logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಇಂದು ಚಿನ್ನ, ಬೆಳ್ಳಿ ಎರಡರ ದರದಲ್ಲೂ ಏರಿಕೆ; ಆಭರಣ ಖರೀದಿಸುವ ಮುನ್ನ ಬೆಲೆ ಗಮನಿಸಿ

Gold Rate: ಇಂದು ಚಿನ್ನ, ಬೆಳ್ಳಿ ಎರಡರ ದರದಲ್ಲೂ ಏರಿಕೆ; ಆಭರಣ ಖರೀದಿಸುವ ಮುನ್ನ ಬೆಲೆ ಗಮನಿಸಿ

HT Kannada Desk HT Kannada

Dec 28, 2023 06:00 AM IST

google News

ಡಿ 28ರ ಚಿನ್ನ , ಬೆಳ್ಳಿ ಬೆಲೆ

  • Gold Rate: ಇಂದು ಚಿನ್ನ ಹಾಗೂ ಬೆಳ್ಳಿ ದರ ಎರಡೂ ಏರಿಕೆಯಾಗಿದೆ. ಒಂದಿಷ್ಟು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ದರ, ವರ್ಷಾಂತ್ಯದಲ್ಲಿ ಏರಿಕೆಯತ್ತ ಸಾಗುತ್ತಿದೆ. ಇಂದು 10 ಗ್ರಾಂ ಚಿನ್ನದ ಮೇಲೆ 100 ಹೆಚ್ಚಾಗಿದ್ದರೆ, 1 ಕೆಜಿ ಬೆಳ್ಳಿ ಮೇಲೆ 250 ರೂ ಜಾಸ್ತಿ ಆಗಿದೆ.

ಡಿ 28ರ ಚಿನ್ನ , ಬೆಳ್ಳಿ ಬೆಲೆ
ಡಿ 28ರ ಚಿನ್ನ , ಬೆಳ್ಳಿ ಬೆಲೆ

ಬೆಂಗಳೂರು: ಚಿನ್ನದ ದರ ಮತ್ತೆ ಏರಿಕೆಯಾಗುತ್ತಿದ್ದು ಆಭರಣ ಪ್ರಿಯರನ್ನು ನಿರಾಸೆ ಕಾಡುತ್ತಿದೆ. ವರ್ಷಾಂತ್ಯದಲ್ಲಿ ಚಿನ್ನ, ಬೆಳ್ಳಿ ಖರೀದಿ ಮಾಡಬೇಕು ಎಂದುಕೊಳ್ಳುವವರಿಗೆ ಈ ಬೆಲೆ ಏರಿಕೆ ಬೇಸರ ಮೂಡಿಸುವುದು ಸುಳ್ಳಲ್ಲ. ಇಂದು ದೇಶದ ಎಲ್ಲಾ ರಾಜ್ಯಗಳಲ್ಲೂ ಚಿನ್ನ, ಬೆಳ್ಳಿ ಬೆಲೆ ಹೆಚ್ಚಾಗಿದೆ. ಹಾಗಾದರೆ ಇಂದು ರಾಜ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗಮನಿಸಿ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ದರ

ಇಂದು 1 ಗ್ರಾಂ ಚಿನ್ನದ ಬೆಲೆ 5,850 ರೂ. ಇದೆ. ನಿನ್ನೆ 5,840 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 10 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,800 ರೂ. ನೀಡಬೇಕು. ನಿನ್ನೆ 46,720 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 80 ರೂ. ಏರಿಕೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ಬೆಲೆ 58,500 ಆಗಿದ್ದರೆ, ನಿನ್ನೆ 58,400 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 100 ರೂ. ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ 5,85,000 ರೂ. ಇದೆ. ನಿನ್ನೆ 5,84,000 ರೂ. ಇದ್ದು 1,000 ಏರಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ದರ

1 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ ಇಂದು 6,382 ರೂ ಇದೆ. ನಿನ್ನೆ 6,371 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 11 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನಕ್ಕೆ ಇಂದು 51,056 ರೂ ನೀಡಬೇಕು. ನಿನ್ನೆ 50,968 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 88 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,820 ರೂ. ಕೊಡಬೇಕು. ನಿನ್ನೆ 63,710 ರೂ. ಇತ್ತು, ನಿನ್ನೆಗಿಂತ ಇಂದು 110 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 6,38,200 ರೂ ಇದೆ. ನಿನ್ನೆ 6,37,100 ರೂ. ಇದೆ. ಈ ದರಕ್ಕೆ ಹೋಲಿಸಿದರೆ 1,100 ರೂ. ಹೆಚ್ಚಾಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ ಗೆ 58,500 ರೂ ಇದ್ದರೆ, 24 ಕ್ಯಾರೆಟ್‌ಗೆ 63,820 ರೂ. ಇದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ

22 ಕ್ಯಾರೆಟ್‌ ಚಿನ್ನದ ದರ: 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಚೆನ್ನೈನಲ್ಲಿ 59,000 ರೂ., ಮುಂಬೈನಲ್ಲಿ 58,500 ರೂ., ದೆಹಲಿಯಲ್ಲಿ 58,650 ರೂ., ಕೋಲ್ಕತಾದಲ್ಲಿ 58,500 ರೂ., ಹೈದರಾಬಾದ್‌ 58,500 ರೂ., ಕೇರಳ 58,500 ರೂ., ಪುಣೆ 58,500 ರೂ., ಅಹಮದಾಬಾದ್‌ 58,550 ರೂ., ಜೈಪುರ 58,650 ರೂ., ಲಖನೌ 58,650 ರೂ., ಕೊಯಮತ್ತೂರು 59,000 ರೂ., ಮಧುರೈ 59,000 ರೂ. ಹಾಗೂ ವಿಜಯವಾಡದಲ್ಲಿ 58,500 ರೂ. ಇದೆ.

24 ಕ್ಯಾರೆಟ್‌ ಚಿನ್ನದ ದರ: 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಚೆನ್ನೈನಲ್ಲಿ 64,360 ರೂ., ಮುಂಬೈನಲ್ಲಿ 63,820 ರೂ., ದೆಹಲಿಯಲ್ಲಿ 63,960 ರೂ., ಕೋಲ್ಕತಾದಲ್ಲಿ 63,820 ರೂ., ಹೈದರಾಬಾದ್‌ 63,820 ರೂ., ಕೇರಳ 63,820 ರೂ., ಪುಣೆ 63,820 ರೂ., ಅಹಮದಾಬಾದ್‌ 63,860 ರೂ., ಜೈಪುರ 63,960 ರೂ., ಲಖನೌ 63,960 ರೂ., ಕೊಯಮತ್ತೂರು 64,360 ರೂ., ಮದುರೈ 64,360 ರೂ., ವಿಜಯವಾಡ 63,820 ರೂ. ಇದೆ.

ಬೆಳ್ಳಿ ದರ

ದೇಶದಲ್ಲಿ ಇಂದು ಬೆಳ್ಳಿ ದರ ತುಸು ಏರಿಕೆವಾಗಿದೆ. 1ಗ್ರಾಂ ಬೆಳ್ಳಿಗೆ 77 ರೂ., ಇದೆ. 8ಗ್ರಾಂ ಬೆಳ್ಳಿ ಕೊಳ್ಳುವುದಾದರೆ 616 ರೂ. ನೀಡಬೇಕು. 10ಗ್ರಾಂ ಬೆಳ್ಳಿ ಖರೀದಿ ಮಾಡುವುದಾದರೆ ಇಂದು 770 ರೂ. ನೀಡಬೇಕು. 100 ಗ್ರಾಂ ಬೆಳ್ಳಿಗೆ ಇಂದು 7,700 ರೂ ಆಗಿದೆ. ಇಂದು 1 ಕೆಜಿ ಬೆಳ್ಳಿ ದರ 77,000 ರೂ., ಇದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ