logo
ಕನ್ನಡ ಸುದ್ದಿ  /  ಜೀವನಶೈಲಿ  /  Hair Care: ಕಾಲ ಕಾಲಕ್ಕೆ ಶ್ಯಾಂಪೂ ಬದಲಾವಣೆ ಮಾಡಬೇಕೇ..? ಮಾಡಿದರೆ ಆಗುವ ಲಾಭವೇನು, ಸಮಸ್ಯೆ ಏನು?

Hair care: ಕಾಲ ಕಾಲಕ್ಕೆ ಶ್ಯಾಂಪೂ ಬದಲಾವಣೆ ಮಾಡಬೇಕೇ..? ಮಾಡಿದರೆ ಆಗುವ ಲಾಭವೇನು, ಸಮಸ್ಯೆ ಏನು?

HT Kannada Desk HT Kannada

Mar 13, 2024 09:00 AM IST

ಶ್ಯಾಂಪೂ ಬದಲಾವಣೆಯಿಂದ ಆಗುವ ಲಾಭಗಳು, ಸಮಸ್ಯೆಗಳು

  • Hair Care Tips: ಕೂದಲು ತೊಳೆಯುಲು ನೀವು ಬಳಸುವ ಶ್ಯಾಂಪೂವನ್ನು ಆಗ್ಗಾಗ್ಗೆ ಬದಲಾವಣೆ ಮಾಡುತ್ತೀರಾ..? ಈ ರೀತಿ ಶ್ಯಾಂಪೂ ಬದಲಾವಣೆ ಮಾಡುವುದರಿಂದ ಕೂದಲಿನ ಮೇಲಾಗುವ ಪರಿಣಾಮಗಳೇನು..? ಅದರಿಂದ ಏನಾದರೂ ಸಮಸ್ಯೆ ಇದೆಯೇ? ಅಥವಾ ಆ ರೀತಿ ಬದಲಾವಣೆ ಮಾಡಿದರೆ ಕೂದಲಿಗೆ ಒಳ್ಳೆಯದಾ? ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

 ಶ್ಯಾಂಪೂ ಬದಲಾವಣೆಯಿಂದ ಆಗುವ ಲಾಭಗಳು, ಸಮಸ್ಯೆಗಳು
ಶ್ಯಾಂಪೂ ಬದಲಾವಣೆಯಿಂದ ಆಗುವ ಲಾಭಗಳು, ಸಮಸ್ಯೆಗಳು

Skin Care Tips: ಕೂದಲಿನ ಸಾಮರ್ಥ್ಯವನ್ನು ಹೆಚ್ಚಿಸುವ ಶಾಂಪೂಗಳಿಂದ ಹಿಡಿದು ಹಾನಿಗೊಳಗಾದ ಕೂದಲುಗಳಿಗೆ ಆರೈಕೆ ನೀಡುವುದು ಸೇರಿದಂತೆ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಶ್ಯಾಂಪೂಗಳು ಲಭ್ಯವಿದೆ. ಜನರು ತಮ್ಮ ಕೂದಲಿನ ಅಗತ್ಯಕ್ಕೆ ಅನುಗುಣವಾಗಿ ಯಾವುದೋ ಒಂದು ಶಾಂಪೂವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಸಾಮಾನ್ಯವಾಗಿ ಕೆಲವರು ಹಲವು ವರ್ಷಗಳ ಕಾಲ ಒಂದೇ ಶ್ಯಾಂಪೂ ಬಳಕೆ ಮಾಡುತ್ತಲೇ ಇರುತ್ತಾರೆ. ಆದರೆ ಕೂದಲಿಗೆ ಹೆಚ್ಚಿನ ರಕ್ಷಣೆಯನ್ನು ಕೊಡಬೇಕು ಎಂದರೆ ಕಾಲ ಕಾಲಕ್ಕೆ ಶ್ಯಾಂಪೂ ಬದಲಾವಣೆ ಮಾಡಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿದೆ . ಹಾಗಾದರೆ ಈ ರೀತಿ ಕಾಲ ಕಾಲಕ್ಕೆ ಶ್ಯಾಂಪೂ ಬದಲಾವಣೆ ಮಾಡುವುದರಿಂದ ಕೂದಲು ಉದುರುವಿಕೆ ಹಾಗೂ ತಲೆಹೊಟ್ಟಿನಂತಹ ಸಮಸ್ಯೆಗಳಿಂದ ಪಾರಾಗಲು ಸಾಧ್ಯವಿದೆಯೇ..? ಶ್ಯಾಂಪೂ ಬದಲಾವಣೆಯ ಹಿಂದಿನ ಸಾಧಕ ಬಾಧಕಗಳೇನು ಎಂಬುದನ್ನು ತಿಳಿಯೋಣ.

ಪ್ರತಿ 3 ತಿಂಗಳಿಗೊಮ್ಮೆ ಶ್ಯಾಂಪೂ ಬದಲಾಯಿಸುವ ಹಿಂದಿನ ಲಾಭಗಳೇನು..?

1. ಆರೋಗ್ಯಕರ ಕೂದಲು

ನಿಯಮಿತವಾಗಿ ಶಾಂಪೂ ಬದಲಾವಣೆ ಮಾಡುವುದರಿಂದ ಆರೋಗ್ಯಕರ ಕೂದಲು ಪಡೆಯಬಹುದು ಎಂದು ಚರ್ಮರೋಗ ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ. ವಿಭಿನ್ನ ಶಾಂಪೂಗಳಲ್ಲಿ ವಿವಿಧ ರೀತಿಯಲ್ಲಿ ಶುದ್ಧೀಕರಣ ಅಂಶವಿರುತ್ತದೆ. ಇವುಗಳು ಮಾಲಿನ್ಯದಿಂದ, ಜಿಡ್ಡಿನಂಶದಿಂದ ಕೂದಲಿನ ಉಂಟಾದ ಹಾನಿಯನ್ನು ರಿಪೇರಿ ಮಾಡುತ್ತದೆ.

2.ಕೂದಲಿನ ಬದಲಾವಣೆಯ ಅಗತ್ಯಗಳಿಗೆ ಪರಿಹಾರ

ಕಾಲಕ್ಕೆ ತಕ್ಕಂತೆ ಹಾರ್ಮೋನ್‌ಗಳಲ್ಲಿ ಏರಿಳಿತ ಸಂಭವಿಸುತ್ತದೆ. ಅಥವಾ ಜೀವನಶೈಲಿಯಲ್ಲಿ ಆದ ಬದಲಾವಣೆಯು ಕೂದಲಿನ ಅಗತ್ಯತೆಗಳನ್ನು ಬದಲಾಯಿಸಬಹುದು. ಹೀಗಾಗಿ ಕಾಲ ಕಾಲಕ್ಕೆ ಶ್ಯಾಂಪೂ ಬದಲಾವಣೆ ಮಾಡುವ ಮೂಲಕ ಹವಾಮಾನದ ಬಲದಾವಣೆಗೆ ಸರಿ ಹೊಂದುವಂತಹ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಿದೆ. ಕೂದಲಿನ ವಿನ್ಯಾಸ ಅಥವಾ ಜಿಡ್ಡಿನಂಶಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

3.ಕೂದಲಿನ ನಿರೋಧಕ ಶಕ್ತಿ ಹೆಚ್ಚುತ್ತದೆ

ಕಾಲ ಕಾಲಕ್ಕೆ ಶ್ಯಾಂಪೂ ಬದಲಾವಣೆ ಮಾಡುವುದರಿಂದ ಕೂದಲಿನ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಅನೇಕರು ಹೇಳುತ್ತಾರೆ. ಇದು ಕೂದಲಿನ ಬಲವನ್ನು ಹೆಚ್ಚಿಸುತ್ತದೆ. ಕೂದಲಿಗೆ ಕಾಲ ಕಾಲಕ್ಕೆ ಬೇಕಾದ ಪೋಷಣೆಯನ್ನು ಒದಸಿಗಲು ಸಾಧ್ಯವಿದೆ.

4. ಹೊಸ ಪ್ರಯೋಗ ಮಾಡಲು ಅವಕಾಶ

ನಿಯಮಿತವಾಗಿ ಶ್ಯಾಂಪೂ ಬದಲಾವಣೆ ಮೂಲಕ ಜನರು ತಮ್ಮ ಕೂದಲಿಗೆ ಯಾವುದರ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ. ನಿಮ್ಮ ಕೂದಲಿಗೆ ಯಾವ ರೀತಿಯ ಪೋಷಣೆಯ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ಆ ಬಗ್ಗೆ ಪ್ರಯೋಗ ಮಾಡಲು ಇದು ಸಹಾಯ ಮಾಡುತ್ತದೆ.

5. ನಿಮ್ಮ ದಿನಚರಿಯನ್ನು ರಿಫ್ರೆಶ್ ಮಾಡುತ್ತದೆ

ನಿಯಮಿತವಾಗಿ ಶ್ಯಾಂಪೂ ಬದಲಾವಣೆ ಮಾಡುವುದರಿಂದ ಕೂದಲಿನ ದಿನಚರಿಗೆ ತಾಜಾತನ ಸಿಕ್ಕಂತಾಗಿದೆ. 3 ತಿಂಗಳಿಗೊಮ್ಮೆ ಶ್ಯಾಂಪೂ ಬದಲಾವಣೆ ಮಾಡುವುದರಿಂದ ಕೂದಲಿನ ಪೋಷಣೆಯ ರೀತಿಯನ್ನೂ ಬದಲಿಸಿದಂತೆ ಆಗಲಿದೆ.

ಶ್ಯಾಂಪೂ ಬದಲಾವಣೆ ಮಾಡುವುದರಿಂದ ಸಮಸ್ಯೆಗಳೇನು?

ನೆತ್ತಿಯ ಕಿರಿಕಿರಿ : ಪದೇ ಪದೇ ಕೂದಲಿಗೆ ಶ್ಯಾಂಪೂ ಬದಲಾವಣೆ ಮಾಡುವುದರಿಂದ ನೆತ್ತಿಯಲ್ಲಿ ಕಿರಿಕಿರಿ ಉಂಟಾಗಬಹುದು. ಅಲರ್ಜಿಯಂತಹ ಸಮಸ್ಯೆ ಕೂಡ ಉಂಟಾಗಬಹುದು. ನೆತ್ತಿಯಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ನೆತ್ತಿಯಲ್ಲಿರೋ ಸೂಕ್ಷ್ಮ ಜೀವಿಗಳಿಗೆ ಹಾನಿ : ನೆತ್ತಿಯು ತನ್ನದೇ ಆದ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ. ಇವುಗಳು ನೆತ್ತಿಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ನಿಯಮಿತವಾಗಿ ಶ್ಯಾಂಪೂ ಬದಲಾವಣೆ ಮಾಡುವುದರಿಂದ ನೆತ್ತಿಯ ಸೂಕ್ಷ್ಮಜೀವಿಗಳ ಸಮತೋಲನ ಹಾಳಾಗಿಬಿಡಬಹುದು. ಇದರಿಂದ ತಲೆಹೊಟ್ಟು ಹಾಗೂ ತುರಿಕೆಯಂತಹ ಸಮಸ್ಯೆಗಳು ಉಂಟಾಗಬಹುದು.

ಅಸಮಂಜಸ ಫಲಿತಾಂಶ : ಪ್ರತಿ ಮೂರು ತಿಂಗಳಿಗೊಮ್ಮೆ ಶ್ಯಾಂಪೂ ಬದಲಾವಣೆ ಮಾಡುವ ನೀವು ನಿಮ್ಮ ಶಾಂಪೂ ಹುಡುಕಾಟದಲ್ಲಿ ಎಡವಲೂಬಹುದು. ಕೂದಲಿಗೆ ಹೊಸ ಶ್ಯಾಂಪೂವಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಇದರಿಂದ ಕೂದಲಿನ ಆರೋಗ್ಯ ಏರುಪೇರಾಗಬಹುದು.

ನೀವು ನಿಯಮಿತವಾಗಿ ಶ್ಯಾಂಪೂ ಬದಲಾಯಿಸಬೇಕೇ?

ನೀವು ಈಗ ಬಳಸುತ್ತಿರುವ ಶ್ಯಾಂಪೂ ನಿಮ್ಮ ಕೂದಲಿನ ಆರೋಗ್ಯವನ್ನು ಸರಿಯಾಗಿ ಕಾಪಾಡುತ್ತಿದ್ದರೆ ಖಂಡಿತವಾಗಿಯೂ ನೀವು ಶ್ಯಾಂಪೂ ಬದಲಾವಣೆ ಮಾಡುವ ಅಗತ್ಯವಿಲ್ಲ. ಆದರೆ ನೀವು ಶ್ಯಾಂಪೂ ಬಳಕೆಯ ಬಳಿಕ ಕಿರಿಕಿರಿ ಅಥವಾ ಒಣ ನೆತ್ತಿಯಂತಹ ಸಮಸ್ಯೆಯನ್ನು ಗಮನಿಸಿದರೆ ಅನಿವಾರ್ಯವಾಗಿ ನೀವು ಬದಲಾವಣೆ ಮಾಡಬೇಕು. ಬದಲಾವಣೆ ಮಾಡಬೇಕು ಎಂಬ ನಿಮ್ಮ ನಿರ್ಧಾರವು ನಿಮ್ಮ ಕೂದಲಿನ ರಕ್ಷಣೆಯ ಆಯ್ಕೆಗೆ ಸಂಬಂಧಿಸಿರಬೇಕು. ನಿಮಗೆ ಶ್ಯಾಂಪೂ ಬದಲಾವಣೆ ಕೂದಲಿಗೆ ಅನಿವಾರ್ಯವಾಗಿದೆ ಎಂದು ಎನಿಸಿದರೆ ಮಾತ್ರ ಬದಲಾವಣೆ ಮಾಡುವುದು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.

    ಹಂಚಿಕೊಳ್ಳಲು ಲೇಖನಗಳು