logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ttd News: ತಿರುಪತಿ ತಿರುಮಲ ದೇವಸ್ಥಾನಂಗೆ 3 ಕೋಟಿ ರೂಪಾಯಿ ದಂಡ ವಿಧಿಸಿದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ

TTD News: ತಿರುಪತಿ ತಿರುಮಲ ದೇವಸ್ಥಾನಂಗೆ 3 ಕೋಟಿ ರೂಪಾಯಿ ದಂಡ ವಿಧಿಸಿದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ

HT Kannada Desk HT Kannada

Mar 28, 2023 11:52 AM IST

TTD News: ತಿರುಪತಿ ತಿರುಮಲ ದೇವಸ್ಥಾನಂಗೆ 3 ಕೋಟಿ ರೂಪಾಯಿ ದಂಡ ವಿಧಿಸಿದ ಆರ್‌ಬಿಐ (HT Archives)

  • ಟಿಟಿಡಿಗೆ 10 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ, ಎಫ್‌ಸಿಆರ್‌ಎ ನಿಯಂತ್ರಣ ಮಂಡಳಿ ಮತ್ತು ದೇವಾಲಯದ ಟ್ರಸ್ಟ್ ನಡುವೆ ಮಾತುಕತೆ, ಚೌಕಾಶಿ ನಡೆದು ಅಂತಿಮವಾಗಿ ದಂಡದ ಮೊತ್ತವನ್ನು 3 ಕೋಟಿ ರೂ.ಗೆ ಇಳಿಸಲಾಗಿದೆ

TTD News: ತಿರುಪತಿ ತಿರುಮಲ ದೇವಸ್ಥಾನಂಗೆ 3 ಕೋಟಿ ರೂಪಾಯಿ ದಂಡ ವಿಧಿಸಿದ ಆರ್‌ಬಿಐ (HT Archives)
TTD News: ತಿರುಪತಿ ತಿರುಮಲ ದೇವಸ್ಥಾನಂಗೆ 3 ಕೋಟಿ ರೂಪಾಯಿ ದಂಡ ವಿಧಿಸಿದ ಆರ್‌ಬಿಐ (HT Archives) (HT_PRINT)

ತಿರುಪತಿ: ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ (ಎಫ್‌ಸಿಆರ್‌ಎ) ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು 3ಕೋಟಿ ರೂಪಾಯಿ ದಂಡ ವಿಧಿಸಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಟಿಟಿಡಿಗೆ ಈ ವಿಷಯದಲ್ಲಿ 10 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ, ಎಫ್‌ಸಿಆರ್‌ಎ ನಿಯಂತ್ರಣ ಮಂಡಳಿ ಮತ್ತು ದೇವಾಲಯದ ಟ್ರಸ್ಟ್ ನಡುವೆ ಮಾತುಕತೆ, ಚೌಕಾಶಿ ನಡೆದು ಅಂತಿಮವಾಗಿ ದಂಡದ ಮೊತ್ತವನ್ನು 3 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

"ಭಕ್ತರು ಸ್ವಯಂಪ್ರೇರಿತವಾಗಿ ನೀಡುವ ಕೊಡುಗೆ, ಕಾಣಿಕೆಗಳನ್ನು ಹೊರತುಪಡಿಸಿ ವಿದೇಶಿ ಕೊಡುಗೆಗಳನ್ನು ಪಡೆಯಲು, ಆಕರ್ಷಿಸಲು ಅಥವಾ ಸ್ವೀಕರಿಸಲು ತಿರುಪತಿ ತಿರುಮಲ ದೇವಸ್ಥಾನಂಗೆ ಯಾವುದೇ ಮಾರ್ಗಗಳು ಇಲ್ಲ ಎಂದು ಸಚಿವಾಲಯಕ್ಕೆ ತಿಳಿಸಿದ್ದೇವೆ" ಎಂದು ಟಿಟಿಡಿ ಅಧ್ಯಕ್ಷರಾದ ವೈವಿ ಸುಬ್ಬಾರೆಡ್ಡಿ ಹೇಳಿದ್ದಾರೆ.

ಹೀಗಿದ್ದರೂ, ದಂಡ ಪಾವತಿಸಿರುವುದನ್ನು ಅವರು ಒಪ್ಪಿದ್ದಾರೆ. ವಿದೇಶಿ ದೇಣಿಗೆ ಸ್ವೀಕರಿಸುವ ಸಂದರ್ಭದಲ್ಲಿ ಆಗಿರುವ ಕೆಲವೊಂದು ಲೋಪದೋಷಗಳಿಗಾಗಿ ಈ ದಂಡ ಪಾವತಿಸಲಾಗಿದೆ ಎಂದಿದ್ದಾರೆ.

ಟಿಟಿಡಿ ವಿದೇಶಿ ದೇಣಿಗೆಯನ್ನು ಬಳಸಿಕೊಂಡ ರೀತಿಯಲ್ಲೂ ಕೇಂದ್ರ ಸಚಿವಾಲಯ ತಪ್ಪು ಕಂಡುಹಿಡಿದಿದೆ ಎಂದು ವರದಿಗಳು ತಿಳಿಸಿವೆ. ಇದಲ್ಲದೆ, ಟಿಟಿಡಿ ವಿದೇಶಿ ಕೊಡುಗೆಗಳ ಮೂಲಕ ಗಳಿಸಿದ ಬಡ್ಡಿಯ ಬಳಕೆಯ ಬಗ್ಗೆಯೂ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ .

"ವಿದೇಶದಿಂದ ಟಿಟಿಡಿಗೆ ಭಕ್ತರು ನೀಡುವ ಕೊಡುಗೆಗಳನ್ನು ಭಾರತೀಯ ಕರೆನ್ಸಿಗೆ ಪರಿವರ್ತನೆ ಮಾಡುವುದರಲ್ಲಿ ವ್ಯತ್ಯಾಸವಾಗಿದೆ. ಈ ಮೊತ್ತವನ್ನು ಖರ್ಚು ಮಾಡುವುದಕ್ಕೂ ನಿಯಮ ಮತ್ತು ನಿಬಂಧನೆಗಳಿವೆ. ಖರ್ಚು ಮಾಡಿದ ಮೊತ್ತ ಅತ್ಯಲ್ಪವಾಗಿದ್ದರೂ ವಿದೇಶಿ ಕೊಡುಗೆಗಳನ್ನು ಖರ್ಚು ಮಾಡಿದ ರೀತಿಗೆ ಎಂಎಚ್‌ಎ ಆಕ್ಷೇಪಿಸಿದೆ ಎಂದು ಟಿಟಿಡಿ ಅಧ್ಯಕ್ಷರು ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದ ಟಿಟಿಡಿ ತನ್ನ ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. ತಿರುಮಲದ ವೆಂಕಟೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುವ ಟಿಟಿಡಿ ಮತ್ತು ರಾಜ್ಯ ಸರ್ಕಾರವು ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. ಇದರ ನವೀಕರಣವನ್ನು ಟಿಟಿಡಿ ವಿಳಂಬ ಮಾಡಿರುವುದೇ ತೊಂದರೆಗೆ ಕಾರಣ ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ ತಾಂತ್ರಿಕ ಕಾರಣಗಳಿಂದ ಎಫ್‌ಸಿಆರ್‌ಎ ನೋಂದಣಿ ಸ್ಥಗಿತಗೊಂಡಿದೆ. ಇದು ವಿದೇಶಿ ಕೊಡುಗೆ ದುರುಪಯೋಗದಿಂದ ಆಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಕಳೆದ ಐದು ವರ್ಷಗಳಲ್ಲಿ ಟಿಟಿಡಿಗೆ 30 ಕೋಟಿ ರೂ. ಮೌಲ್ಯದ ವಿದೇಶಿ ತೆರಿಗೆ ಸಂಗ್ರಹವಾಗಿದೆ.

ದಾನಿಗಳ ಗುರುತು ತಿಳಿಯದೆ ಇರುವುದರಿಂದ ಎಸ್‌ಬಿಐ ಬ್ಯಾಂಕ್‌ ಟಿಟಿಡಿಗೆ ಬಂದ ವಿದೇಶಿ ದೇಣಿಗೆಗಳನ್ನು ಠೇವಣಿಯಡಲು ನಿರಾಕರಿಸಿತ್ತು. 2020 ರಲ್ಲಿ ಎಫ್‌ಸಿಆರ್‌ಎಗೆ ಮಾಡಿದ ತಿದ್ದುಪಡಿಗಳ ಪ್ರಕಾರ, ಎನ್‌ಜಿಒಗಳು ವಿದೇಶಿ ಕೊಡುಗೆಗಳನ್ನು ಎಸ್‌ಬಿಐ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಈ ಕುರಿತು ಟಿಟಿಡಿಯು ಕೇಂದ್ರಕ್ಕೆ ಪತ್ರ ಬರೆದಿದೆ ಎನ್ನಲಾಗಿದೆ.

    ಹಂಚಿಕೊಳ್ಳಲು ಲೇಖನಗಳು