ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ಬಂಧದ ನಂತರ ವ್ಯಾಲೆಟ್ ಹಣವನ್ನು ಹಿಂಪಡೆಯಬಹುದೇ? ಇಲ್ಲಿದೆ ಉತ್ತರ
Feb 16, 2024 10:15 PM IST
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ಬಂಧದ ನಂತರ ವ್ಯಾಲೆಟ್ ಹಣವನ್ನು ಹಿಂಪಡೆಯಬಹುದೇ
- Paytm Payments Bank Wallet : ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು ತಮ್ಮ ವ್ಯಾಲೆಟ್ನಲ್ಲಿರುವ ಹಣವನ್ನು ಬಳಸಬಹುದನ್ನು ಮುಂದುವರೆಸಬಹುದೇ? ಹೀಗೆ ಗ್ರಾಹಕರ ಹಲವು ಗೊಂದಲಗಳಿಗೆ ಇಲ್ಲಿದೆ ನೋಡಿ ಪರಿಹಾರ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಹಿವಾಟಿನ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ ನಿರ್ಬಂಧದ ಗಡುವನ್ನು ವಿಸ್ತರಿಸಲಾಗಿದೆ. ಫೆಬ್ರುವರಿ 29ರವರೆಗೆ ನೀಡಲಾಗಿದ್ದ ಡೆಡ್ಲೈನ್ ಅನ್ನು ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ. ಅಂದರೆ 15 ದಿನ ಹೆಚ್ಚುವರಿ ಅವಕಾಶ ನೀಡಲಾಗಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು ತಮ್ಮ ವ್ಯಾಲೆಟ್ನಲ್ಲಿರುವ ಹಣವನ್ನು ಬಳಸಬಹುದನ್ನು ಮುಂದುವರೆಸಬಹುದೇ? ಹೀಗೆ ಗ್ರಾಹಕರ ಹಲವು ಗೊಂದಲಗಳಿಗೆ ಇಲ್ಲಿದೆ ನೋಡಿ ಪರಿಹಾರ.
ಪ್ರಶ್ನೆ: ಪೇಮೆಂಟ್ ಪೇಮೆಂಟ್ಸ್ ಬ್ಯಾಂಕ್‌ನ ವ್ಯಾಲೆಟ್‌ನಲ್ಲಿ ಹೊಂದಿರುವ ಹಣವನ್ನು ಮಾರ್ಚ್ 15ರ ನಂತರ ಬಳಸುವುದನ್ನು ಮುಂದುವರಿಸಬಹುದೇ?
ಉತ್ತರ: ಹೌದು, ವ್ಯಾಲೆಟ್‌ನಲ್ಲಿ ಲಭ್ಯವಿರುವ ಬ್ಯಾಲೆನ್ಸ್‌ನವರೆಗೆ ನೀವು ಬಳಸಲು, ಹಿಂಪಡೆಯಲು ಅಥವಾ ಇನ್ನೊಂದು ವ್ಯಾಲೆಟ್ ಅಥವಾ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಮುಂದುವರಿಸಬಹುದು. ವ್ಯಾಪಾರಿ ಪಾವತಿಗಳಿಗೆ ಮಾತ್ರ ಬಳಸಬಹುದು.
ಪ್ರಶ್ನೆ: ಪೇಮೆಂಟ್ ಪೇಮೆಂಟ್ಸ್ ಬ್ಯಾಂಕ್ ವ್ಯಾಲೆಟ್‌ನಲ್ಲಿ ಹೊಂದಿರುವ ಹಣವನ್ನು ವರ್ಗಾಯಿಸಬಹುದೇ? ಅಥವಾ ಈ ವ್ಯಾಲೆಟ್‌ಗೆ ಬೇರೆ ಯಾವುದೇ ವ್ಯಕ್ತಿಯಿಂದ ಹಣವನ್ನು ಸ್ವೀಕರಿಸಬಹುದೇ?
ಉತ್ತರ: ಇಲ್ಲ. ಮಾರ್ಚ್ 15ರ ನಂತರ ವ್ಯಾಲೆಟ್‌ಗೆ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲ. ವ್ಯಾಲೆಟ್‌ಗೆ ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಗಳನ್ನು ಹೊರತುಪಡಿಸಿ ಯಾವುದೇ ಕ್ರೆಡಿಟ್‌ಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ.
ಪ್ರಶ್ನೆ: ಪೇಮೆಂಟ್ ಪೇಮೆಂಟ್ಸ್ ಬ್ಯಾಂಕ್‌ನ ವ್ಯಾಲೆಟ್‌ನಲ್ಲಿ ಹೊಂದಿರುವ ಕ್ಯಾಶ್‌ಬ್ಯಾಕ್ ಅನ್ನು ಮಾರ್ಚ್ 15ರ ನಂತರ ಸ್ವೀಕರಿಸಬಹುದೇ?
ಉತ್ತರ: ಹೌದು. ರಿಫಂಡ್ ಮತ್ತು ಕ್ಯಾಶ್ಬ್ಯಾಕ್ಗಳನ್ನು ಕ್ರೆಡಿಟ್ ಮಾಡಲು ಅನುಮತಿಸಲಾಗಿದೆ.
ಪ್ರಶ್ನೆ: ನಾನು ಪೇಟಿಎಂ ಪೇಮೆಂಟ್ ಬ್ಯಾಂಕ್ ವ್ಯಾಲೆಟ್ ಅನ್ನು ಕ್ಲೋಸ್ ಮಾಡಬಹುದೇ? ಬ್ಯಾಲೆನ್ಸ್ ಅನ್ನು ತಮ್ಮದೇ ಬ್ಯಾಂಕ್ ಖಾತೆಯ ಮತ್ತೊಂದು ಬ್ಯಾಂಕ್‌ಗೆ ವರ್ಗಾಯಿಸಬಹುದೇ?
ಉತ್ತರ: ಹೌದು. ವ್ಯಾಲೆಂಟ್ ಕ್ಲೋಸ್ ಮಾಡಲು ಪೇಟಿಎಂ ಪೇಮೆಂಟ್ಸ್ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಬಳಸಬಹುದು. ಪೂರ್ಣ ಕೆವೈಸಿ ವ್ಯಾಲೆಟ್‌ಗಳ ಸಂದರ್ಭದಲ್ಲಿ ಮತ್ತೊಂದು ಬ್ಯಾಂಕ್‌ನಲ್ಲಿ ನಿರ್ವಹಿಸಲಾದ ಖಾತೆಗೆ ಬ್ಯಾಲೆನ್ಸ್ ಅನ್ನು ವರ್ಗಾಯಿಸಬಹುದು.