logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ: ಭಾನುವಾರ ಗೋಲ್ಡ್​ ರೇಟ್​ ಎಷ್ಟಿದೆ ತಿಳಿಯಿರಿ

Gold Rate Today: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ: ಭಾನುವಾರ ಗೋಲ್ಡ್​ ರೇಟ್​ ಎಷ್ಟಿದೆ ತಿಳಿಯಿರಿ

Meghana B HT Kannada

Jan 14, 2024 06:00 AM IST

ಚಿನ್ನಾಭರಣ ದರ (ಸಾಂದರ್ಭಿಕ ಚಿತ್ರ)

    • Gold and Silver Rate January 14: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಬಂದಿದೆ. ಆದರೆ ಹಬ್ಬಕ್ಕೂ ಮುನ್ನಾದಿನ ಚಿನ್ನದ ದರ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮದುವೆ, ನಾಮಕರಣ ಇತ್ಯಾದಿ ಶುಭ ಕಾರ್ಯಕಾರ್ಯಕ್ರಮಗಳು ನಿಗದಿಯಾಗಿರಬಹುದು. ಇದಕ್ಕೆಂದು ಚಿನಿವಾರ ಪೇಟೆಗೆ ತೆರಳುವವರು ಇಂದು ಚಿನ್ನ-ಬೆಳ್ಳಿ ದರ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
ಚಿನ್ನಾಭರಣ ದರ (ಸಾಂದರ್ಭಿಕ ಚಿತ್ರ)
ಚಿನ್ನಾಭರಣ ದರ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಭಾನುವಾರ ಚಿನ್ನ-ಬೆಳ್ಳಿ ಖರೀದಿಗೆ ಹೋಗುವವರು ಇಲ್ಲೊಮ್ಮೆ ಗಮನಿಸಿ. ನಿನ್ನೆಗೆ (ಜನವರಿ 13, ಶನಿವಾರ) ಹೋಲಿಸಿದರೆ ಇಂದು (ಜನವರಿ 14, ಭಾನುವಾರ) ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆಯಾಗಿದೆ. ಆದರೆ ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ. 4-5 ದಿನಗಳಿಂದಲೂ ಇಳಿಕೆ ಕಂಡ ಚಿನ್ನದ ದರ ಶನಿವಾರ ದಿಢೀರನೆ ಹೆಚ್ಚಾಗಿತ್ತು. ಇಂದೂ ಕೂಡ ಏರಿಕೆ ಕ್ರಮದಲ್ಲಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇತರ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ..

22 ಕ್ಯಾರೆಟ್‌ ಚಿನ್ನದ ದರ

1 gram: ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,800 ರೂ. ಆಗಿದೆ. ನಿನ್ನೆ 5,770 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 30 ರೂ. ಏರಿಕೆಯಾಗಿದೆ.

8 gram: ಇಂದಿನ 8 ಗ್ರಾಂ ಚಿನ್ನದ ಬೆಲೆ 46,400 ರೂ ಇದೆ. ನಿನ್ನೆ 46,160 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 240 ರೂ. ಜಾಸ್ತಿಯಾಗಿದೆ.

10 gram: ಹತ್ತು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 58,000 ರೂ. ನೀಡಬೇಕು. ನಿನ್ನೆ 57,700 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 300 ರೂ. ಏರಿಕೆಯಾಗಿದೆ.

100 gram: ನೂರು ಗ್ರಾಂ ಚಿನ್ನಕ್ಕೆ 5,80,000 ರೂ. ಆಗಿದೆ. ನಿನ್ನೆ 5,77,000 ರೂ, ಇದು ಈ ದರಕ್ಕೆ ಹೋಲಿಸಿದರೆ ಇಂದು 3,000 ರೂ. ಜಾಸ್ತಿಯಾಗಿದೆ.

24 ಕ್ಯಾರೆಟ್‌ ಗೋಲ್ಡ್‌ ದರ

1 gram: ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6,327 ರೂ. ಆಗಿದೆ. ನಿನ್ನೆ 6,295 ರೂ. ಇದ್ದು ಇಂದು 32 ರೂ. ಏರಿಕೆಯಾಗಿದೆ.

8 gram: ಇಂದು 8 ಗ್ರಾಂ ಚಿನ್ನ ಖರೀದಿಸುವುದಾದರೆ 50,616 ರೂ., ನೀಡಬೇಕು. ನಿನ್ನೆ ಈ ದರ 50,360 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 256 ರೂ. ಜಾಸ್ತಿಯಾಗಿದೆ.

10 gram: ಹತ್ತು ಗ್ರಾಂ ಚಿನ್ನದ ದರ ಇಂದು 63,270 ರೂ. ಆಗಿದೆ. ನಿನ್ನೆ 62,950 ರೂ, ಇತ್ತು, ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 320 ರೂ. ಏರಿಕೆಯಾಗಿದೆ.

100 gram: ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 6,32,700 ರೂ. ನೀಡಬೇಕು. ನಿನ್ನೆ 6,29,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 3,200 ರೂ. ಜಾಸ್ತಿಯಾಗಿದೆ.

ಬೆಳ್ಳಿ ದರವೆಷ್ಟು?

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದು ಒಂದು ಗ್ರಾಂ ಬೆಳ್ಳಿ ದರ 73.25 ರೂ. ಇದೆ. ಒಂದು ಕೆ.ಜಿ. ಬೆಳ್ಳಿ ದರ 73,500 ರೂ. ಇದೆ. ಒಂದು ಗ್ರಾಂ ಬೆಳ್ಳಿ ಮೇಲೆ ಇಂದು 25 ಪೈಸೆ ಕಡಿಮೆಯಾಗಿದೆ.

ಆಭರಣ ಖರೀದಿಸುವಾಗ ಹಲವು ಶುಲ್ಕಗಳು, ಮಜೂರಿ ಇತ್ಯಾದಿಗಳಿಂದ ದರದಲ್ಲಿ ಏರುಪೇರು ಇರಬಹುದು. ಚಿನ್ನದ ದರ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ವ್ಯತ್ಯಾಸ ಇರಬಹುದು. ಹೀಗಾಗಿ, ಹೆಚ್ಚು ನಂಬಿಕಸ್ಥವೆನಿಸುವ ಚಿನ್ನದಂಗಡಿಗೆ ಹೋಗಿ ಉತ್ತಮ ದರ್ಜೆಯ ಚಿನ್ನ ಅಥವಾ ಬೆಳ್ಳಿ ಖರೀದಿಸಿ. ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ