logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bomb Threat Call: ಬಳ್ಳಾರಿ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್‌ ಎಂದು ಹುಸಿ ಬೆದರಿಕೆ; ಸಿಕಂದರಾಬಾದ್‌ ಸ್ಟೇಷನ್‌ನಲ್ಲಿ ಗೊಂದಲ- ಒಬ್ಬನ ಬಂಧನ

Bomb threat call: ಬಳ್ಳಾರಿ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್‌ ಎಂದು ಹುಸಿ ಬೆದರಿಕೆ; ಸಿಕಂದರಾಬಾದ್‌ ಸ್ಟೇಷನ್‌ನಲ್ಲಿ ಗೊಂದಲ- ಒಬ್ಬನ ಬಂಧನ

HT Kannada Desk HT Kannada

Feb 23, 2023 11:41 AM IST

google News

ಸಿಕಂದರಾಬಾದ್‌ನಲ್ಲಿ ಬಳ್ಳಾರಿ ಎಕ್ಸ್‌ಪ್ರೆಸ್‌ ರೈಲನ್ನು ಪರಿಶೋಧಿಸಿದ ರೈಲ್ವೆ ಪೊಲೀಸರು.

  • Bomb threat call: ಬಳ್ಳಾರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ ಕಾರಣ ಸಿಕಂದರಾಬಾದ್‌ ರೈಲ್ವೆ ಸ್ಟೇಷನ್‌ನಲ್ಲಿಗೊಂದಲ ಉಂಟಾಗಿತ್ತು. ಈ ಸಂಬಂಧ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 

ಸಿಕಂದರಾಬಾದ್‌ನಲ್ಲಿ ಬಳ್ಳಾರಿ ಎಕ್ಸ್‌ಪ್ರೆಸ್‌ ರೈಲನ್ನು ಪರಿಶೋಧಿಸಿದ ರೈಲ್ವೆ ಪೊಲೀಸರು.
ಸಿಕಂದರಾಬಾದ್‌ನಲ್ಲಿ ಬಳ್ಳಾರಿ ಎಕ್ಸ್‌ಪ್ರೆಸ್‌ ರೈಲನ್ನು ಪರಿಶೋಧಿಸಿದ ರೈಲ್ವೆ ಪೊಲೀಸರು. (ANI)

ಹೈದರಾಬಾದ್‌: ಬಳ್ಳಾರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್‌ ಇದೆ ಎಂಬ ಬೆದರಿಕೆ ಕರೆ ಬಂದ ಕಾರಣ ನಿನ್ನೆ ರಾತ್ರಿ ಸಿಕಂದರಾಬಾದ್‌ ರೈಲ್ವೆ ನಿಲ್ದಾಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸಿಕಂದರಾಬಾದ್‌ ರೈಲ್ವೇ ಪೊಲೀಸರಿಗೆ ದೂರವಾಣಿ ಕರೆ ಬಂದಿತ್ತು. ಕೂಡಲೇ ಅವರು ಸಕ್ರಿಯರಾಗಿ ಬಳ್ಳಾರಿ ಎಕ್ಸ್‌ಪ್ರೆಸ್‌ ರೈಲನ್ನು ಸಂಪೂರ್ಣವಾಗಿ ಮತ್ತು ಕೂಲಂಕಷವಾಗಿ ಪರಿಶೋಧಿಸಿದ್ದರು. ಏನೂ ಪತ್ತೆ ಆಗದೇ ಇದ್ದಾಗ ಅದು ಹುಸಿ ಬಾಂಬ್‌ ಕರೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದರು.

ಕರೆ ಮಾಡಿದವರ ಪತ್ತೆಗೆ ಶೋಧ ನಡೆಸಿದ ಪೊಲೀಸರು ಒಬ್ಬ ವ್ಯಕ್ತಿಯನ್ನು ಕೂಡಲೇ ಬಂಧಿಸಿದ್ದಾರೆ. ವಿಚಾರಣೆ ಪ್ರಗತಿಯಲ್ಲಿದೆ ಎಂದು ಸಿಕಂದರಾಬಾದ್‌ ಜಿಆರ್‌ಪಿಯ ಎಸ್‌ಪಿ ಅನುರಾಧಾ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಗಮನಿಸಬಹುದಾದ ಸುದ್ದಿ

ಇಂದು ಬಳ್ಳಾರಿಗೆ ಬಿಜೆಪಿ ಚಾಣಕ್ಯನ ಆಗಮನ; ನಾಳೆ ಬೆಂಗಳೂರಿನಲ್ಲಿ ಹಿರಿಯ ನಾಯಕರೊಂದಿಗೆ 'ಶಾ' ಚುನಾವಣಾ ಸರಣಿ ಸಭೆ

ಇಂದು ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವ ಅಮಿತ್ ಶಾ, ಚುನಾವಣಾ ಸಿದ್ಧತೆಗಳ ಕುರಿತು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಹಿರಿಯ ಪದಾಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

CR Kesavan exits Congress: ಭಾರತದ ಮೊದಲ ಗವರ್ನರ್ ಜನರಲ್ ಸಿ.ರಾಜಗೋಪಾಲಾಚಾರಿ ಅವರ ಮರಿ ಮೊಮ್ಮಗ ಸಿ.ಆರ್.ಕೇಶವನ್ ಕಾಂಗ್ರೆಸ್‌ ಬಿಟ್ರಂತೆ...

CR Kesavan exits Congress: ಭಾರತದ ಮೊದಲ ಗವರ್ನರ್ ಜನರಲ್ ಸಿ.ರಾಜಗೋಪಾಲಾಚಾರಿ ಅವರ ಮರಿ ಮೊಮ್ಮಗ ಸಿ.ಆರ್.ಕೇಶವನ್ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಕೊಟ್ಟರು. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಸಿ.ಆರ್. ಕೇಶವನ್ ಅವರು, ಎರಡು ದಶಕಗಳಿಂದ ಪಕ್ಷಕ್ಕಾಗಿ ದುಡಿಯಲು ಕಾರಣವಾದ ಯಾವುದೇ "ಮೌಲ್ಯದ ಕುರುಹು" ಈಗ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ಯಾಕೆ ಏನು ವಿವರ ಇಲ್ಲಿದೆ.

Gold Price Today February 23: ಚಿನ್ನ ಖರೀದಿಗೆ ಹೊರಟ್ರಾ..? ಚಿನ್ನದ ರೇಟ್‌ ಸ್ಥಿರ, ಬೆಳ್ಳಿ ಸ್ವಲ್ಪ ಹೆಚ್ಚಾಗಿದೆ ನೋಡಿ..

ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಅದು ಆಭರಣಕ್ಕೂ ಸೈ, ಆಪದ್ಧನವಾಗಿಯೂ ಸೈ. ಹೀಗಾಗಿ ಚಿನ್ನಾಭರಣ ಪ್ರಿಯರು ನಿತ್ಯವೂ ಚಿನ್ನ, ಬೆಳ್ಳಿ ರೇಟ್‌ ಗಮನಿಸುವುದು ಸಹಜ. ಚಿನ್ನದ ಬೆಲೆಯ ಏರಿಳಿತವು ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳನ್ನು ಅವಲಂಬಿಸಿದ್ದು, ಅವುಗಳೇ ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಆದಾಗ್ಯೂ, ನಮ್ಮ ದೇಶದಲ್ಲಿ ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಚಿನ್ನದ ದರ ಸತತ ಇಳಿಕೆ ನಂತರ ಈ ದಿನ ಸ್ಥಿರವಾಗಿದೆ. ಇದು ಚಿನ್ನ ಖರೀದಿಸುವವರ ಪಾಲಿಗೆ ಪೂರಕ ವಿದ್ಯಮಾನ. ಬೆಳ್ಳಿಯ ದರ ನಿನ್ನೆ ಸ್ಥಿರವಾಗಿತ್ತು. ಇಂದು 300 ರೂಪಾಯಿ ಹೆಚ್ಚಾಗಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ