logo
ಕನ್ನಡ ಸುದ್ದಿ  /  ಜೀವನಶೈಲಿ  /  Workplace Clashes: ವೃತ್ತಿಕಲಹ ನಿಮ್ಮ ನಡುವೆಯೂ ಇದೆಯೇ? ಇದಕ್ಕೆ ಅಂತ್ಯ ಹಾಡುವುದು ಹೇಗೆ?

workplace clashes: ವೃತ್ತಿಕಲಹ ನಿಮ್ಮ ನಡುವೆಯೂ ಇದೆಯೇ? ಇದಕ್ಕೆ ಅಂತ್ಯ ಹಾಡುವುದು ಹೇಗೆ?

HT Kannada Desk HT Kannada

Feb 26, 2023 11:53 AM IST

ಟೀಮ್‌ ಲಂಚ್‌

    • workplace clashes: ವೃತ್ತಿಜೀವನ ಅಥವಾ ಕೆಲಸದ ಸ್ಥಳದಲ್ಲಿ ಜಗಳವಾದರೆ ಅದನ್ನು ವೈಯಕ್ತಕಿವಾಗಿ ಪರಿಗಣಿಸಬಾರದು. ಕೆಲಸ ಹಾಗೂ ವೈಯಕ್ತಿಕ ನಡುವೆ ಅಂತಕ ಕಾಯ್ದುಕೊಳ್ಳುವುದು ಕೆಲಸ ಹಾಗೂ ಜೀವನ ಎರಡಕ್ಕೂ ಉತ್ತಮ.
ಟೀಮ್‌ ಲಂಚ್‌
ಟೀಮ್‌ ಲಂಚ್‌

ನಮ್ಮ ದೈನಂದಿನ ಜೀವನದಲ್ಲಿ ಒಂದಿಲ್ಲ ಒಂದು ವಿಷಯಕ್ಕೆ ಯಾರಾದರು ಒಬ್ಬರ ಜೊತೆ ಜಗಳವಾಡಿಯೇ ಇರುತ್ತೇವೆ. ಜಗಳ ಜೀವನದಲ್ಲಿ ಸಾಮಾನ್ಯ. ಆದರೆ ಕೆಲಸದ ಸ್ಥಳದಲ್ಲಿ ಜಗಳವಾದರೆ ಅದನ್ನು ಮುಂದುವರಿಸಲು ಹೋಗಬಾರದು.

ಟ್ರೆಂಡಿಂಗ್​ ಸುದ್ದಿ

Flax Seeds: ಆರೋಗ್ಯಕಷ್ಟೇ ಅಲ್ಲ, ಅಂದಕ್ಕೂ ಬೇಕು ಅಗಸೆ ಬೀಜ; ಚರ್ಮ, ಕೂದಲಿನ ಕಾಂತಿ ಹೆಚ್ಚಲು ಇದನ್ನು ಹೀಗೆ ಬಳಸಿ

Egg Chat Recipe: ಮೊಟ್ಟೆ ತಿನ್ನೊಲ್ಲ ಅಂತ ಮಕ್ಕಳು ಹಟ ಮಾಡ್ತಾರಾ, ಈ ರೀತಿ ಎಗ್‌ ಚಾಟ್‌ ಮಾಡಿಕೊಡಿ, ಮತ್ತೂ ಬೇಕು ಅಂತ ತಿಂತಾರೆ

ಅತಿಕಾಮದ ದೌರ್ಬಲ್ಯ: ಲೈಂಗಿಕ ಶೋಷಣೆಯನ್ನೇ ವ್ಯಸನವಾಗಿಸಿಕೊಳ್ಳುವ ಕಾಮಪಿಪಾಸೆಯೂ ರೋಗ, ಚಿಕಿತ್ಸೆಯ ಜೊತೆಗೆ ಶಿಕ್ಷೆಯೂ ಕೊಡಬೇಕು

Summer Tips: ಬೇಸಿಗೆಯಲ್ಲಿ ಪ್ರತಿದಿನ ಮಾವಿನಕಾಯಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ

ನಾವು ಕೆಲಸ ಮಾಡುವ ಸ್ಥಳದಲ್ಲಿ ಅಥವಾ ಸಹೋದ್ಯೋಗಿಗಳೊಂದಿಗೆ ಜಗಳವಾದರೆ ಇದು ನಮ್ಮ ಉತ್ಪಾದಕತೆ ಮಾತ್ರವಲ್ಲ, ತಂಡದ ಸೌರ್ಹಾದತೆ ಹಾಳಾಗಲು ಕಾರಣವಾಗುತ್ತದೆ. ಆ ಕಾರಣಕ್ಕೆ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಸಾಮಾನ್ಯವಾಗಿ ಈ 3 ವಿಷಯಗಳಿಗೆ ಕೆಲಸ ಸ್ಥಳದಲ್ಲಿ ಜಗಳಗಳಾಗುತ್ತವೆ.

1. ಸಂವಹನ ಸಮಸ್ಯೆ

ಇದು ಸಹೋದ್ಯೋಗಿಗಳೊಂದಿಗೆ ನಾವು ಮಾತನಾಡುವ ರೀತಿಯನ್ನು ಅವಲಂಭಿಸಿದೆ. ಮಾಹಿತಿ ನೀಡುವ ಅಥವಾ ಪ್ರತಿಕ್ರಿಯಿಸುವ ರೀತಿಯು ನಿಮ್ಮ ಜೊತೆ ಕೆಲಸಗಾರರಿಗೆ ಮೆಚ್ಚುಗೆಯಾಗದೆ ಘರ್ಷಣೆಗೆ ಕಾರಣವಾಗಬಹುದು. ಕೆಲಸದ ಸ್ಥಳದಲ್ಲಿ ಭಿನ್ನ ಮನೋಭಾವದವರು ಇರುವ ಕಾರಣ ನಮ್ಮ ಮಾತು, ಯೋಜನೆಗಳನ್ನು ಯೋಚಿಸಿ ವ್ಯಕ್ತಪಡಿಸಬೇಕು.

2. ಸಾಂಸ್ಕೃತಿಕ ಘರ್ಷಣೆ

ವಿಭಿನ್ನ ಹಿನ್ನೆಲೆಯಿಂದ ಬಂದಿರುವವರ ನಡುವೆ ಲಿಂಗ ಸಮಾನತೆ, ವಯಸ್ಸು, ಶಿಕ್ಷಣ, ಜನಾಂಗೀಯತೆ, ಧರ್ಮ, ರಾಜಕೀಯ ನಂಬಿಕೆಗಳು ಮತ್ತು ಸಾಮಾಜಿಕ ಆರ್ಥಿಕ ಹಿನ್ನೆಲೆಗಳಿಗೆ ಸಂಬಂಧಿಸಿದಂತೆ ಸಂಬಂಧದ ಮೌಲ್ಯಗಳನ್ನು ವಿರೋಧಿಸಿದಾಗ ಸಾಂಸ್ಕೃತಿಕ ಕಲಹಗಳು ಉಂಟಾಗುತ್ತವೆ.

3. ಕೆಲಸದ ರೀತಿಯಲ್ಲಿ ಭಿನ್ನತೆ

ಒಬ್ಬೊಬ್ಬರದ್ದು ಒಂದೊಂದು ರೀತಿಯ ಮನೋಭಾವ ಇರುವಾಗ ಕೆಲಸದ ರೀತಿಯಲ್ಲೂ ಭಿನ್ನತೆ ಇರುತ್ತದೆ. ಕೆಲಸದಲ್ಲಿನ ವಿಭಿನ್ನ ಆದ್ಯತೆಗಳು ಘರ್ಷಣೆಗೆ ಕಾರಣವಾಗಬಹುದು.

ವೃತ್ತಿಕಲಹವನ್ನು ನಿಭಾಯಿಸುವುದು ಹೇಗೆ?

ವೈಯಕ್ತಿಕವಾಗಿ ನೋಡಬೇಡಿ

ವೃತ್ತಿ ಆಗಿರಲಿ, ವೈಯಕ್ತಿಕ ಜೀವನವಾಗಲಿ ಜಗಳವಾಗುವುದು ಸಾಮಾನ್ಯ. ಕೆಲಸದ ವಿಷಯದಲ್ಲಿ ಮೇಲೆ ತಿಳಿಸಿದ ಯಾವುದೇ ಕಾರಣದಿಂದ ಜಗಳವಾದರೂ ಅದನ್ನು ಅಲ್ಲಿಗೆ ಮರೆತು ಬಿಡಿ. ವೃತ್ತಿಯ ಜಗಳವನ್ನು ವೈಯಕ್ತಿಕವಾಗಿ ಪರಿಗಣಿಸಬೇಡಿ.

ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ

ನಿಮ್ಮ ಕಚೇರಿಯ ಸಿಬ್ಬಂದಿ ಅಥವಾ ಸಹೋದ್ಯೋಗಿಯೊಂದಿಗೆ ಯಾವ ವಿಚಾರಕ್ಕೆ ನಿಮಗೆ ಜಗಳವಾಯಿತು ಎಂಬುದನ್ನು ಒಂದು ಯೋಚಿಸಿ, ನಿಮ್ಮನ್ನು ಪ್ರಚೋದಿಸಿದ ಅಂಶ ಯಾವುದು ಎಂಬುದನ್ನು ಕಂಡುಕೊಳ್ಳಿ. ಅವರು ಬೇಕಂತಲೇ ತೊಂದರೆ ಕೊಡಲು ಹಾಗೆ ಮಾಡುತ್ತಿದ್ದಾರಾ ಅಥವಾ ಅವರ ನಡವಳಿಕೆಯೇ ಹಾಗಾ ಎಂಬುದನ್ನು ಪರಿಶೀಲಿಸಿ ಅದಕ್ಕೆ ತಕ್ಕ ಹಾಗೆ ವರ್ತಿಸಿ.

ಟೀಮ್‌ ಮೀಟಿಂಗ್‌

ಯಾವುದೇ ಕೆಲಸವಿರಲಿ ತಂಡವಾಗಿ ಕೆಲಸ ಮಾಡುತ್ತಿರುವಾಗ ಟೀಮ್‌ ಮೀಟಿಂಗ್‌ ಮಾಡುವುದು ಬಹಳ ಅವಶ್ಯ. ಮೀಟಿಂಗ್‌ನಲ್ಲಿ ತಂಡದ ಪ್ರತಿ ವ್ಯಕ್ತಿಗೂ ಮಾತನಾಡಲು ಅವಕಾಶ ಹಾಗೂ ಸಮಯ ನೀಡಬೇಕು. ಇದರಿಂದ ತಂಡದ ಸದಸ್ಯರ ಸಂವಹನ ಶೈಲಿ, ಸಂಸ್ಕೃತಿ ಹಾಗೂ ಕೆಲಸದ ಶೈಲಿಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡತಾಗುತ್ತದೆ. ಅಲ್ಲದೆ ಇದರಿಂದ ಘರ್ಷಣೆಗಳು ನಡೆಯುವುದಿಲ್ಲ.

ವೃತ್ತಿದ್ವೇಷ ಬೇಡ

ತಂಡಗಳ ಆದ್ಯತೆಗೆ ಅನುಗುಣವಾಗಿ ಪ್ರತಿಯೊಬ್ಬ ಸದಸ್ಯರ ಅಗತ್ಯಗಳನ್ನು ಬೆಂಬಲಿಸುವ ಯೋಜನೆ ಹಾಕಿಕೊಳ್ಳಿ. ಸಂವಹನ, ಸಂಸ್ಕೃತಿ ಹಾಗೂ ಕೆಲಸದ ಶೈಲಿಯ ನಡುವೆ ಇರುವ ಬೇಲಿಯನ್ನು ಕಿತ್ತು ಹಾಕಲು ಪ್ರಯತ್ನ ಮಾಡಿ. ವೃತ್ತಿ ದ್ವೇಷಕ್ಕೆ ಅವಕಾಶ ಕೊಡಬೇಡಿ.

ಗುಂಪಿನಲ್ಲಿ ಗುಂಪು ಬೇಡ

ಕಚೇರಿಯಲ್ಲಿ ಒಂದು ಗುಂಪಾಗಿ ನೀವೆಲ್ಲರೂ ಕೆಲಸ ಮಾಡುತ್ತಿದ್ದರೆ, ಆ ಗುಂಪಿನಲ್ಲಿ ನೀವು ಇನ್ನೊಂದು ಗುಂಪು ಸೃಷ್ಟಿಸುವ ಕೆಲಸ ಬೇಡ. ಸಮಾನ ಮನಸ್ಕರ ಗುಂಪು ಇದ್ದರೂ ಅದು ಕೆಲಸ ವಿಷಯಕ್ಕೆ ಮಾತ್ರ ಇರಲಿ ಹೊರತು ಬೇರೆ ಕಾರಣಕ್ಕೆ ಸಮಾನ ಮನಸ್ಕರ ಗುಂಪು ಕಟ್ಟಬೇಡಿ.

ಟೀಮ್‌ ಲಂಚ್‌, ಡಿನ್ನರ್‌

ಸಾಮಾನ್ಯವಾಗಿ ಐಟಿ ಕಂಪನಿಗಳಲ್ಲಿ ಆಗಾಗ ಟೀಮ್‌ ಲಂಚ್‌, ಡಿನ್ನರ್‌, ಔಟಿಂಗ್‌ ಆಯೋಜಿಸುತ್ತಾರೆ. ಇದರಿಂದ ತಂಡದಲ್ಲಿ ಸೌಹಾರ್ದತೆ ಬೆಳೆಯಲು ಸಹಾಯವಾಗುತ್ತದೆ. ಈ ರೀತಿ ಮಾಡುವುದರಿಂದಲೂ ವೃತ್ತಿಯಲ್ಲಿನ ಕಲಹಗಳನ್ನು ತಪ್ಪಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು