logo
ಕನ್ನಡ ಸುದ್ದಿ  /  ಜೀವನಶೈಲಿ  /  Tips For Emotionally Mature: ಭಾವನಾತ್ಮಕ ಪ್ರಬುದ್ಧತೆ ಬೆಳೆಸಿಕೊಳ್ಳುವುದು ಹೇಗೆ? ಇಲ್ಲಿದೆ ಒಂದಿಷ್ಟು ಸಲಹೆ

Tips for emotionally mature: ಭಾವನಾತ್ಮಕ ಪ್ರಬುದ್ಧತೆ ಬೆಳೆಸಿಕೊಳ್ಳುವುದು ಹೇಗೆ? ಇಲ್ಲಿದೆ ಒಂದಿಷ್ಟು ಸಲಹೆ

HT Kannada Desk HT Kannada

Mar 26, 2023 04:26 PM IST

ಭಾವನಾತ್ಮಕ ಪ್ರಬುದ್ಧತೆ

  • Tips for emotionally mature: ವಯಸ್ಸಿನೊಂದಿಗೆ ಆರೋಗ್ಯಕರ ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳುವ ಕಲೆಯನ್ನು ಕಲಿಯುವುದು ಕೂಡ ಅವಶ್ಯ. ಉದ್ದೇಶಪೂರ್ವಕ ಅಭ್ಯಾಸದೊಂದಿಗೆ ಯಾವುದೇ ವಯಸ್ಸಿನಲ್ಲೂ ಭಾವನಾತ್ಮಕ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬಹುದು.

ಭಾವನಾತ್ಮಕ ಪ್ರಬುದ್ಧತೆ
ಭಾವನಾತ್ಮಕ ಪ್ರಬುದ್ಧತೆ

ಜೀವನದಲ್ಲಿ ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು. ನಮಗಾಗಿ ನಾವು ನಂತರ ಬೇರೆಯದ್ದೆಲ್ಲಾ ಎಂಬುದು ನಮಗೆ ಅರಿವಾಗಬೇಕು. ಭಾವನೆಗಳನ್ನು ನಿಯಂತ್ರಿಸುವುದನ್ನು ಕಲಿಯುವುದು ಮನುಷ್ಯನಿಗೆ ಬಹಳ ಅವಶ್ಯ. ಭಾವನೆಗಳನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸುವುದನ್ನು ಕಲಿಯುವುದು ಮನುಷ್ಯನ ಬಕೆಟ್‌ ಲಿಸ್ಟ್‌ನಲ್ಲಿ ಪ್ರಥಮ ಆದ್ಯತೆಯಲ್ಲಿರಬೇಕು.

ಟ್ರೆಂಡಿಂಗ್​ ಸುದ್ದಿ

Sweating Benefits: ಸೆಖೆ ಹೆಚ್ಚಾಗಿ ಮೈಯೆಲ್ಲಾ ಬೆವರುತ್ತೆ ಅಂತಾ ಬೇಸರ ಮಾಡ್ಬೇಡಿ; ಬೆವರುವುದರಿಂದ ದೇಹಕ್ಕೆ ಇಷ್ಟೆಲ್ಲಾ ಲಾಭವಿದೆ

ಗುಡ್‌ಟಚ್‌, ಬ್ಯಾಡ್‌ಟಚ್‌ ಗೊತ್ತು, ವರ್ಚ್ಯುಯಲ್‌ ಟಚ್‌ ಕುರಿತು ಎಚ್ಚರಿಸಿದ ಕೋರ್ಟ್‌; ಈ ಟಚ್ಚಲಿ ಏನೋ ಇದೆ!

Chicken Recipe: ಢಾಬಾ ಸ್ಟೈಲ್‌ ಚಿಕನ್‌ ಗ್ರೇವಿ ನಿಮಗೂ ಇಷ್ಟನಾ? ಹಾಗಿದ್ರೆ ಇದನ್ನು ಮನೆಯಲ್ಲೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

ಮುಖದ ಮೊಡವೆ ಕಲೆಗಳನ್ನು ಮಾಯವಾಗಿಸುತ್ತೆ ಪುದೀನಾ ಎಲೆಗಳು; ಈ ರೀತಿ ಬಳಸಿ ನೋಡಿ

ವಯಸ್ಸಿನೊಂದಿಗೆ ಆರೋಗ್ಯಕರ ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳುವ ಕಲೆಯನ್ನು ಕಲಿಯುವುದು ಕೂಡ ಅವಶ್ಯವಾಗಿದೆ.

ʼನಾವು ಜೀವನ ಹಾಗೂ ನಮ್ಮೊಂದಿಗಿನ ಸಂಬಂಧಗಳೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎನ್ನುವುದು ಭಾವನಾತ್ಮಕ ಆರೋಗ್ಯದ ಕೀಲಿಕೈಯಾಗಿದೆ. ಉದ್ದೇಶಪೂರ್ವಕ ಅಭ್ಯಾಸದೊಂದಿಗೆ ನಾವು ಯಾವುದೇ ವಯಸ್ಸಿನಲ್ಲೂ ಭಾವನಾತ್ಮಕ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬಹುದುʼ ಎಂದು ಖ್ಯಾತ ಮನೋವಿಜ್ಞಾನಿ ನಿಕೋಲ್‌ ಲೆಪೆರಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಅವರು ಭಾವನಾತ್ಮಕವಾಗಿ ಪ್ರಬುದ್ಧರಾಗುವ ಹಂತಗಳನ್ನೂ ವಿವರಿಸಿದ್ದಾರೆ. ಹಾಗಾದರೆ ನಾವು ಭಾವನಾತ್ಮಕವಾಗಿ ಪ್ರಬುದ್ಧತೆ ಸಾಧಿಸಲು ಏನು ಮಾಡಬೇಕು? ಇಲ್ಲಿದೆ ನೋಡಿ ಉತ್ತರ.

ಬೇಲಿ ಹಾಕಿಕೊಳ್ಳಿ

ಜೀವನದಲ್ಲಿ ಎದುರುಗೊಳ್ಳುವ ಸಂಬಂಧಗಳಿಂದ ನಾವು ಅಸಮಾಧಾನ ಎದುರಿಸಬಹುದು. ಇದರಿಂದ ಮುಕ್ತರಾಗಲು ಸಂಬಂಧದ ಹುಟ್ಟಿನಲ್ಲೇ ಒಂದು ಚೌಕಟ್ಟು ಕಟ್ಟಿಕೊಳ್ಳುವುದು ಅವಶ್ಯ. ಆ ಸಂಬಂಧದ ಬಗ್ಗೆ ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾದ ಗಡಿ ಇರಬೇಕು. ಜೊತೆಗೆ ನಮ್ಮೊಂದಿಗಿರುವ ವ್ಯಕ್ತಿಗಳಿಗೆ ಅದನ್ನು ವಿವರಿಸಿ ಹೇಳಬೇಕು.

ವಿರಾಮ

ನಮ್ಮ ಖುಷಿ, ಸಂತೋಷ, ದುಃಖ ಹೀಗೆ ಯಾವುದೇ ಭಾವನೆಗಳು ನಮ್ಮ ಮನಸ್ಸಿನಲ್ಲಿದ್ದಾಗ ನಾವು ಬೇರೆಯವರಿಗೆ ಪ್ರತಿಕ್ರಿಯೆ ನೀಡುವ ಮೊದಲು ವಿರಾಮ ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಮನಸ್ಸನ್ನು ತಿಳಿಗೊಳಿಸಿಕೊಳ್ಳಬೇಕು ಮತ್ತು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

ದೃಷ್ಟಿಕೋನ

ಪರಿಸ್ಥಿತಿಯ ಅವಲೋಕನ ಮಾಡುವುದನ್ನು ಕಲಿಯಬೇಕು. ಯಾವುದೋ ಒಂದು ಪರಿಸ್ಥಿತಿ ನಿಮ್ಮ ದೃಷ್ಟಿಕೋನದಲ್ಲಿ ಸಕಾರಾತ್ಮಕವಾಗಿದ್ದರೆ, ಅದು ಎಲ್ಲರಿಗೂ ಸಕಾರಾತ್ಮಕವಾಗಿರಬೇಕು ಎಂದೇನಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಇತರರ ದೃಷ್ಟಿಕೋನವನ್ನು ಗ್ರಹಿಸುವುದೂ ಮುಖ್ಯವಾಗುತ್ತದೆ. ಇತರರ ದೃಷ್ಟಿಕೋನಗಳನ್ನು ಅರಿಯಲು ಸಂಘರ್ಷಗಳು ನಮಗೆ ಸಹಾಯ ಮಾಡುತ್ತವೆ. ದೃಷ್ಟಿಕೋನವನ್ನು ಅರಿಯುವ ಮೂಲಕ ಸಂಬಂಧಗಳಲ್ಲಿನ ಗೊಂದಲಗಳ ನಿವಾರಣೆಯೂ ಸಾಧ್ಯ.

ನಿರಾಶೆ

ಪ್ರತಿಯೊಬ್ಬರ ಜೀವನದಲ್ಲೂ ಒಂದಿಲ್ಲ ಒಂದು ಬಾರಿ ನಿರಾಶೆ ಕಾಡಿರುತ್ತದೆ. ನಿರಾಶೆ ಜೀವನದ ಭಾಗವೂ ಹೌದು. ಇದರ ಬಗ್ಗೆ ಚಿಂತಿಸುತ್ತಾ ಕೂರುವ ಬದಲು ನಾವು ಇದನ್ನು ಎದುರಿಸುವುದನ್ನು ಕಲಿಯಬೇಕು. ನಿರಾಶೆಯ ಸ್ಥಿತಿಯಿಂದ ಹೊರ ಬರುವುದು ಹೇಗೆ ಎಂಬುದನ್ನು ನೋಡಬೇಕು. ಆ ಮೂಲಕ ಜೀವನದ ಉತ್ತಮ ಆಯ್ಕೆಗಳನ್ನು ಕಂಡುಕೊಳ್ಳಬೇಕು.

ಬಯಕೆಗಳು

ಯಾವುದೇ ವಿಷಯದ ಮೇಲೆ ಬಯಕೆಗಳಿದ್ದರೂ ಅದನ್ನು ಪೂರೈಸಿಕೊಳ್ಳುವುದು ಹೇಗೆ ಎಂಬ ದಾರಿಯನ್ನು ಹುಡುಕಬೇಕು. ಸನ್ಮಾರ್ಗದಲ್ಲಿ ನಡೆಯುವ ಮೂಲಕ ಬಯಕೆಯನ್ನು ತೀರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ನಮ್ಮ ಬಯಕೆಗಳನ್ನು ತೀರಿಸಿಕೊಳ್ಳಲು ಬೇರೆಯವರನ್ನು ದಾಳವನ್ನಾಗಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ.

ಮಾನಸಿಕ ವಿಶ್ರಾಂತಿ

ಪ್ರತಿಯೊಬ್ಬರ ಜೀವನದಲ್ಲೂ ಕೆಟ್ಟ ದಿನಗಳು ಎದುರಾಗುತ್ತವೆ. ಆದರೆ ನಾವು ಭಾವನಾತ್ಮಕವಾಗಿ ಆರೋಗ್ಯವಾಗಿಲ್ಲದ ಸಂದರ್ಭಗಳಲ್ಲಿ, ನಂತರದ ದಿನಗಳಲ್ಲಿ ವಿಷಾದಿಸುವ ರೀತಿಯಲ್ಲಿ ಪ್ರತಿಕ್ರಿಯಿಸುವ ಬದಲು ವಿರಾಮ ಹಾಗೂ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಕಲಿಯಬೇಕು. ಆ ಪರಿಸ್ಥಿತಿಯಿಂದ ಹೊರ ಬರಲು ನಮ್ಮಿಂದ ಆಗುವುದನ್ನು ನಾವೇ ಮಾಡಬೇಕು. ಆ ಮೂಲಕ ನಮ್ಮಲ್ಲಿ ಚೈತನ್ಯ ಮೂಡಿಸಿಕೊಳ್ಳಬಹುದು.

ವೈಯಕ್ತಿಕ ಪರಿಗಣನೆ

ಎಲ್ಲಾ ವಿಷಯಗಳನ್ನು ವೈಯಕ್ತಕಿವಾಗಿ ಪರಿಗಣಿಸುವುದು ಸರಿಯಲ್ಲ. ನಮ್ಮ ಎದುರಿನವರ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಜನರಲ್ಲಿ ಕೆಲವೊಮ್ಮೆ ಅವರಲ್ಲಿ ಏನಾಗುತ್ತಿದೆ ಎಂಬುದು ಅವರಿಗೂ ಅರಿವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರ ವರ್ತನೆ ಭಿನ್ನವಾಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು