logo
ಕನ್ನಡ ಸುದ್ದಿ  /  ಜೀವನಶೈಲಿ  /  Karnataka Rajyotsava: ಕರ್ನಾಟಕದ ಹಿರಿಮೆ ಸಾರುವ 10 ಅಂಶಗಳಿವು, ಕನ್ನಡಿಗರು ತಿಳಿದುಕೊಳ್ಳಲೇಬೇಕಾದ ಮಾಹಿತಿ

Karnataka Rajyotsava: ಕರ್ನಾಟಕದ ಹಿರಿಮೆ ಸಾರುವ 10 ಅಂಶಗಳಿವು, ಕನ್ನಡಿಗರು ತಿಳಿದುಕೊಳ್ಳಲೇಬೇಕಾದ ಮಾಹಿತಿ

Praveen Chandra B HT Kannada

Nov 01, 2023 06:00 AM IST

Karnataka Rajyotsava: ಕರ್ನಾಟಕದ ಹಿರಿಮೆ ಸಾರುವ 10 ಅಂಶಗಳಿವು

    • Top 10 Karnataka Facts: ಕರ್ನಾಟಕದ ರಾಜ್ಯ ವೃಕ್ಷ ಗಂಧದ ಮರ. ರಾಜ್ಯದ ಲಾಂಛನ: ಗಂಡಬೇರುಂಡ, ರಾಜ್ಯ ಪಕ್ಷಿ: ಇಂಡಿಯನ್‌ ರೋಲರ್‌. ಇದನ್ನು ನೀಲಕಂಠ ಪಕ್ಷಿ ಎಂದು ಕರೆಯುತ್ತಾರೆ. ಆನೆ ಕರ್ನಾಟಕದ ರಾಜ್ಯ ಪ್ರಾಣಿ. ಕರ್ನಾಟಕದ ಹಿರಿಮೆ ಸಾರುವ ಹತ್ತು ಅಂಶಗಳು ಇಲ್ಲಿವೆ.
Karnataka Rajyotsava: ಕರ್ನಾಟಕದ ಹಿರಿಮೆ ಸಾರುವ 10 ಅಂಶಗಳಿವು
Karnataka Rajyotsava: ಕರ್ನಾಟಕದ ಹಿರಿಮೆ ಸಾರುವ 10 ಅಂಶಗಳಿವು

ನಮ್ಮ ಕರ್ನಾಟಕದ ಕುರಿತು ಸಾಕಷ್ಟು ಸಂಗತಿಗಳು ನಮಗೆ ತಿಳಿದಿರಹುದು. ಕನ್ನಡಿಗರಾಗಿದ್ದುಕೊಂಡು ಸಾಕಷ್ಟು ಸಂಗತಿಗಳು ನಮ್ಮ ಅರಿವಿಗೆ ಬಾರದೆಯೂ ಇರಬಹುದು. ನಿಮ್ಮ ಕರ್ನಾಟಕದಲ್ಲಿ ಏನೇನಿದೆ ಸ್ಪೆಷಲ್‌ ಎಂದು ಯಾರಾದರೂ ಹೊರಗಿನವರು ಕೇಳಿದಾಗ ನಮ್ಮ ಕರ್ನಾಟಕದ ಹಿರಿಮೆಯನ್ನು ಬಣ್ಣಿಸಲು ನಮಗೆ ತಿಳಿದಿರಬೇಕು. ಭಾರತದ ಐದು ಪ್ರಮುಖ ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕವು ದೊಡ್ಡ ರಾಜ್ಯವಾಗಿದೆ. ಭಾರತದ ಆರನೇ ದೊಡ್ಡ ರಾಜ್ಯ ನಮ್ಮ ಕರ್ನಾಟಕ. ಕರ್ನಾಟಕದ ಏಕೀಕರಣದ ಹೋರಾಟದ ಫಲವಾಗಿ ಮೈಸೂರು ಸಂಸ್ಥಾನವು ಕರ್ನಾಟಕವಾಗಿ ಬದಲಾಯಿತು. ಕರ್ನಾಟಕ ರಾಜ್ಯವು ಸಮುದ್ರಮಟ್ಟದಿಂದ 1500 ಅಡಿ ಸರಾಸರಿ ಎತ್ತರದಲ್ಲಿದೆ. ಕರ್ನಾಟಕದ ಪಶ್ಚಿಮ ಭಾಗದಲ್ಲಿ ಅರಬ್ಬೀ ಸಮುದ್ರ, ವಾಯುವ್ಯದಲ್ಲಿ ಗೋವಾ, ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶ, ಆಗ್ನೇಯದಲ್ಲಿ ತಮಿಳುನಾಡು, ನೈರುತ್ಯದಲ್ಲಿ ಕೇರಳ ರಾಜ್ಯಗಳಿವೆ. ಕರ್ನಾಟಕದ ಹಿರಿಮೆಯನ್ನು ಸಾರುವ ಹತ್ತು ಪ್ರಮುಖ ಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ಕರ್ನಾಟಕದ ಪ್ರಮುಖ ಚಿಹ್ನೆಗಳು

ಕರ್ನಾಟಕದ ರಾಜ್ಯ ಮರ ಗಂಧದ ಮರ. ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದ ಗುಡಿ ಎಂದು ಡಾ. ರಾಜ್‌ಕುಮಾರ್‌ ಹಾಡು ಇದೇ ವಿಷಯವನ್ನು ಹೇಳುತ್ತಾರೆ. ರಾಜ್ಯದ ಲಾಂಛನ: ಗಂಡಬೇರುಂಡ, ರಾಜ್ಯ ಪಕ್ಷಿ: ಇಂಡಿಯನ್‌ ರೋಲರ್‌. ಇದನ್ನು ನೀಲಕಂಠ ಪಕ್ಷಿ ಎಂದು ಕರೆಯುತ್ತಾರೆ. ಆನೆ ಕರ್ನಾಟಕದ ರಾಜ್ಯ ಪ್ರಾಣಿ.

ಭಾರತದ ರಾಷ್ಟ್ರಧ್ವಜ ಉತ್ಪಾದಕ

ಕರ್ನಾಟಕದ ಖಾದಿ ಗ್ರಾಮೋದ್ಯೋಗ ಸಂಘವು ಹುಬ್ಬಳ್ಳಿಯಲ್ಲಿದೆ. ಭಾರತಕ್ಕೆ ರಾಷ್ಟ್ರೀಯ ಧ್ವಜವನ್ನು ತಯಾರಿಸುವ ಮತ್ತು ಪೂರೈಸುವ ಏಕೈಕ ಘಟಕ ಇದಾಗಿದೆ.

18 ಮೀಟರ್‌ ಎತ್ತರದ ಗೊಮ್ಮಟ್ಟನ ವಿಗ್ರಹ

ಶ್ರವಣಬೆಳಗೋಳದಲ್ಲಿರುವ 18 ಮೀಟರ್‌ ಎತ್ತರದ ಗೊಮ್ಮಟೇಶ್ವರ ಮೂರ್ತಿಯು ಜಗತ್ತಿನ ಬೃಹತ್‌ ಏಕಶಿಲಾ ಪ್ರತಿಮೆ ಎಂದು ಹೆಸರು ಪಡೆದಿದೆ. ದಕ್ಷಿಣ ಭಾರತದ ಜೈನರ ಪ್ರಮುಖ ತೀರ್ಥಕ್ಷೇತ್ರ ಇದಾಗಿದೆ. ಕ್ರಿಸ್ತಶಕ 1604ರಲ್ಲಿ ತಿಮ್ಮಣ್ಣ ಅಜಿಲಾ ಇದನ್ನು ನಿರ್ಮಿಸಿದ್ದರು.

3 ದಶಲಕ್ಷ ವರ್ಷ ಹಳೆಯ ಕಲ್ಲು

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಶಿಲೆಯೊಂದು 3 ಸಾವಿರ ವರ್ಷ ಹಳೆಯದ್ದು ಎಂದು ಖ್ಯಾತಿ ಪಡೆದಿದೆ. ಹೀಗಾಗಿ, ಇದು ಭೌಗೋಳಿಕ ಅಧ್ಯಯನಾಸಕ್ತರ ಮೆಚ್ಚಿನ ತಾಣ.

ರೇಷ್ಮೆ ನಾಡು

ಕರ್ನಾಟಕದಲ್ಲಿ ಪ್ರತಿವರ್ಷ ಸುಮಾರು 8200 ಮೆಟ್ರಿಕ್‌ ಟನ್‌ನಷ್ಟು ಸಿಲ್ಕ್‌ ಉತ್ಪಾದನೆ ಮಾಡಲಾಗುತ್ತದೆ. ರಾಮನಗರ ಜಿಲ್ಲೆಯು ಕಚ್ಚಾ ರೇಷ್ಮೆ ಉತ್ಪಾದನೆಗೆ ಹೆಸರುಪಡೆದಿದೆ. ರೇಷ್ಮೆ ಗೂಡಿಗೆ ಕರ್ನಾಟಕ ಏಷ್ಯಾದ ದೊಡ್ಡ ಮಾರುಕಟ್ಟೆ.

ಹಳೆಯ ಲೈಬ್ರೆರಿ

ಮೈಸೂರಿನಲ್ಲಿ 1891ರಲ್ಲಿ ನಿರ್ಮಿಸಿದ ಹಳೆಯ ಗ್ರಂಥಾಲಯವಿದೆ.

ಹಳೆಯ ಹಸ್ತಪ್ರತಿ

ಕೌಟಿಲ್ಯ 321-296 ಬಿಸಿಇಯಲ್ಲಿ ಬರೆದ ಅರ್ಥಶಾಸ್ತ್ರದ ಹಸ್ತಪ್ರತಿ ಕರ್ನಾಟಕದಲ್ಲಿದೆ. ಇದನ್ನು ಮೈಸೂರಿನ ಓರಿಯೆಂಟಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕಾಪಿಡಲಾಗಿದೆ.

ಬೆಂಗಳೂರು ಅರಮನೆ

ಬೆಂಗಳೂರು ಅರಮನೆಯು ಅದ್ಭುತ ವಾಸ್ತ್ರುಶಿಲ್ಪ ಮತ್ತು ನಿರ್ಮಾಣಕ್ಕೆ ಹೆಸರುವಾಸಿ. ರಾಜ ಕುಟುಂಬದ ರೇವ್‌ ಜೆ ಗ್ಯಾರೆಟ್‌ ಇದನ್ನು ನಿರ್ಮಿಸಿದರು. ಇವರು ಬೆಂಗಳೂರಿನ ಸೆಂಟ್ರಲ್‌ ಹೈಸ್ಕೂಲ್‌ನ ಮೊದಲ ಪ್ರಿನ್ಸಿಪಾಲ್‌ ಆಗಿದ್ದರು. ಸುಮಾರು 454 ಎಕರೆ ಭೂಭಾಗದ ನಡುವೆ ಈ ಅರಮನೆ ಇದೆ.

ಕರ್ನಾಟಕ ಸಂಗೀತ

ಕರ್ನಾಟಕವು ಕರ್ನಾಟಿಕ್‌ ಮ್ಯೂಸಿಕ್‌ನ ತವರು. ಕರ್ನಾಟಕ ಸಂಗೀತಮ್‌ ಅಥವಾ ಕರ್ನಾಟಕ ಸಂಗೀತವು ದಕ್ಷಿಣ ಭಾರತದ ಪ್ರಮುಖ ಶಾಸ್ತ್ರೀಯ ಸಂಗೀತ. ಕರ್ನಾಟಕ ಸಂಗೀತ ಭಕ್ತಿಪ್ರಧಾನವಾದದ್ದು.

ವಿಜಯನಗರ ಸಾಮ್ರಾಜ್ಯ

ಭಾರತದ ಪ್ರಮುಖ ರಾಜಮನೆತನ ವಿಜಯನಗರ ಸಾಮ್ರಾಜ್ಯವೂ ಕರ್ನಾಟಕದ ಹಿರಿಮೆ ಹೆಚ್ಚಿಸುವಂತಹದ್ದು. ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಹಳೆಯ ವೈಭವದ ಕುರುಹುಗಳು ಕಾಣಿಸುತ್ತವೆ.

ಈ ಹತ್ತು ಸಂಗತಿಗಳು ಅಲ್ಲದೆ ಕರ್ನಾಟಕದ ಮೇಲ್ಮೆ ಹೆಚ್ಚಿಸುವಂತಹ ಹಲವು ಅಂಶಗಳು ಇವೆ. ವಿಶ್ವವಿಖ್ಯಾತ ಮೈಸೂರು ಅರಮನೆ, ಜೋಗದ ಜಲಪಾತ, ಕರಾವಳಿ, ಯಕ್ಷಗಾನ, ಕೊಡಗಿನ ಸೌಂದರ್ಯ, ಪುರಾತನ ದೇಗುಲಗಳು, ಕೋಟೆಗಳು, ಚನ್ನಪಟ್ಟಣ ಗೊಂಬೆ ಸೇರಿದಂತೆ ಹಲವು ವಿಶೇಷಗಳು ಕರ್ನಾಟಕದಲ್ಲಿವೆ.

    ಹಂಚಿಕೊಳ್ಳಲು ಲೇಖನಗಳು