logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚೀನಾದಲ್ಲಿ ನಿಲ್ಲದ ಕೋವಿಡ್‌ ಸಂಕಟ;ಹೊಸ ತಳಿ ತಂದ ಆತಂಕ

ಚೀನಾದಲ್ಲಿ ನಿಲ್ಲದ ಕೋವಿಡ್‌ ಸಂಕಟ;ಹೊಸ ತಳಿ ತಂದ ಆತಂಕ

HT Kannada Desk HT Kannada

May 26, 2023 11:11 AM IST

ಚೀನಾದಲ್ಲಿ ಕೋವಿಡ್‌ ಹೊಸ ತಳಿ ಕಾಣಿಸಿಕೊಂಡು ಮತ್ತೆ ಆತಂಕ ಶುರುವಾಗಿದೆ.,

    • ಜೂನ್‌ ಅಂತ್ಯದ ಹೊತ್ತಿಗೆ ಕೋವಿಡ್‌ ಪ್ರಕರಣಗಳು ಉತ್ತುಂಗಕ್ಕೆ ಹೋಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಎಕ್ಸ್‌ ಬಿಬಿ ಎನ್ನುವ ಹೊಸ ತಳಿಯ ವೈರಸ್‌ನಿಂದಾಗಿ ಸೋಂಕಿಗೆ ಒಳಗಾಗುವವರ ಸಂಖ್ಯೆ ಅಧಿಕವಾಗಿದೆ. ಕಳೆದ ಚಳಿಗಾಲದಲ್ಲಿ ಚೀನಾ ದೇಶ ಶೂನ್ಯ ಕೋವಿಡ್‌ ಘೋಷಣೆ ಮಾಡಿತ್ತು. ಆನಂತರ ಪ್ರಕರಣಗಳಲ್ಲಿ ಇಳಿಮುಖವಾಗಿತ್ತು.
ಚೀನಾದಲ್ಲಿ ಕೋವಿಡ್‌ ಹೊಸ ತಳಿ ಕಾಣಿಸಿಕೊಂಡು ಮತ್ತೆ ಆತಂಕ ಶುರುವಾಗಿದೆ.,
ಚೀನಾದಲ್ಲಿ ಕೋವಿಡ್‌ ಹೊಸ ತಳಿ ಕಾಣಿಸಿಕೊಂಡು ಮತ್ತೆ ಆತಂಕ ಶುರುವಾಗಿದೆ.,

ಬೀಜಿಂಗ್‌: ಚೀನಾದಲ್ಲಿ ಕೋವಿಡ್‌ ಆತಂಕ ಮತ್ತೆ ಹೆಚ್ಚಾಗಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

ಹೊಸ ತಳಿಯ ವೈರಾಣುವಿನಿಂದಾಗಿ ಚೀನಾದಲ್ಲಿ ಒಂದು ವಾರದಲ್ಲೇ 65 ಮಿಲಿಯನ್‌( 65 ಕೋಟಿ) ಪ್ರಕರಣ ದಾಖಲಾಗುವ ಆತಂಕ ಎದುರಾಗಿದೆ.

ಜೂನ್‌ ಅಂತ್ಯದ ಹೊತ್ತಿಗೆ ಕೋವಿಡ್‌ ಪ್ರಕರಣಗಳು ಉತ್ತುಂಗಕ್ಕೆ ಹೋಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ಎಕ್ಸ್‌ ಬಿಬಿ ಎನ್ನುವ ಹೊಸ ತಳಿಯ ವೈರಸ್‌ನಿಂದಾಗಿ ಸೋಂಕಿಗೆ ಒಳಗಾಗುವವರ ಸಂಖ್ಯೆ ಅಧಿಕವಾಗಿದೆ. ಕಳೆದ ಚಳಿಗಾಲದಲ್ಲಿ ಚೀನಾ ದೇಶ ಶೂನ್ಯ ಕೋವಿಡ್‌ ಘೋಷಣೆ ಮಾಡಿತ್ತು. ಆನಂತರ ಪ್ರಕರಣಗಳಲ್ಲಿ ಇಳಿಮುಖವಾಗಿತ್ತು. ಈಗ ಪ್ರಕರಣಗಳ ಏರಿಕೆಯಿಂದ ಆಡಳಿತ ಲಸಿಕೆ ನೀಡುವಿಕೆ ಸೇರಿದಂತೆ ಪರ್ಯಾಯ ವ್ಯವಸ್ಥೆಗಳ ಕುರಿತು ಚಟುವಟಿಕೆ ಆರಂಭಿಸಿದೆ.

ಮೂರು ವರ್ಷದ ಹಿಂದೆ ಚೀನಾದಲ್ಲಿ ಉಂಟಾದ ಜೀವಹಾನಿಯನ್ನು ತಗ್ಗಿಸುವ ಜತೆಗೆ ಹಿರಿಯರು ಸೋಂಕಿಗೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದು, ಹೊಸ ತಳಿಯ ಅನಾಹುತ ತಪ್ಪಿಸುವ ಲಸಿಕೆ ಉತ್ಪಾದನೆಗೂ ಅನುಮತಿ ನೀಡಲಾಗಿದೆ.

ಆಸ್ಪತ್ರೆಗಳಲ್ಲೂ ಲಸಿಕೆ ಸಂಗ್ರಹಕ್ಕೂ ಒತ್ತು ಕೊಡಲಾಗಿದೆ ಎಂದು ಸರ್ಕಾರದ ಪ್ರತಿನಿಧಿಗಳು ತಿಳಿಸಿದ್ದಾರೆ.

ಹಿಂದಿನ ಚಳಿಗಾಲದಲ್ಲಿ ಉಂಟಾದ ಆತಂಕದ ವಾತಾವರಣ, ಆಸ್ಪತ್ರೆಗೆ ಆಗಮಿಸುವವರ ಸಂಖ್ಯೆ ಇಲ್ಲವಾದರೂ ಜನ ಭಯಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎನ್ನುವುದು ತಜ್ಞರ ವಿವರಣೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು