logo
ಕನ್ನಡ ಸುದ್ದಿ  /  ಜೀವನಶೈಲಿ  /  Happy April Fools' Day 2023: ಏಪ್ರಿಲ್‌ 1-ಮೂರ್ಖರ ದಿನ; ಈ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆಯ ಬಗ್ಗೆ ನಿಮಗೆಷ್ಟು ಗೊತ್ತು?

Happy April Fools' Day 2023: ಏಪ್ರಿಲ್‌ 1-ಮೂರ್ಖರ ದಿನ; ಈ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆಯ ಬಗ್ಗೆ ನಿಮಗೆಷ್ಟು ಗೊತ್ತು?

HT Kannada Desk HT Kannada

Mar 31, 2023 02:27 PM IST

ಮೂರ್ಖರ ದಿನ ಏಪ್ರಿಲ್‌ 1

  • ಪ್ರತಿ ವರ್ಷ ಏಪ್ರಿಲ್‌ 1ನೇ ತಾರೀಕಿನಂದು ಆತ್ಮೀಯರನ್ನು ಮೂರ್ಖರನ್ನಾಗಿಸುವ ಮೂಲಕ, ಮೂರ್ಖರಾಗುವ ಮೂಲಕ ಮೂರ್ಖರ ದಿನವನ್ನು ಆಚರಿಸುತ್ತೇವೆ. ಅದೆಲ್ಲಾ ಸರಿ ಈ ಏಪ್ರಿಲ್‌ ಫೂಲ್‌ ಹಿಂದಿನ ಇತಿಹಾಸ, ಮಹತ್ವ ಹಾಗೂ ಆಚರಣೆಯ ಬಗ್ಗೆ ನಿಮಗೆ ಗೊತ್ತಾ? ಗೊತ್ತಿಲ್ಲ ಅಂದ್ರೆ ಈ ಸ್ಟೋರಿ ಓದಿ.

ಮೂರ್ಖರ ದಿನ ಏಪ್ರಿಲ್‌ 1
ಮೂರ್ಖರ ದಿನ ಏಪ್ರಿಲ್‌ 1

ನಾಳೆ ಏಪ್ರಿಲ್‌ 1ನೇ ತಾರೀಕು. ನೀವು ಸ್ನೇಹಿತರು, ಕುಟುಂಬದವರು ಹಾಗೂ ಸಹೋದ್ಯೋಗಿಗಳ ಜೊತೆ ಸೇರಿ ಮೂರ್ಖರ ದಿನವನ್ನು ಆಚರಿಸಲು ಸಜ್ಜಾಗಿರುತ್ತೀರಿ. ಪ್ರತಿವರ್ಷ ಏಪ್ರಿಲ್‌ 1 ತಾರೀಕಿನಂದು ಪ್ರಪಂಚದಾದ್ಯಂತ ಮೂರ್ಖರ ದಿನವನ್ನು ಆಚರಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ದಿನ ಕಳೆದಂತೆ ನಡಿಗೆ ನಿಧಾನವಾಗುತ್ತಿದೆಯೇ? ವಾಕಿಂಗ್ ವೇಗವಾಗಲು ಈ ಸಲಹೆ ಪಾಲಿಸಿ ನೋಡಿ

Flax Seeds: ಆರೋಗ್ಯಕಷ್ಟೇ ಅಲ್ಲ, ಅಂದಕ್ಕೂ ಬೇಕು ಅಗಸೆ ಬೀಜ; ಚರ್ಮ, ಕೂದಲಿನ ಕಾಂತಿ ಹೆಚ್ಚಲು ಇದನ್ನು ಹೀಗೆ ಬಳಸಿ

Egg Chat Recipe: ಮೊಟ್ಟೆ ತಿನ್ನೊಲ್ಲ ಅಂತ ಮಕ್ಕಳು ಹಟ ಮಾಡ್ತಾರಾ, ಈ ರೀತಿ ಎಗ್‌ ಚಾಟ್‌ ಮಾಡಿಕೊಡಿ, ಮತ್ತೂ ಬೇಕು ಅಂತ ತಿಂತಾರೆ

ಅತಿಕಾಮದ ದೌರ್ಬಲ್ಯ: ಲೈಂಗಿಕ ಶೋಷಣೆಯನ್ನೇ ವ್ಯಸನವಾಗಿಸಿಕೊಳ್ಳುವ ಕಾಮಪಿಪಾಸೆಯೂ ರೋಗ, ಚಿಕಿತ್ಸೆಯ ಜೊತೆಗೆ ಶಿಕ್ಷೆಯೂ ಕೊಡಬೇಕು

ನಿಮ್ಮ ಪ್ರೀತಿಪಾತ್ರರನ್ನು ಮೂರ್ಖರನ್ನಾಗಿ ಮಾಡಿ, ತಮಾಷೆ ನೋಡಲು ಈ ದಿನ ಸೂಕ್ತ. ಯಾಕೆಂದರೆ ಬೇರೆ ದಿನ ನೀವು ಅವರನ್ನು ಮೂರ್ಖರನ್ನಾಗಿಸಲು ಹೊರಟರೆ ಒದೆ ತಿನ್ನುವುದು ಗ್ಯಾರೆಂಟಿ. ಆದರೆ ನಾಳೆ ಹಾಗಲ್ಲ... ʼಏಪ್ರಿಲ್‌ ಫೂಲ್‌....ʼ ಎನ್ನುವ ಮೂಲಕ ಪರಿಸ್ಥಿತಿಯನ್ನು ಸಂಭಾಳಿಸಬಹುದು. ನಾಳೆ ನಿಮ್ಮ ಆತ್ಮೀಯರನ್ನು ಫೂಲ್‌ ಮಾಡಿ ಮಜಾ ನೋಡಲು ನೀವು ಕಾತುರರಾಗಿರಬಹುದು. ಅದೆಲ್ಲಾ ಸರಿ, ಆದರೆ ಈ ಮೂರ್ಖರ ದಿನವನ್ನು ಏಪ್ರಿಲ್‌ 1 ರಂದೇ ಆಚರಿಸುವುದು ಏಕೆ? ಈ ದಿನದ ಇತಿಹಾಸ, ಮೂಲ ಹಾಗೂ ಮಹತ್ವವನ್ನು ತಿಳಿಯಲು ಈ ಸ್ಟೋರಿ ಓದಲೇಬೇಕು.

ಇತಿಹಾಸ

ಏಪ್ರಿಲ್‌ 1 ತಾರೀಕಿನಂದೇ ಏಪ್ರಿಲ್‌ ಫೂಲ್‌ ಅಥಾ ಮೂರ್ಖರ ದಿನವನ್ನು ಯಾವ ಕಾರಣಕ್ಕೆ ಆಚರಿಸುತ್ತಾರೆ ಎಂಬ ಇತಿಹಾಸದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಇದರ ಮೂಲದ ಹಿಂದೆ ಹಲವು ಊಹೆಗಳಿವೆ.

ಅದ್ಯಾಗೂ, 16ನೇ ಶತಮಾನದ ಉತ್ತರಾರ್ಧದಲ್ಲಿ ಪೋಪ್‌ ಗ್ರೆಗೊರಿ XIII ಗ್ರೆಗೋರಿಯನ್‌ ಕ್ಯಾಲೆಂಡರ್‌ನ ಅನುಷ್ಠಾನಗೊಳಿಸಿದ ಇತಿಹಾಸವು ಇದರ ಹಿಂದಿದೆ ಎನ್ನುತ್ತದೆ ಒಂದು ಸಿದ್ಧಾಂತ.

ಗ್ರೆಗೋರಿಯನ್ ಕ್ಯಾಲೆಂಡರ್ ಜಾರಿಗೆ ಬಂದಾಗ, ಜನವರಿ 1 ವರ್ಷದ ಪ್ರಾರಂಭವಾಯಿತು. ಇದಕ್ಕೂ ಮೊದಲು ಅಂದರೆ ಜೂಲಿಯನ್‌ ಕ್ಯಾಲೆಂಡರ್‌ ಪ್ರಕಾರ ಮಾರ್ಚ್‌ ವರ್ಷಾಂತ್ಯ ಎಂಬುದಿತ್ತು. ಅಂದರೆ ಹಳೆ ಕ್ಯಾಲೆಂಡರ್‌ ಪ್ರಕಾರ ಏಪ್ರಿಲ್‌ 1 ಹೊಸವರ್ಷವಾಗಿತ್ತು.

ಫ್ರಾನ್ಸ್‌ ದೇಶ ಮೊದಲ ಬಾರಿಗೆ ಗ್ರೆಗೋರಿಯನ್‌ ಹೊಸ ಕ್ಯಾಲೆಂಡರ್‌ ಅನ್ನು ಅಂಗೀಕರಿಸಿತ್ತು. ಈ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದರೂ ಕೂಡ ಕೆಲವು ವ್ಯಕ್ತಿಗಳಿಗೆ ಹೊಸ ಬದಲಾವಣೆಯ ಬಗ್ಗೆ ತಿಳಿದಿರಲಿಲ್ಲ, ಅಲ್ಲದೆ ತಿಳಿದ ಮೇಲೂ ಅವರು ಹೊಸ ಬದಲಾವಣೆಗಳನ್ನು ಅನುಸರಿಸಲು ಒಪ್ಪಿರಲಿಲ್ಲ. ಅಂತಹ ಒಂದು ಗುಂಪು ಏಪ್ರಿಲ್ 1 ರಂದೇ ಹೊಸ ವರ್ಷ ಆಚರಿಸುವುದನ್ನು ಮುಂದುವರೆಸಿತ್ತು.

ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುವ (ಹೊಸ ಕ್ಯಾಲೆಂಡರ್‌) ಜನರು ಜೂಲಿಯನ್‌ ಕ್ಯಾಲೆಂಡರ್‌ ಅನ್ನು ಅನುಸರಿಸುವ ಜನರನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದರು. ಅವರು ಮೂರ್ಖರು, ಆ ಕಾರಣಕ್ಕೆ ಅವರು ಹೊಸ ಕ್ಯಾಲೆಂಡರ್‌ ವರ್ಷವನ್ನು ಆಚರಿಸುತ್ತಿಲ್ಲ ಎಂದು ನಿಂದಿಸಲಾಯಿತು. ಆ ಮೂಲಕ ಏಪ್ರಿಲ್‌ 1 ಅನ್ನು ಸಾಂಪ್ರದಾಯಿಕವಾಗಿ ಮೂರ್ಖರ ದಿನ ಎಂದು ಆಚರಿಸಲಾಯಿತು ಎನ್ನಲಾಗುತ್ತದೆ, ಆದರೂ ಕೂಡ ಈ ಬಗ್ಗೆ ಯಾವುದೇ ನಿಖರ ಮಾಹಿತಿಯಿಲ್ಲ.

ಮಹತ್ವ

ಮೂರ್ಖರ ದಿನವನ್ನು ಪ್ರಪಂಚದಾದ್ಯಂತ ಪ್ರತಿ ದೇಶದಲ್ಲೂ ಆಚರಿಸಲಾಗುತ್ತದೆ. ಇದು ರಜಾದಿನವಲ್ಲ. ಇತ್ತೀಚಿನ ಜನರು ಹಾಸ್ಯ ಎಂಬುದನ್ನೇ ಮರೆತು ಗಂಭೀರವಾಗಿ ಬದುಕುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಬಹುಶಃ ನಗುವುದನ್ನೇ ಮರೆತವರೂ ಇದ್ದಾರೆ ಎನ್ನಬಹುದು. ಅಂತಹವರ ಮುಖದಲ್ಲಿ ನಗು ತರಿಸುವ ಉದ್ದೇಶದಿಂದ ಮೂರ್ಖರ ದಿನವನ್ನು ಆಚರಿಸಬಹುದು. ಆದರೆ ತಮಾಷೆಗೆ ಮಿತಿ ಇರಲಿ. ಏಪ್ರಿಲ್‌ ಫೂಲ್‌ ಡೇ ಅಥವಾ ಮೂರ್ಖರ ದಿನ ಆತ್ಮೀಯರನ್ನು ಕುಚೇಷ್ಟೆ ಮಾಡುವ ಮೂಲಕ, ಮೂರ್ಖರನ್ನಾಗಿಸುವ ಮೂಲಕ ಮೋಜು ಮಾಡುವ ಒಂದು ಸುಸಂದರ್ಭದ ದಿನವಾಗಿದೆ. ಈ ದಿನವು ಜೀವನದಲ್ಲಿ ಸಕಾರಾತ್ಮಕ ಭಾವವನ್ನು ತುಂಬುತ್ತದೆ. ಸ್ನೇಹಿತರು, ಆತ್ಮೀಯರನ್ನು ಒಟ್ಟುಗೂಡಿಸುತ್ತದೆ. ಒಂದು ತಮಾಷೆಯ ಕ್ಷಣದಲ್ಲಿ ಎಲ್ಲರೂ ಒಂದಾಗಿ ಸೇರಲು ಸಹಾಯ ಮಾಡುತ್ತದೆ. ಒಟ್ಟಾರೆ ಈ ದಿನ ಬದುಕಿಗೆ ನಗು ತುಂಬುತ್ತದೆ ಎಂದರೆ ಸುಳ್ಳಾಗಲ್ಲ. ಇದು ಏಪ್ರಿಲ್‌ 1 ರ ಮಹತ್ವ.

2023ರ ಮೂರ್ಖರ ದಿನವನ್ನು ಹೀಗೂ ಆಚರಿಸಬಹುದು

ಮೂರ್ಖರ ದಿನದಂದು ನಿಮ್ಮ ಪ್ರೀತಿ ಪಾತ್ರರನ್ನು ಪ್ರಾಂಕ್‌ ಮಾಡುವ ಮೂಲಕ, ಅವರನ್ನು ಮೂರ್ಖರನ್ನಾಗಿರುವ ತಂತ್ರಗಳನ್ನು ಯೋಜಿಸುವ ಮೂಲಕ, ತಮಾಷೆಯ ಸಂಗತಿಗಳನ್ನು ಗಂಭೀರವಾಗಿ ಹೇಳುವ ಮೂಲಕ ಆಚರಿಸಬಹುದು. ಇಷ್ಟೇ ಅಲ್ಲದೆ ಇನ್ನೂ ಹಲವು ವಿಧದಲ್ಲಿ ಮೂರ್ಖರನ್ನಾಗಿ ಮಾಡುವ ದಾರಿಗಳಿವೆ.

ಕೆಲವೊಂದು ದೇಶಗಳಲ್ಲಿ ಮೂರ್ಖರ ದಿನ ಕೆಲವೊಂದು ಸಂಪ್ರದಾಯಗಳನ್ನು ಪಾಲಿಸುತ್ತಾರೆ.

ಫ್ರಾನ್ಸ್‌ನಲ್ಲಿ ಮಕ್ಕಳು ತಮ್ಮ ಬೆನ್ನಿಗೆ ಕಾಗದದಿಂದ ತಯಾರಿಸಿದ ಮೀನನ್ನು ಅಂಟಿಕೊಳ್ಳುವ ಮೂಲಕ ಸ್ನೇಹಿತರನ್ನು ತಮಾಷೆ ಮಾಡುವುದು ವಾಡಿಕೆ.

ಸ್ಕಾಟ್ಲೆಂಡ್‌ನಲ್ಲಿ ಎರಡು ದಿನವನ್ನು ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತದೆ. ಎರಡನೇ ದಿನವನ್ನು ಟೈಲಿ ಡೇ ಎಂದು ಕರೆಯಲಾಗುತ್ತದೆ. ಅಂದು ತೀರಾ ಅಪರೂಪ ಎನ್ನಿಸುವ ರೀತಿ ಪ್ರಾಂಕ್‌ ಮಾಡಲಾಗುತ್ತದೆ. ಈ ಅಭ್ಯಾಸಕ್ಕೆ ʼಕಿಕ್‌ ಮಿʼ ಎಂದೂ ಕರೆಯಲಾಗುತ್ತದೆ.

1986ರಿಂದ ನ್ಯೂರ್ಯಾಕ್‌ನಲ್ಲಿ ಏಪ್ರಿಲ್‌ ಫೂಲ್‌ ಡೇ ಅಸ್ತಿತ್ವದಲ್ಲಿಲ್ಲ. ಆ ಕಾರಣಕ್ಕೆ ಏಪ್ರಿಲ್ ಫೂಲ್ಸ್ ಡೇ ಪೆರೇಡ್‌ಗಾಗಿ ಫೋನಿ ಪತ್ರಿಕಾ ಪ್ರಕಟಣೆಗಳು ನಡೆಯುತ್ತಿವೆ.

ಕೆನಡಾ ಹಾಗೂ ಇಂಗ್ಲೆಡ್‌ನಲ್ಲಿ ಮಧ್ಯಾಹ್ನದ ಬಳಿಕ ಏಪ್ರಿಲ್‌ ಫೂಲ್‌ ಕುಚೇಷ್ಟೆಗಳನ್ನು ನಿಲ್ಲಿಸುವುದು ವಾಡಿಕೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು