logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಆಭರಣ ಖರೀದಿಸುವುದಿದ್ದರೆ ಗಮನಿಸಿ, ಮೂರು ಪಟ್ಟು ಹೆಚ್ಚಾಗಿದೆ ಚಿನ್ನದ ದರ; ಶನಿವಾರ ಬೆಳ್ಳಿ ದರ ತುಸು ಇಳಿಕೆ

Gold Rate Today: ಆಭರಣ ಖರೀದಿಸುವುದಿದ್ದರೆ ಗಮನಿಸಿ, ಮೂರು ಪಟ್ಟು ಹೆಚ್ಚಾಗಿದೆ ಚಿನ್ನದ ದರ; ಶನಿವಾರ ಬೆಳ್ಳಿ ದರ ತುಸು ಇಳಿಕೆ

Reshma HT Kannada

Apr 13, 2024 06:00 AM IST

ಏಪ್ರಿಲ್‌ 13ರ ಚಿನ್ನ, ಬೆಳ್ಳಿ ದರ

    • ವಾರಾಂತ್ಯದಲ್ಲಾದರೂ ಚಿನ್ನದ ದರ ಕಡಿಮೆಯಾಗಬಹುದು ಎಂದು ನೀವು ಯೋಚಿಸಿದ್ರೆ ನಿಮಗೆ ಇವತ್ತು ಭಾರಿ ನಿರಾಸೆ ಖಚಿತ. ನಿನ್ನೆಗಿಂತ (ಏಪ್ರಿಲ್‌ 12) ಇಂದು (ಏಪ್ರಿಲ್‌ 13) ಚಿನ್ನದ ದರ ಮೂರು ಪಟ್ಟು ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಮೇಲೆ 10000 ರೂ ಹೆಚ್ಚಾಗಿದೆ. ಇಂದು ಬೆಳ್ಳಿ ದರ ತುಸು ಇಳಿಕೆಯಾಗಿದೆ.
ಏಪ್ರಿಲ್‌ 13ರ ಚಿನ್ನ, ಬೆಳ್ಳಿ ದರ
ಏಪ್ರಿಲ್‌ 13ರ ಚಿನ್ನ, ಬೆಳ್ಳಿ ದರ

ಬೆಂಗಳೂರು: 2024ರಲ್ಲಿ ಚಿನ್ನದ ದರ 74 ಸಾವಿರದ ಗಡಿ ದಾಟುವ ಸಾಧ್ಯತೆ ಇದೆ ಎಂದು ಹೇಳಿದ್ದು ನಿಜವಾಗುವ ಸಾಧ್ಯತೆ ಕಾಣುತ್ತಿದೆ. 24 ಕ್ಯಾರೆಟ್‌ ಚಿನ್ನದ ದರ ಈಗಾಗಲೇ 70 ಸಾವಿರದ ಗಡಿ ದಾಟಿ ಮುನ್ನುಗುತ್ತಿದ್ದರೆ 22 ಕ್ಯಾರೆಟ್‌ ಚಿನ್ನದ ದರವು 70 ಸಾವಿರದ ಅಂಚಿನಲ್ಲಿದೆ. ವಾರಾಂತ್ಯದಲ್ಲಿ ಸಾಮಾನ್ಯವಾಗಿ ರಜೆ ಇರುವ ಕಾರಣಕ್ಕೆ ಜನರು ಆಭರಣ ಮಳಿಗೆಯತ್ತ ಹೋಗುತ್ತಾರೆ. ಆದರೆ ಈ ವಾರಾಂತ್ಯ ಅವರಿಗೆ ಭಾರಿ ನಿರಾಸೆ ಕಾಡುತ್ತದೆ. ಏಕೆಂದರೆ ಇಂದು ಚಿನ್ನದ ದರದಲ್ಲಿ ನಿನ್ನೆಗಿಂತ ಮೂರು ಪಟ್ಟು ಹೆಚ್ಚಾಗಿದೆ. ಕಳೆದೊಂದಿಷ್ಟು ದಿನಗಳಿಂದ ಏರುತ್ತಿದ್ದ ಬೆಳ್ಳಿ ಬೆಲೆ ಇಂದು ಇಳಿಕೆಯಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಚಿನ್ನದ ದರ ಎಷ್ಟಿದೆ ಗಮನಿಸಿ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,720 ರೂ. ಇದೆ. ನಿನ್ನೆ 6,620 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 100 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,760 ರೂ. ನೀಡಬೇಕು. ನಿನ್ನೆ 52,960 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 800 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 67,200 ರೂ ಇದೆ. ನಿನ್ನೆ 66,200 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 1000 ರೂ. ಹೆಚ್ಚಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,72,000 ರೂ. ನೀಡಬೇಕು. ನಿನ್ನೆ 6,62,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 10000 ರೂ. ಏರಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,331 ರೂ. ಇದೆ. ನಿನ್ನೆ 7,222 ರೂ. ಇದು ಈ ದರಕ್ಕೆ ಹೋಲಿಸಿದರೆ 109 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,648 ರೂ. ನೀಡಬೇಕು. ನಿನ್ನೆ 57,766 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 872 ರೂ. ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 73,310 ನೀಡಬೇಕು. ನಿನ್ನೆ 72,220 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 1090 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,33,100 ರೂ. ಇದೆ. ನಿನ್ನೆ 7,22,200 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 10,900 ರೂ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 67,200 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 73,310 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,050 ರೂ. 24 ಕ್ಯಾರೆಟ್‌ಗೆ 74,240 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,200 ರೂ. 24 ಕ್ಯಾರೆಟ್‌ಗೆ 73,310 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,350 ರೂ. 24 ಕ್ಯಾರೆಟ್‌ಗೆ 73,460 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,200 ರೂ. 24 ಕ್ಯಾರೆಟ್‌ಗೆ 73,310 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,200 ರೂ. ಇದ್ದರೆ, 24 ಕ್ಯಾರೆಟ್‌ಗೆ 73,310 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,200 ರೂ. 24 ಕ್ಯಾರೆಟ್‌ಗೆ 73,310 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ತುಸು ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 84.25 ರೂ. ಇದೆ. 8 ಗ್ರಾಂಗೆ 674 ರೂ ಇದ್ದರೆ, 10 ಗ್ರಾಂಗೆ 842.50 ರೂ. ಇದೆ. 100 ಗ್ರಾಂಗೆ 8,425 ರೂ. ಹಾಗೂ 1 ಕಿಲೋಗೆ 84,250 ರೂ. ಬೆಲೆ ನಿಗದಿ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ