logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aap Congress Tussle: ಪಾಟ್ನಾ ವಿಪಕ್ಷ ಮೈತ್ರಿಯಲ್ಲಿ 14 ಪಕ್ಷಗಳ ಒಮ್ಮತ, ಎಎಪಿ-ಕಾಂಗ್ರೆಸ್‌ ಭಿನ್ನಮತ; ಇಲ್ಲಿದೆ ಸ್ಪಷ್ಟ ಚಿತ್ರಣ

AAP Congress Tussle: ಪಾಟ್ನಾ ವಿಪಕ್ಷ ಮೈತ್ರಿಯಲ್ಲಿ 14 ಪಕ್ಷಗಳ ಒಮ್ಮತ, ಎಎಪಿ-ಕಾಂಗ್ರೆಸ್‌ ಭಿನ್ನಮತ; ಇಲ್ಲಿದೆ ಸ್ಪಷ್ಟ ಚಿತ್ರಣ

Umesh Kumar S HT Kannada

Jun 26, 2023 07:30 AM IST

ಅರವಿಂದ ಕೇಜ್ರಿವಾಲ್‌ ವರ್ಸಸ್‌ ರಾಹುಲ್‌ ಗಾಂಧಿ

  • AAP Congress Tussle: ಆಮ್‌ ಆದ್ಮಿ ಪಾರ್ಟಿ (ಎಎಪಿ) ಜತೆಗೆ ಲೋಕಸಾಭಾ ಚುನಾವಣಾ ಮೈತ್ರಿ ಬಹುತೇಕ ಕಷ್ಟ. ಕಾಂಗ್ರೆಸ್‌ ಪಕ್ಷದ ಕೆಲವು ನಿಲುವುಗಳಿಗೆ ಸ್ಥಳದಲ್ಲೇ ವಿವರಣೆ ಬಯಸುವ ಎಎಪಿ ನಾಯಕರ ವರ್ತನೆ ಸಹ್ಯವಲ್ಲ ಎಂಬುದು ಕಾಂಗ್ರೆಸ್ಸಿಗರ ವಾದ. ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟತೆ ಇಲ್ಲ ಎಂಬುದು ಎಎಪಿ ವಾದ. ಒಟ್ಟು ಚಿತ್ರಣ ಹೀಗಿದೆ..

ಅರವಿಂದ ಕೇಜ್ರಿವಾಲ್‌ ವರ್ಸಸ್‌ ರಾಹುಲ್‌ ಗಾಂಧಿ
ಅರವಿಂದ ಕೇಜ್ರಿವಾಲ್‌ ವರ್ಸಸ್‌ ರಾಹುಲ್‌ ಗಾಂಧಿ

ದೇಶದಲ್ಲಿ 2024ರ ಲೋಕಸಭೆ ಚುನಾವಣೆಗೆ (Lok Sabha Election 2024) ಇನ್ನು ಕೆಲವು ತಿಂಗಳು ಬಾಕಿ ಇವೆ. ಅದಕ್ಕೂ ಮುನ್ನ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ 14 ಪಕ್ಷಗಳ ನಡುವೆ ಪರಸ್ಪರ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ಆದಾಗ್ಯೂ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ನಡುವೆ ಯಾವುದೇ ಹೊಂದಾಣಿಕೆ ಕಷ್ಟ. ಉಭಯ ಪಕ್ಷಗಳ ಮುಖಂಡರು ಶನಿವಾರ ಈ ಬಗ್ಗೆ ಸೂಚನೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ಪಾಟ್ನಾದಲ್ಲಿ ಶುಕ್ರವಾರ ನಡೆದ ಸಭೆಯ ನಂತರ, ಕಾಂಗ್ರೆಸ್‌ ಮತ್ತು ಎಎಪಿ ಈ ಎರಡು ಪಕ್ಷಗಳ ನಾಯಕರ ನಡುವೆ ಕಿರು ಸಭೆಗೆ ದಿನಾಂಕವನ್ನು ನಿಗದಿಪಡಿಸುವಂತೆ ರಾಹುಲ್‌ ಗಾಂಧಿ ಅವರಿಗೆ ಮಾಡಲಾಗಿದೆ. ಆದರೆ ಅದಕ್ಕೆ ಯಾವುದೇ ಸಕಾರಾತ್ಮಕ ಉತ್ತರ ಸಿಕ್ಕಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಷಾದ ವ್ಯಕ್ತಪಡಿಸಿದ್ದಾರೆ.

ದೆಹಲಿಗೆ ಸಂಬಂಧಿಸಿದ ಸುಗ್ರೀವಾಜ್ಞೆಯ ಬಗ್ಗೆ ರಾಹುಲ್ ಗಾಂಧಿ ಒಂದು ಮಾತನ್ನೂ ಹೇಳಲಿಲ್ಲ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಟ್ನಾದಲ್ಲಿ ಈ ವಿಷಯದ ಬಗ್ಗೆ ಕಾಂಗ್ರೆಸ್ ನಿಲುವನ್ನು ಪ್ರಕಟಿಸಲಿಲ್ಲ. ಯಾವುದೇ ನಿರ್ಧಾರ ತೆಗೆದುಕೊಂಡರೂ ಮೊದಲು ಪಕ್ಷದೊಳಗೆ ಚರ್ಚೆಯಾಗಲಿ ಎಂದು ಅವರು ಹೇಳಿದ್ದನ್ನು ದೆಹಲಿಯ ಕಾಂಗ್ರೆಸ್‌ ನಾಯಕರು ಹೇಳಿದ್ದರು.

ದೆಹಲಿಯ ಸುಗ್ರೀವಾಜ್ಞೆ ಕುರಿತು ನಿಲುವು ಸ್ಪಷ್ಟಪಡಿಸಲು ಸ್ಥಳೀಯ ನಾಯಕರು ತೋರುವ ಉತ್ಸಾಹವನ್ನು ಸ್ವತಃ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ಈ ಹೇಳಿಕೆಯ ವಿಚಾರವನ್ನು ಯಾವ ಕಾಂಗ್ರೆಸ್‌ ನಾಯಕರೂ ಸಮರ್ಥನೆ ಮಾಡಿಲ್ಲ. ಹೀಗಾಗಿ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್‌ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಇತ್ತೀಚೆಗೆ ಹೇಳುತ್ತಲೇ ಬಂದಿದೆ.

ಎಎಪಿ ಮನವಿ ಕಾಂಗ್ರೆಸ್‌ ಪಕ್ಷದ ಮೇಲೆ ಪರಿಣಾಮ ಬೀರಿಲ್ಲ

ಪಾಟ್ನಾದಲ್ಲಿ ನಡೆದ ಮಹಾಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್, ಸಂಸದರಾದ ರಾಘವ್ ಚಡ್ಡಾ ಮತ್ತು ಸಂಜಯ್ ಸಿಂಗ್ ಸೇರಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದರು. ದೆಹಲಿಗೆ ಸಂಬಂಧಿಸಿದ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಖಂಡಿಸಬೇಕು ಎಂದು ಎಎಪಿ ಮತ್ತು ವಿವಿಧ ಪಕ್ಷಗಳ ಹಿರಿಯ ನಾಯಕರು ಒತ್ತಾಯಿಸಿದರು. ಆದರೆ, ಈ ಮನವಿಯನ್ನು ಕಾಂಗ್ರೆಸ್‌ ನಾಯಕರು ಪುರಸ್ಕರಿಸಲಿಲ್ಲ. ಇದೇ ಕಾರಣಕ್ಕೆ ಸಭೆಯ ನಂತರ ನಡೆದ ಸುದ್ದಿಗೋಷ್ಠಿಗೆ ಈ ನಾಯಕರು ಯಾರೂ ಹಾಜರಾಗಲಿಲ್ಲ.

ಒಗ್ಗಟ್ಟು ಇರಬೇಕಾದಲ್ಲಿ ಇಲ್ಲದಿದ್ದರೆ ಹೇಗೆ...

ಅರವಿಂದ್ ಕೇಜ್ರಿವಾಲ್ ಅವರು ದೆಹಲಿಗೆ ಸಂಬಂಧಿಸಿದ ಸುಗ್ರೀವಾಜ್ಞೆ ಕುರಿತು ತತ್‌ಕ್ಷಣದ ನಿರ್ಧಾರವನ್ನು ಬಯಸಿದ್ದರು. ಆದರೆ ಇತರ ಪಕ್ಷಗಳ ನಾಯಕರು ಇದಕ್ಕೆ ಸಮಯ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿರೋಧ ಪಕ್ಷಗಳು ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಖಂಡಿಸದಿದ್ದರೆ ಭವಿಷ್ಯದಲ್ಲಿ ವಿರೋಧ ಪಕ್ಷಗಳ ಸಭೆಗಳಲ್ಲಿ ಭಾಗವಹಿಸುವುದು ಕಷ್ಟ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ಎಎಪಿ ಜೊತೆ ಕಾಂಗ್ರೆಸ್ ಮೈತ್ರಿ ಅಸಾಧ್ಯ

ತಮಿಳುನಾಡು, ಬಿಹಾರ, ಕೇರಳ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿಗಳನ್ನು ಬಲಪಡಿಸಲು ಕಾಂಗ್ರೆಸ್ ಪರಿಗಣಿಸುತ್ತದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಆದರೆ, ಎಎಪಿ ಜೊತೆ ಯಾವುದೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳು ಬಹುತೇಕ ಶೂನ್ಯ ಎಂದು ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಶನಿವಾರ ಸೂಚಿಸಿದ್ದಾರೆ.

ಕಾಂಗ್ರೆಸ್ ಕಾರಣಗಳನ್ನು ನಿರಾಕರಿಸಿದೆ

ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು, “ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಲು ಎಎಪಿ ಪ್ರಯತ್ನಿಸುತ್ತಿದೆ. ಆದ್ದರಿಂದ ಅದರೊಂದಿಗೆ ಮೈತ್ರಿ ಮಾಡಿಕೊಳ್ಳಲು ನಮಗೆ ಕಷ್ಟವಾಗುತ್ತದೆ. ಅವರು ಬಿಜೆಪಿಗೆ ಸಹಾಯ ಮಾಡಲು ಗೋವಾ ಮತ್ತು ಕರ್ನಾಟಕದಲ್ಲಿ ಹೋರಾಡಿದರು. ದೆಹಲಿ ಮತ್ತು ಪಂಜಾಬ್‌ನಲ್ಲಿ ಅವರು ನಮ್ಮ ಪ್ರಮುಖ ಪ್ರತಿಸ್ಪರ್ಧಿಗಳು. ಈ ಎರಡೂ ಸ್ಥಳಗಳಲ್ಲಿ ನಾವು ಎಎಪಿಗೆ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಒಳಸುಳಿಯ ವಿವರ ನೀಡಿದರು.

ದೆಹಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ

ದೆಹಲಿ ಕಾಂಗ್ರೆಸ್ ಘಟಕವು ಎಎಪಿಯನ್ನು ಬಲವಾಗಿ ವಿರೋಧಿಸುತ್ತಿದೆ ಮತ್ತು ಯಾವುದೇ ಸಂಭಾವ್ಯ ಮೈತ್ರಿಕೂಟವು ಅದರ ಬೆಂಬಲವನ್ನು ಪಡೆಯುವ ಸಾಧ್ಯತೆಯಿಲ್ಲ. ಮಾಜಿ ಕೇಂದ್ರ ಸಚಿವ, ದೆಹಲಿಯ ಕಾಂಗ್ರೆಸ್‌ನ ನಾಯಕ ಅಜಯ್ ಮಾಕೆನ್, "ನಾವು ಆಮ್ ಆದ್ಮಿ ಪಕ್ಷದೊಂದಿಗೆ ರಾಜಿ ಮಾಡಿಕೊಳ್ಳಬಾರದು" ಎಂದು ಮಾಕೆನ್ ಹೇಳಿದ್ದಾರೆ. ಎಎಪಿ ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಎಎಪಿ ರಚನೆಗೂ ಮುನ್ನ ಅವರು ಕಿರಣ್ ಬೇಡಿ ಮತ್ತು ಜನರಲ್ ವಿಕೆ ಸಿಂಗ್ ಅವರಿಂದ ಬೆಂಬಲ ಪಡೆದಿದ್ದರು ಎಂದು ಮಾಕನ್ ಆರೋಪಿಸಿದ್ದಾರೆ.

ನಿತೀಶ್ ನಂತರ ಕೇಜ್ರಿವಾಲ್ ಮಾತ್ರ ಮಾತನಾಡಬೇಕೆಂಬ ಹಟ

ಪಾಟ್ನಾ ಸಭೆಯ ಆರಂಭದಲ್ಲಿ ನಾಯಕರು ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡಿದರು. ಪ್ರತಿಪಕ್ಷಗಳ ಒಗ್ಗಟ್ಟಿನ ವಿಚಾರವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಂತರ ಅರವಿಂದ್ ಕೇಜ್ರಿವಾಲ್ ಮಾತನಾಡುತ್ತಿರುವ ಎರಡನೇ ವ್ಯಕ್ತಿ. ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಅವರು, ಬಿಜೆಪಿಯನ್ನು ಸೋಲಿಸುವ ಸೂತ್ರ ಏನಾಗಿರಬೇಕು ಎಂಬುದನ್ನು ವಿವರಿಸುತ್ತ ದೆಹಲಿಯ ಸುಗ್ರೀವಾಜ್ಞೆ ವಿಚಾರ ಪ್ರಸ್ತಾಪಿಸಿದರು ಎಂದು ಎಎಪಿ ಮೂಲಗಳು ಹೇಳಿವೆ.

ಎಎಪಿಯ ಹಿರಿಯ ನಾಯಕರೊಬ್ಬರು ಕೇಜ್ರಿವಾಲ್ ಹೇಳಿಕೆಯನ್ನು ಉಲ್ಲೇಖಿಸಿ, “ಅಧ್ಯಾದೇಶವು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಪರ ಇರುವ ಯಾವುದೇ ವ್ಯಕ್ತಿ ಸುಗ್ರೀವಾಜ್ಞೆಯ ಪರವಾಗಿ ನಿಲ್ಲಲು ಸಾಧ್ಯವಿಲ್ಲ.ಕಾಂಗ್ರೆಸ್ ಪಕ್ಷವು ಸುಗ್ರೀವಾಜ್ಞೆಯ ಪರವಾಗಿ ನಿಲ್ಲಲು ಸಾಧ್ಯವಿಲ್ಲ ಎಂದು ನಾವು ನಂಬುತ್ತೇವೆ. ನೀವು ಸುಗ್ರೀವಾಜ್ಞೆಗೆ ಬೆಂಬಲವಾಗಿ ನಿಲ್ಲಲು ಸಾಧ್ಯವಾಗದಿದ್ದಾಗ, ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಖಂಡಿಸಬೇಕಾದ್ದು ಅವಶ್ಯ ಎಂದು ಹೇಳಿದರು.

ಪಾಟ್ನಾ ಸಭೆಯಲ್ಲಿ ಕೇಜ್ರಿವಾಲ್ ಅವರು ಸುಗ್ರೀವಾಜ್ಞೆ ವಿಷಯವನ್ನು ಎತ್ತುವ ಮೂಲಕ ಪ್ರತಿಪಕ್ಷಗಳ ಏಕತೆ ಮತ್ತು ಸಾಮಾನ್ಯ ಕಾರ್ಯಸೂಚಿಯಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಿದರು. ಇದು ಸರಿಯಾದ ನಡೆಯಲ್ಲ ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಬಿಜೆಪಿ-ಕಾಂಗ್ರೆಸ್‌ಗೆ ಪರ್ಯಾಯವಾಗಲು ಬಯಸಿದೆ ಎಎಪಿ

ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ಎಂದು ಎಎಪಿ ಬಿಂಬಿಸಿಕೊಂಡಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ವೆಚ್ಚದಲ್ಲಿ ಅದು ಬೆಳೆದಿದೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ಮತ್ತು ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಎಪಿ ಯೋಜಿಸಿದೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ.

ಮುಂಬರುವ ಮುಂಗಾರು ಅಧಿವೇಶನದಲ್ಲಿ ಸುಗ್ರೀವಾಜ್ಞೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುವ ಸಾಧ್ಯತೆಯಿದೆ, ಇದು ಪ್ರತಿಪಕ್ಷಗಳ ಒಗ್ಗಟ್ಟಿಗೆ ದೊಡ್ಡ ಸವಾಲಾಗಿದೆ. ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಮತ್ತು ಭಾರತ್ ರಾಷ್ಟ್ರ ಸಮಿತಿಯಂತಹ ಹಲವಾರು ಪಕ್ಷಗಳು ಎಎಪಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿವೆ. ಕಾಂಗ್ರೆಸ್ ಇನ್ನೂ ಬಹಿರಂಗ ಘೋಷಣೆ ಮಾಡಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ