logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: 4 ದಿನಗಳಿಂದ ತಟಸ್ಥವಾಗಿದ್ದ ಚಿನ್ನ ಇಳಿಕೆ, ಬೆಳ್ಳಿಯೂ ಕಡಿಮೆ; ಇಂದಿನ ಗೋಲ್ಡ್‌ ರೇಟ್‌ ಹೀಗಿದೆ

Gold Rate: 4 ದಿನಗಳಿಂದ ತಟಸ್ಥವಾಗಿದ್ದ ಚಿನ್ನ ಇಳಿಕೆ, ಬೆಳ್ಳಿಯೂ ಕಡಿಮೆ; ಇಂದಿನ ಗೋಲ್ಡ್‌ ರೇಟ್‌ ಹೀಗಿದೆ

Rakshitha Sowmya HT Kannada

Jan 25, 2024 06:00 AM IST

ಜ 25ರ ಚಿನ್ನ, ಬೆಳ್ಳಿ ಬೆಲೆ

  • ಚಿನ್ನ ಹಾಗೂ ಬೆಳ್ಳಿ ಇಂದು (ಜ 25) ಇಳಿಕೆ ಕಂಡಿದೆ. ನಿನ್ನೆಗೆ ಹೋಲಿಸಿದರೆ ಚಿನ್ನದ ಬೆಲೆ ಗ್ರಾಂಗೆ 5 ರೂ. ಕಡಿಮೆ ಆಗಿದ್ದು, ಬೆಳ್ಳಿ 25 ಪೈಸೆ ಕಡಿಮೆ ಆಗಿದೆ. ಕಳೆದ 4 ದಿನಗಳಿಂದ ಚಿನ್ನದ ಬೆಲೆ ತಟಸ್ಥವಾಗಿತ್ತು.

ಜ 25ರ ಚಿನ್ನ, ಬೆಳ್ಳಿ ಬೆಲೆ
ಜ 25ರ ಚಿನ್ನ, ಬೆಳ್ಳಿ ಬೆಲೆ

Gold Rate: ದೇಶದಲ್ಲಿ ಚಿನ್ನದ ಬೆಲೆ ಕಳೆದ 4 ದಿನಗಳಿಂದ ತಟಸ್ಥವಾಗಿತ್ತು. ಇಂದು ( ಜ 25) ರಂದು ಚಿನ್ನದ ದರ ಇಳಿದಿದೆ. ಚಿನ್ನ ಮಾತ್ರವಲ್ಲದೆ ಬೆಳ್ಳಿ ಬೆಲೆಯೂ ಕಡಿಮೆ ಆಗಿದೆ. ಇದು ಆಭರಣಪ್ರಿಯರಿಗೆ ಖುಷಿ ನೀಡಿದೆ. ಇಂದು ರಾಜ್ಯ, ಹೊರ ರಾಜ್ಯಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ ನೋಡೋಣ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 5,775 ಇದೆ, ನಿನ್ನೆ ಇದರ ಬೆಲೆ 5,780 ರೂ ಇತ್ತು. 8 ಗ್ರಾಂಗೆ 46,200 ರೂ. ಬೆಲೆ ಇದೆ. ನಿನ್ನೆ ಇದರ ಬೆಲೆ 46,240 ರೂ ಇತ್ತು. ಹಾಗೇ 10 ಗ್ರಾಂಗೆ ಇಂದು 57,750 ರೂ. 100 ಗ್ರಾಂಗೆ 5,77,500 ಬೆಲೆ ಫಿಕ್ಸ್‌ ಆಗಿದೆ. ನಿನ್ನೆಗೆ ಹೋಲಿಸಿದರೆ 10 ಗ್ರಾಂಗೆ 50 ರೂ. ಇಳಿಕೆ ಆಗಿದೆ.

24 ಕ್ಯಾರೆಟ್‌ ಚಿನ್ನದ ದರ

ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 6,300 ಇದೆ, ನಿನ್ನೆ ಇದರ ಬೆಲೆ 6,305 ರೂ ಇತ್ತು. 8 ಗ್ರಾಂಗೆ 50,400 ರೂ. ಬೆಲೆ ಇದೆ. ನಿನ್ನೆ ಇದರ ಬೆಲೆ 50,440 ರೂ ಇತ್ತು. ಹಾಗೇ 10 ಗ್ರಾಂಗೆ ಇಂದು 63,000 ರೂ. 100 ಗ್ರಾಂಗೆ 6,30,000 ಬೆಲೆ ಫಿಕ್ಸ್‌ ಆಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ (10 ಗ್ರಾಂಗೆ)

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್‌ ಚಿನ್ನಕ್ಕೆ 57,750 ರೂ. 24 ಕ್ಯಾರೆಟ್‌ಗೆ 63,000 ರೂ. ಬೆಲೆ ನಿಗದಿ ಆಗಿದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂಗೆ)

ಚೆನ್ನೈನಲ್ಲಿ 22 ಕ್ಯಾರೆಟ್‌ಗೆ ರೂ. ಹಾಗೂ 24 ಕ್ಯಾರೆಟ್‌ಗೆ 58,350 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ಗೆ 57,750ರೂ. ಹಾಗೂ 24 ಕ್ಯಾರೆಟ್‌ಗೆ 63,000 ರೂ. ದೆಹಲಿಯಲ್ಲಿ 22 ಕ್ಯಾರೆಟ್‌ಗೆ 57,900 ರೂ. ಹಾಗೂ 24 ಕ್ಯಾರೆಟ್‌ಗೆ 63,150 ರೂ. ಕೊಲ್ಕೊತ್ತಾದಲ್ಲಿ 22 ಕ್ಯಾರೆಟ್‌ಗೆ 57,750 ರೂ. ಹಾಗೂ 24 ಕ್ಯಾರೆಟ್‌ಗೆ 63,000 ರೂ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ಗೆ 57,750 ರೂ. ಹಾಗೂ 24 ಕ್ಯಾರೆಟ್‌ಗೆ 63,000 ರೂ. , ಕೇರಳದಲ್ಲಿ 22 ಕ್ಯಾರೆಟ್‌ಗೆ 57,750 ರೂ. ಹಾಗೂ 24 ಕ್ಯಾರೆಟ್‌ಗೆ 63,000 ರೂ. , ಪುಣೆಯಲ್ಲಿ 22 ಕ್ಯಾರೆಟ್‌ಗೆ 57,750 ರೂ. ಹಾಗೂ 24 ಕ್ಯಾರೆಟ್‌ಗೆ 63,000 ರೂ. , ಅಹಮದಾಬಾದ್‌ನಲ್ಲಿ 22 ಕ್ಯಾರೆಟ್‌ಗೆ 57,800 ರೂ. ಹಾಗೂ 24 ಕ್ಯಾರೆಟ್‌ಗೆ 63,050 ರೂ. ಬೆಲೆ ಇದೆ.

ಬೆಳ್ಳಿ ದರ

ಬುಧವಾರ ಬೆಳ್ಳಿ ಬೆಲೆ 73 ರೂ ಇತ್ತು. ಇಂದು 25 ಪೈಸೆ ಇಳಿಕೆಯಾಗಿದೆ. ಅದರ ಪ್ರಕಾರ 1 ಗ್ರಾಂ ಬೆಳ್ಳಿಗೆ 72.75 ರೂ. 8 ಗ್ರಾಂ ಬೆಳ್ಳಿಗೆ 582 ರೂ. 10 ಗ್ರಾಂ ಬೆಳ್ಳಿಗೆ 727 ರೂ. 100 ಗ್ರಾಂ ಬೆಳ್ಳಿಗೆ 7,275 ರೂ. ಹಾಗೂ 1 ಕಿಲೋ ಬೆಳ್ಳಿಗೆ 72,750 ರೂ. ನಿಗದಿ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ