logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗೂಗಲ್‌ 12,000 ಉದ್ಯೋಗ ಕಡಿತ ತುಂಬಾ ಕಠಿಣ ನಿರ್ಧಾರವಾಗಿತ್ತು; ಸಿಇಒ ಸುಂದರ್ ಪಿಚೈ

ಗೂಗಲ್‌ 12,000 ಉದ್ಯೋಗ ಕಡಿತ ತುಂಬಾ ಕಠಿಣ ನಿರ್ಧಾರವಾಗಿತ್ತು; ಸಿಇಒ ಸುಂದರ್ ಪಿಚೈ

Raghavendra M Y HT Kannada

Dec 16, 2023 03:53 PM IST

ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ

  • ಗೂಗಲ್ ಸಂಸ್ಥೆ ಇತ್ತೀಚೆಗೆ ನಡೆಸಿರುವ ಆಲ್ ಹ್ಯಾಂಡ್ಸ್ ಮೀಟಿಂಗ್‌ನಲ್ಲಿ 12,000 ಉದ್ಯೋಗ ಕಡಿತ ಮಾಡಿರುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದು ಕಠಿಣ ನಿರ್ಧಾರವಾಗಿತ್ತು ಎಂದು ಸಿಇಒ ಪಿಚೈ ಹೇಳಿದ್ದಾರೆ.

ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ
ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ (AP)

ದೆಹಲಿ: ಜಾಗತಿಕ ಆರ್ಥಿಕ ಹಿಂಜರಿತ ಎದುರಾಗಬಹುದೆಂಬ ಭೀತಿಯಿಂದ ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ಗೂಗಲ್ (Google) 2022 ಡಿಸೆಂಬರ್‌ನಲ್ಲಿ 12,000 ಉದ್ಯೋಗಿಗಳನ್ನು ಏಕಕಾಲಕ್ಕೆ ಕೆಲಸದಿಂದ ವಜಾ ಮಾಡಿತ್ತು. ಇದೀಗ ಈ ನಿರ್ಧಾರದ ಬಗ್ಗೆ ಗೂಗಲ್ ಮತ್ತು ಆಲ್ಫಾಬೆಟ್ ಕಂಪನಿಗಳ ಮುಖ್ಯ ಕಾರ್ಯನಿರ್ವಣಾ ಅಧಿಕಾರಿ-ಸಿಇಒ ಸುಂದರ್ ಪಿಚೈ (Sunder Pichai) ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಇತ್ತೀಚೆಗೆ ನಡೆದಿರುವ ಗೂಗಲ್‌ನ ಆಲ್ ಹ್ಯಾಂಡ್ಸ್ ಮೀಟಿಂಗ್‌ನಲ್ಲಿ ಮುಕ್ತವಾಗಿ ಮಾತಾನಾಡಿರುವ ಪಿಚೈ, 2022ರ ಡಿಸೆಂಬರ್‌ನಲ್ಲಿ ಕಂಪನಿಯಲ್ಲಿ ದೊಡ್ಡ ಮಟ್ಟದ ಉದ್ಯೋಗ ಕಡಿತದ ನಿರ್ಧಾರವನ್ನು ಕೈಗೊಂಡಿದ್ದೆವು. ಈ ನಿರ್ಧಾರದಿಂದ ಏನೆಲ್ಲಾ ಪರಿಣಾಮ ಬೀರಿದೆ ಎಂಬುದು ಗೊತ್ತಿದೆ ಎಂದಿದ್ದಾರೆ.

ಸಂಸ್ಥೆಯ ಬೆಳವಣಿಗೆ ಹಾಗೂ ಆರ್ಥಿಕ ದೃಷ್ಟಿಯಿಂದ ಕಂಪನಿಯಲ್ಲಿ ಅತ್ಯಂತ ಅವಶ್ಯಕವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. 12,000 ಉದ್ಯೋಗಿಗಳು ಅಂದರೆ ಒಟ್ಟಾರೆ ಉದ್ಯೋಗದಲ್ಲಿ ಶೇಕಡಾ 6 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದು ಅತ್ಯಂತ ಕಠಿಣ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ.

ಅಂದು ಉದ್ಯೋಗ ಕಡಿತ ಸಮರ್ಥಿಸಿಕೊಂಡಿದ್ದ ಸುಂದರ್ ಪಿಚೈ

ಬ್ಯುಸಿನೆನಸ್ ಇನ್‌ಸೈಡರ್ ಮಾಹಿತಿ ಪ್ರಕಾರ, ಗೂಗಲ್‌ನ ಆಲ್ ಹ್ಯಾಂಡ್ ಮೀಟಿಂಗ್‌ನಲ್ಲಿ ಸಿಇಒ ಸುಂದರ್ ಪಿಚೈ ಅವರು 2022ರ ಡಿಸೆಂಬರ್‌ 12 ರಂದು ಶೇಕಡಾ 6 ರಷ್ಟು ಉದ್ಯೋಗಿಗಳನ್ನು ವಜಾ ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಆದರೆ ವಜಾಗೊಳಿಸುವ ಪ್ರಕ್ರಿಯೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬಹುದಿತ್ತು ಎಂಬುದನ್ನು ಪಿಚೈ ಅವರ ಇತ್ತೀಚಿನ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ವರದಿ ಮಾಡಿದೆ.

ಉದ್ಯೋಗ ಕಡಿತದ ಬಳಿಕ ಕಂಪನಿಯ ಬೆಳವಣಿಗೆ, ಲಾಭ, ನಷ್ಟ ಹಾಗೂ ಮನೋಬಲದ ಮೇಲೆ ಏನಾದರೂ ಪರಿಣಾಮ ಬೀರಿದಿಯೇ ಎಂದು ಉದ್ಯೋಗಿಯೊಬ್ಬರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಪಿಚೈ, ಉದ್ಯೋಗಿಗಳನ್ನು ವಜಾ ಮಾಡಿರುವುದು ಮನೋಬಲದ ಮೇಲೆ ಭಾರಿ ಪರಿಣಾಮ ಬೀರಿರುವುದು ಸ್ಪಷ್ಟವಾಗಿದೆ. ಅದು ಕಾಮೆಂಟ್‌ಗಳಲ್ಲೂ ಪ್ರತಿಫಲಿಸಿದೆ. ಯಾವುದೇ ಕಂಪನಿಗೆ ಇದು ಕಷ್ಟಕರವಾಗಿದೆ. 25 ವರ್ಷಗಳ ಅವಧಿಯಲ್ಲಿ ಗೂಗಲ್‌ ಸೇವೆಯಲ್ಲಿ ನಿಜವಾಗಿಯೂ ಅಂತಹ ಕ್ಷಣವನ್ನು ಊಹೆ ಕೂಡ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಕೋವಿಡ್ ಬಳಿಕ ಎದುರಾಗಿದ್ದ ಸಮಸ್ಯೆಗಳು, ಆರ್ಥಿಕ ಹಿಂಜರಿತದ ಭೀತಿಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆಗಳಾದ ಆಕ್ಸೆಂಚರ್ 19 ಸಾವಿರ, ಮೈಕ್ರೊಸಾಫ್ಟ್ ಕಂಪನಿ 10 ಸಾವಿರ, ಅಮೆಜಾನ್ 18 ಸಾವಿರ, ಮೆಟಾ 11 ಸಾವಿರ ಉದ್ಯೋಗಿಗಳನ್ನು 2023ರ ಆರಂಭದ ವೇಳೆಗೆ ವಜಾ ಮಾಡಿದ್ದವು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ