logo
ಕನ್ನಡ ಸುದ್ದಿ  /  ಜೀವನಶೈಲಿ  /  ಚರ್ಮದ ಮೇಲೆ ಈ ರೀತಿ ಚಿಹ್ನೆಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ; ಇದು ಮಧುಮೇಹದ ಎಚ್ಚರಿಕೆಯ ಸಂಕೇತ

ಚರ್ಮದ ಮೇಲೆ ಈ ರೀತಿ ಚಿಹ್ನೆಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ; ಇದು ಮಧುಮೇಹದ ಎಚ್ಚರಿಕೆಯ ಸಂಕೇತ

HT Kannada Desk HT Kannada

Jan 24, 2024 05:52 PM IST

ಮಧುಮೇಹ

    • Diabetes: ನೀವು ಗುಳ್ಳೆ, ಸೋಂಕು ಅಥವಾ ಇನ್ನಿತರ ದೀರ್ಘಕಾಲದ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನಿಮ್ಮ ವೈದ್ಯರನ್ನು ಮರೆಯದೆ ಭೇಟಿ ಮಾಡಿ. ನಿಮ್ಮ ಚರ್ಮದ ಮೇಲೆ ಕಂಡುಬರುವ ರೋಗ ಲಕ್ಷಣಗಳು ಮಧುಮೇಹವನ್ನು ಗುರುತಿಸಲು ನಿಮಗೆ ಸಹಾಯ ಮಾಡುತ್ತದೆ.
ಮಧುಮೇಹ
ಮಧುಮೇಹ (HT File Photo)

ಮಧುಮೇಹ, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನರನ್ನು ಕಾಡುತ್ತಿರುವ ಮತ್ತು ದೀರ್ಘಕಾಲದ ಕಾಯಿಲೆಯಾಗಿದೆ. ಒಮ್ಮೆ ಈ ಕಾಯಿಲೆ ಬಂದರೆ, ದೇಹದ ಬಹುತೇಕ ಎಲ್ಲಾ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಚರ್ಮ ಸೇರಿದಂತೆ ದೇಹದ ಹೆಚ್ಚಿನ ಅಂಗಾಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವು ಅಧಿಕವಾಗಿದೆ ಎಂದು ಗೊತ್ತಾಗುವಂತಹ ಅನೇಕ ಮುನ್ನೆಚ್ಚರಿಕೆಯ ಚಿಹ್ನೆಗಳು ದೇಹದ ಹೊರಭಾಗದಲ್ಲಿ ಕಾಣಿಸಿಕೊಳ್ಳಬಹುದು. ಆದ್ದರಿಂದ ಮಧುಮೇಹ ಕಾಯಿಲೆಯ ರೋಗ ಲಕ್ಷಣ ಗುರುತಿಸಿ ಅದನ್ನು ಅರ್ಥೈಸಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಟ್ರೆಂಡಿಂಗ್​ ಸುದ್ದಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಆಗ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದಾಗಿದೆ. ನೀವು ಗುಳ್ಳೆ, ಸೋಂಕು ಅಥವಾ ಇನ್ನಿತರ ದೀರ್ಘಕಾಲದ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಿ. ನಿಮ್ಮ ಚರ್ಮದ ಮೇಲೆ ಕಂಡುಬರುವ ರೋಗಲಕ್ಷಣಗಳು ಮಧುಮೇಹವನ್ನು ಗುರುತಿಸಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Parenting: ಮಕ್ಕಳು ಹಟಮಾರಿಗಳಾ, ಅದ್ರಲ್ಲಿ ನಿಮ್ಮ ಪಾಲು ಹೆಚ್ಚು; ಹಾಗಿದ್ರೆ ಏನು ಮಾಡಬೇಕು, ಏನು ಮಾಡಬಾರದು?

ಚರ್ಮವು ಮಧುಮೇಹದ ಬಗ್ಗೆ ಎಚ್ಚರಿಕೆ ನೀಡುವುದು ಹೇಗೆ?

ಅಮೆರಿಕ ಅಕಾಡೆಮಿ ಆಫ್‌ ಡರ್ಮಿಟಾಲೊಜಿ ಅಸೋಸಿಯೇಷನ್‌ ಪ್ರಕಾರ, ಟೈಪ್-2 ಮಧುಮೇಹದಿಂದ ಬಳಲುತ್ತಿರುವವರಲ್ಲಿ ಚರ್ಮದ ಮೇಲೆ ಅನೇಕ ಸಮಸ್ಯೆಗಳನ್ನು ಕಾಣಬಹುದಾಗಿದೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕುಗಳು, ತುರಿಕೆ, ಗುಳ್ಳೆಗಳು ಮುಂತಾದ ಚರ್ಮದ ಸಮಸ್ಯೆಗಳು ಸಾಮಾನ್ಯವಾಗಿ ಅವರಲ್ಲಿ ಕಂಡುಬರುತ್ತದೆ. ಸರಿಯಾಗಿ ಚಿಕಿತ್ಸೆ ನೀಡಿ ಗುಣಪಡಿಸಿಕೊಳ್ಳದಿದ್ದರೆ ಪರಿಸ್ಥಿತಿ ಹದಗೆಡಬಹುದು ಎಂದು ಹೇಳಿದೆ.

ಮಧುಮೇಹದ ಕೆಲವು ಎಚ್ಚರಿಕೆಯ ಸೂಚನೆಗಳು ಹೀಗಿವೆ

1) ಹಳದಿ, ಕೆಂಪು ಅಥವಾ ಕಂದು ಬಣ್ಣದ ಪ್ಯಾಚಸ್‌ಗಳು

ವೈದ್ಯರ ಪ್ರಕಾರ ಮೊದಲಿಗೆ ಈ ಪ್ಯಾಚಸ್‌ಗಳು ಚಿಕ್ಕದಾಗಿ ಪ್ರಾರಂಭವಾಗುತ್ತದೆ. ನಂತರ ಕ್ರಮೇಣ ಮೊಡವೆಯ ರೀತಿ ಕಾಣಿಸಲು ಪ್ರಾರಂಭಿಸುತ್ತದೆ. ನಂತರ ಊದಿಕೊಂಡು ಗಟ್ಟಿಯಾದ ಚರ್ಮದಂತಾಗುತ್ತದೆ. ಈ ಸ್ಥಿತಿಗೆ ನೆಕ್ರೋಬಯೋಸಿಸ್ ಲಿಪೊಡಿಕಾ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಚರ್ಮ ಹೊಳೆಯುತ್ತದೆ, ಮತ್ತು ರಕ್ತನಾಳಗಳು ಗೋಚರಿಸುತ್ತವೆ. ಇದು ತುರಿಕೆ ಮತ್ತು ನೋವಿನ ಅನುಭವ ನೀಡುತ್ತದೆ. ಇದು ಆರೋಗ್ಯದಲ್ಲಿನ ತೊಂದರೆ ಸೂಚಿಸುತ್ತದೆ.

2) ಡಾರ್ಕ್‌ ಸ್ಕಿನ್‌

ಕುತ್ತಿಗೆ, ತೋಳು ಅಥವಾ ತೊಡೆಸಂಧಿಯ ಭಾಗದಲ್ಲಿ ಡಾರ್ಕ್‌ ಸ್ಕಿನ್‌ ನಿಮ್ಮ ಗಮನಕ್ಕೆ ಬಂದರೆ, ಆಗ ವೈದ್ಯರು ಹೇಳುವುದೇನೆಂದರೆ ನಿಮ್ಮ ರಕ್ತದಲ್ಲಿ ಇನ್ಸುಲಿನ್‌ ಪ್ರಮಾಣ ಹೆಚ್ಚಾಗಿದೆ ಎಂದು. ಇದು ಮಧುಮೇಹ ಪೂರ್ವದ ಸಾಮಾನ್ಯ ಲಕ್ಷಣವಾಗಿದೆ. ಇದು ಅಧಿಕ ತೂಕ ಹೊಂದಿರುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

3) ಗುಳ್ಳೆಗಳು

ದೇಹದ ಭಾಗಗಳಲ್ಲಿ ಈ ರೀತಿಯ ಗುಳ್ಳೆಗಳಾಗುವುದು ಬಹಳ ಕಡಿಮೆ. ಆದರೆ ಮಧುಮೇಹ ಹೊಂದಿರುವವರಲ್ಲಿ ವಿಶೇಷವಾಗಿ ತೋಳು, ಕಾಲುಗಳ ಮೇಲೆ ಆಗಾಗ ಗುಳ್ಳೆಗಳು ಕಾಣಿಸಿಕೊಳ್ಳುತ್ತಿರುತ್ತವೆ. ಇದು ಸಾಮಾನ್ಯವಾಗಿ ಗಂಭೀರವಾಗಿ ಸುಟ್ಟ ಕಲೆಗಳಂತೆ ಕಾಣಿಸುತ್ತವೆ. ಆದರೆ ಯಾವುದೇ ರೀತಿಯ ನೋವಿನ ಅನುಭವ ಇದರಲ್ಲಿರುವುದಿಲ್ಲ. ಈ ಗುಳ್ಳೆಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡದಿದ್ದರೆ, ಮುಂದೆ ಇದೇ ಗಂಭೀರ ಗಾಯಗಳಾಗಿ ಸಮಸ್ಯೆಯನ್ನುಂಟು ಮಾಡುಬಹುದು.

4) ಗ್ರ್ಯಾನುಲೋಮಾ ಆನ್ಯುಲಾರೆ

ಇದೊಂದು ಚರ್ಮದ ಸ್ಥಿತಿಯಾಗಿದೆ. ಚರ್ಮದ ಮೇಲೆ ರಿಂಗ್‌ ಮಾದರಿಯ ದದ್ದು ಅಥವಾ ಉಬ್ಬುಗಳನ್ನು ಉಂಟುಮಾಡುತ್ತದೆ. ಇದು ಹೆಚ್ಚಾಗಿ ಯುವ ವಯಸ್ಕರರಲ್ಲೇ ಕಾಣಿಸುತ್ತದೆ. ಹೆಚ್ಚಾಗಿ ಕೈ ಮತ್ತು ಕಾಲುಗಳ ಮೇಲೆ ಉಂಟಾಗುತ್ತದೆ. ಇದು ಟೈಪ್‌ 2 ಮಧುಮೇಹ ಹೊಂದಿದವರಲ್ಲಿ ಕೆಲವು ಔಷಧಿಗಳು ಈ ನೋವಿನ ಸ್ಥಿತಿಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ ಎಂಬುದು ವೈದ್ಯರ ಅಭಿಪ್ರಾಯ.

5) ನೆಕ್ರೋಬಯೋಸಿಸ್ ಲಿಪೊಯ್ಡಿಕಾ ಡಯಾಬಿಟಿಕೋರಮ್

ಇದು ಮಧುಮೇಹಕ್ಕೆ ಸಂಬಂಧಿಸಿದ ಅಪರೂಪದ ಚರ್ಮದ ಸ್ಥಿತಿಯಾಗಿದೆ. ಇದು ಹೆಚ್ಚಾಗಿ ಕಾಲುಗಳ ಕೆಳಭಾಗದಲ್ಲಿ ಕಂಡು ಬರುತ್ತದೆ. ಕೆಂಪು ಅಥವಾ ಕಂದು ಬಣ್ಣದ ಪ್ಯಾಚಸ್‌ಗಳಾಗಿರುತ್ತದೆ. ಇದು ರಕ್ತನಾಳಗಳ ಉರಿಯೂತಕ್ಕೆ ಸಂಬಂಧಿಸಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಇದು ಸಾಮಾನ್ಯವಾಗಿ ಟೈಪ್‌1 ಮಧುಮೇಹದಿಂದ ಬಳಲುತ್ತಿರುವವರಲ್ಲಿ ಕಂಡುಬರುತ್ತದೆ. ಚರ್ಮದಲ್ಲಿನ ಕಾಲಜಿನ್‌ನಂತಹ ಪ್ರೋಟೀನ್‌ ಅನ್ನು ಹಾನಿಮಾಡುತ್ತದೆ. ಧೂಮಪಾನದಿಂದ ಇದು ಹೆಚ್ಚಾಗುತ್ತದೆ. ಒಂದು ಅಂದಾಜಿನ ಪ್ರಕಾರ ಮಧುಮೇಹ ಹೊಂದಿದವರಲ್ಲಿ ಶೇ.1 ಕ್ಕಿಂತ ಕಡಿಮೆ ಜನರಲ್ಲಿ ಇದನ್ನು ಕಾಣಬಹುದಾಗಿದೆ.

    ಹಂಚಿಕೊಳ್ಳಲು ಲೇಖನಗಳು