logo
ಕನ್ನಡ ಸುದ್ದಿ  /  Nation And-world  /  Adani-hindenburg Case: Sc Sets Up 6 Member Committee On Hindenburg Research Report, Seeks Report In Two Months

Adani-Hindenburg case: ಅದಾನಿ-ಹಿಂಡನ್‌ಬರ್ಗ್‌ ಕೇಸ್‌; 6 ತಜ್ಞ ಸದಸ್ಯರ ಸಮಿತಿಯನ್ನು ರಚಿಸಿದ ಸುಪ್ರೀಂ ಕೋರ್ಟ್‌

HT Kannada Desk HT Kannada

Mar 02, 2023 11:50 AM IST

ಸುಪ್ರೀಂ ಕೋರ್ಟ್‌

  • Adani-Hindenburg case: ಈ ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಎಂ ಸಪ್ರೆ ಅವರು ವಹಿಸಲಿದ್ದಾರೆ. ಸೆಬಿ ನಿಯಮಗಳ ಸೆಕ್ಷನ್ 19 ರ ಉಲ್ಲಂಘನೆಯಾಗಿದೆಯೇ, ಸ್ಟಾಕ್ ಬೆಲೆಗಳನ್ನು ಏರುಪೇರು ಮಾಡುವ ಯಾವುದೇ ಘಟನೆ ಆಗಿದೆಯೇ ಎಂದು ತನಿಖೆ ನಡೆಸುವಂತೆ ಸೆಬಿಗೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌ (HT_PRINT)

ನವದೆಹಲಿ: ಅದಾನಿ ಗ್ರೂಪ್‌ ಕಂಪನಿಗಳಿಗೆ ಹಿಂಡೆನ್‌ ಬರ್ಗ್‌ ಸಂಶೋಧನಾ ವರದಿಯಿಂದ ಆಗಿರುವ ಸಮಸ್ಯೆಗಳ ಕುರಿತು ತಿಳಿದುಕೊಳ್ಳಲು ಆರು ತಜ್ಞ ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ರಚಿಸಿದೆ. ಎರಡು ತಿಂಗಳ ಒಳಗೆ ವರದಿಯನ್ನು ಸಲ್ಲಿಸುವಂತೆಯೂ ಸೂಚಿಸಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ಈ ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಎಂ ಸಪ್ರೆ ಅವರು ವಹಿಸಲಿದ್ದಾರೆ. ಸೆಬಿ ನಿಯಮಗಳ ಸೆಕ್ಷನ್ 19 ರ ಉಲ್ಲಂಘನೆಯಾಗಿದೆಯೇ, ಸ್ಟಾಕ್ ಬೆಲೆಗಳನ್ನು ಏರುಪೇರು ಮಾಡುವ ಯಾವುದೇ ಘಟನೆ ಆಗಿದೆಯೇ ಎಂದು ತನಿಖೆ ನಡೆಸುವಂತೆ ಸೆಬಿಗೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ನಿಯಂತ್ರಕ ಕಾರ್ಯವಿಧಾನಗಳಿಗೆ ಸಂಬಂಧಿಸಿದ ಸಮಿತಿಯನ್ನು ರಚಿಸುವುದು ಸೇರಿ ಹಿಂಡೆನ್‌ಬರ್ಗ್ ವರದಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.

ಸುಪ್ರೀಂ ಕೋರ್ಟ್‌ ಫೆಬ್ರವರಿ 17 ರಂದು, ತನ್ನ ಆದೇಶವನ್ನು ಕಾಯ್ದಿರಿಸುವಾಗ, ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ಹಿನ್ನೆಲೆಯಲ್ಲಿ ಹೂಡಿಕೆದಾರರನ್ನು ರಕ್ಷಿಸಲು ನಿಯಂತ್ರಕ ಕಾರ್ಯವಿಧಾನಗಳಿಗೆ ಸಂಬಂಧಿಸಿದ ಸಮಿತಿಯನ್ನು ನೇಮಿಸುವ ಕುರಿತು ಕೇಂದ್ರದ ಮೊಹರು ಕವರ್ ಸಲಹೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಅಲ್ಲದೆ, ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಅದು ಬಯಸುತ್ತದೆ ಎಂದು ಹೇಳಿತ್ತು.

ವಿಚಾರಣೆಯ ವೇಳೆ ಸಿಜೆಐ ಡಿವೈ ಚಂದ್ರಚೂಡ್ ಅವರು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕೇಂದ್ರದ ಸೀಲ್ಡ್ ಕವರ್ ಸಲಹೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದರು.

ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಚ್ಚಿದ ಕವರ್ ಟಿಪ್ಪಣಿಯನ್ನು ಸಲ್ಲಿಸುತ್ತ, "ಎರಡು ಉದ್ದೇಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು ಸತ್ಯವು ಹೊರಬರುತ್ತದೆ ಮತ್ತು ಸಮಗ್ರ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ. ಅದೇ ರೀತಿ ಇನ್ನೊಂದು ಉದ್ದೇಶವಿಲ್ಲದ ಪರಿಣಾಮ ಮಾರುಕಟ್ಟೆ ಮೇಲಾಗುತ್ತದೆ" ಎಂದು ಹೇಳಿದ್ದರು.

ಕಳೆದ ಒಂದು ತಿಂಗಳಿನಿಂದ ಅದಾನಿ ಸಮೂಹದ ಕಂಪನಿಗಳ ಷೇರುಗಳ ಬೆಲೆ ಗಣನೀಯವಾಗಿ ಕುಸಿದಿದೆ. ಜನವರಿ 24 ರ ಹಿಂಡೆನ್‌ಬರ್ಗ್ ವರದಿಯು ಸಮೂಹದಿಂದ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ವಂಚನೆ ಆಗಿದೆ ಎಂದು ಆರೋಪಿಸಿತ್ತು.

ಅದಾನಿ ಗ್ರೂಪ್ ಹಿಂಡೆನ್‌ಬರ್ಗ್ ಅನ್ನು "ಅನೈತಿಕ ಕಿರು ಮಾರಾಟಗಾರ" ಎಂದು ಪ್ರತ್ಯಾರೋಪ ಮಾಡಿತ್ತು. ನ್ಯೂಯಾರ್ಕ್ ಮೂಲದ ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಯು "ಸುಳ್ಳೇ ಹೊರತು ಬೇರೇನೂ ಅಲ್ಲ" ಎಂದು ಹೇಳಿತ್ತು.

ಸಮೂಹದ ಷೇರುಗಳ ಮಾರಾಟ ಮುಂದುವರಿದ ಕಾರಣ ಅದರ ಪ್ರಮುಖ ಸಂಸ್ಥೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ 20,000 ಕೋಟಿ ರೂಪಾಯಿ ಫಾಲೋ-ಆನ್‌ ಪಬ್ಲಿಕ್‌ ಆಫರ್‌ ರದ್ದುಗೊಳಿಸಿತು.

ಅದಾನಿ ಗ್ರೂಪ್ ಜನವರಿ 29 ರಂದು 413 ಪುಟಗಳ ಸುದೀರ್ಘ ಸ್ಪಷ್ಟೀಕರಣ ವರದಿ ಪ್ರಕಟಿಸಿದ್ದು, ಅದರಲ್ಲಿ, ಹಿಂಡೆನ್‌ಬರ್ಗ್ ರಿಸರ್ಚ್‌ನ ಇತ್ತೀಚಿನ ವರದಿಯು ಯಾವುದೇ ನಿರ್ದಿಷ್ಟ ಕಂಪನಿಯ ಮೇಲಿನ ದಾಳಿಯಲ್ಲ ಆದರೆ ಭಾರತ, ಅದರ ಬೆಳವಣಿಗೆಯ ಕಥೆ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ "ಲೆಕ್ಕಾಚಾರದ ದಾಳಿ" ಎಂದು ಹೇಳಿತ್ತು.

"ಇದು ಕೇವಲ ಯಾವುದೇ ನಿರ್ದಿಷ್ಟ ಕಂಪನಿಯ ಮೇಲಿನ ಅನಗತ್ಯ ದಾಳಿಯಲ್ಲ, ಆದರೆ ಭಾರತದ ಮೇಲಿನ ಲೆಕ್ಕಾಚಾರದ ದಾಳಿ, ಭಾರತೀಯ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ ಮತ್ತು ಗುಣಮಟ್ಟ ಮತ್ತು ಭಾರತದ ಬೆಳವಣಿಗೆಯ ಕಥೆ ಮತ್ತು ಮಹತ್ವಾಕಾಂಕ್ಷೆಗೆ ಹೊಡೆತ ನೀಡುವಂತಹ ವಿದ್ಯಮಾನ" ಎಂದು ಅದಾನಿ ಗ್ರೂಪ್‌ ವ್ಯಾಖ್ಯಾನಿಸಿತ್ತು.

    ಹಂಚಿಕೊಳ್ಳಲು ಲೇಖನಗಳು