logo
ಕನ್ನಡ ಸುದ್ದಿ  /  Nation And-world  /  Germany Recession Why Recession In Germany Impact On Indian Economy India Trade Inflation Check Explainer Here Uks

Germany recession: ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ, ಏನಿದು ವಿದ್ಯಮಾನ; ಭಾರತದ ಮೇಲೇನು ಪರಿಣಾಮ, ಇಲ್ಲಿದೆ ವಿವರಣೆ

Umesh Kumar S HT Kannada

May 30, 2023 05:27 PM IST

ಜರ್ಮನ್‌ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕ ಡಿಎಎಕ್ಸ್‌ (ಜರ್ಮನಿಯ ಆರ್ಥಿಕ ಹಿಂಜರಿತಕ್ಕೆ ಸಾಂಕೇತಿಕವಾಗಿ ಬಳಸಲಾಗಿರುವ ಚಿತ್ರ)

  • Germany recession Expaliner: ಜರ್ಮನಿಯಲ್ಲಿನ ಆರ್ಥಿಕ ಹಿಂಜರಿತದ ಹಿಂದಿನ ಕಾರಣ ಮತ್ತು ಅದು ಭಾರತದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಸರಳ ವಿವರಣೆ ನೀಡುವ ಪ್ರಯತ್ನ ಇದು.

ಜರ್ಮನ್‌ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕ ಡಿಎಎಕ್ಸ್‌ (ಜರ್ಮನಿಯ ಆರ್ಥಿಕ ಹಿಂಜರಿತಕ್ಕೆ ಸಾಂಕೇತಿಕವಾಗಿ ಬಳಸಲಾಗಿರುವ ಚಿತ್ರ)
ಜರ್ಮನ್‌ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕ ಡಿಎಎಕ್ಸ್‌ (ಜರ್ಮನಿಯ ಆರ್ಥಿಕ ಹಿಂಜರಿತಕ್ಕೆ ಸಾಂಕೇತಿಕವಾಗಿ ಬಳಸಲಾಗಿರುವ ಚಿತ್ರ) (Photo by Daniel ROLAND / AFP)

ಜಗತ್ತಿನ ನಾಲ್ಕನೇ ಅತಿದೊಡ್ಡ ಅರ್ಥವ್ಯವಸ್ಥೆ ಜರ್ಮನಿ (Germany). ಆರ್ಥಿಕ ವರ್ಷದ ಎರಡು ತ್ರೈಮಾಸಿಕದಲ್ಲಿನ ಋಣಾತ್ಮಕ ಜಿಡಿಪಿ ಬೆಳವಣಿಗೆ ದಾಖಲಾದ ಕಾರಣ, ಜರ್ಮನಿ ಆರ್ಥಿಕ ಹಿಂಜರಿತ (Recession in Germany) ಎದುರಿಸುತ್ತಿರುವುದು ಕಳೆದ ವಾರ ದೃಢವಾಗಿದೆ.

ಟ್ರೆಂಡಿಂಗ್​ ಸುದ್ದಿ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ಯುರೋಪ್‌ನ ಅತಿದೊಡ್ಡ ಅರ್ಥವ್ಯವಸ್ಥೆಯಾಗಿರುವ ಜರ್ಮನಿಯು, 2022 ರ ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇಕಡ 0.5 ಕುಸಿತ ದಾಖಲಿಸಿತ್ತು. ಇದೇ ರೀತಿ, ಫೆಡರಲ್‌ ಸ್ಟ್ಯಾಟಿಸ್ಟಿಕಲ್‌ ಆಫೀಸ್‌ ಇತ್ತೀಚೆಗೆ ಬಿಡುಗಡೆ ಮಾಡಿದ ಡೇಟಾದಲ್ಲಿ ಜನವರಿಯಿಂದ ಮಾರ್ಚ್‌ ತನಕದ ಜರ್ಮನಿಯ ಒಟ್ಟು ದೇಶೀಯ ಉತ್ಪನ್ನ ಅಥವಾ ಜಿಡಿಪಿಯು ಶೇಕಡ 0.3 ಕುಸಿತ ಕಂಡಿದೆ.

ಸತತ ಎರಡು ತ್ರೈಮಾಸಿಕಗಳ ಜಿಡಿಪಿ ಕುಸಿತವು ಹಿಂಜರಿತದ ಸಾಮಾನ್ಯ ವ್ಯಾಖ್ಯಾನವಾಗಿ ಪ್ರಸ್ತಾಪಿಸಲ್ಪಡುತ್ತದೆ. ಆದರೂ ಯೂರೋ ಪ್ರದೇಶದ ಬಿಜಿನೆಸ್‌ ಸೈಕಲ್‌ ಡೇಟಿಂಗ್‌ ಕಮಿಟಿಯ ಅರ್ಥಶಾಸ್ತ್ರಜ್ಞರು, ಅರ್ಥಿವ್ಯವಸ್ಥೆಯನ್ನು ಅಂದಾಜಿಸಲು ಉದ್ಯೋಗ ಅಂಕಿಅಂಶ ಸೇರಿ ವಿಸ್ತೃತ ಡೇಟಾವನ್ನು ಬಳಸುತ್ತಾರೆ.

ಜರ್ಮನಿಯಲ್ಲಿನ ಆರ್ಥಿಕ ಹಿಂಜರಿತದ ಹಿಂದಿನ ಕಾರಣ ಮತ್ತು ಅದು ಭಾರತದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಸರಳ ವಿವರಣೆ ನೀಡುವ ಪ್ರಯತ್ನ ಇದು.

ಆರ್ಥಿಕ ಹಿಂಜರಿತಕ್ಕೆ ಜರ್ಮನಿ ಜಾರಿತೇಕೆ?

ಕೋವಿಡ್‌ ಸೋಂಕಿನ ಕೊರೊನಾ ವೈರಸ್‌ ಸಾಂಕ್ರಾಮಿಕ ಕಾರಣ 2020ರ ಆರಂಭದಲ್ಲಿ ಯುರೋಪ್‌ ತತ್ತರಿಸಿತ್ತು. ಅಂದು ದೊಡ್ಡ ಪ್ರಮಾಣದ ಲಾಕ್‌ಡೌನ್‌ ಮಾಡಲಾಗಿತ್ತು. ಆಗ ಜರ್ಮನಿ ಆರ್ಥಿಕ ಹಿಂಜರಿತ ಅನುಭವಿಸಿತ್ತು. ಅದಾದ ನಂತರದಲ್ಲಿ ಈಗ ಮತ್ತೆ ಜರ್ಮನಿ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ಇದಕ್ಕೆ ಕಾರಣ ಹಲವು.

ಉಕ್ರೇನ್‌ನಲ್ಲಿನ ಯುದ್ಧ, ಏರುತ್ತಿರುವ ಹಣದುಬ್ಬರ ಮತ್ತು ಕೋವಿಡ್‌-19 ಸಾಂಕ್ರಾಮಿಕದ ಕಾರಣ ಜಾಗತಿಕ ಆರ್ಥಿಕತೆಗೆ ಎದುರಾಗಿರುವ ಸವಾಲುಗಳು ಮುಖ್ಯವಾಗಿ ಕಂಡುಬರುತ್ತದೆ. ಹೀಗಾಗಿ, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಆರ್ಥಿಕ ಹಿಂಜರಿತವನ್ನು ನೋಡುವ ಸಾಧ್ಯತೆಯನ್ನು ಅಲ್ಲಗಳೆಯುವಂತೆ ಇಲ್ಲ.

ಉಕ್ರೇನ್ ಮೇಲೆ ರಷ್ಯಾ ಸಮರ

ಉಕ್ರೇನ್‌ ಮೇಲೆ ರಷ್ಯಾ ಸಮರ ಸಾರಿದ ಕಾರಣ ಉಂಟಾಗಿರುವ ಸಮಸ್ಯೆಗಳು ಅನೇಕ. ಇಂಧನ ದರ ತೀವ್ರವಾಗಿ ಹೆಚ್ಚಳವಾಗುವುದಕ್ಕೆ ಈ ಯುದ್ಧ ಕಾರಣವಾಗಿದೆ. ಇದರ ನೇರ ಮತ್ತು ಪರೋಕ್ಷ ಪರಿಣಾಮ ವ್ಯಾಪಾರೋದ್ಯಮ ಮತ್ತು ಗ್ರಾಹಕರ ಮೇಲಾಗಿವೆ. ಸಪ್ಲೈ ಚೇನ್‌ ಅಥವಾ ಪೂರೈಕೆ ಜಾಲವನ್ನು ಕೂಡ ಯುದ್ಧ ಗಂಭೀರವಾಗಿ ಬಾಧಿಸಿದೆ.

ಜಗತ್ತಿನ ವಿವಿಧ ದೇಶಗಳಿಗೆ ತಲುಪಬೇಕಾದ ಸಾಮಗ್ರಿಗಳು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ. ಇದು ಜಾಗತಿಕ ಪೂರೈಕೆ ಜಾಲವನ್ನಷ್ಟೇ ಅಲ್ಲ, ಆರ್ಥಿಕತೆಯ ಮೇಲೂ ನಕಾರಾತ್ಮ ಪರಿಣಾಮ ಬೀರಿದೆ.

ಏರುತ್ತಿರುವ ಹಣದುಬ್ಬರ

ಉಕ್ರೇನ್‌ನಲ್ಲಿನ ಯುದ್ಧದ ಜತೆಗೆ, ಏರುತ್ತಿರುವ ಹಣದುಬ್ಬರವು ಜರ್ಮನ್ ಆರ್ಥಿಕತೆಗೆ ಪ್ರಮುಖ ಸವಾಲಾಗಿ ಕಾಣಿಸಿಕೊಂಡಿದೆ. ಜರ್ಮನಿಯಲ್ಲಿ ಹಣದುಬ್ಬರವು ಪ್ರಸ್ತುತ 7.4 ಪ್ರತಿಶತದ ದಾಖಲೆಯ ಗರಿಷ್ಠ ಮಟ್ಟದಲ್ಲಿದೆ. ಮುಂಬರುವ ತಿಂಗಳುಗಳಲ್ಲಿ ಇದು ಹೆಚ್ಚಾಗುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಹಣದುಬ್ಬರವು ಮನೆಯ ಆದಾಯವನ್ನು ತಿನ್ನುತ್ತಿದೆ. ಇದು ಗ್ರಾಹಕರ ವೆಚ್ಚದಲ್ಲಿ ಕುಸಿತಕ್ಕೆ ಕಾರಣವಾಗುತ್ತಿದೆ. ಇದು ಆರ್ಥಿಕತೆಯ ಮೇಲೂ ದುಷ್ಪರಿಣಾಮವನ್ನು ಉಂಟುಮಾಡಿದೆ.

ಕೋವಿಡ್‌ ಸೋಂಕಿನ ಕಾರಣದ ಸವಾಲುಗಳು

ಜಾಗತಿಕವಾಗಿ ಸವಾಲನ್ನು ಒಡ್ಡಿರುವ ಕೋವಿಡ್‌ ಸೋಂಕು, ಜರ್ಮನಿಯ ಆರ್ಥಿಕತೆಯ ಮೇಲೂ ಹಲವು ಸವಾಲುಗಳನ್ನು ಒಡ್ಡಿದೆ. ವೈದ್ಯಕೀಯ, ಆರೋಗ್ಯದ ಜತೆಗೆ ವಾಣಿಜ್ಯ ರಂಗಕ್ಕೂ ಹಲವು ಸವಾಲುಗಳನ್ನು ಒಡ್ಡಿದ್ದು, ಜನಜೀವನ ಸುಧಾರಿಸುವುದಕ್ಕೆ ತ್ರಾಸ ನೀಡಿದೆ.

ಜರ್ಮನಿಯ ಆರ್ಥಿಕ ಹಿಂಜರಿತ, ಭಾರತದ ಅರ್ಥ ವ್ಯವಸ್ಥೆಯ ಮೇಲೇನು ಪರಿಣಾಮ

ಜರ್ಮನಿಯು ಯುರೋಪಿನ ಅತಿದೊಡ್ಡ ಆರ್ಥಿಕತೆ. ಈ ಅರ್ಥ ವ್ಯವಸ್ಥೆಯ ಆರೋಗ್ಯವು 20 ಸದಸ್ಯರಿರುವ ಯುರೋ ವಲಯ ಮತ್ತು ವಿಶಾಲ ಯುರೋಪ್‌ ಒಕ್ಕೂಟದ ಅರ್ಥ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸಹಜವಾಗಿಯೇ ಇದು ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಉಂಟುಮಾಡುವಂಥದ್ದೇ.

ಯುರೋಪ್‌ ಒಕ್ಕೂಟಕ್ಕೆ ಉಡುಪು, ಪಾದರಕ್ಷೆ ಮತ್ತು ಚರ್ಮದ ವಸ್ತು ಮುಂತಾದವುಗಳನ್ನು ಭಾರತ ರಫ್ತು ಮಾಡುತ್ತದೆ. ಇದರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದು ತಜ್ಞರ ಅಭಿಮತ.

ಜರ್ಮನಿಗೆ ಭಾರತದ ರಫ್ತು (2022-23)

ಯಂತ್ರೋಪಕರಣ - 1.5 ಶತಕೋಟಿ ಡಾಲರ್‌

ಎಲೆಕ್ಟ್ರಾನಿಕ್ಸ್‌ - 1.2 ಶತಕೋಟಿ ಡಾಲರ್‌

ಸ್ಮಾರ್ಟ್‌ಫೋನ್‌ - 458 ಮಿಲಿಯನ್‌ ಡಾಲರ್‌

ಉಡುಪು- 990 ಮಿಲಿಯನ್‌ ಡಾಲರ್‌

ಸಾವಯವ ರಾಸಾಯನಿಕಗಳು- 822 ಮಿಲಿಯನ್‌ ಡಾಲರ್‌

ಪಾದರಕ್ಷೆ - 332 ಮಿಲಿಯನ್‌ ಡಾಲರ್‌

ಚರ್ಮದ ಸರಕು- 305 ಮಿಲಿಯನ್ ಡಾಲರ್‌

ಕಬ್ಬಿಣ ಮತ್ತು ಉಕ್ಕಿನ ಸಾಮಗ್ರಿ - 474 ಮಿಲಿಯನ್ ಡಾಲರ್‌

ಆಟೋ ಕಂಪೋನೆಂಟ್ಸ್ 406 ಮಿಲಿಯನ್‌ ಡಾಲರ್‌

ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಮುಂಬೈ ಮೂಲದ ರಫ್ತುದಾರ ಮತ್ತು ಟೆಕ್ನೋಕ್ರಾಫ್ಟ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಶರದ್‌ ಕುಮಾರ್‌ ಸರಾಫ್‌ ನೀಡಿದ ಮಾಹಿತಿ ಪ್ರಕಾರ, ಈ ಆರ್ಥಿಕ ಹಿಂಜರಿತವು ಜರ್ಮನಿಗೆ ಮಾತ್ರವಲ್ಲ. ಯುರೋಪ್‌ಗೆ ಭಾರತ ಮಾಡುವ ರಫ್ತಿನ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಇತರೆ ರಾಷ್ಟ್ರಗಳು ಕೂಡ ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ. ಇನ್ನೊಂದೆಡೆ, ಜರ್ಮನಿಯು ಭಾರತದಲ್ಲಿ ಒಂಬತ್ತನೇ ಅತಿ ದೊಡ್ಡ ಹೂಡಿಕೆದಾರ ರಾಷ್ಟ್ರ. ಆರ್ಥಿಕ ಹಿಂಜರಿತದ ಪರಿಸ್ಥಿತಿಗಳಲ್ಲಿ, ಜರ್ಮನ್ ಕಂಪನಿಗಳು ಅಗ್ಗದ ಪರ್ಯಾಯಗಳನ್ನು ನೋಡುವುದರಿಂದ ಅಲ್ಲಿಂದ ಹೂಡಿಕೆಗಳು ಪರಿಣಾಮ ಬೀರುವುದಿಲ್ಲ. ಇದಲ್ಲದೆ, ಜರ್ಮನಿಯಿಂದ ಶೀಘ್ರದಲ್ಲೇ ವಿಧಿಸಲಿರುವ ಇಂಗಾಲದ ಗಡಿ ತೆರಿಗೆಯಿಂದಾಗಿ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳ ರಫ್ತು ಕೂಡ ಪರಿಣಾಮ ಬೀರುತ್ತದೆ.

    ಹಂಚಿಕೊಳ್ಳಲು ಲೇಖನಗಳು