logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಇಂದು ಚಿನ್ನ ತಟಸ್ಥ, ಬೆಳ್ಳಿ ಇಳಿಕೆ; ಕರ್ನಾಟಕ, ಹೊರ ರಾಜ್ಯಗಳಲ್ಲಿ ಬಂಗಾರದ ಬೆಲೆ ಹೀಗಿದೆ

Gold Rate: ಇಂದು ಚಿನ್ನ ತಟಸ್ಥ, ಬೆಳ್ಳಿ ಇಳಿಕೆ; ಕರ್ನಾಟಕ, ಹೊರ ರಾಜ್ಯಗಳಲ್ಲಿ ಬಂಗಾರದ ಬೆಲೆ ಹೀಗಿದೆ

HT Kannada Desk HT Kannada

Jan 11, 2024 06:00 AM IST

ಜನವರಿ 11ರ ಚಿನ್ನ, ಬೆಳ್ಳಿ ದರ

  • Gold Rate: ಇಂದು (ಜ 11) ಚಿನ್ನದ ಬೆಲೆ ತಟಸ್ಥವಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ 50 ಪೈಸೆ ಇಳಿಕೆ ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ. 

ಜನವರಿ 11ರ ಚಿನ್ನ, ಬೆಳ್ಳಿ ದರ
ಜನವರಿ 11ರ ಚಿನ್ನ, ಬೆಳ್ಳಿ ದರ

Gold Rate: ಕಳೆದ 3 ದಿನಗಳಿಂದ ಚಿನ್ನ ಹಾಗೂ ಬೆಳ್ಳಿದರ ಸತತವಾಗಿ ಕಡಿಮೆ ಆಗುತ್ತಲೇ ಇದೆ. ಜನವರಿ 9 ರಂದು 10 ಗ್ರಾಂ ಚಿನ್ನದ ಬೆಲೆ 57,800 ರೂ. ಇದ್ದ ಬೆಲೆ ಜನವರಿ 10 ಕ್ಕೆ 57,700 ರೂ. ಇಳಿಕೆ ಆಗಿತ್ತು. ಇಂದು ಚಿನ್ನದ ದರ ತಟಸ್ಥವಾಗಿದ್ದು, ಬೆಳ್ಳಿ ಮತ್ತೆ ಇಳಿಕೆಯಾಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

22 ಕ್ಯಾರೆಟ್‌ ಚಿನ್ನದ ದರ

ಇಂದು (ಜ 11) 1 ಗ್ರಾಂ ಚಿನ್ನಕ್ಕೆ 5,780 ರೂ ಇದೆ. 8 ಗ್ರಾಂ ಚಿನ್ನ ಕೊಳ್ಳುವುದಾದರೆ 46,240ರೂ. 10 ಗ್ರಾಂ ಚಿನ್ನದ ಬೆಲೆ 57,800 ಹಾಗೂ 100 ಗ್ರಾಂ ಚಿನ್ನದ ಬೆಲೆ 5,78,000 ರೂ ನಿಗದಿ ಆಗಿದೆ.

24 ಕ್ಯಾರೆಟ್‌ ಚಿನ್ನದ ದರ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,305 ರೂ. 8 ಗ್ರಾಂಗೆ 50,440 ರೂ, 10 ಗ್ರಾಂಗೆ 63,050 ರೂ. 100 ಗ್ರಾಂಗೆ 6,32,700 ರೂ ಬೆಲೆ ನಿಗದಿ ಆಗಿದೆ. ನಿನ್ನೆಗೂ ಇಂದಿಗೂ ಈ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ರಾಜ್ಯದ ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಹೀಗಿದೆ. 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ ಗೆ 57,800 ರೂ. ಇದ್ದರೆ, 24 ಕ್ಯಾರೆಟ್‌ಗೆ 63,050 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಕೂಡಾ ಇದೇ ಬೆಲೆ ಇರುತ್ತದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ

ಚೆನ್ನೈನಲ್ಲಿ ಇಂದು 22 ಕ್ಯಾರೆಟ್‌ ಚಿನ್ನಕ್ಕೆ 10 ಗ್ರಾಂಗೆ 58,200 ರೂ. 24 ಕ್ಯಾರೆಟ್‌ಗೆ 63,490 ರೂ. ಮುಂಬೈನಲ್ಲಿ 22 ಕ್ಯಾರೆಟ್‌ಗೆ 57,700 ರೂ ಹಾಗೂ 24 ಕ್ಯಾರೆಟ್‌ಗೆ 62,950 ದೆಹಲಿಯಲ್ಲಿ 22 ಕ್ಯಾರೆಟ್‌ಗೆ 57,850 ರೂ ಹಾಗೂ 24 ಕ್ಯಾರೆಟ್‌ಗೆ 63,100 ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನಕ್ಕೆ ರೂ ಹಾಗೂ 24 ಕ್ಯಾರೆಟ್‌ಗೆ 57,700 ರೂ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನಕ್ಕೆ 57,700 24 ಕ್ಯಾರೆಟ್‌ಗೆ 62,950 ರೂ ನಿಗದಿ ಆಗಿದೆ.

ಹೊರ ದೇಶಗಳಲ್ಲಿ ಚಿನ್ನದ ದರ (22 ಕ್ಯಾರೆಟ್‌)

ಬಹ್ರೇನ್‌ನಲ್ಲಿ 10 ಗ್ರಾಂ ಚಿನ್ನಕ್ಕೆ 52,859.76 ರೂ. ಕುವೈತ್‌ನಲ್ಲಿ 53,231.17 ರೂ. ಮಲೇಷ್ಯಾದಲ್ಲಿ 54,198.22 ರೂ. ಒಮನ್‌ನಲ್ಲಿ 53,919.25 ರೂ. ಕತಾರ್‌ನಲ್ಲಿ 53,925.31ರೂ. ಇದೆ.

ಹೊರ ದೇಶಗಳಲ್ಲಿ ಚಿನ್ನದ ದರ (24 ಕ್ಯಾರೆಟ್‌)

ಬಹ್ರೇನ್‌ನಲ್ಲಿ 10 ಗ್ರಾಂ ಚಿನ್ನಕ್ಕೆ 56,163.49 ರೂ. ಕುವೈತ್‌ನಲ್ಲಿ 56,338.58 ರೂ. ಮಲೇಷ್ಯಾದಲ್ಲಿ 56,523.55 ರೂ. ಒಮನ್‌ನಲ್ಲಿ 56,507.37 ರೂ. ಕತಾರ್‌ನಲ್ಲಿ 57,345.52ರೂ. ಇದೆ.

ಇಂದಿನ ಬೆಳ್ಳಿ ದರ ಹೀಗಿದೆ

ಇಂದು ಬೆಳ್ಳಿ ದರ ಗ್ರಾಂಗೆ 50 ಪೈಸೆ ಇಳಿಕೆ ಆಗಿದೆ. 1 ಗ್ರಾಂಗೆ 73.50 ರೂ. 8 ಗ್ರಾಂಗೆ 588 ರೂ. 10 ಗ್ರಾಂಗೆ 735 ರೂ. 100 ಗ್ರಾಂಗೆ 7,350 ರೂ. 1 ಕಿಲೋ ಬೆಳ್ಳಿಗೆ 73,500 ರೂ. ಬೆಲೆ ನಿಗದಿ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ