logo
ಕನ್ನಡ ಸುದ್ದಿ  /  Lifestyle  /  Home Remedies For Split Hair

Remedies for Split hair: ಕವಲೊಡೆದ ಕೂದಲಿಗೆ ಮನೆಯಲ್ಲೇ ಈ ಎಣ್ಣೆ ತಯಾರಿಸಿ ಹಚ್ಚಿ, ಸಮಸ್ಯೆಯಿಂದ ಹೊರಬನ್ನಿ

HT Kannada Desk HT Kannada

Nov 11, 2022 05:42 PM IST

ಕವಲೊಡೆದ ಕೂದಲಿಗೆ ಮನೆ ಮದ್ದು

    • ಕೂದಲು ಉದುರುವುದು, ನೆತ್ತಿ ಒಣಗುವುದು, ಕವಲೊಡೆಯುವುದು ಏನೇ ಸಮಸ್ಯೆ ಇದ್ದರೂ ತೆಂಗಿನ ಎಣ್ಣೆ ಅದನ್ನು ನಿವಾರಿಸುತ್ತದೆ. ಕೂದಲಿನ ಬೇರುಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ.
ಕವಲೊಡೆದ ಕೂದಲಿಗೆ ಮನೆ ಮದ್ದು
ಕವಲೊಡೆದ ಕೂದಲಿಗೆ ಮನೆ ಮದ್ದು (PC: freepik)

ಎಷ್ಟೇ ಆರೈಕೆ ಮಾಡಿದರೂ ಕೂದಲು ಉದುರುವಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗುವುದಿಲ್ಲ. ಆದರೆ ಈ ಸಮಸ್ಯೆಗೆ ಸೂಕ್ತ ವಿಧಾನದಲ್ಲಿ ಆರೈಕೆ ಮಾಡಿದರೆ, ಖಂಡಿತ ಫಲಿತಾಂಶ ದೊರೆಯುತ್ತದೆ. ಜೊತೆಗೆ ಒತ್ತಡ, ಆಹಾರ ಪದ್ಧತಿ, ಜೀವನ ಶೈಲಿ ಕೂಡಾ ಪ್ರಮುಖವಾಗಿದೆ. ಹಾಗೇ ಕೂದಲು ಕವಲೊಡೆಯುವುದು ಕೂಡಾ ಬಹುತೇಕ ಯುವತಿಯರು ಎದುರಿಸುವ ಸಮಸ್ಯೆಯಾಗಿದೆ. ಇದಕ್ಕೆ ನೈಸರ್ಗಿಕ ವಿಧಾನದ ಮೂಲಕ ಪರಿಹಾರ ದೊರೆಯಲಿದೆ.

ಟ್ರೆಂಡಿಂಗ್​ ಸುದ್ದಿ

Vitamin D Deficiency: ವಿಟಮಿನ್‌ ಡಿ ಕೊರತೆಯಿಂದ ಕಾಡಬಹುದು ಫ್ಯಾಟಿ ಲಿವರ್‌ ಸಮಸ್ಯೆ, ಸಮತೋಲಿತ ಆಹಾರ ಸೇವನೆಗೆ ನೀಡಿ ಒತ್ತು

Vampire Facials: ವಾಂಪೈರ್‌ ಫೇಶಿಯಲ್‌ ಮಾಡಿಸೋದ್ರಿಂದ ಎಚ್‌ಐವಿ ಸೋಂಕು ಹರಡಬಹುದು ಎಚ್ಚರ, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಮರಿಬೇಡಿ

Travel Tips: ಬೇಸಿಗೆಯಲ್ಲಿ ಪ್ರವಾಸ ಮಾಡುವವರು ತಪ್ಪದೇ ಪಾಲಿಸಬೇಕಾದ ಮಹತ್ವದ ಸಲಹೆಗಳಿವು

Personality Test: ಹೆಬ್ಬೆರಳು ಅಗಲವಾಗಿದ್ಯಾ, ಗಿಡ್ಡವಾಗಿದ್ಯಾ? ಹೆಬ್ಬೆರಳಿನ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ

ಮನೆಯಲ್ಲೇ ತಯಾರಿಸುವ ಎಣ್ಣೆಯನ್ನು ಬಳಸಿದರೆ ಕೂದಲು ಕವಲೊಡೆಯುವ ಸಮಸ್ಯೆ ಬಹುತೇಕ ಕಡಿಮೆಯಾಗುತ್ತದೆ. ಇದಕ್ಕೆ ಬೇಕಾಗುವ ಪದಾರ್ಥಗಳು ಈ ರೀತಿ ಇವೆ.

ತೆಂಗಿನ ಎಣ್ಣೆ - 1 ಕಪ್

ಎಳ್ಳೆಣ್ಣೆ - 1/2 ಕಪ್

ಹರಳೆಣ್ಣೆ- 1/2 ಕಪ್

ಕರಿಬೇವು - 1 ಕಟ್ಟು

ಬೆಟ್ಟದ ನೆಲ್ಲಿಕಾಯಿ - 5

ಮೆಂತ್ಯ - 1 ಸ್ಪೂನ್

ದಾಸವಾಳದ ಹೂವುಗಳು -‌ 5

ಇಲ್ಲಿ ತಿಳಿಸಿದ ಎಲ್ಲಾ ಎಣ್ಣೆ ಹಾಗೂ ಇತರ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಸೇರಿಸಿ ಬಣ್ಣ ಬದಲಾವಣೆ ಆಗುವರೆಗೂ ಬಹಳ ಕಡಿಮೆ ಉರಿಯಲ್ಲಿ ಕುದಿಸಿ ನಂತರ ಸ್ಟೋವ್‌ ಆಫ್‌ ಮಾಡಿ. ಮಿಶ್ರಣ ಸಂಪೂರ್ಣ ತಣ್ಣಗಾದ ನಂತರ ಒಂದು ಗಾಜಿನ ಬಾಟಲ್‌ನಲ್ಲಿ ಶೋಧಿಸಿ ಸಂಗ್ರಹಿಸಿ ಇಟ್ಟು ನಿಮಗೆ ಬೇಕಾದಾಗ ಬಳಸಿ. ವಾರಕ್ಕೆ ಮೂರು ಬಾರಿ ಸ್ಕಾಲ್ಪ್‌ನಿಂದ ಕೂದಲವರೆಗೂ ಈ ಎಣ್ಣೆಯನ್ನು ಹಚ್ಚಿ ಒಂದೆರಡು ನಿಮಿಷ ಮಸಾಜ್‌ ಮಾಡಿ. 1 ಗಂಟೆ ನಂತರ ಸೀಗೆಪುಡಿ ಅಥವಾ ಮೈಲ್ಡ್‌ ಶಾಂಪೂನಿಂದ ಹೇರ್‌ ವಾಶ್‌ ಮಾಡಿ. ಅಥವಾ ರಾತ್ರಿ ಎಣ್ಣೆ ಹಚ್ಚಿ ಬೆಳಗ್ಗೆ ತೊಳೆದರೆ ಫಲಿತಾಂಶ ಬೇಗನೆ ದೊರೆಯಲಿದೆ.

ಇಲ್ಲಿ ಬಳಸಿರು ತೆಂಗಿನಎಣ್ಣೆ ಬಹುತೇಕ ಎಲ್ಲಾ ಕೂದಲ ಸಮಸ್ಯೆಗೂ ಪರಿಣಾಮಕಾರಿಯಾಗಿದೆ. ಕೂದಲು ಉದುರುವುದು, ನೆತ್ತಿ ಒಣಗುವುದು, ಕವಲೊಡೆಯುವುದು ಏನೇ ಸಮಸ್ಯೆ ಇದ್ದರೂ ತೆಂಗಿನ ಎಣ್ಣೆ ಅದನ್ನು ನಿವಾರಿಸುತ್ತದೆ. ಕೂದಲಿನ ಬೇರುಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ.

ಇನ್ನು ಎಳ್ಳೆಣ್ಣೆ, ಕೂದಲು ಉದುರುವಿಕೆ ಹಾಗೂ ಸ್ಪ್ಲಿಟ್‌ ಸಮಸ್ಯೆಗೆ ಪರಿಣಾಮಕಾರಿಯಾಗಿದೆ. ಎಳ್ಳೆಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಹೀಗಾಗಿ ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಆದರೂ ಇದರಿಂದ ಪರಿಹಾರ ದೊರೆಯುತ್ತದೆ. ಮೈಗ್ರೇನ್ ಹಾಗೂ ನಿದ್ರಾಹೀನತೆಗೆ ಕೂಡಾ ಇದು ಉತ್ತಮ ಮದ್ದು.

ಹಿಂದಿನ ಕಾಲದಲ್ಲಿ ಬಹುತೇಕ ಎಲ್ಲರೂ ಕೂದಲಿಗೆ ಹರಳೆಣ್ಣೆ ಬಳಸುತ್ತಿದ್ದರು. ಹರಳೆಣ್ಣೆಯನ್ನು ವಾರಕ್ಕೊಮ್ಮೆ ತಲೆಗೆ ಹಚ್ಚಿ ಮಸಾಜ್‌ ಮಾಡುವುದರಿಂದ ತಲೆಹೊಟ್ಟು ಹಾಗೂ ಇತರ ಸಮಸ್ಯೆಗಳು ಬಗೆಹರಿಯುತ್ತದೆ.

ಕರಿಬೇವು ಆಹಾರಕ್ಕೆ ಎಷ್ಟು ರುಚಿ ನೀಡುತ್ತದೆಯೋ, ಕೂದಲಿನ ಸಮಸ್ಯೆಗೆ ಕೂಡಾ ಅಷ್ಟೇ ಪರಿಣಾಮಕಾರಿಯಾಗಿದೆ. ಕೂದಲಿನ ಕಿರುಚೀಲಗಳಲ್ಲಿ ಧೂಳು, ಬೇರುಗಳು ದುರ್ಬಲವಾಗುವುದು, ತುರಿಕೆ, ತಲೆಹೊಟ್ಟು, ಕವಟಲಾಗುವುದು ಸೇರಿದಂತೆ ಬಹುತೇಕ ಎಲ್ಲಾ ಸಮಸ್ಯೆಗಳಿಗೂ ಇದು ಔಷಧವಾಗಿ ಕಾರ್ಯ ನಿರ್ವಹಿಸುತ್ತದೆ.

ಇನ್ನು ನೆಲ್ಲಿಕಾಯಿ ಕೂಡಾ ಕೂದಲಿನ ಸಮಸ್ಯೆಗೆ ರಾಮಬಾಣ ಎಂದೇ ಹೇಳಬಹುದು. ನೆಲ್ಲಿಕಾಯಿ ಪುಡಿ ಅಥವಾ ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಬಳಸುವುದರಿಂದ ಚಿಕ್ಕವಯಸ್ಸಿನಲ್ಲೇ ಕೂದಲು ಬಿಳಿಯಾಗುವುದನ್ನು ತಪ್ಪಿಸುತ್ತದೆ. ಜೊತೆ ಇತರ ಕೂದಲಿನ ಸಮಸ್ಯೆ ಕೂಡಾ ಕಡಿಮೆಯಾಗುತ್ತದೆ.

ಹಾಗೇ ಮೆಂತ್ಯ ಕೂಡಾ ಕೂದಲು ಉದುರುವಿಕೆ ಸಮಸ್ಯೆಗೆ ಪರಿಣಾಮಕಾರಿಯಾಗಿದೆ. ಕೂದಲು ಉದುರಿ ಬೋಳು ಆಗುವುದನ್ನು ಇದು ತಡೆಯುತ್ತದೆ. ಇದರಲ್ಲಿ ಫೋಲಿಕ್ ಆಮ್ಲ, ವಿಟಮಿನ್ ಎ, ವಿಟಮಿನ್ ಕೆ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಕೂದಲು ಸ್ಪ್ಲಿಟ್‌ ಆಗುವುದನ್ನು ತಡೆಯುವುದರ ಜೊತೆಗೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಕೊನೆಯದಾಗಿ ದಾಸವಾಳದ ಹೂವುಗಳು ಮತ್ತು ಎಲೆಗಳ ವಿಷಯಕ್ಕೆ ಬಂದರೆ ಕೂದಲಿಗೆ ಸಾಕಷ್ಟು ಪೋಷಣೆಯನ್ನು ಒದಗಿಸುವಲ್ಲಿ ಎರಡೂ ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು