logo
ಕನ್ನಡ ಸುದ್ದಿ  /  ಜೀವನಶೈಲಿ  /  ಲೆಮನ್ ಪಾನ್ ಶಾಟ್: ಬಾಯಿ ಮಾತ್ರ ಫ್ರೆಶ್ ಆಗಲ್ಲ, ನೀವೂ ರಿಫ್ರೆಶ್​ ಮತ್ತು ಕೂಲ್​ ಆಗ್ತೀರ...

ಲೆಮನ್ ಪಾನ್ ಶಾಟ್: ಬಾಯಿ ಮಾತ್ರ ಫ್ರೆಶ್ ಆಗಲ್ಲ, ನೀವೂ ರಿಫ್ರೆಶ್​ ಮತ್ತು ಕೂಲ್​ ಆಗ್ತೀರ...

Meghana B HT Kannada

May 01, 2022 03:51 PM IST

ಲೆಮನ್ ಪಾನ್ ಶಾಟ್

    • ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಹೋಗಲಾಡಿಸಲು ವೀಳ್ಯದೆಲೆ ಹಾಗೂ ನಿಂಬೆ ಹಣ್ಣಿನಿಂದ ಮಾಡುವ ಲೆಮನ್​ ಪಾನ್ ಶಾಟ್ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ಇದು ನಿಮ್ಮ ಬಾಯಿಯನ್ನು ಫ್ರೆಶ್ ಮಾಡುವ ಜೊತೆಗೆ ನಿಮ್ಮನ್ನು ರಿಫ್ರೆಶ್​ ಮಾಡುತ್ತದೆ.
ಲೆಮನ್ ಪಾನ್ ಶಾಟ್
ಲೆಮನ್ ಪಾನ್ ಶಾಟ್

ಊಟದ ನಂತರ ವೀಳ್ಯದೆಲೆಯನ್ನು ಜಗಿಯುವುದು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆಗೆ ವಿಶೇಷ ಸ್ಥಾನವಿದೆ. ಆರನೇ ಶತಮಾನದ ಸ್ಕಂದ ಪುರಾಣದಲ್ಲಿಯೂ ವೀಳ್ಯದೆಲೆಯ ಉಲ್ಲೇಖವಿದೆ. ವೀಳ್ಯದೆಲೆಯುವ ಆಯುರ್ವೇದ ಔಷಧಿ ಎಂದು ಹೇಳಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ವೀಳ್ಯದೆಲೆಯಲ್ಲಿ ಹೆಚ್ಚಿನ ನೀರು ಮತ್ತು ಕಡಿಮೆ ಕ್ಯಾಲೋರಿಗಳಿವೆ. ಮಧ್ಯಮ ಪ್ರಮಾಣದ ಕೊಬ್ಬು ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದರ ಜೊತೆಗೆ, ಅಯೋಡಿನ್, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಬಿ 1 ಮತ್ತು ವಿಟಮಿನ್ ಬಿ 2 ಸೇರಿದಂತೆ ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಲ್ಲಿ ಇದು ಸಮೃದ್ಧವಾಗಿದೆ.

ಡಾ.ದೀಕ್ಷಾ ಭಾವಸರ್ ಅವರು ವೀಳ್ಯದೆಲೆಯ ಅದ್ಭುತ ಪ್ರಯೋಜನಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಕೆಮ್ಮು, ಅಸ್ತಮಾ, ತಲೆನೋವು, ಮೂಗು ಸೋರುವಿಕೆ, ಸಂಧಿವಾತ, ಅನೋರೆಕ್ಸಿಯಾ ಇತ್ಯಾದಿಗಳ ಚಿಕಿತ್ಸೆಯಲ್ಲಿ ವೀಳ್ಯದೆಲೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ನೋವು ಮತ್ತು ಉರಿಯೂತವನ್ನು ನಿವಾರಿಸುತ್ತದೆ ಎಂದು ಅವರು ಹೇಳುತ್ತಾರೆ.

ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಹೋಗಲಾಡಿಸಲು ವೀಳ್ಯದೆಲೆ ಹಾಗೂ ನಿಂಬೆ ಹಣ್ಣಿನಿಂದ ಮಾಡುವ ಲೆಮನ್​ ಪಾನ್ ಶಾಟ್ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ಇದು ನಿಮ್ಮ ಬಾಯಿಯನ್ನು ಫ್ರೆಶ್ ಮಾಡುವ ಜೊತೆಗೆ ನಿಮ್ಮನ್ನು ರಿಫ್ರೆಶ್​ ಮಾಡುತ್ತದೆ. ಈ ಪಾನ್ ಶಾಟ್ ಅನ್ನು ಹೇಗೆ ತಯಾರಿಸಬೇಕೆಂಬುದನ್ನು ನೋಡೋಣ ಬನ್ನಿ.

ಪಾನ್​ ಶಾಟ್​ ತಯಾರಿಸಲು ಬೇಕಾಗುವ ಪದಾರ್ಥಗಳು

- 4 ವೀಳ್ಯದೆಲೆ

- 4 ಟೀಸ್ಪೂನ್ ಗುಲ್ಕಂಡ್

- 1 ಟೀಸ್ಪೂನ್ ಸೋಂಫ್

- ನಿಂಬೆ ರಸ ಒಂದು ಟೀಚಮಚ

- ಚಾಟ್ ಮಸಾಲ - ಅರ್ಧ ಚಮಚ

- 1 ಟೀಸ್ಪೂನ್ ತುರಿದ ತೆಂಗಿನಕಾಯಿ

- 1 ಚಮಚ ಕಬ್ಬಿನ ಸಕ್ಕರೆ

- 1/4 ಕಪ್ ನೀರು

ಪಾಕವಿಧಾನ

* ಮೊದಲು ವೀಳ್ಯದೆಲೆಯನ್ನು ತುಂಡು ಮಾಡಿ ಮಿಕ್ಸಿಗೆ ಹಾಕಿ.

* ನಂತರ ನೀರನ್ನು ಹೊರತುಪಡಿಸಿ ಮೇಲಿನ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಮಿಶ್ರಣ ಮಾಡಿ.

* ನಂತರ ನೀರು ಸೇರಿಸಿ ನುಣ್ಣಗೆ ಬ್ಲೆಂಡ್ ಮಾಡಿ.

* ನಿಮ್ಮ ಪ್ಯಾನ್ ಶಾಟ್ ಸಿದ್ಧವಾಗಿದೆ. ಅದನ್ನು ಚಿಕ್ಕ ಲೋಟದಲ್ಲಿ ತೆಗೆದುಕೊಂಡು ಕುಡಿಯಿರಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು