logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today March 28: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ; ಇಂದಿನ ಚಿನ್ನಾಭರಣ ದರ ಹೀಗಿದೆ

Gold Price Today March 28: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ; ಇಂದಿನ ಚಿನ್ನಾಭರಣ ದರ ಹೀಗಿದೆ

Raghavendra M Y HT Kannada

Mar 28, 2023 06:38 AM IST

ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ತಿಳಿಯಿರಿ

  • ಚಿನಿವಾರ ಪೇಟೆಯಲ್ಲಿಂದು ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದರೆ ಒಮ್ಮೆ ಬೆಲೆಗಳನ್ನು ಪರಿಶೀಲಿಸಿ ಆ ನಂತರ ಖರೀದಿಗೆ ಮುಂದಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರದ ಮಾಹಿತಿ ಇಲ್ಲಿದೆ.

ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ತಿಳಿಯಿರಿ
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ತಿಳಿಯಿರಿ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ(Gold and Silver price) ಇಂದು (ಮಾ.28, ಮಂಗಳವಾರ) ಕೊಂಚ ಇಳಿಕೆಯಾಗಿದೆ. ಸತತ ಎರಡು ದಿನಗಳಿಂದ ಚಿನ್ನಾಭರಣಗಳ ದರಗಳು ಕಡಿಮೆಯಾಗುತ್ತಿರುವುದು ಚಿನ್ನಾಭರಣ ಪ್ರಿಯರಿಗೆ ಸಂತಸದ ವಿಷಯವಾಗಿದೆ. ನೀವು ಏನಾದರೂ ಆಭರಣಗಳನ್ನು ಖರೀದಿಸಲು ಪ್ಲಾನ್ ಮಾಡಿದ್ದರೆ ಚಿನ್ನಾಭರಣಗಳ ಬೆಲೆಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 110 ರೂಪಾಯಿ ಇಳಿಕೆಯಾಗಿದೆ. ಆ ಬಳಿಕ 59,790 ರೂಪಾಯಿ ಇದೆ. ನಿನ್ನೆ 59,890 ರೂಪಾಯಿ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ತಗ್ಗಿದ ನಂತರ 54,800 ರೂಪಾಯಿಗೆ ಬಂದು ನಿಂತಿದೆ. ನಿನ್ನೆ 54,900 ರೂಪಾಯಿ ಇತ್ತು.

ಒಂದು ಕೆಜಿ ಬೆಳ್ಳಿ ಬೆಲೆ ಇಂದು 76,000 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲಿ ಇವತ್ತು ಯಾವುದೇ ರೀತಿಯ ಏರಿಳಿತವಾಗಿಲ್ಲ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇಂದು ಇದೇ ದರಗಳಲ್ಲಿ ಮಾರಾಟವಾಗುತ್ತಿವೆ.

ದೇಶದ ಇತರೆ ಪ್ರಮುಖ ನಗರಗಲ್ಲಿನ ಚಿನ್ನ, ಬೆಳ್ಳಿ ದರಗಳು:

Gold and silver rate in india: ಹೈದರಾಬಾದ್ ನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಮೇಲೆ 150 ರೂಪಾಯಿ ಇಳಿಕೆಯಾದ ನಂತರ 59,690 ರೂಪಾಯಿ ಇದೆ. ನಿನ್ನೆ 59,840 ರೂಪಾಯಿ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್ ಚಿನ್ನದ ದರದಲ್ಲಿ 140 ರೂಪಾಯಿ ಕಡಿಮೆಯಾದ ನಂತರ 54,710 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ. ಈ ಬೆಲೆ ನಿನ್ನೆ 54,850 ರೂಪಾಯಿ ಇತ್ತು.

ಹೈದರಾಬಾದ್ ಮಾರುಕಟ್ಟೆಯಲ್ಲೂ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ಏರಿಳಿತವಾಗಿಲ್ಲ. ಪ್ರಸ್ತುತ 76,000 ರೂಪಾಯಿಗೆ ವ್ಯಾಪಾರ ಆಗುತ್ತಿದೆ. ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,7100 ಆಗಿದೆ. 24 ಕ್ಯಾರೆಟ್ ಚಿನ್ನಕ್ಕೆ 59,690 ರೂಪಾಯಿ ಇದೆ. ಇಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 76,000 ರೂಪಾಯಿಗೆ ಇದೆ. ವಿಶಾಖಪಟ್ಟಣಂ ಮಾರುಕಟ್ಟೆಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 54,710 ರೂಪಾಯಿ ಆಗಿದ್ದು, 24ಕ್ಯಾರೆಟ್ ಚಿನ್ನದ ಬೆಲೆ 59,690 ರೂಪಾಯಿಗೆ ಇಳಿದಿದೆ.

ದೇಶದ ಇತರ ನಗರಗಳಿಗೆ ಹೋಲಿಸಿಕೊಂಡಾಗ ನೆರೆಯ ಚೆನ್ನೈನಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿದೆ. ಚೆನ್ನೈನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ 400 ರೂಪಾಯಿ ಏರಿಕೆಯಾಗಿ 55,350 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 410 ರೂಪಾಯಿ ಹೆಚ್ಚಳದ ಬಳಿಕ 60,400 ರೂಪಾಯಿ ಇದೆ, ನಿನ್ನೆ 59,990 ರೂಪಾಯಿಯಲ್ಲಿ ವಹಿವಾಟು ನಡೆಸಿತ್ತು. ಚೆನ್ನೈನಲ್ಲೂ ಕೆಜಿ ಬೆಳ್ಳಿ 76,000 ರೂಪಾಯಿ ಇದೆ.

ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 54,710 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,690 ರೂಪಾಯಿ ಇದೆ. ದೇಶದ ವಾಣಿಜ್ಯ ನಗರಿಯಲ್ಲಿ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿ ಕಡಿಮೆಯಾಗಿದೆ. ಪ್ರಸ್ತುತ ಅಲ್ಲಿ ಕೆಜಿ ಬೆಳ್ಳಿ ಬೆಲೆ 73,300 ರೂಪಾಯಿ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 54,900 ರೂ., 24 ಕ್ಯಾರೆಟ್ ಚಿನ್ನದ ಬೆಲೆ 59,880 ರೂಪಾಯಿಯಲ್ಲಿ ವ್ಯಾಪಾರ ಮುಂದುವರೆಯುತ್ತಿದೆ. ಇಲ್ಲಿ ಬೆಳ್ಳಿ ಬೆಲೆ 73,300 ರೂಪಾಯಿಗೆ ವಹಿವಾಟು ನಡೆಸುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ