logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Startup Jobs: ಭಾರತದ ಸ್ಟಾರ್ಟಪ್‌ಗಳಲ್ಲಿ 27 ಸಾವಿರ ಉದ್ಯೋಗ ಕಡಿತ, ನವೋದ್ಯಮಗಳಲ್ಲಿ ಉದ್ಯೋಗಿಗಳಿಗೆ ಅಭದ್ರತೆಯ ಭಾವ

Startup Jobs: ಭಾರತದ ಸ್ಟಾರ್ಟಪ್‌ಗಳಲ್ಲಿ 27 ಸಾವಿರ ಉದ್ಯೋಗ ಕಡಿತ, ನವೋದ್ಯಮಗಳಲ್ಲಿ ಉದ್ಯೋಗಿಗಳಿಗೆ ಅಭದ್ರತೆಯ ಭಾವ

Praveen Chandra B HT Kannada

May 27, 2023 03:15 PM IST

Startup Jobs: ಭಾರತದ ಸ್ಟಾರ್ಟಪ್‌ಗಳಲ್ಲಿ 27 ಸಾವಿರ ಉದ್ಯೋಗ ಕಡಿತ

    • Startup Job Cut: ಭಾರತದಲ್ಲಿ ಕಳೆದ ವರ್ಷದಿಂದ ಇಲ್ಲಿಯವರೆಗೆ ನವೋದ್ಯಮಗಳಲ್ಲಿ ಉದ್ಯೋಗ ಮಾಡುತ್ತಿರುವ ಸುಮಾರು 27 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. 
Startup Jobs: ಭಾರತದ ಸ್ಟಾರ್ಟಪ್‌ಗಳಲ್ಲಿ 27 ಸಾವಿರ ಉದ್ಯೋಗ ಕಡಿತ
Startup Jobs: ಭಾರತದ ಸ್ಟಾರ್ಟಪ್‌ಗಳಲ್ಲಿ 27 ಸಾವಿರ ಉದ್ಯೋಗ ಕಡಿತ

ಬೆಂಗಳೂರು: ಕಳೆದ ವರ್ಷದಿಂದ ಹೂಡಿಕೆ ಕೊರತೆಯಿಂದ ಸಾಕಷ್ಟು ನವೋದ್ಯಮಗಳು ಪರಿತಪಿಸುತ್ತಿವೆ. ಭಾರತದಲ್ಲಿ ಕಳೆದ ವರ್ಷದಿಂದ ಇಲ್ಲಿಯವರೆಗೆ ನವೋದ್ಯಮಗಳಲ್ಲಿ ಉದ್ಯೋಗ ಮಾಡುತ್ತಿರುವ ಸುಮಾರು 27 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಐಎನ್‌ಎಸ್‌ ವರದಿ ಮಾಡಿದ್ದಾರೆ. ಈ ವರ್ಷ ಇಲ್ಲಿಯವರೆಗೆ ಸುಮಾರು ಎಂಟು ಸಾವಿರ ಸ್ಟಾರ್ಟಪ್‌ ಉದ್ಯೋಗಿಗಳಿಗೆ ಪಿಂಕ್‌ ಸ್ಲೀಪ್‌ ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಉದ್ಯೋಗ ಮಾರುಕಟ್ಟೆಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

98 ಸ್ಟಾರ್ಟಪ್‌ಗಳು ಅಂದಾಜು 27,868 ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡಿವೆ. ಇವುಗಳಲ್ಲಿ ಯೂನಿಕಾರ್ನ್‌ ಸ್ಟಾರ್ಟಪ್‌ಗಳು ಸೇರಿವೆ. ಮುಖ್ಯವಾಗಿ ಎಜುಟೆಕ್‌ ಪ್ರಮುಖ ಸ್ಟಾರ್ಟಪ್‌ಗಳಲ್ಲಿ ಉದ್ಯೋಗ ಕಡಿತ ಉಂಟಾಗಿದೆ ಎಂದು ಸ್ಟಾರ್ಟಪ್‌ ನ್ಯೂಸ್‌ ಪೋರ್ಟಲ್‌ ಐಎನ್‌ಸಿ42 ವರದಿ ಮಾಡಿದೆ. ಸುಮಾರು 22 ಎಜುಟೆಕ್‌ ಸ್ಟಾರ್ಟಪ್‌ಗಳು ಇಲ್ಲಿಯವರೆಗೆ 9,781 ಉದ್ಯೋಗ ಕಡಿತ ಮಾಡಿವೆ.

2023ರ ಮೊದಲ ಐದು ತಿಂಗಳಲ್ಲಿ ಭಾರತದಲ್ಲಿ ಸುಮಾರು 50 ಸ್ಟಾರ್ಟಪ್‌ಗಳಲ್ಲಿ ಕೆಲಸ ಮಾಡುತ್ತಿದ್ದ 8 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಭಾರತದ ವರ್ಚ್ಯುವಲ್‌ ಇವೆಂಟ್‌ ವೇದಿಕೆ ಏರ್‌ಮೀಟ್‌ ತನ್ನ ಉದ್ಯೋಗಿಗಳಲ್ಲಿ ಶೇಕಡ 30ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಅಂದರೆ, ಸುಮಾರು 75 ಉದ್ಯೋಗಿಗಳ ಉದ್ಯೋಗ ಕಡಿತ ಮಾಡಿದೆ.

ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿ ಕಂಪನಿ ಸಿಆರ್‌ಇಡಿ(ಕ್ರೆಡ್‌) ಮಾಲಿಕತ್ವದ Happay ಸಂಸ್ಥೆಯು ಕಾರ್ಪೊರೇಟ್‌ ವೆಚ್ಚ ನಿರ್ವಹಣೆ ಸೇವೆ ನೀಡುತ್ತಿದೆ. ಇದು ತನ್ನ ಉದ್ಯೋಗಿಗಳಲ್ಲಿ ಶೇಕಡ 35ರಷ್ಟು ಉದ್ಯೋಗ ಕಡಿತ ಮಾಡಿದೆ.

ಮತ್ತೊಂದು ಸ್ವದೇಶಿ ಎಜುಟೆಕ್‌ ಸ್ಟಾರ್ಟಪ್‌ ಟೀಚ್‌ಮಿಂಟ್‌ ತನ್ನ ಉದ್ಯೋಗಿಗಳಲ್ಲಿ 70 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಕಳೆದ ಐದು ತಿಂಗಳ ಹಿಂದೆಯೂ 45 ಉದ್ಯೋಗಿಗಳನ್ನು ಈ ಕಂಪನಿ ಮನೆಗೆ ಕಳುಹಿಸಿತ್ತು.

ಚೆನ್ನೈ ಮೂಲದ ಎಜುಟೆಕ್‌ ಸ್ಟಾರ್ಟಪ್‌ ಸ್ಕಿಲ್‌ ಲಿಂಕ್‌ ಕೂಡ ತನ್ನ ಚೆನ್ನೈ, ಬೆಂಗೂರು, ಹೈದರಾಬಾದ್‌ನ ಹಲವು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಜಾಗತಿಕ ಆರ್ಥಿಕತೆ ಸಂಕುಚಿತೆಗೊಂಡಿರುವ ಕಾರಣದಿಂದ ಈ ಉದ್ಯೋಗ ಕಡಿತಮ ಮಾಡಿದೆ.

ಈ ವರ್ಷ ತಂತ್ರಜ್ಞಾನ ಆಧರಿತ ಕಂಪನಿಯ ಉದ್ಯೋಗಿಗಳಿಗೆ ಕೆಟ್ಟ ವರ್ಷವೆಂದೇ ಹೇಳಬಹುದು. ಟೆಕ್‌ ಕಂಪನಿಗಗಳಲ್ಲಿ ಸುಮಾರು ಎರಡು ಲಕ್ಷ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಬೃಹತ್‌ ಐಟಿ ಕಂಪನಿಗಳಿಂದ ಸಣ್ಣ ಸ್ಟಾರ್ಟಪ್‌ಗಳವರೆಗೆ ಎಲ್ಲೆಲ್ಲೂ ಉದ್ಯೋಗ ಕಡಿತ ಕಂಡುಬಂದಿದೆ. ಮೆಟಾ, ಬಿಟಿ, ವೋಡಾಫೋನ್‌ ಸೇರಿದಂತೆ ಹಲವು ಕಂಪನಿಗಳು ಮುಂದಿನ ದಿನಗಳಲ್ಲಿಯೂ ಉದ್ಯೋಗ ಕಡಿತ ಮಾಡುವುದಾಗಿ ತಿಳಿಸಿವೆ.

ಲೇಆಫ್‌.ಎಫ್‌ವೈಐ ಎಂಬ ವೆಬ್‌ಸೈಟ್‌ ಪ್ರಕಾರ ಈ ವರ್ಷ 695 ಕಂಪನಿಗಳು 1.98 ಲಕ್ಷ ಉದ್ಯೋಗ ಕಡಿತ ಮಾಡಿವೆ.

"ನವೋದ್ಯಮಗಳು ಸೇರಿದಂತೆ ಭಾರತದ ಐಟಿ ಕಂಪನಿಗಳ ಉದ್ಯೋಗಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಭದ್ರತೆ, ಅಸುರಕ್ಷಿತ ಭಾವ ಹೆಚ್ಚಾಗಿದೆ. ಜಾಗತಿಕವಾಗಿ ನೋಡಿದರೆ ಉದ್ಯೋಗ ಕಡಿತ ಹೆಚ್ಚಿನ ಪ್ರಮಾಣದಲ್ಲಿದೆ. ಜಾಗತಿಕ ಆರ್ಥಿಕತೆಯ ತೊಂದರೆಗಳು ಭಾರತದ ಐಟಿ ಮತ್ತು ಸ್ಟಾರ್ಟಪ್‌ಗಳ ಮೇಲೂ ಪರಿಣಾಮ ಬೀರುತ್ತಿದೆ. ಭಾರತದ ಸ್ಟಾರ್ಟಪ್‌ಗಳಿಗೆ ಜಾಗತಿಕ ಹಣಕಾಸು ನೆರವು ಕಡಿಮೆಯಾಗುತ್ತಿರುವುದು ಕೂಡ ಸ್ಟಾರ್ಟಪ್‌ಗಳ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣ" ಎಂದು ವಿಶ್ಲೇಷಕರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ