೆಟೊ - 3, ಪುದೀನ ಎಲೆಗಳು - 1, ಕೊತ್ತಂಬರಿ ಸೊಪ್ಪು - 1 ಚಮಚ (ಹೆಚ್ಚಿದ್ದು), ಹಸಿ ಮೆಣಸಿನಕಾಯಿ - 6, ಹಸಿರು ಬಟಾಣಿ - 1/2 ಕಪ್, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಒಂದೂವರೆ ಚಮಚ, ಬಿರಿಯಾನಿ ಎಲೆಗಳು - 4, ಬಿರಿಯಾನಿ ಮಸಾಲ - 1/2 ಚಮಚ, ಕಸೂರಿ ಮೇಥಿ - 1 ಚಮಚ, ಖಾರದಪುಡಿ - 1 ಚಮಚ, ಅಡುಗೆ ಎಣ್ಣೆ ಸ್ವಲ್ಪ, ರುಚಿಗೆ ಉಪ್ಪು

ನುಗ್ಗೆಕಾಯಿ ಬಿರಿಯಾನಿ ಮಾಡುವ ವಿಧಾನ

 ಮೊದಲು ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಅದರಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಈರುಳ್ಳಿ, ಲವಂಗ ಮತ್ತು ಬಿರಿಯಾನಿ ಎಲೆಗಳನ್ನು ಹಾಕಿ ಹುರಿಯಿರಿ.

ಇದಕ್ಕೆ ಪುದಿನಾ, ಕೊತ್ತಂಬರಿ ಸೊಪ್ಪು, ಕಸೂರಿ ಮೇತಿ ಸೇರಿಸಿ. ನಂತರ ಹಸಿರು ಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಈಗ ಟೊಮೆಟೊ, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. 3 ರಿಂದ 4 ನಿಮಿಷಗಳ ಕಾಲ ಫ್ರೈ ಮಾಡಿ, ಬಟಾಣಿ ಸೇರಿಸಿ. ನಂತರ ಬಿರಿಯಾನಿ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಇದು ಪೇಸ್ಟ್ ರೀತಿ ಇರಬೇಕು. ಈಗ ಕತ್ತರಿಸಿಟ್ಟುಕೊಂಡ ನುಗ್ಗೆಕಾಯಿ ಸೇರಿಸಿ ಫ್ರೈ ಮಾಡಿ. ನಂತರ ತೊಳೆದಿಟ್ಟುಕೊಂಡ ಅಕ್ಕಿ ಹಾಕಿ, ಅಕ್ಕಿ ಮುಳುಗುವಷ್ಟು ನೀರು ಸೇರಿಸಿ. ನೀರು ಒಂದು ಕುದಿ ಬಂದ ನಂತರ ಪಾತ್ರೆಯನ್ನು ಮುಚ್ಚಿ ಅರ್ಧ ಗಂಟೆಗಳ ಕಾಲ ಬೇಯಿಸಿ, ಕುಕ್ಕರ್‌ನಲ್ಲಿ ಮಾಡಿದ್ದರೆ ಈ ವಿಧಾನ ಅನುಸರಿಸಿ 2 ವಿಶಲ್‌ ಕೂಗಿಸಿ. ಈಗ ನಿಮ್ಮ ಮುಂದೆ ರುಚಿಯಾದ ನುಗ್ಗೆಕಾಯಿ ಬಿರಿಯಾನಿ ತಿನ್ನಲು ಸಿದ್ಧ.

ವಿಭಾಗ