logo
ಕನ್ನಡ ಸುದ್ದಿ  /  ಜೀವನಶೈಲಿ  /  ಎಸ್‌ಎಂಎಸ್‌ ಸ್ಕ್ಯಾಮ್‌ ಬಗ್ಗೆ ಇರಲಿ ಎಚ್ಚರ; ಮಹಿಳೆಯರು, ನಿರುದ್ಯೋಗಿಗಳು, ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡ್ತಿದ್ದಾರೆ ಸ್ಕಾಮರ್‌ಗಳು

ಎಸ್‌ಎಂಎಸ್‌ ಸ್ಕ್ಯಾಮ್‌ ಬಗ್ಗೆ ಇರಲಿ ಎಚ್ಚರ; ಮಹಿಳೆಯರು, ನಿರುದ್ಯೋಗಿಗಳು, ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡ್ತಿದ್ದಾರೆ ಸ್ಕಾಮರ್‌ಗಳು

HT Kannada Desk HT Kannada

Nov 17, 2023 07:00 AM IST

ಆನ್‌ಲೈನ್‌ ಆರ್ಥಿಕ ವಂಚನೆ ಸಂಬಂಧ ಗಮನಿಸಬೇಕಾದ ಅಂಶಗಳು

  • SMS Scams: ಸ್ಕ್ಯಾಮರ್‌ಗಳು , ಸ್ಟ್ರೀಮಿಂಗ್ ಸೇವೆಗಳ ಜನಪ್ರಿಯತೆಯನ್ನು ಬಳಸಿಕೊಂಡು ನಕಲಿ ಸಬ್ಸ್‌ಕ್ರೈಬರ್‌ ರೀಚಾರ್ಜ್‌ ಸಂದೇಶಗಳ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಾರೆ, ಈ ಪ್ರಕ್ರಿಯೆಯಲ್ಲಿ ನಿಮ್ಮ ಖಾತೆಯಲ್ಲಿನ ಹಣವನ್ನು ಖಾಲಿ ಮಾಡುತ್ತಾರೆ.

ಆನ್‌ಲೈನ್‌ ಆರ್ಥಿಕ ವಂಚನೆ ಸಂಬಂಧ ಗಮನಿಸಬೇಕಾದ ಅಂಶಗಳು
ಆನ್‌ಲೈನ್‌ ಆರ್ಥಿಕ ವಂಚನೆ ಸಂಬಂಧ ಗಮನಿಸಬೇಕಾದ ಅಂಶಗಳು (PC: Freepik)

SMS Scams: ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಆನ್‌ಲೈನ್‌ ಕ್ರೈಂಗಳು ಕೂಡಾ ಹೆಚ್ಚಾಗುತ್ತಿದೆ. ಅದರಲ್ಲೂ ಈಗ ಮೊಬೈಲ್‌ ಸಂದೇಶದ ಮೂಲಕ ದುಡ್ಡನ್ನು ಲಪಟಾಯಿಸುತ್ತಿರುವುದು ಹೆಚ್ಚುತ್ತಿದೆ. ಸ್ಕಾಮರ್‌ಗಳು ಆಂಡ್ರಾಯ್ಡ್‌ ಬಳಕೆದಾರರನ್ನು ಎಸ್‌ಎಂಎಸ್‌ ಮೂಲಕ ವಂಚಿಸುತ್ತಿದ್ದಾರೆ. ಒಂದೇ ಒಂದು ಸಂದೇಶದ ಮೂಲಕ ಅವರ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ಆರ್ಥಿಕ ವಂಚನೆ ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ಎಸ್‌ಎಂಎಸ್‌ ಮೂಲಕ ಆರ್ಥಿಕ ವಂಚನೆ

ಈ ಆನ್‌ಲೈನ್‌ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕೆಲವರು ಬಹಳ ಜಾಗರೂಕರಾಗಿದ್ದಾರೆ. ಇನ್ನೂ ಕೆಲವರು ಗೊತ್ತಿದ್ದೂ ಮೋಸ ಹೋಗುತ್ತಿದ್ದಾರೆ. ಇನ್ನುಮುಂದಾದರೂ ಜನರು ಈ ಫ್ರಾಡ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅನಾಮಿಕ ಎಸ್‌ಎಂಎಸ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದನ್ನು , ವೈಯಕ್ತಿಕ ಮಾಹಿತಿನಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಬೇಕು. ಇಂತಹ ಎಸ್‌ಎಂಎಸ್‌ ಬಂದರೆ ಸೈಬರ್‌ ಕ್ರೈಂ ಪೊಲೀಸರ ಗಮನಕ್ಕೆ ತರಬೇಕು. ಆನ್‌ಲೈನ್‌ ವಂಚಕರು ಕಾನೂನುಬದ್ಧ ಹಣಕಾಸು ಸಂಸ್ಥೆಗಳಂತೆ ನಟಿಸುತ್ತಾರೆ. ನಿಮ್ಮ ಖಾತೆಯನ್ನು ನವೀಕರಣಗೊಳಿಸಬೇಕು ಎನ್ನುವಂತೆ ಸಂದೇಶ ಕಳಿಸುತ್ತಾರೆ. ಯಾವುದೇ ಬ್ಯಾಂಕಿನವರು ಈ ರೀತಿ ಕರೆ ಮಾಡಿ ನಿಮ್ಮ ಖಾತೆಯನ್ನು ನವೀಕರಣ ಮಾಡುವಂತೆ ಕೇಳುವುದಿಲ್ಲ, ಅಥವಾ ಒಟಿಪಿಯನ್ನೂ ಕೇಳುವುದಿಲ್ಲ ಎಂಬುದು ನಿಮ್ಮ ನೆನಪಿನಲ್ಲಿ ಇರಲಿ.

ಸ್ಕಾಮರ್‌ಗಳು ಬೀಸುವ ಬಲೆಯಿಂದ ತಪ್ಪಿಸಿಕೊಳ್ಳಬೇಕೆಂದರೆ ನೀವು ಗಮನಿಸಬೇಕಾದ ಅಂಶಗಳಿವ

  1. ಆನ್‌ಲೈನ್‌ ವಂಚನೆಯನ್ನು ತಪ್ಪಿಸಿಕೊಳ್ಳಲು ಮೊಬೈಲ್‌ ಬಳಕೆದಾರರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಟಿ ವೈರಸ್‌ ಹಾಗೂ ಆಂಟಿ ಮಾಲ್‌ವೇರ್‌ ಅಪ್ಲಿಕೇಶನ್‌ಗಳನ್ನು ಬಳಸಬೇಕು.

2. ಕೆಲಸ ಹುಡುಕುತ್ತಿರುವರಿಗೆ ಜಾಬ್‌ ಆಫರ್‌ ಸಂದೇಶಗಳನ್ನು ಕಳಿಸುವ ಮೂಲಕ ಸ್ಕಾಮರ್‌ಗಳು ಅವರ ವೈಯಕ್ತಿಕ ವಿಚಾರಗಳನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ಲಪಟಾಯಿಸಬಹುದು. ಆದ್ದರಿಂದ ಅಂತಹ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಲೇಬೇಡಿ.

3. ಉಚಿತ ರೀಚಾರ್ಜ್‌ ಸಂದೇಶವನ್ನು ನೋಡಿ ಮೋಸ ಹೋಗದಿರಿ, ಅಂತಹ ಯಾವುದೇ ಆಫರ್‌ಗಳನ್ನು ಯಾವುದೇ ಕಂಪನಿ ನೀಡುವುದಿಲ್ಲ.

4. ಈ ಸೈಬರ್‌ ಅಪರಾಧಿಗಳು ನಿರುದ್ಯೋಗಿ ಯುವಕರು, ಗೃಹಿಣಿಯರು, ವಿದ್ಯಾರ್ಥಿಗಳನ್ನು ಹೆಚ್ಚು ಟಾರ್ಗೆಟ್‌ ಮಾಡುತ್ತಾರೆ. ನಕಲಿ ಅರೆಕಾಲಿಕ ಉದ್ಯೋಗಗಳ , ಶಾಪಿಂಗ್‌ ಆಮಿಷವೊಡ್ಡಿ ಲಿಂಕ್‌ಗಳನ್ನು ಕಳಿಸುವುದು ಈಗ ಸಾಮಾನ್ಯವಾಗಿದೆ.

5. ಸ್ಕ್ಯಾಮರ್‌ಗಳು , ಸ್ಟ್ರೀಮಿಂಗ್ ಸೇವೆಗಳ ಜನಪ್ರಿಯತೆಯನ್ನು ಬಳಸಿಕೊಂಡು ನಕಲಿ ಸಬ್ಸ್‌ಕ್ರೈಬರ್‌ ರೀಚಾರ್ಜ್‌ ಸಂದೇಶಗಳ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಾರೆ, ಈ ಪ್ರಕ್ರಿಯೆಯಲ್ಲಿ ನಿಮ್ಮ ಖಾತೆಯಲ್ಲಿನ ಹಣವನ್ನು ಖಾಲಿ ಮಾಡುತ್ತಾರೆ.

6. ಆನ್‌ಲೈನ್‌ ವಂಚಕರು ಪ್ರತಿಷ್ಠಿತ ಪ್ಲಾಟ್‌ಫಾರ್ಮ್‌ಗಳಂತೆ ಭದ್ರತಾ ಬೆದರಿಕೆಗಳು ಅಥವಾ ಖಾತೆ ಅಪ್‌ಡೇಟ್‌ಗಳ ಅಲರ್ಟ್‌ ಸಂದೇಶವನ್ನು ಕಳಿಸುವ ಮೂಲಕವೂ ನಿಮ್ಮ ಅಕೌಂಟ್‌ನಲ್ಲಿರುವ ಹಣವನ್ನು ದೋಚುವ ಸಾಧ್ಯತೆ ಇದೆ.

7. ಇತ್ತೀಚೆಗೆ ವಾಟ್ಸಾಪ್‌ ಕಾಲ್‌ ಮಾಡುವ ಆಂಡ್ರಾಯ್ಡ್‌ ಬಳಕೆದಾರರನ್ನು ಬ್ಲಾಕ್‌ಮೇಲ್‌ ಮಾಡುವವರು ಹೆಚ್ಚಾಗಿದ್ದಾರೆ. ಆದ್ದರಿಂದ ಯಾವುದೇ ವಿಡಿಯೋ ಕಾಲ್‌ ಬಂದರೆ ರಿಸೀವ್‌ ಮಾಡದಿರಿ.

8. ನಿಮ್ಮ ಫೇಸ್‌ಬುಕ್‌, ವಾಟ್ಸಾಪ್‌, ಟೆಕ್ಸ್ಟ್‌ ಮೆಸೇಜ್‌ನಲ್ಲಿ ನಿಮಗೆ ಗೊತ್ತಿಲ್ಲದ ನಂಬರ್‌ನಿಂದ ಯಾವುದೇ ಲಿಂಕ್‌ ಬಂದರೆ ಯಾವುದೇ ಕಾರಣಕ್ಕೂ ಅದನ್ನು ಕ್ಲಿಕ್‌ ಮಾಡಬೇಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು