logo
ಕನ್ನಡ ಸುದ್ದಿ  /  ಜೀವನಶೈಲಿ  /  ಸೀಲಿಂಗ್ ಮತ್ತು ಎಕ್ಸಾಸ್ಟ್ ಫ್ಯಾನ್‌ ಸ್ವಚ್ಛಗೊಳಿಸುವ ಸರಳ ವಿಧಾನ; ಈ ಟಿಪ್ಸ್ ಅನುಸರಿಸಿದ್ರೆ ನಿಮ್ಮ ಫ್ಯಾನ್ ಹೆಚ್ಚು ಬಾಳಿಕೆ ಬರುತ್ತೆ

ಸೀಲಿಂಗ್ ಮತ್ತು ಎಕ್ಸಾಸ್ಟ್ ಫ್ಯಾನ್‌ ಸ್ವಚ್ಛಗೊಳಿಸುವ ಸರಳ ವಿಧಾನ; ಈ ಟಿಪ್ಸ್ ಅನುಸರಿಸಿದ್ರೆ ನಿಮ್ಮ ಫ್ಯಾನ್ ಹೆಚ್ಚು ಬಾಳಿಕೆ ಬರುತ್ತೆ

Jayaraj HT Kannada

Apr 29, 2024 03:56 PM IST

ಸೀಲಿಂಗ್ ಮತ್ತು ಎಕ್ಸಾಸ್ಟ್ ಫ್ಯಾನ್‌ ಸ್ವಚ್ಛಗೊಳಿಸುವ ಸರಳ ವಿಧಾನ

    • ಹೊಸ ಮಾಡೆಲ್‌ನ ಸೀಲಿಂಗ್‌ ಹಾಗೂ ಫ್ಯಾನ್‌ಗಳಿಗೆ ಹೆಚ್ಚು ನಿರ್ವಹಣೆಯ ಅಗತ್ಯವಿಲ್ಲ. ಆದರೆ, ಹಳೆಯ ಮಾಡೆಲ್‌ಗಳನ್ನು ಆಗಾಗ ಸ್ವಚ್ಛಗೊಳಿಸಬೇಕಾಗುತ್ತದೆ. ನಿಮ್ಮ ಮನೆಯ ಫ್ಯಾನ್‌ಗಳನ್ನು ನಿರ್ವಹಿಸಲು ಸರಳ ಟಿಪ್ಸ್‌ ಇಲ್ಲಿವೆ.
ಸೀಲಿಂಗ್ ಮತ್ತು ಎಕ್ಸಾಸ್ಟ್ ಫ್ಯಾನ್‌ ಸ್ವಚ್ಛಗೊಳಿಸುವ ಸರಳ ವಿಧಾನ
ಸೀಲಿಂಗ್ ಮತ್ತು ಎಕ್ಸಾಸ್ಟ್ ಫ್ಯಾನ್‌ ಸ್ವಚ್ಛಗೊಳಿಸುವ ಸರಳ ವಿಧಾನ (Pixabay, Pixel)

ಸೀಲಿಂಗ್ ಫ್ಯಾನ್‌ ಮತ್ತು ಎಕ್ಸಾಸ್ಟ್ ಫ್ಯಾನ್‌ಗಳು ಬಹುತೇಕ ಎಲ್ಲರ ಮನೆಯಲ್ಲಿಯೂ ಇರುತ್ತವೆ. ಬೇಸಿಗೆಯ ಶಾಖಕ್ಕೆ ತುಸು ತಂಪಾಗಿಸಲು ಸೀಲಿಂಗ್‌ನಲ್ಲಿ ಫ್ಯಾನ್‌ ತಿರುಗುತ್ತಿದ್ದರೆ ದೇಹಕ್ಕೆ ನೆಮ್ಮದಿ ಸಿಗುತ್ತದೆ. ಇದರ ನಿರ್ವಹಣೆ ಕೂಡಾ ಕಷ್ಟದ ಕೆಲಸವಲ್ಲ. ಅಪರೂಪಕ್ಕೊಮ್ಮೆ ಸ್ವಚ್ಛಗೊಳಿಸಿದರೆ ಸಾಕಾಗುತ್ತದೆ. ಇದೇ ವೇಳೆ ಬಾತ್‌ರೂಮ್‌ನಲ್ಲಿ ಹೆಚ್ಚಾಗಿ ಅಳವಡಿಸಲಾಗುವ ಎಕ್ಸಾಸ್ಟ್ ಫ್ಯಾನ್‌ಗಳು ಕೂಡಾ ಅಗತ್ಯವಾಗಿ ಬೇಕಾಗುತ್ತವೆ. ಇವುಗಳನ್ನು ತಿಂಗಳುಗಟ್ಟಲೆ ಸ್ವಚ್ಛಗೊಳಿಸದೆ ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ಅದರ ಕೆಲಸದ ದಕ್ಷತೆ ಕುಂದುವ ಸಾಧ್ಯತೆ ಇದೆ. ಹೀಗಾಗಿ ಮನೆಯಲ್ಲಿರುವ ಎಕ್ಸಾಸ್ಟ್ ಫ್ಯಾನ್‌ಗಳು ಮತ್ತು ಸೀಲಿಂಗ್ ಫ್ಯಾನ್‌ಗಳನ್ನು ಹೇಗೆ ಸುಲಭವಾಗಿ ಸ್ವಚ್ಛಗೊಳಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಟ್ರೆಂಡಿಂಗ್​ ಸುದ್ದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

ಸೈಲೆಂಟ್ ಕಿಲ್ಲರ್ ವಿರುದ್ಧ ಹೋರಾಡುವುದು: ಮೈಕ್ರೋ ಲ್ಯಾಬ್ಸ್ ರಾಷ್ಟ್ರವ್ಯಾಪಿ ಅಧಿಕ ರಕ್ತದೊತ್ತಡ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತದೆ

ಸೀಲಿಂಗ್ ಫ್ಯಾನ್ ನಿರ್ವಹಣೆ ಹೇಗೆ?

  • ಫ್ಯಾನ್ ಧೂಳನ್ನು ತೆಗೆಯಿರಿ

ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಫ್ಯಾನ್‌ ಬ್ಲೇಡ್‌ಗಳು ಹಾಗೂ ಫ್ಯಾನ್‌ನ ಮೇಲ್ಭಾಗವನ್ನು ಕ್ಲೀನ್‌ ಮಾಡಿ. ತೆರೆದ ಭಾಗಗಳಲ್ಲಿ ಅಂಟಿಕೊಂಡಿರುವ ಧೂಳನ್ನು ತೆಗೆಯಲು ವ್ಯಾಕ್ಯೂಮ್‌ ಅಥವಾ ಫೆದರ್ ಡಸ್ಟರ್ ಬಳಸಿ. ಸಾಮಾನ್ಯವಾಗಿ ಸೀಲಿಂಗ್ ಫ್ಯಾನ್‌ಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಧೂಳು ಸಂಗ್ರಹವಾಗುತ್ತವೆ.

ಫ್ಯಾನ್‌ ಬ್ಲೇಡ್‌ ಕ್ಲೀನ್‌ ಮಾಡಲು ಮತ್ತೊಂದು ಸರಳ ಹ್ಯಾಕ್‌ ಎಂದರೆ, ದಿಂಬಿನ ಕವರ್.‌ ಫ್ಯಾನ್ ಬ್ಲೇಡ್ ಅನ್ನು ಪಿಲ್ಲೋಕೇಸ್‌ನಿಂದ ಸುತ್ತಿ ಅದರಲ್ಲಿರುವ ಧೂಳನ್ನು ಒರೆಸಲು ಮೇಲಿಂದ ಒತ್ತಿ ಸ್ವಚ್ಛಗೊಳಿಸಿ. ಆಗ ಹೊರಗಡೆ ಧೂಳು ಹಾರುವುದಿಲ್ಲ. ಒದ್ದೆ ಬಟ್ಟೆ ಸಹಾಯದಿಂದಲೂ ಸ್ವಚ್ಛಗೊಳಿಸಬಹುದು.

  • ಸ್ಕ್ರೂಗಳನ್ನು ಬಿಗಿಗೊಳಿಸಿ

ಸ್ವಚ್ಛಗೊಳಿಸುವ ಜೊತೆಗೆ ಫ್ಯಾನ್‌ನ ಎಲ್ಲಾ ಭಾಗಗಳನ್ನು ಸರಿಯಾಗಿ ಪರಿಶೀಲಿಸಿ. ಅದರ ಸ್ಕ್ರೂ ಅಥವಾ ಫ್ಯಾನ್ ಸಿಸ್ಟಮ್‌ನ ಇತರ ಭಾಗವು ಸಡಿಲವಾಗಿರುವ ಸಾಧ್ಯತೆಯಿದೆ. ಎಲ್ಲವನ್ನೂ ಪರಿಶೀಲಿಸಿ, ಸ್ಕ್ರೂಡ್ರೈವರ್‌ನೊಂದಿಗೆ ಅದನ್ನು ಬಿಗಿಗೊಳಿಸಿ. ಸೀಲಿಂಗ್ ಫ್ಯಾನ್ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ | ಎಸಿ, ವಾಟರ್ ಕೂಲರ್ ಬೇಕಿಲ್ಲ; ಬೇಸಿಗೆ ಬಿಸಿಗೆ ಮನೆಯನ್ನು ತಂಪಾಗಿಡಲು 7 ನೈಸರ್ಗಿಕ ಮಾರ್ಗಗಳು ಇಲ್ಲಿವೆ

  • ಫ್ಯಾನ್ ಮೋಟಾರ್ ಸ್ವಚ್ಛಗೊಳಿಸಿ

ಸೀಲಿಂಗ್ ಫ್ಯಾನ್ ನಿರ್ವಹಣೆಯ ಪ್ರಮುಖ ಭಾಗವೇ, ಅದರ ಮೋಟಾರ್ ಪರಿಶೀಲಿಸುವುದು. ಸೀಲಿಂಗ್ ಫ್ಯಾನ್ ಮೋಟರ್‌ನ ಕವರ್ ಮಾತ್ರವಲ್ಲದೆ, ಧೂಳು ಒಳಗೂ ಪ್ರವೇಶಿಸಬಹುದು. ಹೀಗಾಗಿ ಮೋಟರ್ ಸ್ವಚ್ಛಗೊಳಿಸುವುದು ಅಗತ್ಯ. ಇದಕ್ಕಾಗಿ ಮೋಟರ್ ಕವರ್‌ನ ಮೇಲ್ಭಾಗದಲ್ಲಿರುವ ಸ್ಲಿಟ್‌ಗಳಿಗೆ ವ್ಯಾಕ್ಯೂಮ್ ಕ್ಲೀನರ್ ಹಾಕಿ ಸ್ವಚ್ಛಮಾಡಿ. ಆಗ ಮೋಟರ್‌ನಲ್ಲಿರುವ ಹೆಚ್ಚುವರಿ ಧೂಳು ಹೊರಬರುತ್ತದೆ.

ಎಕ್ಸಾಸ್ಟ್ ಫ್ಯಾನ್ ನಿರ್ವಹಣೆ

ಸ್ನಾನಗೃಹಗಳಲ್ಲಿ ಹೆಚ್ಚಾಗಿ ಅಳವಡಿಸಲಾಗುವ ಎಕ್ಸಾಸ್ಟ್ ಫ್ಯಾನ್‌ಗಳನ್ನು ತೇವಾಂಶವನ್ನು ನಿಯಂತ್ರಿಸಲು ಮತ್ತು ತಾಜಾ ಗಾಳಿ ಹರಿದಾಡುವ ಸಲುವಾಗಿ ಅಳವಡಿಸಲಾಗುತ್ತದೆ. ಈ ಫ್ಯಾನ್‌ಗಳಲ್ಲೂ ಧೂಳಿನ ಕಣಗಳು ಬ್ಲೇಡ್‌ಗಳು ಮತ್ತು ಮೋಟಾರ್‌ ಮೇಲೆ ಸಂಗ್ರಹವಾಗುತ್ತವೆ. ಎಕ್ಸಾಸ್ಟ್ ಫ್ಯಾನ್‌ಗಳನ್ನು ಸಂಪೂರ್ಣವಾಗಿ ಶುಚಿಗೊಳಿಸುವ ಮೂಲಕ ಸಂಗ್ರಹಗೊಂಡ ಧೂಳನ್ನು ತೆಗೆದುಹಾಕದಿದ್ದರೆ, ಫ್ಯಾನ್‌ನ ಕೆಲಸದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಅದರ ಬಾಳಿಕ ಕೂಡಾ ಕಡಿಮೆಯಾಗುತ್ತದೆ. ಹೀಗಾಗಿ ಎಕ್ಸಾಸ್ಟ್ ಫ್ಯಾನ್ ಅನ್ನು ಸರಿಯಾದ ಕ್ರಮದಲ್ಲಿ ಸ್ವಚ್ಛಗೊಳಿಸುವ ವಿಧಾನವನ್ನು ಓದಿಕೊಳ್ಳಿ.

-‌ ಎಕ್ಸಾಸ್ಟ್ ಕವರ್ ತೆಗೆಯಿರಿ

ಮೊದಲಿಗೆ ಎಕ್ಸಾಸ್ಟ್ ಫ್ಯಾನ್ ಕವರ್ ತೆಗೆಯಿರಿ. ಸಾಮಾನ್ಯವಾಗಿ ಇದನ್ನು ಲೋಹದ ಟೆನ್ಷನ್ ಕ್ಲಿಪ್‌ಗಳೊಂದಿಗೆ ಇರಿಸಲಾಗುತ್ತದೆ. ಹೀಗಾಗಿ ಯಾವುದೇ ಸಾಧನ ಬಳಸದೆ ಸುಲಭವಾಗಿ ಕವರ್‌ ತೆಗೆಯಬಹುದು. ಕೆಲವೊಂದು ಮಾಡೆಲ್‌ಗಳ ಕವರ್‌ಗಳನ್ನು ಸ್ಕ್ರೂ ಹಾಕಿ ಜೋಡಿಸಿರುತ್ತಾರೆ. ಆ ಕವರ್ ತೆಗೆದು ಡಿಶ್ ಸೋಪ್ ಮತ್ತು ಬಿಸಿ ನೀರು ಹಾಕಿ ಸ್ವಚ್ಛಗೊಳಿಸಬಹುದು.

  • ಧೂಳನ್ನು ವ್ಯಾಕ್ಯೂಮ್ ಕ್ಲೀನ್‌ ಮಾಡಿ

ಫ್ಯಾನ್ ಬ್ಲೇಡ್‌ಗಳಲ್ಲಿ ಸಂಗ್ರಹವಾಗಿರುವ ಧೂಳನ್ನು ತೆಗೆದುಹಾಕಲು ಸಾಧ್ಯವಾದಷ್ಟು ಪ್ರಯತ್ನಿಸಿ. ವ್ಯಾಕ್ಯೂಮ್ ಕ್ಲೀನರ್‌ ಮೂಲಕ ಸುಲಭವಾಗಿ ಧೂಳನ್ನು ಹಾರಿಸಬಹುದು.

  • ಬಟ್ಟೆಯಿಂದ ಬ್ಲೇಡ್‌ಗಳನ್ನು ಒರೆಸಿ

ಬ್ಲೇಡ್‌ಗಳು ಹಾಗೂ ಫ್ಯಾನ್‌ನ ಒಳಭಾಗದಲ್ಲಿಉಳಿದಿರುವ ಧೂಳನ್ನು ತೆಗೆಯಲು ಒಣ ಬಟ್ಟೆಯನ್ನು ಬಳಸಿ. ಅಂಟಿಕೊಂಡ ಧೂಳನ್ನು ತೆಗೆಯಲು ಒದ್ದೆ ಬಟ್ಟೆ ಕೂಡಾ ಬಳಸಿ ಸ್ವಚ್ಛಗೊಳಿಸಬಹುದು. ಸಾಧ್ಯವಾದರೆ, ಕವರ್ ಬದಲಿಸಿ ಹೊಸದಾಗಿ ಹಾಕಿ. ಆಗ ನಿಮ್ಮ ಫ್ಯಾನ್ ಹೊಸದರಂತೆ ಕಾಣುತ್ತದೆ. ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸದೆ ಇದ್ದರೆ, ಫ್ಯಾನ್‌ ಕೆಡಬಹುದು.

ಹೊಸ ಮಾಡೆಲ್‌ನ ಫ್ಯಾನ್‌ಗಳನ್ನು ಯಾವುದೇ ರೀತಿಯ ನಿರ್ವಹಣೆಯ ಅಗತ್ಯ ಇಲ್ಲದಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ, ಹಳೆಯ ಮಾಡೆಲ್‌ಗಳನ್ನು ಆಗಾಗ ಪರಿಶೀಲಿಸಬೇಕಾಗುತ್ತದೆ. ಹೀಗಾಗಿ ಸ್ವಚ್ಛತೆ ಬಗ್ಗೆ ಸ್ಪಷ್ಟ ಮಾಹಿತಿಗಾಗಿ ಯೂಸರ್‌ ಮ್ಯಾನ್ಯುಯೆಲ್‌ ಪರಿಶೀಲಿಸಿ.

    ಹಂಚಿಕೊಳ್ಳಲು ಲೇಖನಗಳು