logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Elections Result: 12 ರಾಜ್ಯಗಳಲ್ಲಿ ಸಂಪೂರ್ಣ ಬಿಜೆಪಿ ರಾಜ್ಯಭಾರ; ಮೂರಕ್ಕಿಳಿಯಲಿದೆ ಕಾಂಗ್ರೆಸ್‌ ಸರಕಾರ

Elections Result: 12 ರಾಜ್ಯಗಳಲ್ಲಿ ಸಂಪೂರ್ಣ ಬಿಜೆಪಿ ರಾಜ್ಯಭಾರ; ಮೂರಕ್ಕಿಳಿಯಲಿದೆ ಕಾಂಗ್ರೆಸ್‌ ಸರಕಾರ

Praveen Chandra B HT Kannada

Dec 03, 2023 05:34 PM IST

google News

Elections Result: 12 ರಾಜ್ಯಗಳಲ್ಲಿ ಸಂಪೂರ್ಣ ಬಿಜೆಪಿ ರಾಜ್ಯಭಾರ; ಮೂರಕ್ಕಿಳಿಯಲಿದೆ ಕಾಂಗ್ರೆಸ್‌ ಸರಕಾರ

    • Elections Result:ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದು, ಹಲವು ರಾಜ್ಯಗಳಲ್ಲೂ ಭಾರತೀಯ ಜನತಾ ಪಕ್ಷ ಆಡಳಿತ ನಡೆಸುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಗೆಲುವಿನ ಬಳಿಕ ಬಿಜೆಪಿಯು ಸ್ವತಂತ್ರವಾಗಿ ಆಡಳಿತ ನಡೆಸುವ ರಾಜ್ಯಗಳ ಸಂಖ್ಯೆ 12ಕ್ಕೆ ಏರಲಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ರಾಜ್ಯ ಸರಕಾರದ ಸಂಖ್ಯೆ ಮೂರಕ್ಕೆ ಇಳಿಯುತ್ತಿದೆ.
Elections Result: 12 ರಾಜ್ಯಗಳಲ್ಲಿ ಸಂಪೂರ್ಣ ಬಿಜೆಪಿ ರಾಜ್ಯಭಾರ; ಮೂರಕ್ಕಿಳಿಯಲಿದೆ ಕಾಂಗ್ರೆಸ್‌ ಸರಕಾರ
Elections Result: 12 ರಾಜ್ಯಗಳಲ್ಲಿ ಸಂಪೂರ್ಣ ಬಿಜೆಪಿ ರಾಜ್ಯಭಾರ; ಮೂರಕ್ಕಿಳಿಯಲಿದೆ ಕಾಂಗ್ರೆಸ್‌ ಸರಕಾರ

ಬೆಂಗಳೂರು: ಇಂದು ನಡೆದ ಮತಎಣಿಕೆಯ ಫಲಿತಾಂಶ ಇನ್ನೇನೂ ಹೊರಬೀಳಬೇಕಿದೆ. ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಇದೇ ಸಂದರ್ಭದಲ್ಲಿ ತೆಲಂಗಾಣ ಕಾಂಗ್ರೆಸ್‌ ಪಾಲಾಗಲಿದೆ. ಇದರಿಂದ ಬಿಜೆಪಿ ಆಡಳಿತ ನಡೆಸುವ ರಾಜ್ಯ ಸರಕಾರಗಳ ಸಂಖ್ಯೆ ಹನ್ನೆರಡಕ್ಕೆ ತಲುಪಲಿದೆ. ಕಾಂಗ್ರೆಸ್‌ ಕೈಯಿಂದ ರಾಜಸ್ಥಾನ ಮತ್ತು ಛತ್ತೀಸ್‌ಗಢ ತಪ್ಪಲಿದೆ. ಇದರಿಂದ ಸಂಪೂರ್ಣ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ ಮೂರಕ್ಕಿಳಿಯಲಿದೆ.

ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಮ್‌ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷಗಳಲ್ಲಿ ಮೂರನೇ ಸ್ಥಾನದಲ್ಲಿದೆ.

ಬಿಜೆಪಿಯು ಕೇಂದ್ರ ಸರಕಾರದ ಆಡಳಿತ ನಡೆಸುತ್ತಿದೆ. ಉತ್ತರಾಖಂಡ, ಹರ್ಯಾಣ, ಉತ್ತರ ಪ್ರದೇಶ, ಗುಜರಾತ್‌, ಗೋವಾ, ಅಸ್ಸಾಂ, ತ್ರಿಪುರ, ಮಣಿಪುರ, ಅರುಣಾಚಲಪ್ರದೇಶದಲ್ಲಿ ಈಗಾಗಲೇ ಸರಕಾರ ಹೊಂದಿದೆ. ಮಧ್ಯಪ್ರದೇಶವನ್ನು ಮರಳಿ ಪಡೆಯುವ ಹಂತದಲ್ಲಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢವನ್ನು ಕಾಂಗ್ರೆಸ್‌ನಿಂದ ಪಡೆದು ರಾಜ್ಯಭಾರ ಮಾಡುವ ಹಂತದಲ್ಲಿದೆ.

ಇಷ್ಟು ಮಾತ್ರವಲ್ಲದೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಪಕ್ಷವು ಮಿತ್ರಪಕ್ಷಗಳ ಜತೆ ಸರಕಾರ ನಡೆಸುತ್ತಿದೆ. ಮಹಾರಾಷ್ಟ್ರ, ಮೇಘಾಲಯ, ನಾಗಲ್ಯಾಂಡ್‌ ಮತ್ತು ಸಿಕ್ಕಿಂನಲ್ಲಿ ಮೈತ್ರಿ ಸರಕಾರಗಳ ನೆರವಿನಿಂದ ಬಿಜೆಪಿ ಅಧಿಕಾರದಲ್ಲಿದೆ.

ಇದೇ ಸಮಯದಲ್ಲಿ ಕಾಂಗ್ರೆಸ್‌ ಪಕ್ಷವು ಕರ್ನಾಟಕ, ಹಿಮಾಚಲ ಪ್ರದೇಶದಲ್ಲಿ ಸರಕಾರ ಹೊಂದಿದೆ ಮತ್ತು ಇದೀಗ ತೆಲಂಗಾಣ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ತೆಲಂಗಾಣದಲ್ಲಿ ಆಡಳಿತರೂಢ ಭಾರತ್‌ ರಾಷ್ಟ್ರ ಸಮಿತಿಯನ್ನು ಸೋಲಿಸಿದೆ.

ಇದೇ ಸಮಯದಲ್ಲಿ ಕಾಂಗ್ರೆಸ್‌ ಪಕ್ಷವು ಬಿಹಾರ ಮತ್ತು ಜಾರ್ಖಾಂಡ್‌ನಲ್ಲಿ ಮಿತ್ರಪಕ್ಷಗಳ ಜತೆ ಸರಕಾರ ನಡೆಸುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿದೆ. ಆದರೆ, ಡಿಎಂಕೆ ಸರಕಾರವು ರಾಜ್ಯ ಸರಕಾರವಾಗಿ ಕಾಂಗ್ರೆಸ್‌ಗೆ ದೊರಕಿಲ್ಲ.

ಇದೇ ಸಮಯದಲ್ಲಿ ಆಮ್‌ ಆದ್ಮಿ ಪಕ್ಷವು ದೇಶದ ಮೂರನೇ ಬೃಹತ್‌ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ ಮೂರು ರಾಜ್ಯಗಳನ್ನು ಹೊಂದಿದರೆ, ಆಮ್‌ ಆದ್ಮಿಯು ಎರಡು ರಾಜ್ಯಗಳಲ್ಲಿ ಸರಕಾರ ನಡೆಸುತ್ತಿದೆ.

ಇಂದಿನ ಫಲಿತಾಂಶದ ಬಳಿಕ ಆಮ್‌ ಆದ್ಮಿ ಪಕ್ಷವು ಉತ್ತರ ಭಾರತದಲ್ಲಿ ಬೃಹತ್‌ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಪಂಜಾಬ್‌ ಮತ್ತು ದೆಹಲಿಯಲ್ಲಿ ಆಮ್‌ ಆದ್ಮಿ ಸರಕಾರವಿದೆ ಎಂದು ಆಪ್‌ ನಾಯಕ ಜಾಸ್ಮಿನ್‌ ಶಾ ಟ್ವೀಟ್‌ ಮಾಡಿದ್ದಾರೆ.

ಸದ್ಯ ಭಾರತದಲ್ಲಿ ಬಿಜೆಪಿ, ಕಾಂಗ್ರೆಸ್‌, ಬಹುಜನ ಸಮಾಜಪಕ್ಷ, ಸಿಪಿಐ (ಎಂ) ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಮತ್ತು ಆಮ್‌ ಆದ್ಮಿ ಪಕ್ಷಗಳು ರಾಷ್ಟ್ರೀಯ ಪಕ್ಷಗಳಾಗಿವೆ.

ಮುಂದಿನ ಸುತ್ತಿನ ವಿಧಾನಸಭಾ ಚುನಾವಣೆಗಳು 2014ರಲ್ಲಿ ನಡೆಯಲಿವೆ. ಸಿಕ್ಕಿಂ, ಅರುಣಾಚಲ ಪ್ರದೇಶ, ಒಡಿಸ್ಸಾ ಮತ್ತು ಆಂಧ್ರಪ್ರದೇಶಗಳಲ್ಲಿ ಮುಂಬರುವ ತಿಂಗಳುಗಳಲ್ಲಿ ಜುನಾವಣೆ ನಡೆಲಿವೆ. ಜಮ್ಮು ಮತ್ತು ಕಾಶ್ಮೀರದಲ್ಲೂ ವಿಧಾನಸಭೆ ಚುನಾವಣೆ ನಡೆಯುವುದು ಬಾಕಿ ಉಳಿದಿದೆ.

ಮುಂದಿನ ವರ್ಷ ಲೋಕ ಸಭೆ ಚುನಾವಣೆ ನಡೆಯುವುದರಿಂದ ಈ ರಾಜ್ಯಗಳ ಚುನಾವಣೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ಚುನಾವಣೆಗಳನ್ನು ಲೋಕ ಸಭೆ ಚುನಾವಣೆಯ ಸೆಮಿ ಫೈನಲ್‌ ಎಂದೇ ಪರಿಗಣಿಸಲಾಗುತ್ತಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ