logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ವಾರಾಂತ್ಯದಲ್ಲಿ ಏರಿಕೆಯಾಯ್ತು ಬಂಗಾರ, ಚಿನ್ನದಂಗಡಿಗೆ ಹೋಗುವ ಮುನ್ನ ಯೋಚಿಸಿ; ಇಂದಿನ ದರ ಹೀಗಿದೆ

Gold Rate: ವಾರಾಂತ್ಯದಲ್ಲಿ ಏರಿಕೆಯಾಯ್ತು ಬಂಗಾರ, ಚಿನ್ನದಂಗಡಿಗೆ ಹೋಗುವ ಮುನ್ನ ಯೋಚಿಸಿ; ಇಂದಿನ ದರ ಹೀಗಿದೆ

Rakshitha Sowmya HT Kannada

Jan 27, 2024 06:00 AM IST

ಜ 27ರ ಚಿನ್ನ, ಬೆಳ್ಳಿಯ ಬೆಲೆ

  • Gold Rate: ಗುರುವಾರ, ಶುಕ್ರವಾರ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು (ಜ 27) ಹೆಚ್ಚಾಗಿದೆ. 1 ಗ್ರಾಂ ಚಿನ್ನಕ್ಕೆ 10 ರೂ. ಹೆಚ್ಚಾದರೆ, ಗ್ರಾಂ ಬೆಳ್ಳಿ 75 ಪೈಸೆ ಏರಿಕೆ ಆಗಿದೆ. ವಿವಿಧ ಸ್ಥಳಗಳಲ್ಲಿ ಇಂದಿನ ಬೆಳ್ಳಿ, ಬಂಗಾರದ ಬೆಲೆ ಈ ರೀತಿ ಇದೆ.

ಜ 27ರ ಚಿನ್ನ, ಬೆಳ್ಳಿಯ ಬೆಲೆ
ಜ 27ರ ಚಿನ್ನ, ಬೆಳ್ಳಿಯ ಬೆಲೆ

ಬೆಂಗಳೂರು: ಈ ವಾರ ಸತತ 4 ದಿನಗಳು ತಟಸ್ಥವಾಗಿದ್ದು ನಂತರ ಇಳಿಕೆ ಕಂಡಿದ್ದ ಚಿನ್ನ ಇಂದು (ಜ 27)ಕ್ಕೆ ಏರಿಕೆ ಕಂಡಿದೆ. ಚಿನ್ನದ ಜೊತೆಗೆ ಬೆಳ್ಳಿ ಕೂಡಾ ಏರಿದೆ. ಇಂದು ರಾಜ್ಯದ ಪ್ರಮುಖ ನಗರಗಳು ಹಾಗೂ ಹೊರ ರಾಜ್ಯಗಳಲ್ಲಿ 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ ಹೇಗಿದೆ ನೋಡೋಣ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

22 ಕ್ಯಾರೆಟ್‌ ಚಿನ್ನದ ಬೆಲೆ

1 ಗ್ರಾಂ ಚಿನ್ನಕ್ಕೆ 10 ರೂ. ಏರಿಕೆ ಆಗಿದೆ. ಅದರಂತೆ ಇಂದು 1 ಗ್ರಾಂ ಚಿನ್ನಕ್ಕೆ 5,780 ರೂ. ಬೆಕೆ ಇದೆ. ನಿನ್ನೆ ಬೆಲೆ 5,770 ರೂ. ಇತ್ತು. ಹಾಗೇ 8 ಗ್ರಾಂ ಚಿನ್ನಕ್ಕೆ 46,240 ರೂ. ಬೆಲೆ ಇದೆ. ನಿನ್ನೆ 46,160 ರೂ ಇತ್ತು. 10 ಗ್ರಾಂ ಚಿನ್ನಕ್ಕೆ 57,800 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 5,78,000 ರೂ ಬೆಲೆ ನಿಗದಿ ಆಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 6,305 ರೂ. ನಿಗದಿ ಆಗಿದೆ. ನಿನ್ನೆ ಗ್ರಾಂಗೆ 6,295 ರೂ. ಬೆಲೆ ಇತ್ತು. ಅದರಂತೆ 8 ಗ್ರಾಂಗೆ 50,440 ರೂ. 10 ಗ್ರಾಂಗೆ 63,050 ರೂ ಹಾಗೂ 100 ಗ್ರಾಂಗೆ 6,30,500 ರೂ. ದರ ಇದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,800 ರೂ. ಹಾಗೂ ಬೆಳ್ಳಿಯ ಬೆಲೆ 63,050 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 58,400 ರೂ. 24 ಕ್ಯಾರೆಟ್‌ಗೆ 63,710 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,800 ರೂ. 24 ಕ್ಯಾರೆಟ್‌ಗೆ 63,050 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,950 ರೂ. 24 ಕ್ಯಾರೆಟ್‌ಗೆ 63,200 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,800 ರೂ. 24 ಕ್ಯಾರೆಟ್‌ಗೆ 63,050 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,800 ರೂ. 24 ಕ್ಯಾರೆಟ್‌ಗೆ 63,050 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,800 ರೂ. 24 ಕ್ಯಾರೆಟ್‌ಗೆ 63,050 ರೂ. ಇದೆ.

ಬೆಳ್ಳಿ ದರ

ಇಂದು ಬೆಳ್ಳಿ ಗ್ರಾಂಗೆ 75 ಪೈಸೆ ಏರಿಕೆ ಆಗಿದೆ. ನಿನ್ನೆ ಒಂದು ಗ್ರಾಂ ಬೆಳ್ಳಿಗೆ 72.75 ರೂ. ಇತ್ತು ಇಂದು 73.50 ರೂ. ಆಗಿದೆ. 8 ಗ್ರಾಂಗೆ 588 ರೂ. 10 ಗ್ರಾಂಗೆ 735 ರೂ. 100 ಗ್ರಾಂಗೆ 7,350 ರೂ. ಹಾಗೂ 1 ಕಿಲೋಗೆ 73,500 ರೂ. ಬೆಲೆ ನಿಗದಿ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ