logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಇಂದು ಚಿನ್ನ-ಬೆಳ್ಳಿ ದರ ತಟಸ್ಥ: ಸಂಕ್ರಾಂತಿಯಂದು ಗೋಲ್ಡ್​ ರೇಟ್​ ಇಷ್ಟಿದೆ ನೋಡಿ

Gold Rate Today: ಇಂದು ಚಿನ್ನ-ಬೆಳ್ಳಿ ದರ ತಟಸ್ಥ: ಸಂಕ್ರಾಂತಿಯಂದು ಗೋಲ್ಡ್​ ರೇಟ್​ ಇಷ್ಟಿದೆ ನೋಡಿ

Meghana B HT Kannada

Jan 15, 2024 06:00 AM IST

ಚಿನ್ನಾಭರಣ ದರ

    • Gold and Silver Rate January 15: ಇಂದು ಮಕರ ಸಂಕ್ರಾಂತಿ ಹಬ್ಬ. ಈ ಶುಭದಿನದಂದು ಚಿನ್ನಾಭರಣಗಳನ್ನು ಖರೀದಿಸಲು ಇಂದು ಚಿನಿವಾರ ಪೇಟೆಗೆ ತೆರಳುವವರು ಚಿನ್ನ-ಬೆಳ್ಳಿ ದರ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
ಚಿನ್ನಾಭರಣ ದರ
ಚಿನ್ನಾಭರಣ ದರ

ಬೆಂಗಳೂರು: ಇಂದು ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಈ ಶುಭ ಸೋಮವಾರ ಚಿನ್ನ-ಬೆಳ್ಳಿ ಖರೀದಿಗೆ ಹೋಗುವವರು ಇಲ್ಲೊಮ್ಮೆ ಗಮನಿಸಿ. ನಿನ್ನೆಗೆ (ಜನವರಿ 14, ಭಾನುವಾರ) ಹೋಲಿಸಿದರೆ ಇಂದು (ಜನವರಿ 15, ಸೋಮವಾರ) ಚಿನ್ನ ಮತ್ತು ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ 2 ದಿನಗಳಿಂದ ಚಿನ್ನದ ಬೆಲೆ ಹೆಚ್ಚಾಗಿತ್ತು. ಆದರೆ ಇಂದು ಏರಿಕೆಯಾಗಿಲ್ಲವಲ್ಲ ಎಂದು ತುಸು ಸಮಾಧಾನ ಎನಿಸಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇತರ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ..

22 ಕ್ಯಾರೆಟ್‌ ಚಿನ್ನದ ದರ

1 gram: ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,800 ರೂ. ಆಗಿದೆ. ನಿನ್ನೆ ಕೂಡ ಇಷ್ಟೇ ಇತ್ತು. ಮೊನ್ನೆ 5,770 ರೂ. ಇತ್ತು.

8 gram: ಇಂದಿನ 8 ಗ್ರಾಂ ಚಿನ್ನದ ಬೆಲೆ 46,400 ರೂ ಇದೆ. ಮೊನ್ನೆ 46,160 ರೂ ಇತ್ತು.

10 gram: ಹತ್ತು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 58,000 ರೂ. ನೀಡಬೇಕು. ಮೊನ್ನೆ ಇದರ ಬೆಲೆ 57,700 ರೂ ಇತ್ತು.

100 gram: ನೂರು ಗ್ರಾಂ ಚಿನ್ನಕ್ಕೆ 5,80,000 ರೂ. ಆಗಿದೆ. ಮೊನ್ನೆ 5,77,000 ರೂ. ಇತ್ತು.

24 ಕ್ಯಾರೆಟ್‌ ಗೋಲ್ಡ್‌ ದರ

1 gram: ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6,327 ರೂ. ಆಗಿದೆ. ನಿನ್ನೆ ಕೂಡ ಇಷ್ಟೇ ಇತ್ತು. ಮೊನ್ನೆ 6,295 ರೂ. ಇತ್ತು.

8 gram: ಇಂದು 8 ಗ್ರಾಂ ಚಿನ್ನ ಖರೀದಿಸುವುದಾದರೆ 50,616 ರೂ., ನೀಡಬೇಕು. ಮೊನ್ನೆ ಇದರ ದರ 50,360 ರೂ. ಇತ್ತು.

10 gram: ಹತ್ತು ಗ್ರಾಂ ಚಿನ್ನದ ದರ ಇಂದು 63,270 ರೂ. ಆಗಿದೆ. ಮೊನ್ನೆ 62,950 ರೂ, ಇತ್ತು.

100 gram: ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 6,32,700 ರೂ. ನೀಡಬೇಕು. ಮೊನ್ನೆ 6,29,500 ರೂ ಇತ್ತು.

ಬೆಳ್ಳಿ ದರವೆಷ್ಟು?

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದು ಒಂದು ಗ್ರಾಂ ಬೆಳ್ಳಿ ದರ 73.25 ರೂ. ಇದೆ. ನಿನ್ನೆ ಕೂಡ ಇಷ್ಟೇ ಇತ್ತು. ಒಂದು ಕೆ.ಜಿ. ಬೆಳ್ಳಿ ದರ 73,500 ರೂ. ಇದೆ.

ಆಭರಣ ಖರೀದಿಸುವಾಗ ಹಲವು ಶುಲ್ಕಗಳು, ಮಜೂರಿ ಇತ್ಯಾದಿಗಳಿಂದ ದರದಲ್ಲಿ ಏರುಪೇರು ಇರಬಹುದು. ಚಿನ್ನದ ದರ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ವ್ಯತ್ಯಾಸ ಇರಬಹುದು. ಹೀಗಾಗಿ, ಹೆಚ್ಚು ನಂಬಿಕಸ್ಥವೆನಿಸುವ ಚಿನ್ನದಂಗಡಿಗೆ ಹೋಗಿ ಉತ್ತಮ ದರ್ಜೆಯ ಚಿನ್ನ ಅಥವಾ ಬೆಳ್ಳಿ ಖರೀದಿಸಿ. ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ