logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bizarre News: ಪರೀಕ್ಷಾ ಕೊಠಡಿಯಲ್ಲಿ 50 ವಿದ್ಯಾರ್ಥಿನಿಯರು, ಒಬ್ಬ ವಿದ್ಯಾರ್ಥಿ; ಚಕ್ಕರ್‌ ಬಂದು ಆಸ್ಪತ್ರೆ ಸೇರಿದ ಹುಡುಗ...

Bizarre News: ಪರೀಕ್ಷಾ ಕೊಠಡಿಯಲ್ಲಿ 50 ವಿದ್ಯಾರ್ಥಿನಿಯರು, ಒಬ್ಬ ವಿದ್ಯಾರ್ಥಿ; ಚಕ್ಕರ್‌ ಬಂದು ಆಸ್ಪತ್ರೆ ಸೇರಿದ ಹುಡುಗ...

HT Kannada Desk HT Kannada

Feb 02, 2023 10:21 AM IST

ಆಘಾತಕ್ಕೆ ಒಳಗಾದ ಬಾಲಕ (ಮುಖ ಮರೆಮಾಚಲಾಗಿದೆ. ಬಾಲಕನ ಹೆಸರನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿಲ್ಲ)

  • Bizarre News: ಬಿಹಾರದ ಪರೀಕ್ಷಾ ಕೊಠಡಿಯಲ್ಲಿ 50 ಬಾಲಕಿಯರು, ಒಬ್ಬ ಬಾಲಕ. ಪರೀಕ್ಷಾ ಕೊಠಡಿ ಪ್ರವೇಶಿಸಿದಾಗ, ತಾನೊಬ್ಬನೇ ಅಲ್ಲಿ ಬಾಲಕ ಎಂಬುದು ಅರಿವಾಗಿ, ಚಕ್ಕರ್‌ ಬಂದು ಬಿಟ್ಟ ಆತ… 

ಆಘಾತಕ್ಕೆ ಒಳಗಾದ ಬಾಲಕ (ಮುಖ ಮರೆಮಾಚಲಾಗಿದೆ. ಬಾಲಕನ ಹೆಸರನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿಲ್ಲ)
ಆಘಾತಕ್ಕೆ ಒಳಗಾದ ಬಾಲಕ (ಮುಖ ಮರೆಮಾಚಲಾಗಿದೆ. ಬಾಲಕನ ಹೆಸರನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿಲ್ಲ) (ANI)

ನಲಂದಾ: ಹದಿಹರೆಯದಲ್ಲಿ ಹೊಂಗನಸುಗಳು ಸಹಜ. ಮನಸ್ಸಿನ ಭಾವನೆಗಳು ಬಹಳ ಸೂಕ್ಷ್ಮವಾಗಿರುತ್ತವೆ. ಅದರಲ್ಲೂ ಹದಿಹರೆಯದಲ್ಲಿ ಹುಡುಗರಿಗೆ ಹುಡುಗಿಯರನ್ನು ಕಂಡಾಗ, ಹುಡುಗಿಯರಿಗೆ ಹುಡುಗರನ್ನು ಕಂಡಾಗ ಉಂಟಾಗುವ ಭಾವನಾ ವ್ಯತ್ಯಾಸಗಳು ಸೂಕ್ಷ್ಮವಾದವು. ಅಂತಹ ಸನ್ನಿವೇಶದಲ್ಲಿ ಒಂದು ಪರೀಕ್ಷಾ ಕೊಠಡಿಯಲ್ಲಿ 50 ವಿದ್ಯಾರ್ಥಿನಿಯರು, ಅವರ ನಡುವೆ ಒಬ್ಬನೇ ಒಬ್ಬ ವಿದ್ಯಾರ್ಥಿ!

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಬಿಹಾರದಿಂದ ವರದಿಯಾದ ಒಂದು ವಿಲಕ್ಷಣ ಸುದ್ದಿ ಇದು. ಬಿಹಾರದಲ್ಲಿ 12ನೇ ತರಗತಿ ಪರೀಕ್ಷೆ ನಡೆಯುತ್ತಿದೆ. ಬಿಹಾರ್‌ ಶರೀಫ್‌ನ ಅಲ್ಲಮ ಇಕ್ಬಾಲ್‌ ಕಾಲೇಜ್‌ನ ಬಾಲಕನೊಬ್ಬ ಬ್ರಿಲಿಯಂಟ್‌ ಸ್ಕೂಲ್‌ನಲ್ಲಿದ್ದ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ತೆರಳಿದ್ದ. ಅಲ್ಲಿಗೆ ಹೋಗಿ ಪರೀಕ್ಷಾ ಕೊಠಡಿಗೆ ಪ್ರವೇಶಿಸಿದ. ಸುತ್ತಲೂ ನೋಡಿದ. ಎಲ್ಲಿ ತಿರುಗಿ ನೋಡಿದರೂ ಹುಡುಗಿಯರಷ್ಟೇ ಕಾಣುತ್ತಿದ್ದಾರೆ.

ಸಿಕ್ಕಾಪಟ್ಟೆ ನರ್ವಸ್‌ ಆದ ಹುಡುಗನಿಗೆ ಚಕ್ಕರ್‌ ಬಂತು. ಕೂಡಲೇ ಅಲ್ಲೇ ಬಿದ್ದುಬಿಟ್ಟ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಿರೀಕ್ಷಿತ ಬೆಳವಣಿಗೆ ಕಾರಣ ನರ್ವಸ್‌ ಆಗಿ, ಜ್ವರ ಕೂಡ ಬಂದಿದೆ. ಬಾಲಕ ಸರ್ದಾರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ. ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆ ಬಾಲಕನ ಸಂಬಂಧಿಯೊಬ್ಬರು ತಿಳಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಬದುಕಿನಲ್ಲಿ ಕೆಲವೊಮ್ಮೆ ನಡೆಯುವ ಅನಿರೀಕ್ಷಿತ ಘಟನೆಗಳು ಮೈಯಲ್ಲಿ ನಡುಕ ಹುಟ್ಟಿಸಿಬಿಡುತ್ತವೆ. ಹದಿಹರೆಯದಲ್ಲಿ ಈ ರೀತಿ ಘಟನೆ ಆದಾಗ, ಅವು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಡುವ ಅಪಾಯವೂ ಇದೆ.

ಈ ರೀತಿ ಘಟನೆಗಳಾದಾಗ ಸಾಧ್ಯವಾದಷ್ಟು ಮಾಡಬೇಕಾದ್ದು ಏನು?

  1. ಬದುಕಿನಲ್ಲಿ ಇಂತಹ ಘಟನೆಗಳಾದಾಗ ಆ ಜಾಗದಲ್ಲಿ ನಾವು ಇದ್ದರೆ ಏನಾಗುತ್ತಿತ್ತು ಎಂಬುದನ್ನು ಆಲೋಚಿಸಬೇಕು.
  2. ಅವರ ಫೋಟೋ, ವಿಡಿಯೋ ಶೂಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಬಾರದು. ಅದು ಅವರ ಮನಸ್ಸಿನ ಮೇಲೆ ಇನ್ನಷ್ಟು ಕೆಟ್ಟ ಪರಿಣಾಮ ಬೀರಬಹುದು.
  3. ಇಂತಹ ಸನ್ನಿವೇಶ ಎದುರಾದಾಗ ಕುಟುಂಬದವರು, ಸ್ನೇಹಿತರು, ಹಿತೈಷಿಗಳು ಯಾರೂ ಫೋಟೋ, ವಿಡಿಯೋ ಮಾಡದಂತೆ ಜಾಗ್ರತೆ ವಹಿಸಬೇಕು. ಯಾರಾದರೂ ಆ ಕೆಲಸಕ್ಕೆ ಇಳಿದರೆ ಅವರಿಗೆ ಅದನ್ನು ಮನವರಿಕೆ ಮಾಡಿಕೊಡಬೇಕು.
  4. ಘಟನೆಯಿಂದ ಆಘಾತಕ್ಕೆ ಒಳಗಾದವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕೇ ಹೊರತು, ಅವರನ್ನು ಲೇವಡಿ ಮಾಡಿಯೋ ಅಥವಾ ಗೇಲಿ ಮಾಡಿಯೋ ಅಥವಾ ಇನ್ಯಾವುದೇ ರೀತಿಯಲ್ಲೂ ಇನ್ನಷ್ಟು ಎದೆಗುಂದಿಸಬಾರದು.
  5. ಹದಿಹರೆಯದ ಸಮಸ್ಯೆಗಳನ್ನು ಮನಗಂಡು ವೈದ್ಯಕೀಯ ಪರಿಣತರ ಮಾರ್ಗದರ್ಶನ ಪಡೆದು ಅವರನ್ನು ಗುಣಮುಖರನ್ನಾಗಿಸಬೇಕು. ಸಮಾಜದಲ್ಲಿ ಒಬ್ಬರಾಗಿ ಬದುಕುವುದಕ್ಕೆ, ಪ್ರಗತಿ ಸಾಧಿಸುವುದಕ್ಕೆ ಅವಕಾಶ ಮಾಡಿಕೊಡಬೇಕು. ಇದು ಅವರ ಕುಟುಂಬದವರಷ್ಟೇ ಅಲ್ಲ, ಈ ಬಗ್ಗೆ ಅರಿವು ಇರುವ ಸಮಾಜದ ಪ್ರತಿಯೊಬ್ಬರೂ ಮಾಡಬೇಕಾದ ಕೆಲಸ.
  6. ಇಂದು ಬಿಹಾರದಲ್ಲಿ ಆದ ಘಟನೆ, ನಮ್ಮ ಸುತ್ತಮುತ್ತ ನಡೆಯಬಹುದು. ಶಾಲಾ ಹಂತದಲ್ಲಿ ಈ ವಿಚಾರವಾಗಿ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು. ಆಗ ಅದರ ವಿಡಿಯೋ, ಫೋಟೋ ತೆಗೆದು ವೈರಲ್‌ ಮಾಡದೇ, ಸಂತ್ರಸ್ತರಿಗೆ ಬದುಕಿನಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಸೋಷಿಯಲ್‌ ಮೀಡಿಯಾ ಪ್ರವರ್ಧಮಾನದಲ್ಲಿರುವ ಈ ಕಾಲದಲ್ಲಿ ಇದು ತುರ್ತು ಆಗಬೇಕಾದ ಕೆಲಸವಾಗಿದೆ.

ಗಮನಿಸಬಹುದಾದ ಸುದ್ದಿ

ಖರೀದಿ ಒಪ್ಪಂದದ ಪ್ರಸ್ತಾವನೆಯಲ್ಲಿ ಉಲ್ಲೇಖವಾಗಿರುವ 30 MQ-9B ಪ್ರಿಡೇಟರ್‌ ಸಶಸ್ತ್ರ ಡ್ರೋನ್‌ಗಳು (ಭೂ, ನೌಕಾ ಮತ್ತು ವಾಯು ಪಡೆಗಳಿಗೆ ತಲಾ 10 ಡ್ರೋನ್‌ಗಳು) ಭಾರತದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಅಗತ್ಯಗಳ ಪ್ರಮುಖ ಭಾಗವಾಗಿರಲಿದೆ. ವಿವರ ವರದಿ ಇಲ್ಲಿದೆ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು