logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Paid Leave: ಲಕ್ಕಿ ಡ್ರಾನಲ್ಲಿ 365 ದಿನಗಳ ವೇತನಸಹಿತ ರಜೆ ಗೆದ್ದ ಉದ್ಯೋಗಿ: ವಾರ್ಷಿಕ ಔತಣಕೂಟ ಏರ್ಪಡಿಸಿದ್ದ ಬಾಸ್‌ ಅಪ್ಪಟ ಕಮಂಗಿ!

Paid Leave: ಲಕ್ಕಿ ಡ್ರಾನಲ್ಲಿ 365 ದಿನಗಳ ವೇತನಸಹಿತ ರಜೆ ಗೆದ್ದ ಉದ್ಯೋಗಿ: ವಾರ್ಷಿಕ ಔತಣಕೂಟ ಏರ್ಪಡಿಸಿದ್ದ ಬಾಸ್‌ ಅಪ್ಪಟ ಕಮಂಗಿ!

Nikhil Kulkarni HT Kannada

Apr 15, 2023 12:06 PM IST

google News

ಸಾಂದರ್ಭಿಕ ಚಿತ್ರ

    • ಚೀನಾದ ಉದ್ಯೋಗಿಯೋರ್ವ ಇತ್ತೀಚೆಗೆ ತನ್ನ ಕಂಪನಿಯ ವಾರ್ಷಿಕ ಔತಣಕೂಟದಲ್ಲಿ ಏರ್ಪಡಿಸಿದ್ದ ಲಕ್ಕಿ ಡ್ರಾನಲ್ಲಿ, 365 ದಿನಗಳ ವೇತನಸಹಿತ ರಜೆಯ ಬಹುಮಾನವನ್ನು ಗೆದ್ದುಕೊಂಡಿದ್ದಾನೆ. ಚೀನಾದ ಗುವಾಂಗ್‌ಡಾಂಗ್‌ನ ಶೆನ್‌ಜೆನ್‌ನಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಲಕ್ಕಿ ಡ್ರಾ ನಡೆಸಿದಾಗ, ಈ ಉದ್ಯೋಗಿ 365 ದಿನಗಳ ವೇತನಸಹಿತ ರಜೆಯ ಬಹುಮಾನವನ್ನು ಗೆದ್ದುಕೊಂಡಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಬೀಜಿಂಗ್:‌ ಚೀನಾದ ಉದ್ಯೋಗಿಯೋರ್ವ ಇತ್ತೀಚೆಗೆ ತನ್ನ ಕಂಪನಿಯ ವಾರ್ಷಿಕ ಔತಣಕೂಟದಲ್ಲಿ ಏರ್ಪಡಿಸಿದ್ದ ಲಕ್ಕಿ ಡ್ರಾನಲ್ಲಿ, 365 ದಿನಗಳ ವೇತನಸಹಿತ ರಜೆಯ ಬಹುಮಾನವನ್ನು ಗೆದ್ದುಕೊಂಡಿದ್ದಾನೆ. ಚೀನಾದ ಗುವಾಂಗ್‌ಡಾಂಗ್‌ನ ಶೆನ್‌ಜೆನ್‌ನಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಲಕ್ಕಿ ಡ್ರಾ ನಡೆಸಿದಾಗ, ಈ ಅದೃಷ್ಟವಂತ ಉದ್ಯೋಗಿ 365 ದಿನಗಳ ವೇತನಸಹಿತ ರಜೆಯ ಬಹುಮಾನವನ್ನು ಗೆದ್ದುಕೊಂಡಿದ್ದಾನೆ.

ಲಕ್ಕಿ ಡ್ರಾ ಬಹುಮಾನ ಗೆಲ್ಲುತ್ತಿದ್ದಂತೇ, ಉದ್ಯೋಗಿಗೆ ಕಂಪನಿಯ ಬಾಸ್‌ ಉದ್ಯೋಗಿಗೆ ಬಹುಮಾನದ ದೊಡ್ಡ ಚೆಕ್‌ನ್ನು ಹಸ್ತಾಂತರಿಸಿದರು. ಆಗ ತನ್ನ ಕಣ್ಣುಗಳನ್ನು ತಾನೇ ನಂಬದಾದ ಈ ಉದ್ಯೋಗಿ, ಈ ಬಹುಮಾನ ನಿಜವೇ ಎಂದು ಆಶ್ಚರ್ಯಚಕಿತನಾಗಿ ಪದೇ ಪದೇ ಕೇಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಕುರ್ಚಿಯ ಮೇಲೆ ಕುಳಿತಿದ್ದಾನೆ, ಜೊತೆಗೆ ಮಹಿಳೆ ಮತ್ತು ಮಗುವಿನೊಂದಿಗೆ "365 ದಿನಗಳ ವೇತನಸಹಿತ ರಜೆಯ ಬಹುಮಾನ.."ದ ದೊಡ್ಡ ಚೆಕ್‌ನ್ನು ಹಿಡಿದಿದ್ದಾನೆ. ಈ ಉದ್ಯೋಗಿ ಈಗ ಕೇವಲ ಚೀನಾ ಮಾತ್ರವಲ್ಲದೇ ಇಡೀ ಜಗತ್ತಿನಾದ್ಯಂತ ಭಾರೀ ಸದ್ದು ಮಾಡುತ್ತಿದ್ದಾನೆ. ಒಂದು ವರ್ಷಗಳ ಕಾಲ ವೇತನಸಹಿತ ರಜೆ ಪಡೆದುಕೊಂಡ ಈ ಉದ್ಯೋಗಿಯ ಅದೃಷ್ಟದ ಬಗ್ಗೆ ಕೆಲವರು ಸಂತಸ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅಸೂಯೆಪಟ್ಟುಕೊಳ್ಳುತ್ತಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಯ ವಾರ್ಷಿಕ ಭೋಜನ ಕೂಟವನ್ನು, ಬರೋಬ್ಬರಿ ಮೂರು ವರ್ಷಗಳ ನಂತರ ಆಯೋಜಿಸಲಾಗಿತ್ತು. ತನ್ನ ಉದ್ಯೋಗಿಗಳಿಗೆ ಕೆಲಸದ ಒತ್ತಡದಿಂದ ಸ್ವಲ್ಪ ಮುಕ್ತಿ ನೀಡಲು ಮತ್ತು ಉದ್ಯೋಗಿಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಈ ಬಾರಿ ಲಕ್ಕಿ ಡ್ರಾವನ್ನು ಆಯೋಜನೆ ಮಾಡಿತ್ತು ಎಂದು ಹೇಳಲಾಗಿದೆ.

ಬಹುಮಾನಗಳು ಒಂದು ದಿನ ಅಥವಾ ಎರಡು ಹೆಚ್ಚುವರಿ ಪಾವತಿಯ ಸಮಯವನ್ನು ಒಳಗೊಂಡಿವೆ. ಆದರೆ ಕಂಪನಿಯ ಆಡಳಿತಾತ್ಮಕ ಉದ್ಯೋಗಿ ಚೆನ್ ಮಾತ್ರ, ಬರೋಬ್ಬರಿ ಒಂದು ವರ್ಷಗಳ ಕಾಲದ ವೇತನಸಹಿತ ರಜೆಯ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾನೆ. ಕಂಪನಿಯು ಈ ವಿಜೇತರಿಗೆ ಪಾವತಿಸಿದ ರಜೆಯನ್ನು ನಗದಾಗಿ ಪರಿವರ್ತಿಸಿಕೊಳ್ಳುವ ಆಯ್ಕೆಯನ್ನೂ ನೀಡಿರುವುದು ವಿಶೇಷ.

ಚೆನ್‌ ಗೆದ್ದಿರುವ ಬಹುಮಾನದ ಬಗ್ಗೆ ತಿಳಿದುಕೊಂಡ ಬಹುತೇಕರು, ಈ ಕಂಒನಿಯಲ್ಲಿ ಈಗಲೂ ಉದ್ಯೋಗ ಖಾಲಿ ಇದೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ಬಹುಮಾನದ ಪ್ರಾಯೋಗಿಕತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಿದ್ದಾರೆ.

ಚೀನಾದಲ್ಲಿರುವ ಟಿಕ್‌ಟಾಕ್‌ ಸಂಯೋಜಿತ ಅಪ್ಲಿಕೇಶನ್ ಡೌಯಿನ್‌ನಲ್ಲಿ, ಈ ಉದ್ಯೋಗಿಯ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ಒಂದು ವರ್ಷ ಖಾಲಿ ಕೂರುವ ಇವರು ಆ ಬಳಿಕ ನವೀಕೃತ ಕೆಲಸದ ಸಂಸ್ಕೃತಿಗೆ ಹೊಂದಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಖಾಸಗಿ ಕಂಪನಿಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತವೆ. ಈ ಬದಲಾವಣೆಗೆ ಹೊಂದಿಕೊಳ್ಳುವುದು ಈ ವಿಜೇತ ಉದ್ಯೋಗಿಗೆ ಕಷ್ಟವಾಗಬಹುದು. ಹಾಗೆನಾದರೂ ಆದರೆ, ಈ ಉದ್ಯೋಗಿ ತನ್ನ ಜಾಗದಲ್ಲಿ ಮತ್ತೋರ್ವ ಉದ್ಯೋಗಿಯನ್ನು ನೋಡುವುದು ಅನಿವಾರ್ಯವಾಗಲಿದೆ ಎಂದು ಕೆಲವರು ಎಚ್ಚರಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ

Fumio Kishida: ಜಪಾನ್‌ ಪ್ರಧಾನಿ ಸಭೆಯಲ್ಲಿ ಬಾಂಬ್‌ ದಾಳಿ: ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಫುಮಿಯೊ ಕಿಶಿಡಾ

ಜಪಾನ್‌ ಪ್ರಧಾನಮಂತ್ರಿ ಫುಮಿಯೊ ಕಿಶಿಡಾ ಅವರ ಸಭೆಯೊಂದರಲ್ಲಿ ಬಾಂಬ್‌ ದಾಳಿ ನಡೆದಿದ್ದು, ಭದ್ರತಾ ಅಧಿಕಾರಿಗಳು ಫುಮಿಯೊ ಕಿಶಿಡಾ ಅವರನ್ನು ಕೂಡಲೇ ಸ್ಥಳದಿಂದ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ