20 ಸಾವಿರದೊಳಗಿನ ಅಡ್ವಾನ್ಸ್ಡ್ ಫೀಚರ್ಸ್ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್ಸ್ ಇವು -Best Smartphones
- Best Smartphones under 20k: ಗುಣಮಟ್ಟದ ಕ್ಯಾಮೆರಾ, ಡಿಸ್‌ಪ್ಲೇ ಹಾಗೂ ಕೈಗೆಟಕುವ ಬೆಲೆ ಸೇರಿದಂತೆ ಹಲವು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್‌ಫೋನ್ ಬೇಕಾ? ಇಲ್ಲಿ ನೀಡಿರುವ 5 ಬೆಸ್ಟ್ ಫೋನ್‌ಗಳನ್ನು ಒಮ್ಮೆ ಪರಿಶೀಲಿಸಿ.
- Best Smartphones under 20k: ಗುಣಮಟ್ಟದ ಕ್ಯಾಮೆರಾ, ಡಿಸ್‌ಪ್ಲೇ ಹಾಗೂ ಕೈಗೆಟಕುವ ಬೆಲೆ ಸೇರಿದಂತೆ ಹಲವು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್‌ಫೋನ್ ಬೇಕಾ? ಇಲ್ಲಿ ನೀಡಿರುವ 5 ಬೆಸ್ಟ್ ಫೋನ್‌ಗಳನ್ನು ಒಮ್ಮೆ ಪರಿಶೀಲಿಸಿ.
(1 / 7)
ಸುಧಾರಿತ ವೈಶಿಷ್ಟ್ಯಗಳು ಇದ್ದು, 20,000 ರೂಪಾಯಿ ಒಳಗಿನ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್54ನಿಂದ ರೆಡ್‌ಮಿ ನೋಟ್ 13 ವರೆಗೆ ಈ ಫೋನ್‌ಗಳ ಬೆಲೆ, ವೈಶಿಷ್ಟ್ಯಗಳನ್ನು ಇಲ್ಲಿ ತಿಳಿಯಿರಿ.
(2 / 7)
Redmi Note 13 5G: ರೆಡ್‌ಮಿ ನೋಟ್ 13 5ಜಿ ಸ್ಮಾರ್ಟ್‌ಫೋನ್‌ನಲ್ಲಿ 6.67 ಇಂಚಿನ FHD+ PO LED ಡಿಸ್‌ಫ್ಲೇಯನ್ನು 120Hz ರಿಫ್ರೆಶ್ ರೇಟ್ ಹೊಂದಿದೆ. ಮಿಡಿಾ ಟೆಕ್ ಡೈಮೆನ್ಶನ್ 6080 6nm ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನ್ 20 ಜಿಬಿ ವರೆಗೆ ವಿಸ್ತರಿಸಬಹುದಾದ RAM ಅನ್ನು ಹೊಂದಿದೆ. ಈ ಫೋನಿನ ಬೆಲೆ ಎಂಐ.ಕಾಮ್‌ನಲ್ಲಿ 17,999 ರೂಪಾಯಿ ಇದ್ದರೆ, ಫಿಪ್‌ಕಾರ್ಟ್‌ನಲ್ಲಿ 19,200 ರೂಪಾಯಿ ಇದೆ.
(3 / 7)
IQOO Z7 Pro 5G: ಈ 5ಜಿ ಸ್ಮಾರ್ಟ್ ಡೈಮೆನ್ಶಿನ್ 7200 5ಜಿ ಪ್ರೊಸೆಸರ್‌ನೊಂದಿಗೆ 4nm ಎನರ್ಜಿ ಎಫಿಶಿಯನ್ಸಿ ಪ್ರೊಸೆಸ್‌ನೊಂದಿಗೆ ಬಂದಿದೆ. 6.78-ಇಂಚಿನ 3D ಕರ್ವ್ಡ್ ಸೂಪರ್ ವಿಷನ್ ಡಿಸ್ಪ್ಲೇಯನ್ನು ಹೊಂದಿದೆ. 4600 mAh ಬ್ಯಾಟರಿ ಇದ್ದು, 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಈ ಸ್ಮಾರ್ಟ್‌ಫೋನ್ ಬೆಲೆ 16,999 ರೂಪಾಯಿ ಇದೆ. 256 ಡ್ಯುಯಲ್ ಸಿಮ್ ಇರುವ ಸ್ಮಾರ್ಟ್‌ಫೋನ್ 24,999 ರೂಪಾಯಿ ಇದೆ.
(4 / 7)
Vivo Y200 5G: ಡ್ಯುಯಲ್ 64 MP + 2 MP ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 16 MP ಸೆಲ್ಫಿ ಕ್ಯಾಮೆರಾದೊಂದಿಗೆ Vivo Y200 5G ಫೋನ್ ಬಂದಿದೆ. 6.67-ಇಂಚಿನ FHD+ AMOLED ಡಿಸ್‌ಪ್ಲೇ ಹೊಂದಿದ್ದು, 4800mAh ಬ್ಯಾಟರಿ ಇದೆ. 8 GB RAM ಮತ್ತು 128 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಈ ಫೋನಿನ ಬೆಲೆ 13,749 ರೂಪಾಯಿ ಇದೆ.
(5 / 7)
ಒನ್‌ಪ್ಲಸ್ ನಾರ್ಡ್ ಸಿಇ 3 5ಜಿ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಅಲ್ಟ್ರಾ ಸ್ಟಡಿ ಮೋಡ್, ಡ್ಯುಯಲ್ ವ್ಯೂ ವಿಡಿಯೋ ಹಾಗೂ ಇತರೆ ವೈಶಿಷ್ಟ್ಯಗಳನ್ನು ಹೊಂದಿದೆ. 6.7-ಇಂಚಿನ 120Hz AMOLED FHD+ ಡಿಸ್ಪ್ಲೇ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 782G ಪ್ರೊಸೆಸರ್ ಹೊಂದಿದ್ದು, ಈ ಫೋನಿನ ಬೆಲೆ 19,999 ರೂಪಾಯಿಗೆ ಲಭ್ಯವಿದೆ.
(6 / 7)
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್54 5ಜಿ: ಈ ಫೋನ್ ನೈಟೋಗ್ರಿಫಿ ಮೋಡ್ ಅನ್ನು ಹೊಂದಿದ್ದು, ಕಡಿಮೆ ಬೆಳಕಿನಲ್ಲೂ ಫೋಟೊಗಳನ್ನು ತೆರೆಯಲು ನೆರವಾಗುತ್ತದೆ. 108 ಎಂಪಿ ಕ್ಯಾಮೆರಾ, ಆಸ್ಟ್ರೋಲ್ಯಾಪ್ಸ್ ಮೋಡ್, ಆಟೋ ನೈಟ್‌ಮೋಡ್ ಸೆಲ್ಫಿ ಕ್ಯಾಮೆರಾ ಸಪೋರ್ಟ್ ಇದೆ. 6000 mAh ಬ್ಯಾಟರಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಕೆಲ ಡಿಸ್ಕೌಂಟ್‌ಗಳ ಬಳಿಕ 20 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆ ಸಿಗುತ್ತದೆ.
ಇತರ ಗ್ಯಾಲರಿಗಳು