logo
ಕನ್ನಡ ಸುದ್ದಿ  /  ಜೀವನಶೈಲಿ  /  Home Remedies: ಚಳಿಗಾಲದಲ್ಲಿ ಮಧುಮೇಹಿಗಳಿಗೆ ಹೇಳಿಮಾಡಿಸಿದಂತಹ ಆಹಾರ ಪದಾರ್ಥಗಳಿವು

Home Remedies: ಚಳಿಗಾಲದಲ್ಲಿ ಮಧುಮೇಹಿಗಳಿಗೆ ಹೇಳಿಮಾಡಿಸಿದಂತಹ ಆಹಾರ ಪದಾರ್ಥಗಳಿವು

HT Kannada Desk HT Kannada

Dec 01, 2023 10:07 AM IST

ಚಳಿಗಾಲದಲ್ಲಿ ಮಧುಮೇಹಿಗಳು ಸೇವಿಸಬೇಕಾದ ಆಹಾರಗಳು

    • Winter Health: ಚಳಿಗಾಲದ ಸಮಯದಲ್ಲಿ ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ನೀವು ಆಹಾರ ಪದಾರ್ಥಗಳನ್ನು ಸೇವಿಸುವಾಗ ಬಹಳ ಜಾಗ್ರತೆಯಿಂದ ಇರಬೇಕು. ಇಲ್ಲಿ ಕೆಲವೊಂದು ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಲಾಗಿದ್ದು ಇವುಗಳು ಚಳಿಗಾಲದ ಸಮಯದಲ್ಲಿ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತಹ ಅಹಾರ ಪದಾರ್ಥಗಳಾಗಿವೆ.
ಚಳಿಗಾಲದಲ್ಲಿ ಮಧುಮೇಹಿಗಳು ಸೇವಿಸಬೇಕಾದ ಆಹಾರಗಳು
ಚಳಿಗಾಲದಲ್ಲಿ ಮಧುಮೇಹಿಗಳು ಸೇವಿಸಬೇಕಾದ ಆಹಾರಗಳು

ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಜಾಗತಿಕವಾಗಿ ಒಂದು ಮಾರಕಕಾಯಿಲೆಯಾಗಿ ಮಾರ್ಪಟ್ಟಿದೆ. ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಏಕೆಂದರೆ ಈ ಮಧುಮೇಹ ಕಾಯಿಲೆಯು ಮುಂದಿನ ದಿನಗಳಲ್ಲಿ ಮೂತ್ರಪಿಂಡದ ಕಾಯಿಲೆ, ನರರೋಗ, ದೃಷ್ಟಿ ಹೀನತೆ ಮುಂತಾದ ನಾನಾ ಸಮಸ್ಯೆಗಳಿಗೆ ನಾಂದಿ ಹಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಧುಮೇಹದ ವಿಚಾರದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ತುಂಬಾನೇ ಮುಖ್ಯವಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಬದಲಾಗುತ್ತಿರುವ ಹವಮಾನ ಕೂಡ ದೇಹದಲ್ಲಿ ಸಕ್ಕರೆ ಮಟ್ಟ ಹಾಗೂ ಮಧುಮೇಹದ ಮೇಲೆ ನೇರ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಬೇಸಿಗೆ ಹಾಗೂ ಚಳಿಗಾಲವು ರಕ್ತದಲ್ಲಿ ಇರುವ ಗ್ಲುಕೋಸ್​ ಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಸದ್ಯ ಚಳಿಗಾಲವೇ ಇರುವುದರಿಂದ ಮಧುಮೇಹವನ್ನು ನಿಯಂತ್ರಿಸಲು ನಾವು ಮನೆಯಲ್ಲಿ ಯಾವೆಲ್ಲ ಆಹಾರ ಪದಾರ್ಥಗಳನ್ನು ಸೇವಿಸಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ.

1. ಕಿತ್ತಳೆ

ಕಿತ್ತಳೆಯು ಸಿಟ್ರಸ್​ ಜಾತಿಗೆ ಸೇರಿದ ಹಣ್ಣಾಗಿದ್ದು ಇವುಗಳಲ್ಲಿ ಪೊಟ್ಯಾಷಿಯಂ, ಫೈಬರ್​ ಹಾಗೂ ವಿಟಮಿನ್​ ಸಿ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಕಿತ್ತಳೆ ಹಣ್ಣಿನಲ್ಲಿ ಗ್ಲೈಸಮಿಕ್​ ಅಂಶ ಕಡಿಮೆ ಇರುವುದರಿಂದ ಇವುಗಳು ಅಷ್ಟು ಸುಲಭವಾಗಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಲ್ಲದೇ ಮಧುಮೇಹದಿಂದ ಬಳಲುತ್ತಿರುವವರಿಗೆ ವಿಟಮಿನ್​ ಸಿ ದೇಹಕ್ಕೆ ಸಿಗುವುದು ತುಂಬಾ ಮುಖ್ಯವಾಗಿದೆ. ಅಧ್ಯಯನಗಳಿಂದ ಹೊರ ಬಂದಿರುವ ಮಾಹಿತಿಯ ಪ್ರಕಾರ ಪ್ರತಿದಿನ 1000 ಮಿಲಿಗ್ರಾಂ ವಿಟಮಿನ್​ ಸಿಯನ್ನು ಸೇವನೆ ಮಾಡುವ ಟೈಪ್​ 2 ಮಧುಮೇಹದಿಂದ ಬಳಲುವ ವ್ಯಕ್ತಿಯ ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಆರ್ಯುವೇದದ ಪ್ರಕಾರ ಈ ಆಹಾರ ಪದಾರ್ಥಗಳನ್ನು ಹಾಲಿನೊಂದಿಗೆ ಸೇವಿಸುವುದು ನಿಷಿದ್ಧ

2. ಗೆಣಸು

ಸಿಹಿ ಗೆಣಸುಗಳನ್ನು ತುಂಬಾ ಜನರು ಇಷ್ಟಪಡುತ್ತಾರೆ. ಇವುಗಳಲ್ಲಿ ಕಾರ್ಬೋಹೈಡ್ರೇಟ್​ ಅಗಾಧ ಪ್ರಮಾಣದಲ್ಲಿ ಇರುವುದರಿಂದ ದೇಹದಲ್ಲಿರುವ ಸಕ್ಕರೆ ಮಟ್ಟ ಕಡಿಮೆಯಾದಲ್ಲಿ ಇದರಿಂದ ತ್ವರಿತವಾಗಿ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಸಿಹಿ ಗೆಣಸುಗಳಲ್ಲಿ ಅಗಾಧ ಪ್ರಮಾಣದ ಪೌಷ್ಠಿಕಾಂಶಗಳು ಅಡಗಿರುತ್ತದೆ.

3. ಕ್ಯಾರೆಟ್​​

ಚಳಿಗಾಲದ ಸಮಯದಲ್ಲಿ ಮಧುಮೇಹಿಗಳು ತಿನ್ನಬಹುದಾದ ಒಳ್ಳೆಯ ಆಹಾರವೆಂದರೆ ಅದು ಕ್ಯಾರೆಟ್​​. ಕ್ಯಾರೆಟ್​ನ್ನು ನೀವು ಬೇಯಿಸಿಯೂ ತಿನ್ನಬಹುದು ಅಥವಾ ಹಸಿಯಾಗಿಯೂ ತಿನ್ನಬಹುದು. ಕ್ಯಾರೆಟ್​ಗಳಲ್ಲಿ ಗ್ಲೈಸಮಿಕ್​ ಅಂಶ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ಇದು ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತಹ ತರಕಾರಿಯಾಗಿದೆ. ಇವುಗಳಲ್ಲಿ ವಿಟಮಿನ್​ ಸಿ, ವಿಟಮಿನ್​ ಎ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ಕ್ಯಾರೆಟ್​ಗಳು ಮಧುಮೇಹಿಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೃಷ್ಟಿ ದೋಷವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿವೆ.

4. ದಾಲ್ಚಿನ್ನಿ

ಇದೊಂದು ನೈಸರ್ಗಿಕವಾದ ಮಸಾಲೆಯಾಗಿದ್ದು ಅತೀ ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡುವಲ್ಲಿ ದಾಲ್ಚಿನ್ನಿ ಉತ್ತಮ ಆಹಾರ ಪದಾರ್ಥವಾಗಿದೆ ಎಂದು ಅಧ್ಯಯನಗಳಲ್ಲಿಯೇ ತಿಳಿದುಬಂದಿದೆ. ದಾಲ್ಚಿನ್ನಿ ಸೇವನೆಯಿಂದ ಹೃದ್ರೋಗದ ಅಪಾಯಗಳನ್ನು ಕಡಿಮೆ ಮಾಡಬಹುದಾಗಿದೆ. ಅಲ್ಲದೇ ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನೂ ಸಹ ಹೊಂದಿದೆ.

5. ಗಡ್ಡೆ ಕೋಸುಗಳು

ಗಡ್ಡೆ ಕೋಸುಗಳ ಸಾಲಿನಲ್ಲಿ ಎಲೆಕೋಸು, ಹೂಕೋಸು, ಬ್ರೊಕೋಯಿ ಹೀಗೆ ನಾನಾ ತರಕಾರಿಗಳು ಬರುತ್ತವೆ. ಇವುಗಳು ದೇಹದಲ್ಲಿ ತೂಕ ನಿಯಂತ್ರಣಕ್ಕೆ ತುಂಬಾ ಸಹಕಾರಿಯಾಗಿದೆ. ಇವುಗಳಲ್ಲಿ ಅಗಾಧ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿಯಿದ್ದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಇವುಗಳಲ್ಲಿ 75 ಪ್ರತಿಶತ ಫೈಬರ್​ ಅಂಶವೇ ಅಡಗಿರುವುದರಿಂದ ಇವುಗಳ ಸೇವನೆಯಿಂದ ನಿಮಗೆ ಬೇಗನೇ ಹಸಿವಾಗುವುದಿಲ್ಲ. ಅಲ್ಲದೇ ಫೈಬರ್​ ಅಂಶವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿ ಇರುವ ವಿಟಮಿನ್​ ಕೆ ಅಂಶವು ರಕ್ತ ಹೆಪ್ಪುಗಟ್ಟುವಿಕೆ ನಿಯಂತ್ರಿಸುವ ಕಾರ್ಯವನ್ನು ಮಾಡುತ್ತವೆ.

    ಹಂಚಿಕೊಳ್ಳಲು ಲೇಖನಗಳು