logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Iocl Jobs: ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ, ಕರ್ನಾಟಕ ಸೇರಿದಂತೆ ವಿವಿಧೆಡೆ ಅವಕಾಶ, ಸೆಪ್ಟೆಂಬರ್‌ 10ರ ಮೊದಲು ಅರ್ಜಿ ಸಲ್ಲಿಸಿ

IOCL Jobs: ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ, ಕರ್ನಾಟಕ ಸೇರಿದಂತೆ ವಿವಿಧೆಡೆ ಅವಕಾಶ, ಸೆಪ್ಟೆಂಬರ್‌ 10ರ ಮೊದಲು ಅರ್ಜಿ ಸಲ್ಲಿಸಿ

HT Kannada Desk HT Kannada

Dec 22, 2023 06:20 PM IST

google News

IOCL Jobs: ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ

  • IOCL apprentice recruitment 2023: ಭಾರತೀಯ ತೈಲ ನಿಗಮವು ಅಪ್ರೆಂಟಿಸ್‌ ನೇಮಕಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಲಭ್ಯವಿರುವ ಹುದ್ದೆಗಳು, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ಕೊನೆದಿನ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

IOCL Jobs: ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ
IOCL Jobs: ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ (HT file)

ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (ಐಒಸಿಎಲ್) ತರಬೇತಿ ಹುದ್ದೆ ಸಹಿತ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಭಾರತೀಯ ತೈಲ ನಿಗಮದಲ್ಲಿ ಅಪ್ರೆಂಟಿಸ್‌ಶಿಪ್‌ ತರಬೇತಿ ಪಡೆಯಲು ಬಯಸುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಒಟ್ಟು 90 ಹುದ್ದೆಗಳಿವೆ.

ಹುದ್ದೆಗಳವಿವರ

ದೇಶಾದ್ಯಂತ ಒಟ್ಟು 490 ಅಪ್ರೆಂಟಿಸ್‌ಶಿಪ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಮುಂದಿನ ವಿವಿಧ ವಿಭಾಗಗಳಲ್ಲಿ ನೇಮಕಾತಿ ಕೈಗೊಳ್ಳಲಾಗುತ್ತದೆ.

  • ಗ್ರಾಜ್ಯುವೇಟ್ ಅಪ್ರೆಂಟಿಸ್ ಅಕೌಂಟ್ಸ್ ಎಕ್ಸಿಕ್ಯೂಟಿವ್
  • ಎಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್
  • ಸಿವಿಲ್
  • ಇನ್‌ಸ್ಟ್ರುಮೆಂಟೇಶನ್
  • ಮೆಕ್ಯಾನಿಕಲ್
  • ಫಿಟ್ಟರ್ ಅಂಡ್ ಮೆಕ್ಯಾನಿಸ್ಟ್
  • ಇತರೆ ವಿಭಾಗಗಳು

ವಿದ್ಯಾರ್ಹತೆ

ಕನಿಷ್ಠ 12ನೇ ತರಗತಿ ಪೂರ್ಣಗೊಳಿಸಿರಬೇಕು. ಸಂಬಂಧಿತ ಟ್ರೇಡ್‌ಗಳಲ್ಲಿ ಐಟಿಐ ವಿದ್ಯಾಭ್ಯಾಸ ಮಾಡಿರಬೇಕು. ಎಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೊಮಾ, ಇತರೆ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.

ವಯೋಮಿತಿ

ಕನಿಷ್ಠ 18 ವರ್ಷ ಗರಿಷ್ಠ 24 ವರ್ಷ, ವರ್ಗವಾರು ವಯೋಮಿತಿ ನಿಗದಿಪಡಿಸಲಾಗಿದೆ

ಆಯ್ಕೆ ಪ್ರಕ್ರಿಯೆ

  • ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ.
  • ಅಕೌಂಟ್ಸ್ ವಿಭಾಗಕ್ಕೆ ಭಾಷಾ ಕೌಶಲ, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುತ್ತದೆ
  • ತಾಂತ್ರಿಕ ವಿಭಾಗದ ಅಭ್ಯರ್ಥಿಗಳಿಗೆ ತಂತ್ರಜ್ಞಾನ ಹಾಗೂ ವಿವಿಧ ಕೌಶಲಗಳ ದಾಖಲೆಗಳನ್ನು ಆನ್ಲೈನ್ ಮೂಲಕ ಪರಿಶೀಲನೆ ಮಾಡಲಾಗುತ್ತದೆ.

ಕರ್ನಾಟಕದ ಅಭ್ಯರ್ಥಿಗಳಿಗೂ ಅವಕಾಶ

ಕರ್ನಾಟಕಕ್ಕೆ ಒಟ್ಟು ಹುದ್ದೆಗಳಲ್ಲಿ 90 ಹುದ್ದೆಗಳನ್ನು ಮಿಸಲಿಡಲಾಗಿದೆ. ವೇತನ, ಭತ್ಯೆ ಇತ್ಯಾದಿ ಮಾಹಿತಿಗಳನ್ನು ಸಂದರ್ಶನದ ವೇಳೆ ತಿಳಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಅಪ್ರೆಂಟಿಸ್‌ಶಿಪ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಭಾರತ ಸರಕಾರದ ಅಪ್ರೆಂಟಿಸ್‌ಶಿಪ್‌ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು ಮತ್ತು ಮಾಹಿತಿ ನೋಂದಾಯಿಸಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಐಒಸಿಎಲ್‌ ಅಧಿಸೂಚನೆ ಮೂಲಕ ಪಡೆದುಕೊಳ್ಳಬಹುದು. ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಹೆಸರು ನೋಂದಾಯಿಸಿಕೊಳ್ಳಲು www.apprenticeshipindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನ್ಯಾಷನಲ್‌ ಅಪ್ರೆಂಟಿಸ್‌ಶಿಪ್‌ ಟ್ರೇನಿಂಗ್‌ ಸ್ಕೀಮ್‌ (ಎನ್‌ಎಟಿಎಸ್‌) ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಲಿಂಕ್‌ ಇಲ್ಲಿದೆ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 10 ಸೆಪ್ಟೆಂಬರ್ 2023.

ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ ವಿಳಾಸ ಇಲ್ಲಿದೆ.

  • ವರದಿ: ಅಕ್ಷರ ಕಿರಣ್‌

ಕಾಲೇಜು ಪದವಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಉದ್ಯೋಗಗಳ ವಿವರ

ಕೆಲವರಿಗೆ ಡಬಲ್‌ ಡಿಗ್ರಿ ಪಡೆದರೂ ಕಡಿಮೆ ವೇತನದ ವೇತನ ದೊರಕುತ್ತದೆ. ಇನ್ನು ಕೆಲವರಿಗೆ ಪದವಿ ಮುಗಿಸಿದ ತಕ್ಷಣ ಲಕ್ಷಾಂತರ ರೂಪಾಯಿ ವೇತನದ ಉದ್ಯೋಗಗಳು ಕೈಬೀಸಿ ಕರೆಯುತ್ತವೆ. ಡಿಗ್ರಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಕೆಲವು ಉದ್ಯೋಗಗಳು ಈ ಮುಂದಿನಂತೆ ಇವೆ. ಕಲಿಕೆಯ ಹಂತದಲ್ಲಿಯೇ ಇದಕ್ಕೆ ಸಂಬಂಧಪಟ್ಟ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ನೀವೂ ಕೈತುಂಬಾ ಗಳಿಸಬಹುದು. ಇಂತಹ ಉದ್ಯೋಗಗಳ ವಿವರ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

HT Kannada JOB Alert: ಲಭ್ಯವಿರುವ ಸರಕಾರಿ ಉದ್ಯೋಗಗಳ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ