logo
ಕನ್ನಡ ಸುದ್ದಿ  /  ಜೀವನಶೈಲಿ  /  Google Meet: ಗೂಗಲ್‌ ಮೀಟ್‌ನ ಹೊಸ ಗೆಸ್ಚರ್‌ ವೈಶಿಷ್ಟ್ಯ; ಇನ್ಮುಂದೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸುಲಭವಾಗಿ ಹ್ಯಾಂಡ್‌ ರೈಸ್‌ ಮಾಡಿ

Google Meet: ಗೂಗಲ್‌ ಮೀಟ್‌ನ ಹೊಸ ಗೆಸ್ಚರ್‌ ವೈಶಿಷ್ಟ್ಯ; ಇನ್ಮುಂದೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸುಲಭವಾಗಿ ಹ್ಯಾಂಡ್‌ ರೈಸ್‌ ಮಾಡಿ

HT Kannada Desk HT Kannada

Nov 23, 2023 04:05 PM IST

Google Meet: ಗೂಗಲ್‌ ಮೀಟ್‌ನ ಹೊಸ ಗೆಸ್ಚರ್‌ ವೈಶಿಷ್ಟ್ಯ; ಇನ್ಮುಂದೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸುಲಭವಾಗಿ ಹ್ಯಾಂಡ್‌ ರೈಸ್‌ ಮಾಡಿ

    • Raise Your Hand: ಗೂಗಲ್‌ ಮೀಟ್‌ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಅದೇನೆಂದರೆ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ಈಗ ನೀವು ಹ್ಯಾಂಡ್‌ ರೈಸ್‌ ಇಮೋಜಿಯ ಮೇಲೆ ಕ್ಲಿಕ್ಕಿಸಬೇಕೆಂದಿಲ್ಲ. ಬದಲಿಗೆ ನಿಮ್ಮ ಕ್ಯಾಮರಾದ ಮುಂದೆ ಹ್ಯಾಂಡ್‌ ರೈಸ್‌ ಮಾಡಿದರೆ ಸಾಕು. ಹೇಗೆ ಇಲ್ಲಿದೆ ಓದಿ.
Google Meet: ಗೂಗಲ್‌ ಮೀಟ್‌ನ ಹೊಸ ಗೆಸ್ಚರ್‌ ವೈಶಿಷ್ಟ್ಯ; ಇನ್ಮುಂದೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸುಲಭವಾಗಿ ಹ್ಯಾಂಡ್‌ ರೈಸ್‌ ಮಾಡಿ
Google Meet: ಗೂಗಲ್‌ ಮೀಟ್‌ನ ಹೊಸ ಗೆಸ್ಚರ್‌ ವೈಶಿಷ್ಟ್ಯ; ಇನ್ಮುಂದೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸುಲಭವಾಗಿ ಹ್ಯಾಂಡ್‌ ರೈಸ್‌ ಮಾಡಿ

ಕರೋನಾ ಸಾಂಕ್ರಾಮಿಕದ ಸಮಯದಿಂದ ವರ್ಚುವಲ್‌ ಸಭೆಗಳು ಬಹಳ ಮಹತ್ವ ಪಡದುಕೊಂಡಿದೆ. ಅವುಗಳಲ್ಲಿ ಗೂಗಲ್‌ ಮೀಟ್‌ ಬಹಳ ಜನಪ್ರಿಯವಾಗಿದೆ. ಗೂಗಲ್‌ ಮೀಟ್‌ ಹೊಸ ಹೊಸ ವೈಶಿಷ್ಟ್ಯಗಳನ್ನು ಸೇರಿಸಿಕೊಳ್ಳುತ್ತಾ ತನ್ನ ವೇದಿಕೆಯನ್ನು ವಿಸ್ತಾರಗೊಳಿಸಿಕೊಳ್ಳುತ್ತಲೇ ಇದೆ. ಈಗ ಗೂಗಲ್‌ ಮೀಟ್‌, ಸೂಚನೆಯನ್ನು ನೀಡುವ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಅದೇನೆಂದರೆ ಸಭೆಗಳು (ಮೀಟಿಂಗ್‌) ನಡೆಯುತ್ತಿರುವಾಗ ಮಾತನಾಡಲು, ಬಯಕೆಗಳನ್ನು ವ್ಯಕ್ತಪಡಿಸಲು ಅಥವಾ ಪ್ರಶ್ನೆ ಕೇಳಲು ಸ್ವತಃ ತಮ್ಮ ಕೈಗಳನ್ನು ಎತ್ತಲು ಅನುಮತಿ ನೀಡುತ್ತಿದೆ. ಈ ವೈಶಿಷ್ಟ್ಯದ ವಿಶೇಷವೇನೆಂದರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮೌಸ್‌ ಅಥವಾ ಕೀಬೋರ್ಡ್‌ ಅನ್ನು ಬಳಸುವ ಅಗತ್ಯ ಇರುವುದಿಲ್ಲ. ಆದರೆ ಕೈ ಎತ್ತುವ ಸೂಚನೆ ಅನ್ನು ಪತ್ತೆಹಚ್ಚಲು ಬಳಕೆದಾರರು ತಮ್ಮ ಕ್ಯಾಮೆರಾವನ್ನು ಸಕ್ರೀಯಗೊಳಿಸಿರಬೇಕು ಮತ್ತು ಕೈಯನ್ನು ಎತ್ತಿ ಅದು ಕ್ಯಾಮರಾಕ್ಕೆ ಕಾಣಿಸುವಂತೆ ಮಾಡಬೇಕಾಗಿದೆ. ಈ ಹೊಸ ವೈಶಿಷ್ಟ್ಯವು ಗೂಗಲ್‌ ಮೀಟ್‌ನ ಇತ್ತೀಚಿನ ಸೇರ್ಪಡೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ಗೂಗಲ್‌ ಮೀಟಿಂಗ್‌ ನಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹೊಸ ವೈಶಿಷ್ಟ್ಯ ಬಳಸಿದಾಗ, ಗೂಗಲ್‌ ಮೀಟ್‌ ನಡೆಸುತ್ತಿರುವ ಹೋಸ್ಟ್‌ ಮತ್ತು ಇತರ ಸದಸ್ಯರಿಗೆ ನಿಮ್ಮ ಉದ್ದೇಶವೇನೆಂಬುದನ್ನು ಎಚ್ಚರಿಸುತ್ತದೆ. ಈ ಗೆಸ್ಚರ್‌ ಪತ್ತೆಹಚ್ಚಲು ಬಳಕೆದಾರು ಅವರ ಕ್ಯಾಮರಾವನ್ನು ಸಕ್ರಿಯಗೊಳಿಸಿ ಮತ್ತು ಅವರ ಕೈ ಕ್ಯಾಮರಾಗೆ ಗೋಚರಿಸುವಂತೆ ಮಾಡಬೇಕಾಗಿದೆ.

ಸದ್ಯ ಈ ವೈಶಿಷ್ಟ್ಯವು ಗೂಗಲ್ ವರ್ಕ್‌ಸ್ಪೇಸ್‌ನ ವ್ಯಾಪಾರ, ಉದ್ಯಮ ಅಥವಾ ಶಿಕ್ಷಣ ಯೋಜನೆಯನ್ನು ತೆಗೆದುಕೊಂಡವರಿಗೆ ಮಾತ್ರ ಲಭ್ಯವಿರುತ್ತದೆ. ವೈಯಕ್ತಿಕ ಗೂಗಲ್ ಖಾತೆಗಳು ಈ ವೈಶಿಷ್ಟ್ಯವನ್ನು ಬೆಂಬಲಿಸುತ್ತವೆಯೇ ಎಂದು ಇನ್ನೂ ಕಂಪನಿ ಹೇಳಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಅದನ್ನೂ ಬೆಂಬಲಿಸಬಹುದು.

ಗೆಸ್ಚರ್‌ ಆಧರಿತ ಈ ವೈಶಿಷ್ಟ್ಯವನ್ನು ಡಿಫಾಲ್ಟ್‌ ಆಗಿ ಆಫ್‌ ಮಾಡಲಾಗಿರುತ್ತದೆ. ಅದನ್ನು ಸಕ್ರೀಯಗೊಳಿಸಕೊಳ್ಳುವ ಉದ್ದೇಶವಿದ್ದರೆ ಆಗ ನೀವು ಗೂಗಲ್‌ ಮೀಟ್‌ನ ಸೆಟ್ಟಿಂಗ್‌ಗೆ ಹೋಗಬೇಕಾಗುತ್ತದೆ. ಈ ವೈಶಿಷ್ಟ್ಯಕ್ಕಾಗಿ, ಮೋರ್‌ ಆಪ್ಷನ್‌ಗೆ ಹೋಗಬೇಕು ಅಲ್ಲಿ ರಿಯಾಕ್ಷನ್ಸ್‌ನಲ್ಲಿ ಹ್ಯಾಂಡ್‌ ರೈಸ್‌ ಗೆಸ್ಚರ್‌ ಆಯ್ಕೆ ಮಾಡಬೇಕೆಂದು ಗೂಗಲ್‌ ಹೇಳುತ್ತದೆ.

ಹ್ಯಾಂಡ್‌ ರೈಸ್‌ ಗೆಸ್ಚರ್‌ ವೈಶಿಷ್ಟ್ಯ ಹೇಗೆ ಕಾರ್ಯನಿರ್ವಹಿಸುತ್ತದೆ?

ಮೊದಲನೆಯದಾಗಿ ಗೆಸ್ಚರ್‌ ಆಯ್ಕೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ. ನಂತರ ಲ್ಯಾಪ್‌ಟಾಪ್‌ನ ಕ್ಯಾಮರಾದ ಮುಂದೆ ನೀವು ಕೈಯನ್ನು ಮೇಲಕ್ಕೆ ಎತ್ತಬೇಕಾಗುತ್ತದೆ. ಹೀಗೆ ಮಾಡಿದಾಗ ಅದು ಸೂಚನೆಯನ್ನು ಸಕ್ರೀಯಗೊಳಿಸುತ್ತದೆ.

ಈ ವೈಶಿಷ್ಟ್ಯ ಬಳಸಲು ಕ್ಯಾಮರಾವನ್ನು ಆನ್‌ ಮಾಡಲೇಬೇಕು. ಆದರೆ ನಿಮ್ಮ ಸ್ಪೀಕರ್‌ ಸಕ್ರೀಯಗೊಂಡಿದ್ದರೆ ಅಂದರೆ ನೀವು ಮಾತನಾಡುತ್ತಿದ್ದರೆ ಈ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಗೂಗಲ್‌ ಹೇಳುತ್ತದೆ. ಹೆಚ್ಚಿನ ಜನರು ಗೂಗಲ್‌ ಮೀಟ್‌ ನಡೆಯುವಾಗ ತಮ್ಮ ಕ್ಯಾಮರಾ ಮತ್ತು ಮೈಕ್‌ ಎರಡನ್ನೂ ಆಫ್‌ ಮಾಡಿರುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಪ್ರಶ್ನಿಸಬೇಕೆಂದಾಗ ಹ್ಯಾಂಡ್‌ ರೈಸ್‌ ಇಮೋಜಿಯನ್ನೇ ಕ್ಲಿಕ್‌ ಮಾಡಬೇಕಾಗುತ್ತದೆ.

(ಬರಹ: ಅರ್ಚನಾ ವಿ. ಭಟ್‌)

    ಹಂಚಿಕೊಳ್ಳಲು ಲೇಖನಗಳು