ಭಾರತದಲ್ಲಿ ಶಿಯೋಮಿ 14 ಬಿಡುಗಡೆಗೆ ಮುಹೂರ್ತ ಫಿಕ್ಸ್; ಬೆಲೆ, ಫೋನ್‌ನಲ್ಲಿರುವ ಹೊಸತನದ ವಿವರ ಹೀಗಿದೆ -Xiaomi 14 India launch
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತದಲ್ಲಿ ಶಿಯೋಮಿ 14 ಬಿಡುಗಡೆಗೆ ಮುಹೂರ್ತ ಫಿಕ್ಸ್; ಬೆಲೆ, ಫೋನ್‌ನಲ್ಲಿರುವ ಹೊಸತನದ ವಿವರ ಹೀಗಿದೆ -Xiaomi 14 India Launch

ಭಾರತದಲ್ಲಿ ಶಿಯೋಮಿ 14 ಬಿಡುಗಡೆಗೆ ಮುಹೂರ್ತ ಫಿಕ್ಸ್; ಬೆಲೆ, ಫೋನ್‌ನಲ್ಲಿರುವ ಹೊಸತನದ ವಿವರ ಹೀಗಿದೆ -Xiaomi 14 India launch

Xiaomi 14 launching in India: ಶಿಯೋಮಿ 14 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಇದರ ವಿವರಗಳನ್ನು ತಿಳಿಯೋಣ

ಶಿಯೋಮಿ 14 ಸರಣಿಯನ್ನ ಭಾರತದಲ್ಲಿ ಬಿಡುಗಡೆ ಮಾಡಲು ದಿನಾಂಕವನ್ನು ನಿಗದಿ ಮಾಡಿದೆ. ಹೊಸ ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳನ್ನು ತಿಳಿಯಿರಿ.
ಶಿಯೋಮಿ 14 ಸರಣಿಯನ್ನ ಭಾರತದಲ್ಲಿ ಬಿಡುಗಡೆ ಮಾಡಲು ದಿನಾಂಕವನ್ನು ನಿಗದಿ ಮಾಡಿದೆ. ಹೊಸ ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳನ್ನು ತಿಳಿಯಿರಿ.

ಭಾರತದಲ್ಲಿ ಶಿಯೋಮಿ 14 ಬಿಡುಗಡೆಯ ದಿನಾಂಕವನ್ನು (Xiaomi 14 launching in India) ಕೊನೆಗೂ ಫಿಕ್ಸ್ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಸರಣಿಯನ್ನು 2024ರ ಮಾರ್ಚ್ 7 ರಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ದಿಗ್ಗಜ ಟೆಕ್ ಸಂಸ್ಥೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಶಿಯೋಮಿ 14 ಸರಣಿಯ ವೈಶಿಷ್ಟ್ಯಗಳ ವಿವರಗಳನ್ನು ತಿಳಿಯಿರಿ.

ಶಿಯೋಮಿ 14 ಸರಣಿಯನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿ 25 ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಭಾರತದಲ್ಲಿ ಮಾರ್ಚ್ 7 ರಂದು ಲಾಂಚಿಂಗ್ ಮಾಡಲಾಗುತ್ತದೆ.

ಶಿಯೋಮಿ 14 ಸರಣಿಯಲ್ಲಿ 3 ಸ್ಮಾರ್ಟ್‌ಫೋನ್‌ಗಳಿವೆ. ಅವುಗಳೆಂದರೆ ಶಿಯೋಮಿ 14, ಶಿಯೋಮಿ 14 ಪ್ರೊ, ಶಿಯೋಮಿ 14 ಪ್ರೊ ಅಲ್ಟ್ರಾ. ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಗ್ಯಾಡ್ಜೆಟ್‌ಗಳ ವೈಶಿಷ್ಟ್ಯಗಳನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ಆದರೆ ಚೀನಾದಲ್ಲಿ ಬಿಡುಗಡೆಯಾಗಿರುವ ಫೋನ್‌ ಫೀಚರ್‌ಗಳನ್ನು ನೋದಿರೆ ಒಂದು ಕ್ಲಾರಿಟಿ ಸಿಗುತ್ತಿದೆ.

ಶಿಯೋಮಿ ಹೊಸ ಸ್ಮಾರ್ಟ್‌ಫೋನ್ ಸರಣಿಯು 6.36 ಇಂಚಿನ 1.5K LTPO OLED ಡಿಸ್‌ಪ್ಲೇ ಇರಲಿದ್ದು, 120 Hz ರಿಫ್ರೆಶ್ ರೇಟ್ ಹಾಗೂ 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿರಲಿದೆ.

ಈ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ.50MP ಪ್ರೈಮರಿ ಮತ್ತು 50MP ಅಲ್ಟ್ರಾ ವೈಡ್ ಲೆನ್ಸ್ ಇದೆ. ಸೆಲ್ಫಿ ಮತ್ತು ವಿಡಿಯೊ ಕರೆಗಳಿಗಾಗಿ 32MP ಫ್ರಂಟ್ ಕ್ಯಾಮೆರಾದೊಂದಿಗೆ ಫೋನ್ ಬರಲಿದೆ. ಶಿಯೋಮಿ 14 ಪ್ರಿಯಂ ಸ್ಮಾರ್ಟ್‌ಫೋನ್ 4,610mAh ಬ್ಯಾಟರಿ, 90W ಫಾಸ್ಟ್ ಚಾರ್ಜಿಂಗ್ ಹಾಗೂ 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಇರಲಿದೆ. ಸದ್ಯ ಈ ಫೋನ್ ಚೀನಾದಲ್ಲಿ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಜೇಡ್‌ಗ್ರೀನ್, ಬ್ಲಾಕ್, ವೈಟ್ ಮತ್ತು ಸ್ನೋ ಮೌಂಟೇನ್ ಪಿಂಕ್ ಬಣ್ಣಗಳಲ್ಲಿ ಬಂದಿದೆ.

ಶಿಯೋಮಿ 14 ಸರಣಿಯ ಫೋನ್ ಬೆಲೆ ಎಷ್ಟು?

ಚೀನಾದಲ್ಲಿ ಶಿಯೋಮಿ 14 ಸರಣಿಯ 4 ವೇರಿಯಂಟ್‌ಗಳ ಆಯ್ಕೆಗಳಿವೆ. ಭಾರತದಲ್ಲಿ ಯಾವ ವೇರಿಯಂಟ್‌ ಅನ್ನು ಬಿಡುಗಡೆ ಮಾಡಲಿದೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಶಿಯೋಮಿ 14 8GB RAM-256GB ಸ್ಟೋರೇಜ್ ಸ್ಮಾರ್ಟ್‌ಫೋನ್ ಬೆಲೆ 50 ಸಾವಿರ ರೂಪಾಯ ಆಸುಪಾಸಿನಲ್ಲಿ ಇರಲಿದೆ. ಇನ್ನ ಟಾಪ್‌ ವೇರಿಯಂಟ್ ಬೆಲೆ 60 ಸಾವಿರ ರೂಪಾಯಿಗಳನ್ನು ದಾಟಬಹುದು ಎಂದು ಮಾರುಕಟ್ಟೆ ಮೂಲಕಗಳ ಅಂದಾಜಿಸಿವೆ. ಫೋನಿನ ಬಗ್ಗೆ ಮೇಲೆ ಹೇಳಿರುವ ವೈಶಿಷ್ಟ್ಯಗಳು ಕೇವಲ ಅಂದಾಜು ಅಷ್ಟೇ. ಭಾರತದಲ್ಲಿ ಬಿಡುಗಡೆಯಾಗುವ ಶಿಯೋಮಿ 14 ಸರಣಿಯ ವೈಶಿಷ್ಟ್ಯಗಳನ್ನು ಟೆಕ್ ದಿಗ್ಗಜ ಕಂಪನಿ ಇನ್ನೂ ಘೋಷಣೆ ಮಾಡಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner