logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದೀರಾ? ಮೊದಲ ಪ್ರಯತ್ನ ನಿಮ್ಮದಾಗಿದ್ದರೆ ಈ 9 ಸಲಹೆಗಳನ್ನು ಮೊದಲು ಓದಿಕೊಳ್ಳಿ

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದೀರಾ? ಮೊದಲ ಪ್ರಯತ್ನ ನಿಮ್ಮದಾಗಿದ್ದರೆ ಈ 9 ಸಲಹೆಗಳನ್ನು ಮೊದಲು ಓದಿಕೊಳ್ಳಿ

Jayaraj HT Kannada

Apr 30, 2024 05:28 PM IST

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆಗೂ ಮುನ್ನ 9 ಸಲಹೆಗಳನ್ನು ಮೊದಲು ಓದಕೊಳ್ಳಿ

    • ನೀವೇನಾದರೂ ಯುಪಿಎಸ್‌ಸಿ ಪರೀಕ್ಷೆಗೆ ಈಗಷ್ಟೇ ಸಿದ್ದತೆ ಆರಂಭಿಸಿದ್ದರೆ, ನಿಮ್ಮ ಓದಿಗೆ ನೆರವಾಗಬಲ್ಲ ಕೆಲವು ಅಗತ್ಯ ಸಲಹೆಗಳು ಇಲ್ಲಿವೆ.
ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆಗೂ ಮುನ್ನ 9 ಸಲಹೆಗಳನ್ನು ಮೊದಲು ಓದಕೊಳ್ಳಿ
ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆಗೂ ಮುನ್ನ 9 ಸಲಹೆಗಳನ್ನು ಮೊದಲು ಓದಕೊಳ್ಳಿ

ಕೇಂದ್ರ ಲೋಕಸೇವಾ ಆಯೋಗ (UPSC) ಪರೀಕ್ಷೆ ಬರೆದು ತೇರ್ಗಡೆಯಾಗುವುದು ಹಲವು ವಿದ್ಯಾರ್ಥಿಗಳ ಆಸೆ ಹಾಗೂ ಕನಸು. ಹಾಗಂತ ಅದು ಸುಲಭದ ಕೆಲಸವಲ್ಲ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುವುದು ಅತ್ಯಂತ ಸವಾಲಿನ ಸಂಗತಿ. ಪ್ರತಿನಿತ್ಯ ಓದು ಮಾತ್ರವಲ್ಲದೆ ಒಂದಷ್ಟು ಅಧ್ಯಯನಗಳು ನಿರಂತರವಾಗಿ ಮಾಡುತ್ತಿರಬೇಕಾಗುತ್ತದೆ. ನೀವೇನಾದರೂ ಈಗಷ್ಟೇ ಯುಪಿಎಸ್‌ ಪರೀಕ್ಷೆ ಬರೆಯಬೇಕೆಂಬ ಸಂಕಲ್ಪ ಮಾಡಿ ಓದು ಆರಂಭಿಸಿದ್ದರೆ, ಈ ಮಾಹಿತಿ ನಿಮಗಾಗಿ. ಕೇವಲ ಪಠ್ಯಕ್ರಮದ ಆಧಾರದಲ್ಲಿ ಓದುವುದು ಮಾತ್ರವಲ್ಲದೆ, ಯುಪಿಎಸ್‌ಗೆ ಸಂಬಂಧಿಸಿದ ವಿವಿಧ ಯೂಟ್ಯೂಬ್ ವೀಡಿಯೊಗಳನ್ನು ನೋಡುವುದು ಭಾರಿ ಪ್ರಮಾಣದ ಒತ್ತಡವನ್ನು ನಿಮ್ಮ ಮೇಲೆ ಹೇರಿಬಿಡುತ್ತದೆ. ಹೀಗಾಗಿ ಮಾನಸಿಕವಾಗಿ ಎಲ್ಲಾ ರೀತಿಯ ಸಿದ್ಧತೆಯೊಂದಿಗೆ ತಾಳ್ಮೆಯಿಂದ ಸಿದ್ಧತೆ ನಡೆಸುವುದು ಮುಖ್ಯ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ನೀವೇನಾದರೂ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆಯ ಆರಂಭಿಕ ಹಂತದಲ್ಲಿದ್ದರೆ, ಈ ಕೆಲವೊಂದು ಸಲಹೆಗಳು ನಿಮಗೆ ನೆರವಾಗಬಹುದು.

ರೆಡ್ಡಿಟ್‌ನಲ್ಲಿ ಶೇರ್‌ ಮಾಡಲಾಗಿರುವ ಈ ಸಲಹೆಗಳು, ನಿಮ್ಮ ಸಿದ್ಧತೆಗೆ ನೆರವಾಗಬಲ್ಲದು. ಈ ಪೋಸ್ಟ್‌ ಹಂಚಿಕೊಂಡಿರುವವರು, ಅದರ ಕ್ಯಾಪ್ಷನ್‌ನಲ್ಲಿ ಸೊಗಸದಾಗಿ ಬರೆದಿದ್ದಾರೆ. "ಇದು ಹೊಸಬರಿಗಾಗಿ. ಯುಪಿಎಸ್‌ಸಿ ಸಿದ್ಧತೆಯ ಕುರಿತು ಕೆಲವು ಸಲಹೆಗಳನ್ನು ಯಾರೋ ಕೇಳಿದ್ದರು.‌ ಹೀಗಾಗಿ ನಾನು ಕಲಿತದ್ದನ್ನು ಇಲ್ಲಿ ನೀಡುತ್ತೇನೆ ಎಂದು ಬಳಕೆದಾರ ಬರೆದುಕೊಂಡಿದ್ದಾರೆ. ಇದಕ್ಕೆ ಹಲವಾರು ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | ಕಪ್ಪು ನಾಯಿ ಕೂಡ ಬಿಳಿಯಾದೀತೆ; ಈ ಪ್ರಶ್ನೆಗೆ ಇಲ್ಲಿದೆ ಉತ್ತರ, ಒಕ್ಲಹಾಮಾದ ಈ ನಾಯಿ ಎರಡೇ ವರ್ಷದಲ್ಲಿ ಬಿಳಿಯಾಯಿತಂತೆ! ಹೇಗೆ?,ಇಲ್ಲಿದೆ ಫೋಟೋಸ್

ಈ ಕೆಲಸ ಮಾಡಬೇಡಿ

1. ಪ್ರೇರಣಾದಾಯಕ (motivational) ವೀಡಿಯೊಗಳನ್ನು ನೋಡಬೇಡಿ. ಮಾನಸಿಕ ಔಷಧಿಗಳು ಒಂದು ಕ್ಷಣಕ್ಕಷ್ಟೇ ಒಳ್ಳೆಯದು. ಅದನ್ನೇ ನೆಚ್ಚಿಕೊಂಡರೆ ದೀರ್ಘಾವಧಿಗೆ ಅದು ಹಾನಿಕಾರಕವಾಗಿ ಪರಿಣಮಿಸಬಹುದು.

2. ಐಎಎಸ್ ಅಥವಾ ಐಪಿಎಸ್ ವ್ಲಾಗ್‌ಗಳನ್ನು ನೋಡಬೇಡಿ. ಜನರು ಅವರವರ ಕೆಲಸವನ್ನು ಮಾಡುವುದನ್ನು ನೋಡುತ್ತಾ ನಿಮ್ಮ ಸಮಯವನ್ನು ವ್ಯರ್ಥ ಮಾಡುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ.

3. ಯೂಟ್ಯೂಬ್‌ನಲ್ಲಿ ಸೆಲೆಕ್ಷನ್‌ ನಂತರ ಏನಾಗುತ್ತದೆ, ವೇತನ ಶ್ರೇಣಿ ಹೇಗಿರುತ್ತದೆ ಎಂಬೆಲ್ಲಾ ವಿಡಿಯೋಗಳನ್ನು ನೋಡಬೇಡಿ. ಮೊದಲಿಗೆ, ಆಯ್ಕೆಯಾಗುವತ್ತ ಮಾತ್ರವೇ ಗಮನ ಹರಿಸಿ.

4. ಸಿದ್ಧತೆಗಾಗಿ ಸಲಹೆ ಪಡೆಯಲು ಟಾಪರ್‌ಗಳ ಸಂದರ್ಶನವನ್ನು ನೋಡಬೇಡಿ. ಆಗ ಅನಗತ್ಯ ಗೊಂದಲಕ್ಕೊಳಗಾಗುತ್ತೀರಿ.

5. ಮಿತಿಮೀರಿ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಬೇಡಿ. ನೀವು ಅವುಗಳನ್ನು ಓದಿ ಪೂರ್ಣಗೊಳಿಸಲು ಆಗುವುದಿಲ್ಲ.

6. ಪ್ರತಿ ವಿಷಯ ಅಥವಾ ಪತ್ರಿಕೆಗೆ ಪ್ರಮಾಣಿತ ಪುಸ್ತಕ ಅಥವಾ ಎನ್‌ಸಿಇಆರ್‌ಟಿಯನ್ನೇ ರೆಫರ್‌ ಮಾಡಿ.

7. ಒಂದೇ ವಿಷಯದ ಕುರಿತ ಎರಡು ಪುಸ್ತಕಗಳನ್ನು ಓದಬೇಡಿ. ಬದಲಿಗೆ ಒಂದೇ ಪುಸ್ತಕವನ್ನು ಎರಡು ಬಾರಿ ಓದಿದರೆ ಒಳ್ಳೆಯದು.

8. ಪ್ರಪಂಚದಿಂದ ನಿಮ್ಮನ್ನು ನೀವು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಡಿ. ಹಾಗೆ ಮಾಡುವುದೇ ದೊಡ್ಡ ವಿಶೇಷ ಎಂದು ಭಾವಿಸಬೇಡಿ. ನೀವೇನೂ ಯಾವುದೋ ರಹಸ್ಯ ಪರಮಾಣು ಬಾಂಬ್ ಸಿದ್ಧಪಡಿಸುತ್ತಿಲ್ಲ. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಿ ಅಷ್ಟೇ.

9. ಗಂಟೆಯಲ್ಲಿ ಇಂತಿಷ್ಟು ಎನ್ನುವ ಬದಲು, ಒಂದು ದಿನದಲ್ಲಿ ನೀವು ಓದಬೇಕಾದ ವಿಷಯಗಳ ಸಂಖ್ಯೆಯನ್ನು ನಿರ್ಧರಿಸಿ.

ಹಲವರಿಗೆ ನೆರವಾಗಲಬಲ್ಲ ಈ ಪೋಸ್‌ಗೆ ಹಲವು ಅಭ್ಯರ್ಥಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ