logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಸಂಕ್ರಾಂತಿ ಹಬ್ಬಕ್ಕೆ ಬಂಗಾರ ಕೊಳ್ಳಲು ರೆಡೀನಾ? ಸತತ 5ನೇ ದಿನವೂ ಕಡಿಮೆ ಆಯ್ತು ಚಿನ್ನ

Gold Rate: ಸಂಕ್ರಾಂತಿ ಹಬ್ಬಕ್ಕೆ ಬಂಗಾರ ಕೊಳ್ಳಲು ರೆಡೀನಾ? ಸತತ 5ನೇ ದಿನವೂ ಕಡಿಮೆ ಆಯ್ತು ಚಿನ್ನ

Rakshitha Sowmya HT Kannada

Jan 12, 2024 06:00 AM IST

ಜನವರಿ 12ರ ಚಿನ್ನ, ಬೆಳ್ಳಿ ದರ

  • Gold Rate Today: ಸಂಕ್ರಾಂತಿ ಹಬ್ಬಕ್ಕೆ ಇನ್ನು 4 ದಿನಗಳು ಬಾಕಿ ಇವೆ. ಹಬ್ಬಕ್ಕೆ ಚಿನ್ನ ಬೆಳ್ಳಿ ಕೊಂಡುಕೊಳ್ಳಬೇಕು ಎಂದುಕೊಂಡಿರುವವರಿಗೆ ಶುಭ ಸುದ್ದಿ, ಚಿನ್ನದ ಬೆಲೆ ಸತತ 5ನೇ ದಿನವೂ ಕಡಿಮೆ ಆಗಿದ್ದರೆ ಬೆಳ್ಳಿ ಬೆಲೆ ತಟಸ್ಥವಾಗಿದೆ.

ಜನವರಿ 12ರ ಚಿನ್ನ, ಬೆಳ್ಳಿ ದರ
ಜನವರಿ 12ರ ಚಿನ್ನ, ಬೆಳ್ಳಿ ದರ

Gold Rate Today: ಚಿನ್ನದ ಬೆಲೆ ಸತತ 5 ದಿನಗಳಿಂದ ಇಳಿಯುತ್ತಲೇ ಇದೆ. ನಿನ್ನೆ ತಟಸ್ಥವಾಗಿದ್ದ ಚಿನ್ನ ಇಂದು ಮತ್ತೆ ಕಡಿಮೆ ಆಗಿದೆ. ಗ್ರಾಂಗೆ 10 ರೂ ಕಡಿಮೆ ಆದರೆ ಬೆಳ್ಳಿ ದರ ತಟಸ್ಥವಾಗಿದೆ. ಕರ್ನಾಟಕ, ಹೊರ ರಾಜ್ಯ, ವಿದೇಶಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನದ ಬೆಲೆ 5,760 ರೂ. ನಿಗದಿ ಆಗಿದ್ದರೆ 8 ಗ್ರಾಂ ಚಿನ್ನದ ಬೆಲೆ 46,080 ರೂ. ಇದೆ. 10 ಗ್ರಾಂ ಚಿನ್ನದ ಬೆಲೆ 57,600 ರೂ. 100 ಗ್ರಾಂ ಚಿನ್ನದ ಬೆಲೆ 5,76,000 ರೂ. ಇದೆ.

24 ಕ್ಯಾರೆಟ್‌ ಚಿನ್ನದ ಬೆಲೆ

ನಿನ್ನೆಗೆ ಹೋಲಿಸಿದರೆ 24 ಕ್ಯಾರೆಟ್‌ ಚಿನ್ನದ ಬೆಲೆ ಇಂದು 12 ರೂಪಾಯಿ ಕಡಿಮೆ ಆಗಿದೆ. ಇಂದು 1 ಗ್ರಾಂ ಚಿನ್ನಕ್ಕೆ 6,283 ರೂ. 8 ಗ್ರಾಂ ಚಿನ್ನದ ಬೆಲೆ 50,264 ರೂ. 10 ಗ್ರಾಂ ಚಿನ್ನದ ಬೆಲೆ 50,264 ರೂ. 10 ಗ್ರಾಂ ಚಿನ್ನದ ಬೆಲೆ 62,830 ರೂ. 100 ಗ್ರಾಂ ಚಿನ್ನದ ಬೆಲೆ 6,28,300 ರೂ ನಿಗದಿ ಆಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ ಗೆ 57,600 ರೂ ಇದ್ದರೆ, 24 ಕ್ಯಾರೆಟ್‌ಗೆ 62,830 ರೂ. ಇದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ಬದಲಾಗಬಹುದು.

ಕಳೆದ 10 ದಿನಗಳಿಂದ ಹೋಲಿಸಿದರೆ ಇಂದಿನ ದರ ಹೀಗಿದೆ

ಕಳೆದ 10 ದಿನಗಳಿಗೆ ಹೋಲಿಸಿದರೆ ಇಂದಿನ ಚಿನ್ನದ ದರ (22 ಕ್ಯಾರೆಟ್‌ಗೆ) 115 ರೂ. ವ್ಯತ್ಯಾಸವಿದೆ. ಜ 2 ರಂದು 1 ಗ್ರಾಂ ಚಿನ್ನದ ಚಿನ್ನದ ಬೆಲೆ 5,875 ರೂ. ಇತ್ತು. ಇಂದು 5,760 ರೂ. ಇದೆ. ಜ 2 ರಂದು 24 ಕ್ಯಾರೆಟ್‌ಗೆ 6,409 ರೂ ಇತ್ತು. ಇಂದು 6,283 ರೂ. ಇದೆ.

ಬೆಳ್ಳಿಯ ದರ

ಗುರುವಾರ 1 ಗ್ರಾಂ ಬೆಳ್ಳಿಗೆ 73.50 ಇತ್ತು. ಇಂದು ಬೆಳ್ಳಿ ದರ ತಟಸ್ಥವಾಗಿದೆ. ಒಂದು ಗ್ರಾಂ ಬೆಳ್ಳಿಗೆ 73.50 ರೂ. 8 ಗ್ರಾಂಗೆ 588 ರೂ. 10 ಗ್ರಾಂಗೆ 735 ರೂ. 100 ಗ್ರಾಂಗೆ 7,350 ರೂ. 1 ಕಿಲೋ ಬೆಳ್ಳಿಗೆ 73,500 ರೂ. ಬೆಲೆ ನಿಗದಿ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ