logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Imran Khedawala: ಗುಜರಾತ್‌ನ ಏಕೈಕ ಮುಸ್ಲಿಂ ಶಾಸಕ ಇವರು: ಇಮ್ರಾನ್‌ ಖೇಡಾವಾಲಾ ಯಾವ ಪಕ್ಷದವರು?

Imran Khedawala: ಗುಜರಾತ್‌ನ ಏಕೈಕ ಮುಸ್ಲಿಂ ಶಾಸಕ ಇವರು: ಇಮ್ರಾನ್‌ ಖೇಡಾವಾಲಾ ಯಾವ ಪಕ್ಷದವರು?

HT Kannada Desk HT Kannada

Dec 10, 2022 01:24 PM IST

ಇಮ್ರಾನ್‌ ಖೇಡಾವಾಲಾ (ಸಂಗ್ರಹ ಚಿತ್ರ)

    • 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಇಮ್ರಾನ್‌ ಖೇಡಾವಾಲಾ ಎಂಬ ಏಕೈಕ ಮುಸ್ಲಿಂ ಶಾಸಕ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಇಮ್ರಾನ್‌ ಖೇಡಾವಾಲಾ, ಪ್ರಸ್ತುತ ಗುಜರಾತ್‌ ವಿಧಾನಸಭೆಯಲ್ಲಿ ಏಕೈಕ ಮುಸ್ಲಿಂ ಶಾಸಕ ಎಂಬುದು ಗಮನಾರ್ಹ. ಕಾಂಗ್ರೆಸ್‌ ಶಾಸಕ ಇಮ್ರಾನ್‌ ಖೇಡಾವಾಲಾ ಅವರ ಕುರಿತು ಮಾಹಿತಿ ಇಲ್ಲಿದೆ.
ಇಮ್ರಾನ್‌ ಖೇಡಾವಾಲಾ (ಸಂಗ್ರಹ ಚಿತ್ರ)
ಇಮ್ರಾನ್‌ ಖೇಡಾವಾಲಾ (ಸಂಗ್ರಹ ಚಿತ್ರ) (Verified Twitter)

ಅಹಮದಾಬಾದ್: 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಇಮ್ರಾನ್‌ ಖೇಡಾವಾಲಾ ಎಂಬ ಏಕೈಕ ಮುಸ್ಲಿಂ ಶಾಸಕ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಇಮ್ರಾನ್‌ ಖೇಡಾವಾಲಾ, ಪ್ರಸ್ತುತ ಗುಜರಾತ್‌ ವಿಧಾನಸಭೆಯಲ್ಲಿ ಏಕೈಕ ಮುಸ್ಲಿಂ ಶಾಸಕ ಎಂಬುದು ಗಮನಾರ್ಹ.

ಟ್ರೆಂಡಿಂಗ್​ ಸುದ್ದಿ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಅಹಮದಾಬಾದ್ ನಗರದ ಜಮಾಲ್ಪುರ್-ಖಾಡಿಯಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಮ್ರಾನ್‌ ಖೇಡಾವಾಲಾ, 13,658 ಮತಗಳ ಅಂತರದಿಂದ ಗೆದ್ದು ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇಮ್ರಾನ್‌ ಖೇಡಾವಾಲಾ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಭೂಷಣ್‌ ಭಟ್‌ ಮತ್ತು ಎಐಎಂಐಎಂ ರಾಜ್ಯಾಧ್ಯಕ್ಷ ಸಬೀರ್‌ ಕಬ್ಲಿವಾಲಾ ಅವರನ್ನು ಈ ಚುನಾವಣೆಯಲ್ಲಿ ಸೋಲಿಸಿದ್ದಾರೆ.

ಮೂವರು ಹಾಲಿ ಶಾಸಕರು ಸೇರಿದಂತೆ ಒಟ್ಟು ಆರು ಮುಸ್ಲಿಂ ಅಭ್ಯರ್ಥಿಗಳನ್ನು , ಕಾಂಗ್ರೆಸ್‌ ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು. ಈ ಪೈಕಿ ಇಬ್ಬರು ಶಾಸಕರು ಸೇರಿದಂತೆ ಒಟ್ಟು ಐವರು ಅಭ್ಯರ್ಥಿಗಳು ಸೋತಿದ್ದಾರೆ. ಇಮ್ರಾನ್‌ ಖೇಡಾವಾಲಾ ಅವರೊಬ್ಬರೇ ಚುನಾವಣೆಯಲ್ಲಿ ಗೆದ್ದಿದ್ದು, ಗುಜರಾತ್‌ ವಿಧಾನಸಭೆಯ ಏಕೈಕ ಮುಸ್ಲಿಂ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಹಮದಾಬಾದ್ ಜಿಲ್ಲೆಯ ದರಿಯಾಪುರ ವಿಧಾನಸಭಾ ಕ್ಷೇತ್ರದಲ್ಲಿ‌, ಕಾಂಗ್ರೆಸ್ ಅಭ್ಯರ್ಥಿ ಮತ್ತು ಹಾಲಿ ಶಾಸಕ ಘಿಯಾಸುದ್ದೀನ್ ಶೇಖ್ ಅವರು ಬಿಜೆಪಿಯ ಕೌಶಿಕ್ ಜೈನ್ ವಿರುದ್ಧ ಸೋತಿದ್ದಾರೆ. ಕಾಂಗ್ರೆಸ್‌ನ ಮತ್ತೋರ್ವ ಶಾಸಕ ಮೊಹಮ್ಮದ್ ಜಾವೇದ್ ಪಿರ್ಜಾದಾ ಅವರು, ಮೊರ್ಬಿ ಜಿಲ್ಲೆಯ ವಂಕನೇರ್‌ನಲ್ಲಿ ಸೋಲುಂಡಿದ್ದಾರೆ. ಈ ಕ್ಷೇತ್ರದಲ್ಲಿ ಆಪ್‌ ಅಭ್ಯರ್ಥಿ 53,110 ಮತಗಳನ್ನು ಪಡೆದಿದ್ದು ವಿಶೇಷ.

ಅದರಂತೆ ಕಚ್ ಜಿಲ್ಲೆಯ ಅಬ್ದಾಸಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಅಭ್ಯರ್ಥಿ ಜಟ್ ಮಮದ್ ಜಂಗ್ ಅವರನ್ನು, ಬಿಜೆಪಿಯ ಪ್ರದ್ಯುಮನ್ ಸಿಂಗ್ ಜಡೇಜಾ ಅವರು ಸುಮಾರು 9,000 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಅದೇ ರೀತಿ ಪ್ರಸಕ್ತ ಚುನಾವಣೆಯಲ್ಲಿ ಆಪ್‌ ಮೂರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಒಬ್ಬರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಜಮಾಲ್‌ಪುರ್-ಖಾಡಿಯಾ, ದರಿಯಾಪುರ ಮತ್ತು ಜಂಬೂಸರ್‌ಗಳಲ್ಲಿ ಆಪ್‌ನ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಸಂಸದ ಅಸಾದುದ್ದೀನ್‌ ಒವೈಸಿ ಅವರ ಎಐಎಂಐಎಂ ಪಕ್ಷದಿಂದ 12 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದರು. ಆದರೆ ಗುಜರಾತ್‌ನಲ್ಲಿ ಖಾತೆ ತೆರೆಯಲು ಅಸಾದುದ್ದೀನ್‌ ಒವೈಸಿ ಅವರ ಪಕ್ಷ ವಿಫಲವಾಗಿದೆ.

2017ರ ಗುಜರಾತ್‌ ವಿಧಾನಸಭೆಯಲ್ಲಿ ಒಟ್ಟು ಮೂವರು ಮುಸ್ಲಿಂ ಶಾಸಕರು ಇದ್ದರು. ಈ ಮೂವರೂ ಕಾಂಗ್ರೆಸ್‌ ಪಕ್ಷದ ಶಾಸಕರಾಗಿದ್ದರು. 2017ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಒಟ್ಟು ಐವರು ಅಭ್ಯರ್ಥಿಗಳನ್ನು ಕಣಕ್ಕಿಸಿತ್ತು. ಗುಜರಾತ್‌ನ ಜನಸಂಖ್ಯೆಯಲ್ಲಿ ಸುಮಾರು ಶೇ.10ರಷ್ಟು ಮುಸ್ಲಿಮರಿದ್ದಾರೆ.

ಈಗಷ್ಟೇ ಮುಕ್ತಾಯಗೊಂಡ ಗುಜರಾತ್ ಚುನಾವಣೆಯಲ್ಲಿ, ಬಿಜೆಪಿ 156 ಸ್ಥಾನಗಳನ್ನು ಗೆದ್ದುಕೊಂಡಿತು, ಇದು ಗುಜರಾತ್‌ನ ಇತಿಹಾಸದಲ್ಲಿ ಯಾವುದೇ ಪಕ್ಷ‌ ಗೆದ್ದುಕೊಂಡ ಅತ್ಯಧಿಕ ಸ್ಥಾನವಾಗಿದೆ. ಆದರೆ ಕಾಂಗ್ರೆಸ್ 17 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಆಪ್‌ ಕೇವಲ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಇಂದಿನ ಪ್ರಮುಖ ಸುದ್ದಿ

Year in Review 2022: ಹೇಗಿತ್ತು ಕೇಸರಿ ಪಾಳೆಯಕ್ಕೆ ಈ ವರ್ಷ?: ಮೋದಿ ಪಡೆಗೆ ದು:ಖಕ್ಕಿಂತ ಹೆಚ್ಚು ಹರ್ಷ

ನಿಮ್ಮ ನೆಚ್ಚಿನ 'ಹಿಂದುಸ್ತಾನ್‌ ಟೈಮ್ಸ್‌ ಕನ್ನಡ' ಡಿಜಿಟಲ್‌ ಪತ್ರಿಕೆಯು, 2022ರಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಸಾಗಿಬಂದ ದಾರಿಯನ್ನು 'Year in Review 2022 ' ಸರಣಿಯಲ್ಲಿ ಅವಲೋಕಿಸುತ್ತಿದೆ. ಈ ಸರಣಿ ಲೇಖನಗಳು ರಾಜಕೀಯ ಪಕ್ಷಗಳು ವರ್ಷಪೂರ್ತಿ ನಡೆಸಿದ ಚಟುವಟಿಕೆಗಳತ್ತ ಬೆಳಕು ಚೆಲ್ಲಲಿದೆ. ಇದರ ಮೊದಲ ಸರಣಿಯಲ್ಲಿ 2022ರಲ್ಲಿ ಬಿಜೆಪಿ ಸಾಗಿಬಂದ ಪಥ ಹೇಗಿತ್ತು ಎಂಬುದನ್ನು ಅವಲೋಕಿಸೋಣ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ