logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಚಿನ್ನ-ಬೆಳ್ಳಿ ದರ ತಟಸ್ಥ: ನಿಮ್ಮ ನಗರದಲ್ಲಿ ಇಂದು ಗೋಲ್ಡ್​ ರೇಟ್​ ಎಷ್ಟಿದೆ ತಿಳಿಯಿರಿ

Gold Rate Today: ಚಿನ್ನ-ಬೆಳ್ಳಿ ದರ ತಟಸ್ಥ: ನಿಮ್ಮ ನಗರದಲ್ಲಿ ಇಂದು ಗೋಲ್ಡ್​ ರೇಟ್​ ಎಷ್ಟಿದೆ ತಿಳಿಯಿರಿ

HT Kannada Desk HT Kannada

Dec 18, 2023 06:00 AM IST

ಚಿನ್ನಾಭರಣ ದರ (ಸಾಂದರ್ಭಿಕ ಚಿತ್ರ)

    • Gold and Silver Rate December 18: ಮುಂದಿನ ದಿನಗಳಲ್ಲಿ ಮದುವೆ, ನಾಮಕರಣ ಇತ್ಯಾದಿ ಶುಭ ಕಾರ್ಯಕಾರ್ಯಕ್ರಮಗಳು ನಿಗದಿಯಾಗಿರಬಹುದು. ಇಂತಹ ಸಮಯದಲ್ಲಿ ಉಡುಗೊರೆ ನೀಡಲು, ಸ್ವಂತ ಬಳಕೆಗೆ ಚಿನ್ನಾಭರಣಗಳನ್ನು ಖರೀದಿಸಲು ಇಂದು ಚಿನಿವಾರ ಪೇಟೆಗೆ ತೆರಳುವವರು ಚಿನ್ನ-ಬೆಳ್ಳಿ ದರ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
ಚಿನ್ನಾಭರಣ ದರ (ಸಾಂದರ್ಭಿಕ ಚಿತ್ರ)
ಚಿನ್ನಾಭರಣ ದರ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಸೋಮವಾರ ಚಿನ್ನ-ಬೆಳ್ಳಿ ಖರೀದಿಗೆ ಹೋಗುವವರು ಇಲ್ಲೊಮ್ಮೆ ಗಮನಿಸಿ. ನಿನ್ನೆಗೆ (ಡಿ 17 ಭಾನುವಾರ) ಹೋಲಿಸಿದರೆ ಇಂದು (ಡಿ 18) ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸದ್ಯ ಬೆಲೆ ಏರಿಕೆಯಾಗಿಲ್ಲ ಎಂಬುದೇ ತೃಪ್ತಿಕರ. ಕಳೆದ ಕೆಲವು ದಿನಗಳಿಂದ ಬೆಳ್ಳಿ ದರ ಕೂಡ ಇಳಿಕೆಯಾಗುತ್ತಾ ಬಂದಿತ್ತು. ಆದರೆ ಇಂದು ಮತ್ತೆ ಇಳಿಕೆ ಕಂಡಿಲ್ಲ. ನಿನ್ನೆಯಷ್ಟೇ ಇದೆ. ಹಾಗಾದ್ರೆ ಬನ್ನಿ ಬೆಂಗಳೂರು ಸೇರಿದಂತೆ ಕರ್ನಾಟಕ ಹಾಗೂ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ದರ ಎಷ್ಟಿದೆ ನೋಡೋಣ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

22 ಕ್ಯಾರೆಟ್‌ ಚಿನ್ನದ ದರ

ಇಂದು 1 ಗ್ರಾಂ ಚಿನ್ನದ ಬೆಲೆ 5,730 ಆಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 45,840 ರೂ. ನೀಡಬೇಕು. ಇಂದಿನ 10 ಗ್ರಾಂ ಚಿನ್ನದ ಬೆಲೆ 57,300 ರೂ. ಇದೆ. 100 ಗ್ರಾಂ ಚಿನ್ನದ ಬೆಲೆ 5,73,000 ರೂ. ಇದೆ.

24 ಕ್ಯಾರೆಟ್‌ ಚಿನ್ನದ ದರ

1 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ ಇಂದು 6,251 ರೂ ಇದೆ. 8 ಗ್ರಾಂ ಚಿನ್ನಕ್ಕೆ ಇಂದು 50,008 ರೂ ಇದೆ. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 62,510 ರೂ. ಕೊಡಬೇಕು. 100 ಗ್ರಾಂ ಚಿನ್ನದ ದರ 6,25,100 ರೂ ಇದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ ಗೆ 57,300 ರೂ ಇದ್ದರೆ, 24 ಕ್ಯಾರೆಟ್‌ಗೆ 62,510 ರೂ. ಇದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರರಾಜ್ಯಗಳಲ್ಲಿ ಚಿನ್ನದ ದರ

22 ಕ್ಯಾರೆಟ್‌ ಚಿನ್ನದ ದರ: 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಚೆನ್ನೈನಲ್ಲಿ 57,900 ರೂ., ಮುಂಬೈನಲ್ಲಿ 57,300 ರೂ., ದೆಹಲಿಯಲ್ಲಿ 57,450 ರೂ., ಕೋಲ್ಕತಾದಲ್ಲಿ 57,300 ರೂ., ಹೈದರಾಬಾದ್‌ 57,300 ರೂ., ಕೇರಳ 57,300 ರೂ., ಪುಣೆ 57,300 ರೂ., ಅಹಮದಾಬಾದ್‌ 57,350 ರೂ., ಜೈಪುರ 57,450 ರೂ., ಲಖನೌ 57,450 ರೂ., ಕೊಯಮತ್ತೂರು 57,900 ರೂ., ಮಧುರೈ 57,450 ರೂ. ಹಾಗೂ ವಿಜಯವಾಡದಲ್ಲಿ 57,300 ರೂ. ಇದೆ.

24 ಕ್ಯಾರೆಟ್‌ ಚಿನ್ನದ ದರ: 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಚೆನ್ನೈನಲ್ಲಿ 63,160 ರೂ., ಮುಂಬೈನಲ್ಲಿ 62,510 ರೂ., ದೆಹಲಿಯಲ್ಲಿ 62,660 ರೂ., ಕೋಲ್ಕತಾದಲ್ಲಿ 62,510 ರೂ., ಹೈದರಾಬಾದ್‌ 62,510 ರೂ., ಕೇರಳ 62,510 ರೂ., ಪುಣೆ 62,510 ರೂ., ಅಹಮದಾಬಾದ್‌ 62,560 ರೂ., ಜೈಪುರ 62,660 ರೂ., ಲಖನೌ 63,660 ರೂ., ಕೊಯಮತ್ತೂರು 63,160 ರೂ., ಮದುರೈ 63,160 ರೂ., ವಿಜಯವಾಡ 62,510 ರೂ. ಇದೆ.

ಬೆಳ್ಳಿ ದರ

1ಗ್ರಾಂ ಬೆಳ್ಳಿಗೆ 75.50 ರೂ., ಇದೆ. 8ಗ್ರಾಂ ಬೆಳ್ಳಿ ಕೊಳ್ಳುವುದಾದರೆ 604 ರೂ. ನೀಡಬೇಕು. 10ಗ್ರಾಂ ಬೆಳ್ಳಿ ಖರೀದಿ ಮಾಡುವುದಾದರೆ ಇಂದು 755 ರೂ. ನೀಡಬೇಕು. 100 ಗ್ರಾಂ ಬೆಳ್ಳಿಗೆ ಇಂದು 7,550 ರೂ ಆಗಿದೆ. ಇಂದು 1 ಕೆಜಿ ಬೆಳ್ಳಿ ದರ 75,500 ರೂ., ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ