logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಇಂದೂ ಕೂಡ ಚಿನ್ನ-ಬೆಳ್ಳಿ ದರ ತಟಸ್ಥ: ಹೊಸ ವರ್ಷದಂದು ನಿಮ್ಮ ನಗರಗಳಲ್ಲಿ ಬೆಲೆ ಹೀಗಿದೆ

Gold Rate Today: ಇಂದೂ ಕೂಡ ಚಿನ್ನ-ಬೆಳ್ಳಿ ದರ ತಟಸ್ಥ: ಹೊಸ ವರ್ಷದಂದು ನಿಮ್ಮ ನಗರಗಳಲ್ಲಿ ಬೆಲೆ ಹೀಗಿದೆ

Meghana B HT Kannada

Jan 01, 2024 06:00 AM IST

ಚಿನ್ನಾಭರಣ ದರ (ಸಾಂದರ್ಭಿಕ ಚಿತ್ರ)

    • Gold and Silver Rate January 1st: ಹೊಸ ವರ್ಷ ಬಂದಿದೆ. ಮುಂದಿನ ದಿನಗಳಲ್ಲಿ ಮದುವೆ, ನಾಮಕರಣ ಇತ್ಯಾದಿ ಶುಭ ಕಾರ್ಯಕಾರ್ಯಕ್ರಮಗಳು ನಿಗದಿಯಾಗಿರಬಹುದು. ಇಂತಹ ಸಮಯದಲ್ಲಿ ಉಡುಗೊರೆ ನೀಡಲು, ಸ್ವಂತ ಬಳಕೆಗೆ ಚಿನ್ನಾಭರಣಗಳನ್ನು ಖರೀದಿಸಲು ಇಂದು ಚಿನಿವಾರ ಪೇಟೆಗೆ ತೆರಳುವವರು ಚಿನ್ನ-ಬೆಳ್ಳಿ ದರ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
ಚಿನ್ನಾಭರಣ ದರ (ಸಾಂದರ್ಭಿಕ ಚಿತ್ರ)
ಚಿನ್ನಾಭರಣ ದರ (ಸಾಂದರ್ಭಿಕ ಚಿತ್ರ)

ಬೆಂಗಳೂರು: 2023ಕ್ಕೆ ವಿದಾಯ ಹೇಳಿ ಆಯಿತು. ಇಂದಿನಿಂದ ಹೊಸ ವರ್ಷ, ಹೊಸ ಆರಂಭ. 2023ರಲ್ಲಿ ಚಿನ್ನಾಭರಣ ಖರೀದಿ ಮಾಡಬೇಕೆಂದುಕೊಂಡ ಎಷ್ಟೋ ಮಂದಿಗೆ ಖರೀದಿಸಲು ಆಗದೇ ಹೋಗಿರಬಹುದು. ಬೇಸರಪಡಬೇಡಿ. 2024 ನಿಮಗಾಗಿ ಕಾದಿದೆ. ಕಳೆದ 2 ದಿನಗಳಿಂದ ಚಿನ್ನ-ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೊಸ ವರ್ಷದ ದಿನವಾದ ಇಂದು ನಿಮ್ಮ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ ತಿಳಿಯಿರಿ..

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

22 ಕ್ಯಾರೆಟ್‌ ಚಿನ್ನದ ದರ

ಇಂದು 1 ಗ್ರಾಂ ಚಿನ್ನದ ಬೆಲೆ 5,855 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,840 ರೂ. ನೀಡಬೇಕು. ಇಂದಿನ 10 ಗ್ರಾಂ ಚಿನ್ನದ ಬೆಲೆ 58,550 ಆಗಿದ್ದರೆ, 100 ಗ್ರಾಂ ಚಿನ್ನದ ಬೆಲೆ 5,85,500 ರೂ. ಇದೆ.

24 ಕ್ಯಾರೆಟ್‌ ಚಿನ್ನದ ದರ

1 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ ಇಂದು 6,387 ರೂ ಇದೆ. 8 ಗ್ರಾಂ ಚಿನ್ನಕ್ಕೆ ಇಂದು 51,096 ರೂ ನೀಡಬೇಕು. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,870 ರೂ. ಕೊಡಬೇಕು. 100 ಗ್ರಾಂ ಚಿನ್ನದ ದರ 6,38,700 ರೂ ಇದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ ಗೆ 58,550 ರೂ ಇದ್ದರೆ, 24 ಕ್ಯಾರೆಟ್‌ಗೆ 63,870 ರೂ. ಇದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರರಾಜ್ಯಗಳಲ್ಲಿ ಚಿನ್ನದ ದರ

22 ಕ್ಯಾರೆಟ್‌ ಚಿನ್ನದ ದರ: 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಚೆನ್ನೈನಲ್ಲಿ 59,100 ರೂ., ಮುಂಬೈನಲ್ಲಿ 58,550 ರೂ., ದೆಹಲಿಯಲ್ಲಿ 58,700 ರೂ., ಕೋಲ್ಕತಾದಲ್ಲಿ 58,550 ರೂ., ಹೈದರಾಬಾದ್‌ 58,550 ರೂ., ಕೇರಳ 58,550 ರೂ., ಪುಣೆ 58,550 ರೂ., ಅಹಮದಾಬಾದ್‌ 58,600 ರೂ., ಜೈಪುರ 58,700 ರೂ., ಲಖನೌ 58,700 ರೂ., ಕೊಯಮತ್ತೂರು 59,100 ರೂ., ಮಧುರೈ 59,100 ರೂ. ಹಾಗೂ ವಿಜಯವಾಡದಲ್ಲಿ 58,550 ರೂ. ಇದೆ.

24 ಕ್ಯಾರೆಟ್‌ ಚಿನ್ನದ ದರ: 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಚೆನ್ನೈನಲ್ಲಿ 64,470 ರೂ., ಮುಂಬೈನಲ್ಲಿ 63,870 ರೂ., ದೆಹಲಿಯಲ್ಲಿ 63,970 ರೂ., ಕೋಲ್ಕತಾದಲ್ಲಿ 63,970 ರೂ., ಹೈದರಾಬಾದ್‌ 63,870 ರೂ., ಕೇರಳ 63,870 ರೂ., ಪುಣೆ 63,870 ರೂ., ಅಹಮದಾಬಾದ್‌ 63,300 ರೂ., ಜೈಪುರ 63,920 ರೂ., ಲಖನೌ 63,970 ರೂ., ಕೊಯಮತ್ತೂರು 64,470 ರೂ., ಮದುರೈ 64,470 ರೂ., ವಿಜಯವಾಡ 63,870 ರೂ. ಇದೆ.

ಬೆಳ್ಳಿ ದರ

ದೇಶದಲ್ಲಿ ಇಂದು ಬೆಳ್ಳಿ ದರ ಸ್ಥಿರವಾಗಿದೆ. 1ಗ್ರಾಂ ಬೆಳ್ಳಿಗೆ 76.75 ರೂ., ಇದೆ. 8ಗ್ರಾಂ ಬೆಳ್ಳಿ ಕೊಳ್ಳುವುದಾದರೆ 614 ರೂ. ನೀಡಬೇಕು. 10ಗ್ರಾಂ ಬೆಳ್ಳಿ ಖರೀದಿ ಮಾಡುವುದಾದರೆ ಇಂದು 767.50 ರೂ. ನೀಡಬೇಕು. 100 ಗ್ರಾಂ ಬೆಳ್ಳಿಗೆ ಇಂದು 7,675 ರೂ ಆಗಿದೆ. ಇಂದು 1 ಕೆಜಿ ಬೆಳ್ಳಿ ದರ 76,750 ರೂ., ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ