logo
ಕನ್ನಡ ಸುದ್ದಿ  /  ಜೀವನಶೈಲಿ  /  Diabetes: ಯೌವನದಲ್ಲಿಯೇ ಕಾಡುತ್ತಿದೆ ಮಧುಮೇಹ: ಇದರ ಹಿಂದಿದೆ ಹಲವು ಕಾರಣ

Diabetes: ಯೌವನದಲ್ಲಿಯೇ ಕಾಡುತ್ತಿದೆ ಮಧುಮೇಹ: ಇದರ ಹಿಂದಿದೆ ಹಲವು ಕಾರಣ

Meghana B HT Kannada

Jan 15, 2024 02:38 PM IST

ಯುವಜನರನ್ನು ಕಾಡುತ್ತಿರುವ ಮಧುಮೇಹ (ಪ್ರಾತಿನಿಧಿಕ ಚಿತ್ರ)

    • Diabetes in youths: ಆಧುನಿಕ ಜೀವನಶೈಲಿಯು ಯುವಕರಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಈಗಿನ ಯುವ ಜನತೆ ಮಾಡುತ್ತಿರುವ ಈ ತಪ್ಪುಗಳಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹದ ಪಾಶಕ್ಕೆ ಬೀಳುತ್ತಿದ್ದಾರೆ.
ಯುವಜನರನ್ನು ಕಾಡುತ್ತಿರುವ ಮಧುಮೇಹ (ಪ್ರಾತಿನಿಧಿಕ ಚಿತ್ರ)
ಯುವಜನರನ್ನು ಕಾಡುತ್ತಿರುವ ಮಧುಮೇಹ (ಪ್ರಾತಿನಿಧಿಕ ಚಿತ್ರ)

ಆಧುನಿಕ ಜೀವನ ಶೈಲಿ ಹಾಗೂ ಕಳಪೆ ಆಹಾರಗಳ ಸೇವನೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಮಧುಮೇಹಕ್ಕೆ ಒಳಗಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಧುಮೇಹ ಎನ್ನುವುದು ಒಂದು ದೀರ್ಘಕಾಲದ ಅನಾರೋಗ್ಯ ಸ್ಥಿತಿಯಾಗಿದ್ದು ನಿಮ್ಮ ದೇಹವು ಗ್ಲುಕೋಸ್​ ಅಂಶವನ್ನು ಹೇಗೆ ಸಂಸ್ಕರಿಸುತ್ತದೆ ಎಂಬುದರ ಮೇಲೆ ಆಧಾರವಾಗಿರುತ್ತದೆ. ಮಧುಮೇಹದಲ್ಲಿ ಟೈಪ್​ 1 ಹಾಗೂ ಟೈಪ್​ 2 ಎಂಬ 2 ವಿಧಗಳಿವೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಮಧುಮೇಹದ ಅಪಾಯವು ಹೆಚ್ಚುತ್ತಲೇ ಇದೆ. ಬಾಲ್ಯದಲ್ಲೇ ಬರುವ ಸ್ಥೂಲಕಾಯದ ಸಮಸ್ಯೆ ಹಾಗೂ ಆಲಸ್ಯ ಜೀವನಶೈಲಿಯಿಂದಾಗಿ ಮಧುಮೇಹ ಕಾಯಿಲೆಯು ಯೌವನದಲ್ಲಿಯೇ ಹೆಚ್ಚಾಗಿ ಕಾಡುತ್ತಿದೆ. ಕಳಪೆ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ ಹಾಗೂ ಅನುವಂಶೀಯತೆ ಇವೆಲ್ಲವೂ ಯುವಜನತೆಯಲ್ಲಿ ಮಧುಮೇಹ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಎನಿಸಿದೆ. ಯಾವೆಲ್ಲ ಸಂದರ್ಭಗಳಲ್ಲಿ ಯುವಕರಲ್ಲಿ ಮಧುಮೇಹದ ಅಪಾಯ ಹೆಚ್ಚಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ..

ಜಡ ಜೀವನಶೈಲಿ : ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗದೇ ಇರುವುದು ಹಾಗೂ ಅತಿಯಾಗಿ ಮೊಬೈಲ್​, ಟಿವಿ , ಲ್ಯಾಪ್​ಟಾಪ್​ಗಳನ್ನು ನೋಡುತ್ತಲೇ ಕಾಲ ಕಳೆಯುವುದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಯುವಕರ ದೈನಂದಿನ ದಿನಚರಿ ಹಾಗೂ ದೈಹಿಕ ಚಟುವಟಿಕೆಯು ನಿಮಗೆ ಯೌವನದಲ್ಲಿಯೇ ಮಧುಮೇಹದ ಅಪಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಹಾಗೂ ಸಕ್ರಿಯವಾದ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳಿ. ನಿಯಮಿತವಾದ ವ್ಯಾಯಾಮದ ಕ್ರಮವನ್ನು ರೂಢಿಸಿಕೊಳ್ಳಿ

ಕಳಪೆ ಆಹಾರ : ಹೆಚ್ಚಿನ ಕ್ಯಾಲೋರಿ, ಸಂಸ್ಕರಿಸಿದ ಹಾಗೂ ಸಕ್ಕರೆ ಅಂಶ ಅತಿಯಾಗಿ ಇರುವ ಆಹಾರವನ್ನು ಸೇವನೆ ಮಾಡುವುದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಯುವಕರು ಸಂಸ್ಕರಿಸಿದ ಆಹಾರವನ್ನು ಅತಿಯಾಗಿ ಸೇವನೆ ಮಾಡುವ ಮುನ್ನ ಜಾಗರೂಕತೆ ವಹಿಸಬೇಕು. ಸಂಸ್ಕರಿಸಿದ ಅಥವಾ ಸಕ್ಕರೆಯುಂಶಯುಕ್ತ ಆಹಾರ ಸೇವನೆ ಮಾಡುವ ಬದಲು ಧಾನ್ಯಗಳು, ಪ್ರೋಟಿನ್​ ಅಂಶವುಳ್ಳ ಆಹಾರಗಳು, ಹಣ್ಣುಗಳು ಹಾಗೂ ತರಕಾರಿಗಳ ಸೇವನೆ ಹೆಚ್ಚಿಸಬೇಕು.

ಬೊಜ್ಜು : ಆಧಿಕ ದೇಹದ ತೂಕವು ಮಧುಮೇಹದ ಅಪಾಯಕಾರಿ ಲಕ್ಷಣವಾಗಿದೆ. ಹೀಗಾಗಿ ನಿಮ್ಮ ಬಾಡಿ ಮಾಸ್​ ಇಂಡೆಕ್ಸ್​ನ್ನು ಆಗಾಗ ಪರಿಶೀಲನೆ ಮಾಡುತ್ತಲೇ ಇರಬೇಕು. ಸಮತೋಲಿತ ಅಹಾರ ಹಾಗೂ ನಿಯಮಿತ ವಾಕಿಂಗ್​ ಮೂಲಕ ನೀವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದಾಗಿದೆ.

ಅನುವಂಶೀಯತೆ : ಮಧುಮೇಹದ ಕುಟುಂಬದಲ್ಲಿ ಜನಿಸುವುದು ಕೂಡ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಕುಟುಂಬದಲ್ಲಿ ಮಧುಮೇಹದಿಂದ ಬಳಲುತ್ತಿರುವವರು ಇದ್ದರೆ ನೀವು ಆಗಾಗ ಮಧುಮೇಹದ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು. ಅನುವಂಶೀಯತೆಯಿಂದ ಬರುವ ಮಧುಮೇಹ ನಿಮ್ಮ ತಪ್ಪಲ್ಲದೇ ಇದ್ದರೂ ಸಹ ಆರೋಗ್ಯಕರ ಜೀವನಶೈಲಿಯ ಮೂಲಕ ನೀವು ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ.

ನಿದ್ರಾಹೀನತೆ: ನಿದ್ರಾಹೀನತೆ ಕೂಡ ಮಧುಮೇಹಕ್ಕೆ ಕಾರಣವಾಗಬಹುದು. ಹೀಗಾಗಿ ಯುವಕರು ತಮ್ಮ ನಿದ್ರಾ ದಿನಚರಿಯ ಬಗ್ಗೆಯೂ ಗಮನ ಹರಿಸಬೇಕು. ಸಾಕಷ್ಟು ಸಮಯಗಳ ಕಾಲ ನಿದ್ರೆ ಮಾಡಿದರೆ ಸಾಲದು ಆ ನಿದ್ರೆ ನೈರ್ಮಲ್ಯದಿಂದ ಇರಬೇಕು. ಅಂದರೆ ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ನೀವು ಮಧುಮೇಹದ ಅಪಾಯದಿಂದ ಪಾರಾಗಬಹುದಾಗಿದೆ.

ಒತ್ತಡ: ಅತಿಯಾದ ಒತ್ತಡ ಕೂಡ ಮಧುಮೇಹದ ಅಪಾಯವನ್ನು ಹೆಚ್ಚು ಮಾಡುತ್ತದೆ. ಈ ಅಂಶವನ್ನು ನೀವು ಗಮನದಲ್ಲಿಡಬೇಕು. ಒತ್ತಡ ನಿವಾರಣೆಗಾಗಿ ನೀವು ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಯೋಗ ಹಾಗೂ ಪ್ರಾಣಾಯಾಮಗಳ ಮೂಲಕ ಒತ್ತಡದಿಂದ ಉಂಟಾಗುವ ಅಪಾಯಗಳಿಂದ ಪಾರಾಗಬಹುದಾಗಿದೆ.

    ಹಂಚಿಕೊಳ್ಳಲು ಲೇಖನಗಳು