Wall Sit Exercise: ಸ್ನಾಯು ಬಲಗೊಳ್ಳುವುದರಿಂದ ಹಿಡಿದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಈ ವಾಲ್ ಸಿಟ್ ವ್ಯಾಯಾಮ!
Mar 09, 2023 11:02 AM IST
ವಾಲ್ ಸಿಟ್ ವ್ಯಾಯಾಮದ ಉಪಯೋಗಗಳು
- ವಾಲ್ ಸಿಟ್ ವ್ಯಾಯಾಮ ಮಾಡಲು ಜಿಮ್‌ಗೆ ಹೋಗುವ ಅಗತ್ಯವಿಲ್ಲ. ಸಾವಿರ ಸಾವಿರ ಶುಲ್ಕ ಕಟ್ಟಬೇಕಿಲ್ಲ. ಇದನ್ನು ಮನೆಯಲ್ಲೇ ಮಾಡಬಹುದು. ಒಂದು ಕುರ್ಚಿಯನ್ನು ಗೋಡೆಗೆ ಒರಗಿಸಿ ಇಟ್ಟಾಗ ಹೇಗೆ ಕಾಣುತ್ತದೋ, ನಿಮ್ಮ ದೇಹ ಕೂಡಾ ಹಾಗೇ ಇರಬೇಕು.
ಸ್ಕೂಲ್‌ನಲ್ಲಿದ್ದಾಗ ನಾವು ಏನಾದರೂ ತಪ್ಪು ಮಾಡಿದರೆ, ಟೀಚರ್‌ಗಳು ನಮಗೆ ವಾಲ್ ಸಿಟ್ ಶಿಕ್ಷೆ ನೀಡುತ್ತಿದ್ದರು. ಬಹಳ ಹೊತ್ತು ಹಾಗೆ ವಾಲ್ ಸಿಟ್ ಮಾಡಿದಾಗ ಕೈ ಕಾಲುಗಳು ಬಹಳಷ್ಟು ನೋವು ಬರುತ್ತಿತ್ತು. ಆಗ ಇನ್ಮುಂದೆ ನಾನು ಇಂತಹ ತಪ್ಪು ಮಾಡಬಾರದು ಎಂದುಕೊಳ್ಳುತ್ತಿದ್ದವರೇ ಹೆಚ್ಚು. ಆದರೆ ಈ ರೀತಿ ವಾಲ್ ಸಿಟ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗ ಇದೆ ನಿಮಗೆ ಗೊತ್ತಾ?
ವಾಲ್ ಸಿಟ್ ವ್ಯಾಯಾಮ ಮಾಡಲು ಜಿಮ್‌ಗೆ ಹೋಗುವ ಅಗತ್ಯವಿಲ್ಲ. ಸಾವಿರ ಸಾವಿರ ಶುಲ್ಕ ಕಟ್ಟಬೇಕಿಲ್ಲ. ಇದನ್ನು ಮನೆಯಲ್ಲೇ ಮಾಡಬಹುದು. ಒಂದು ಕುರ್ಚಿಯನ್ನು ಗೋಡೆಗೆ ಒರಗಿಸಿ ಇಟ್ಟಾಗ ಹೇಗೆ ಕಾಣುತ್ತದೋ, ನಿಮ್ಮ ದೇಹ ಕೂಡಾ ಹಾಗೇ ಇರಬೇಕು. ನಿಮ್ಮ ಬೆನ್ನನ್ನು ಗೋಡೆಗೆ ಒರಗಿಸಿ, ಗೋಡೆಯ ಸಪೋರ್ಟ್‌ನಿಂದ ಕುರ್ಚಿಯಂತೆ ಕೂರಲು ಯತ್ನಿಸಿ. ಮೊಣಕಾಲುಗಳಿಂದ ಪಾದದವರೆಗೆ ಕಾಲುಗಳನ್ನು ನೇರವಾಗಿ ಇರಿಸಿ. ದೇಹದ ಮಧ್ಯಭಾಗವು ಮೊಣಕಾಲುಗಳಿಂದ ಪೃಷ್ಠದವರೆಗೆ ನೆಲಕ್ಕೆ ಸಮಾನಾಂತರವಾಗಿರಬೇಕು ಮತ್ತು ದೇಹದ ಮೇಲಿನ ಭಾಗವು ನೇರವಾಗಿರಬೇಕು.
ಅಲುಗಾಡದೆ ಐದು ನಿಮಿಷಗಳ ಕಾಲ ನೀವು ಇದೇ ಭಂಗಿಯಲ್ಲಿ ಇರಿ. ಆರಂಭದಲ್ಲಿ ನಿಮಗೆ 5 ನಿಮಿಷಗಳು ಸಾಧ್ಯವಾಗದಿದ್ದರೆ ಮೊದಲು ಒಂದು ನಿಮಿಷ ಮಾಡಿ. ನಂತರ 2 ನಿಮಿಷ, 3 ನಿಮಿಷ.. ಹೀಗೆ ಹೆಚ್ಚಿಕೊಂಡು ಹೋಗಿ. ಇದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಬೆನ್ನುಮೂಳೆ ಕೂಡಾ ಆರೋಗ್ಯಕರವಾಗಿರುತ್ತದೆ. ಬೆನ್ನು ನೋವಿನಿಂದ ಬಳಲುವವರು ಈ ವ್ಯಾಯಾಮ ಮಾಡಿದರೆ ಕೆಲವೇ ದಿನಗಳಲ್ಲಿ ನೋವು ಕಡಿಮೆಯಾಗುತ್ತದೆ. ವಾಲ್ ಸಿಟ್ ವ್ಯಾಯಾಮ ಹೆಚ್ಚಿನ ಕ್ಯಾಲೊರಿ ಬರ್ನ್ ಮಾಡುತ್ತದೆ. ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು. ಈ ವ್ಯಾಯಾಮದಿಂದ ಹೃದಯ ಸಂಬಂಧಿ ವ್ಯವಸ್ಥೆ ಕೂಡಾ ಆರೋಗ್ಯಕರವಾಗಿರುತ್ತದೆ. ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಹೊಟ್ಟೆಯ ಸುತ್ತಲಿನ ಕೊಬ್ಬು ಕಡಿಮೆ ಆಗುತ್ತದೆ. ಒತ್ತಡ ಮತ್ತು ಆತಂಕದಿಂದ ಬಳಲುತ್ತಿರುವವರು ಈ ವ್ಯಾಯಾಮ ಮಾಡಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ.
ಮತ್ತಷ್ಟು ಲೈಫ್‌ಸ್ಟೈಲ್ ಸುದ್ದಿಗಳು
ಉಸ್ಸಪ್ಪಾ, ಸೆಕೆ ಶುರು ಆಯ್ತಲ್ವಾ.. ಆರೋಗ್ಯ ತಜ್ಞರು ನಿಮಗಾಗಿ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ ನೋಡಿ
ಇಷ್ಟು ದಿನಗಳ ಕಾಲ ಚಳಿಯಿಂದ ಬೆಚ್ಚಗಿದ್ದ ಜನರು ಈಗ ಸೆಕೆಯಿಂದ ಪರದಾಡುವ ಸಮಯ ಬಂದಿದೆ. ಹೌದು, ಈಗಾಗಲೇ ಸೆಕೆ ಆರಂಭವಾಗಿದೆ. ಮಾರ್ಚ್ ಆರಂಭದಲ್ಲೇ ಇಷ್ಟರ ಮಟ್ಟಿಗೆ ಇರುವ ಬಿಸಿಲು ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ಹೇಗೆ ಇರಲಿದೆಯೋ ಎಂಬ ಭಯ ಕಾಡುತ್ತಿದೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆಯು ಜನರಿಗೆ ಕೆಲವೊಂದು ಮುನ್ಸೂಚನೆ ನೀಡಿದೆ. ಬೇಸಿಗೆಯಲ್ಲಿ ಅನುಸರಿಸಬೇಕಾದ ಟಿಪ್ಸ್ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.
ಎತ್ತರವಾಗಿ ಕಾಣಿಸಬೇಕೆ? ಈ ಫ್ಯಾಷನ್ ತಂತ್ರಗಳನ್ನು ಅನುಸರಿಸಿ
ದಪ್ಪ ಇರುವವರಿಗೆ ತೆಳ್ಳಗಾಗುವ ಚಿಂತೆ, ತೆಳ್ಳಗೆ ಇರುವವರಿಗೆ ಹೇಗಪ್ಪಾ ದಪ್ಪ ಆಗೋದು ಎನ್ನುವ ಯೋಚನೆ, ಇನ್ನು ಕುಳ್ಳ ಇರುವವರಿಗೆ ಉದ್ದ ಆಗೋದು ಹೇಗೆ ಅಂತ ಚಿಂತೆ. ದಪ್ಪ ಇರುವವರು ತೆಳ್ಳಗಾಗಬಹುದು, ತೆಳ್ಳಗೆ ಇರುವವರು ದಪ್ಪ ಆಗಬಹುದು. ಆದರೆ ನಮ್ಮ ಎತ್ತರವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವೊಂದು ಫ್ಯಾಷನ್ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಎತ್ತರವಾಗಿ ಕಾಣಬಹುದು. ಸರಿಯಾದ ಉಡುಪು ಹಾಗೂ ಸ್ಟೈಲಿಂಗ್ ತಂತ್ರದ ಮೂಲಕ ಎತ್ತರವಾಗಿ ಕಾಣುವ ಜೊತೆಗೆ ಆತ್ಮವಿಶ್ವಾಸದಿಂದಿರಲು ಸಾಧ್ಯ. ಟಿಪ್ಸ್‌ಗಾಗಿ ಈ ಲಿಂಕ್ ಒತ್ತಿ.