logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Artemis Ii: ಚಂದಿರನ ಅಂಗಳ ತಲುಪಲಿರುವ ಗಗನಯಾತ್ರಿಗಳ ಹೆಸರು ಘೋಷಿಸಲಿದೆ ನಾಸಾ: ಅನನ್ಯ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ

Artemis II: ಚಂದಿರನ ಅಂಗಳ ತಲುಪಲಿರುವ ಗಗನಯಾತ್ರಿಗಳ ಹೆಸರು ಘೋಷಿಸಲಿದೆ ನಾಸಾ: ಅನನ್ಯ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ

Nikhil Kulkarni HT Kannada

Apr 02, 2023 10:42 AM IST

ಆರ್ಟೆಮಿಸ್-II ಮಿಷನ್

    • ರ್ಟೆಮಿಸ್-I ಮಿಷನ್‌ನ ಯಶಸ್ಸಿನ ನಂತರ, ಗಗನಯಾತ್ರಿಗಳನ್ನು ಚಂದ್ರನ ಅಂಗಳಕ್ಕೆ ಕರೆದೊಯ್ಯುವ ಆರ್ಟೆಮಿಸ್-II ಮಿಷನ್‌ಗೆ ನಾಸಾ ಮುಂದಡಿ ಇಟ್ಟಿದೆ. ನಾಳೆ(ಏ.೦3-ಸೋಮವಾರ) ಆರ್ಟೆಮಿಸ್-II ಮಿಷನ್‌ ಭಾಗವಾಗಲಿರುವ ನಾಲ್ವರು ಗಗನಯಾತ್ರಿಗಳ ಹೆಸರನ್ನು ನಾಸಾ ಘೋಷಣೆ ಮಾಡಲಿದೆ.‌ ಈ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ..
ಆರ್ಟೆಮಿಸ್-II ಮಿಷನ್
ಆರ್ಟೆಮಿಸ್-II ಮಿಷನ್ (NASA Twitter)

ವಾಷಿಂಗ್ಟನ್:‌ ಆರ್ಟೆಮಿಸ್-I ಮಿಷನ್‌ನ ಯಶಸ್ಸಿನ ನಂತರ, ಗಗನಯಾತ್ರಿಗಳನ್ನು ಚಂದ್ರನ ಅಂಗಳಕ್ಕೆ ಕರೆದೊಯ್ಯುವ ಆರ್ಟೆಮಿಸ್-II ಮಿಷನ್‌ಗೆ ನಾಸಾ ಮುಂದಡಿ ಇಟ್ಟಿದೆ. ನಾಳೆ(ಏ.೦3-ಸೋಮವಾರ) ಆರ್ಟೆಮಿಸ್-II ಮಿಷನ್‌ ಭಾಗವಾಗಲಿರುವ ನಾಲ್ವರು ಗಗನಯಾತ್ರಿಗಳ ಹೆಸರನ್ನು ನಾಸಾ ಘೋಷಣೆ ಮಾಡಲಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ನಾಸಾ ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆ ಏಪ್ರಿಲ್ 3ರ ರಾತ್ರಿ 8.30 ಗಂಟೆಗೆ, ಆರ್ಟೆಮಿಸ್-II ಗಗನಯಾತ್ರಿಗಳ ಜಹೆಸರು ಘೋಷಣೆ ಮಾಡುವ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ಮಾಡಲಿದೆ. ನೀವು ನಾಸಾ ವೆಬ್‌ಸೈಟ್‌ನಲ್ಲಿ ಇದರ ನೇರ ಪ್ರಸಾರವನ್ನು ವೀಕ್ಷಿಸಬಹುದು. 2024ರ ಅಂತ್ಯದ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಿದ್ದ ನಾಸಾ, ಇದೀಗ 2025ರಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ.

ಮಾನವರಹಿತ ಆರ್ಟೆಮಿಸ್-I ಮಿಷನ್‌ ಯಶಸ್ವಿಯಾಗಿದ್ದು, ನಾಸಾದ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (SLS) ರಾಕೆಟ್, ಅಗತ್ಯ ಪರಿಕರಗಳನ್ನು ಈಗಾಗಲೇ ಚಂದ್ರನ ನೆಲಕ್ಕೆ ಯಶಸ್ವಿಯಾಗಿ ತಲುಪಿಸಿದೆ. ಆರ್ಟೆಮಿಸ್-II ಗಗನಯಾತ್ರಿಗಳು ತಮ್ಮ 10 ದಿನಗಳ ಅವಧಿಯ ಕಾರ್ಯಾಚರಣೆಯ ಸಮಯದಲ್ಲಿ, ತಾವು ತಂಗಲಿರುವ ಓರೈಯನ್‌ ಕ್ಯಾಪ್ಸೂಲ್‌ನ ಪರೀಕ್ಷೆ ನಡೆಸಲಿದ್ದಾರೆ.

ಮಾನವರು ಚಂದ್ರನ ನೆಲದಲ್ಲಿ ವಾಸಿಸಲು ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕರಿಸುವ ಸಾಮರ್ಥ್ಯವನ್ನು, ಓರೈಯನ್‌ ಕ್ಯಾಪ್ಸೂಲ್‌ ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕಷ್ಟೇ, ಈ ನಾಲ್ವರೂ ಗಗನಯಾತ್ರಿಗಳನ್ನು ಚಂದ್ರನ ನೆಲಕ್ಕೆ ಸುರಕ್ಷಿತವಾಗಿ ಇಳಿಸಲಾಗುವುದು ಎಂದು ನಾಸಾ ಸ್ಪಷ್ಟಪಡಿಸಿದೆ.

ಆರ್ಟೆಮಿಸ್-II ಮಿಷನ್ ಅವಲೋಕನ

SLS ರಾಕೆಟ್‌ನ್ನು ಬಳಸಿಕೊಂಡು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ 2025ರಲ್ಲಿ, ಈ ನಾಲ್ವರೂ ಗಗನಯಾತ್ರಿಗಳು ಚಂದ್ರನತ್ತ ಪ್ರಯಾಣ ಬೆಳೆಸಲಿದ್ದಾರೆ. ಆರಂಭಿಕ ಉಡಾವಣೆಯು ಆರ್ಟೆಮಿಸ್-I ಕಾರ್ಯಾಚರಣೆಯ ರೀತಿಯಲ್ಲೇ ಇರುತ್ತದೆ. ಆ ಬಳಿಕ ಓರೈಯನ್ ಮತ್ತು ICPS (ಮಧ್ಯಂತರ ಕ್ರಯೋಜೆನಿಕ್ ಪ್ರೊಪಲ್ಷನ್ ಹಂತ) ಎರಡು ಬಾರಿ ಭೂಮಿಯನ್ನು ಸುತ್ತಿ, ಬಾಹ್ಯಾಕಾಶ ನೌಕೆಯ ಎಲ್ಲಾ ವ್ಯವಸ್ಥೆಗಳು ಭೂಮಿಗೆ ಹತ್ತಿರದಲ್ಲಿರುವಾಗ ಕಾರ್ಯನಿರ್ವಹಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಲಿದೆ.

ಮೊದಲ ಕಕ್ಷೆಯು ದೀರ್ಘವೃತ್ತವಾಗಿರುತ್ತದೆ. ಅದು ಬಾಹ್ಯಾಕಾಶ ನೌಕೆಯನ್ನು ಭೂಗ್ರಹದಿಂದ 2,900 ಕಿಲೋಮೀಟರ್ ದೂರಕ್ಕೆ ಕರೆದೊಯ್ಯುತ್ತದೆ. ಇದು 90 ನಿಮಿಷಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಎರಡನೇ ಕಕ್ಷೆಯು ಬಾಹ್ಯಾಕಾಶ ನೌಕೆಯನ್ನು ಭೂಗ್ರಹದಿಂದ ಸುಮಾರು 74,000 ಕಿಲೋಮೀಟರ್ ದೂರಕ್ಕೆ ಕರೆದೊಯ್ಯುತ್ತದೆ. ಎರಡನೇ ಕಕ್ಷೆಯು ಸುಮಾರು 23 ಗಂಟೆಗೂ ಅಧಿಕ ಕಾಲದ ಕಾರ್ಯಾಚರಣೆಯನ್ನು ಒಳಗೊಂಡಿರುತ್ತದೆ.

ಓರೈಯನ್ ಬಾಹ್ಯಾಕಾಶ ನೌಕೆಯು, ICPS ಪ್ರೊಪಲ್ಷನ್ ಅನ್ನು ಬಳಸಿಕೊಂಡು, ಎರಡನೇ ಉನ್ನತ-ಭೂಮಿಯ ಕಕ್ಷೆಯನ್ನು ಪ್ರವೇಶಿಸುತ್ತದೆ. ಈ ವೇಳೆ ಮುಖ್ಯ ರಾಕೆಟ್‌ನಿಂದ ಓರೈಯನ್‌ ಕ್ಯಾಪ್ಸೂಲ್‌ ಬೇರ್ಪಡುತ್ತದೆ. ಈ ಪ್ರಕ್ರಿಯೆ ಬಳಿಕ ಕ್ಯಾಪ್ಸೂಲ್‌ನಲ್ಲಿರುವ ಗಗನಯಾತ್ರಿಗಳು ತಮ್ಮ ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಸ್ಪೇಸ್‌ಸೂಟ್‌ಗಳನ್ನು ಕಳಚುತ್ತಾರೆ. ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸುವವರೆಗೂ, ಈ ನಾಲ್ವರೂ ಗಗನಯಾತ್ರಿಗಳು ಸಾಮಾನ್ಯ ಉಡುಪುಗಳಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸುತ್ತಾರೆ.

ಬಳಿಕ ಗಗನಯಾತ್ರಿಗಳು ಚಂದ್ರನ ಪಾರ್ಶ್ವ ಭಾಗದಲ್ಲಿ ಸುಮಾರು 10,300 ಕಿಲೋಮೀಟರ್ ದೂರದವರೆಗೆ ಪ್ರಯಾಣಿಸಲಿದ್ದಾರೆ. ಅಲ್ಲಿಂದ ಅವರು ಭೂಮಿ ಮತ್ತು ಚಂದ್ರ ಎರಡನ್ನೂ ಒಟ್ಟಿಗೆ ನೋಡಲು ಸಾಧ್ಯವಾಗುತ್ತದೆ. ಈ ವೇಳೆ ಗಗನಯಾತ್ರಿಗಳು ಭೂಮಿಯಿಂದ ಸುಮಾರು 400,000 ಕಿಲೋಮೀಟರ್‌ ದೂರದಲ್ಲಿ ಇರಲಿದ್ದಾರೆ.

ಒಟ್ಟಿನಲ್ಲಿ ಅಪೋಲೋ ಮೂನ್‌ ಮಿಷನ್‌ ಅಂತ್ಯಗೊಂಡ ಸರಿಸುಮಾರು ಐದು ದಶಕಗಳ ಬಳಿಕ, ನಾಸಾ ಆರ್ಟೆಮಿಸ್-II‌ ಮಿಷನ್‌ ಮೂಲಕ ಮಾನವರನ್ನು ಚಂದ್ರನ ಅಂಗಳಕ್ಕೆ ಕಳುಹಿಸುತ್ತಿರುವುದು ಜಾಗತಿಕ ಖಗೋಳಪ್ರಿಯರ ಗಮನ ಸೆಳೆದಿದೆ. ಈ ಆರ್ಟೆಮಿಸ್-II‌ ಮಿಷನ್‌ನ ಭಾಗವಾಗಿರುವ ಈ ನಾಲ್ವರು ಗಗನಯಾತ್ರಿಗಳ ಪೈಕಿ ಓರ್ವ ಮಹಿಳಾ ಗಗನಯಾತ್ರಿ ಇರುವುದು ಸಂತಸದ ಸಂಗತಿಯಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ