logo
ಕನ್ನಡ ಸುದ್ದಿ  /  ಜೀವನಶೈಲಿ  /  Xiaomi 14 Ultra: ಅದ್ಭುತ ಕ್ಯಾಮೆರಾದೊಂದಿಗೆ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್ ಬಂದೇಬಿಡ್ತು

Xiaomi 14 Ultra: ಅದ್ಭುತ ಕ್ಯಾಮೆರಾದೊಂದಿಗೆ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್ ಬಂದೇಬಿಡ್ತು

Raghavendra M Y HT Kannada

Feb 26, 2024 05:23 PM IST

ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಪೋನ್ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.

    • Xiaomi 14 Ultra Price: ಹೊಸ ವೈಶಿಷ್ಟ್ಯಗಳೊಂದಿಗೆ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಶಿಯೋಮಿ 14 ಅಲ್ಟ್ರಾ ಬೆಲೆ ಹಾಗೂ ಇದರಲ್ಲಿನ ಹೊಸತನದ ಮಾಹಿತಿ ಇಲ್ಲಿದೆ.
ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಪೋನ್ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.
ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಪೋನ್ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.

ಬಹು ನಿರೀಕ್ಷಿತ ಶಿಯೋಮಿ 14 ಅಲ್ಟ್ರಾ ಪ್ರೀಮಿಯಂ ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆಯಾಗಿದೆ. ಈ ಗ್ಯಾಡ್ಜೆಟ್ ಅತಿ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಬರಲಿದೆ. ಈ ಹಿನ್ನೆಲೆಯಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಬಂದಿರುವ ಶಿಯೋಮಿ 14 ಅಲ್ಟ್ರಾ ಬೆಲೆ ಹಾಗೂ ಇತರೆ ವಿವರಗಳು ಇಲ್ಲಿವೆ.

ಟ್ರೆಂಡಿಂಗ್​ ಸುದ್ದಿ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ಶಿಯೋಮಿ 14 ಅಲ್ಟ್ರಾ ಫೋನಿನಲ್ಲಿ ಅದ್ಭುತವಾದ 6.73 ಇಂಚಿನ ಒಎಲ್‌ಇಡಿ ಎಲ್‌ಟಿಪಿಒ ಡಿಸ್‌ಪ್ಲೇ ಇದೆ. 120 ಹೆಚ್‌ಝಡ್ ರಿಫ್ರೆಶ್ ದರ, 3000 ನಿಟ್ಸ್ ಗರಿಷ್ಠ ಹೊಳವು, ಹೆಚ್ಚು ದಿನಗಳ ಬಾಳಿಕೆಗಾಗಿ ಈ ಸ್ಮಾರ್ಟ್‌ಫೋನ್ ಶೀಲ್ಡ್ ಗ್ಲಾಸ್ ರಕ್ಷಣೆಯನ್ನ ಪಡೆದಿದೆ. ಇದು ಸಾಮಾನ್ಯ ಗಾಜಿನ ಪ್ರೊಟೆಕ್ಷನ್‌ಗಿಂತ 10 ಪಟ್ಟು ಬಲಶಾಲಿಯಾಗಿದೆ. ಇದರ ಮತ್ತೊಂದು ವಿಶೇಷವೆಂದರೆ ಅಲ್ಯೂಮಿನಿಯಂನಿಂದ ಇದನ್ನ ನಿರ್ಮಾಣ ಮಾಡಲಾಗಿದೆ. ತುಂಬಾ ರಾಯಲ್ ಆಗಿ ಬೇಕು ಅನ್ನೋರಿಗೆ ಟೈಟಾನಿಂ ವಿಶೇಷದ ಆವೃತ್ತಿಯೂ ಸಿಗುತ್ತದೆ.

ಶಿಯೋಮಿ 14 ಅಲ್ಟ್ರಾದಲ್ಲಿ ಪ್ರಬಲವಾದ ಸ್ಯ್ನಾಪ್‌ಡ್ರ್ಯಾಗನ್ 8 ಜೆನ್ 3 ಚಿಪ್‌ಸೆಟ್ ಅನ್ನು ಹೊಂದಿದೆ. 16 ಜಿಬಿ RAM, 1 ಟಿಬಿ ಇಂಟರ್‌ನಲ್ ಸ್ಟೋರೇಜ್‌ನೊಂದಿಗೆ ಬಂದಿದೆ. ಉನ್ನತ ಮಟ್ಟದಲ್ಲಿ ಕಾನ್ಫಿಗರೇಶನ್‌ಗಳನ್ನು ನಿರೀಕ್ಷೆ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಇಷ್ಟೊಂದು ಶಕ್ತಿಯುತ ಕಾರ್ಯಕ್ಷಮತೆ ಇರುವಂತೆ ತಯಾರಿಸಲಾಗಿದೆ.

ಇವಿಷ್ಟೇ ಅಲ್ಲದೆ ಈ ಫೋನಿನಲ್ಲಿ ಅಲ್ಟ್ರಾ-ಲೋ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದನ್ನು ನೋಡಿದ್ರೆ ಶಿಯೋಮಿ ಕಂಪನಿ ಕ್ಯಾಮೆರಾದ ಮೇಲೆಯೇ ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾಪಿಕ್ಸೆಲ್ ಲೆನ್ಸ್ ಮತ್ತು 1 ಇಂಚಿನಿ ಸೋನಿ ಎಲ್‌ವಿಟಿ-900 ಸೆನ್ಸಾರ್ ಹೊಂದಿದೆ. ಅತ್ಯುತ್ತಮ ಇಮೇಜಿಂಗ್ ಅನುಭವವನ್ನು ನೀಡುತ್ತದೆ. ಟೆಲಿಫೋಟೊ ಲೆನ್ಸ್ 3.2x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಸೆನ್ಸಾರ್, ಪೆರಿಸ್ಕೋಪ್ ಲೆನ್ಸ್ 5x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ. ಅಲ್ಟ್ರಾವೈಡ್ ಲೆನ್ಸ್ 122-ಡಿಗ್ರಿ ವೈಲ್ಡ್ ಫೀಲ್ಡ್ ಆಫ್ ವೀವ್‌ನಂತಹ ಹತ್ತಾರು ವೈಶಿಷ್ಟ್ಯಗಳಿವೆ.

ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ 5300 mAh ಬ್ಯಾಟರಿ ಇದ್ದು, 90W ವೇಗದ ಚಾರ್ಜಿಂಗ್ ಆಯ್ಕೆ, ಹೆಚ್ಚಿನ ಅನುಕೂಲಕ್ಕಾಗಿ 80W ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಯೂ ಇದೆ. ಈ ಫೋನ್‌ ಹೈಪರ್ ಒಎಸ್ ಆಪರೇಟಿಂಗ್ ಸಿಸ್ಟಮ್‌ನ ಇತ್ತೀಚಿನ ಆಂಡ್ರಾಯ್ಡ್ 14 ಆವತ್ತಿಯಲ್ಲಿ ಕಾರ್ಯನಿವಹಿಸುತ್ತದೆ. ಸುಗಮ ಮತ್ತು ಬಳಕೆದಾರ ಸ್ನೇಹಿ ಅನುಭವನ್ನು ನೀಡುತ್ತದೆ. ಹೆಚ್ಚುವಾರಿಯಾಗಿ ಸ್ಮಾರ್ಟ್‌ಪೋನ್ ಧೂಲು ಮತ್ತು ನೀರಿನ ಪ್ರತಿರೋಧಕ್ಕಾಗಿ ಐಪಿ 68 ರೇಟ್ ಹೊಂದಿದೆ.

ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಪೋನ್ ಬೆಲೆ ಎಷ್ಟು

ಸದ್ಯದ ಮಟ್ಟಿಗೆ ಚೀನಾದಲ್ಲಿ ಬಿಡುಗೆಯಾಗಿರುವ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಪೋನ್ ಬೆಲೆ 1.34 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಮುಂಬರುವ ಮೊಬೈಲ್ ವರ್ಲ್ಡ್ ಕಾನ್ಪರೆನ್ಸ್ (ಎಂಡಬ್ಲ್ಯೂಸಿ) ನಲ್ಲಿ ಈ ಫೋನಿನ ಜಾಗತಿ ಬೆಲೆಯ ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು