logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today March 31: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿ; ಇಂದಿನ ಚಿನ್ನಾಭರಣ ದರ ಹೀಗಿದೆ

Gold Price Today March 31: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿ; ಇಂದಿನ ಚಿನ್ನಾಭರಣ ದರ ಹೀಗಿದೆ

HT Kannada Desk HT Kannada

Mar 31, 2023 06:03 AM IST

ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ತಿಳಿಯಿರಿ

  • ಚಿನಿವಾರ ಪೇಟೆಯಲ್ಲಿ ಸತತ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಏರಿಳಿತವಾಗಿಲ್ಲ. ಅಂದರೆ ಯಥಾಸ್ಥಿತಿಯಲ್ಲಿದೆ. ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದರೆ ಒಮ್ಮೆ ಬೆಲೆಗಳನ್ನು ಪರಿಶೀಲಿಸಿ ಆ ನಂತರ ಖರೀದಿಗೆ ಮುಂದಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರದ ಮಾಹಿತಿ ಹೀಗಿದೆ.

ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ತಿಳಿಯಿರಿ
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ತಿಳಿಯಿರಿ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ(Gold and Silver price) ಇಂದು (ಮಾ.31, ಶುಕ್ರವಾರ) ಯಾವುದೇ ರೀತಿಯ ಏರಿಳಿತವಾಗಿಲ್ಲ. ಅಂದರೆ ಸತತ ಎರಡು ದಿನಗಳಿಂದ ಚಿನ್ನಾಭರಣಗಳ ದರಗಳು ಯಥಾಸ್ಥಿತಿಯಲ್ಲಿವೆ. ನೀವು ಏನಾದರೂ ಆಭರಣಗಳನ್ನು ಖರೀದಿಸಲು ಪ್ಲಾನ್ ಮಾಡಿದ್ದರೆ ಚಿನ್ನಾಭರಣಗಳ ಬೆಲೆಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 59,720 ರೂಪಾಯಿ ಇದೆ. ನಿನ್ನೆಯೂ ಇದೇ ದರ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 54,750 ರೂಪಾಯಿಗೆ ಬಂದು ನಿಂತಿದೆ. ನಿನ್ನೆ ಕೂಡ ಇದೇ ದರದಲ್ಲಿ ವಹಿವಾಟು ನಡೆಸಸಿತ್ತು.

ಒಂದು ಕೆಜಿ ಬೆಳ್ಳಿ ಬೆಲೆ ಇಂದು 76,200 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲಿ ಇವತ್ತು 200 ರೂಪಾಯಿ ಏರಿಕೆಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆ 76,000 ರೂಪಾಯಿ ಇತ್ತು. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇಂದು ಇದೇ ದರಗಳಲ್ಲಿ ಮಾರಾಟವಾಗುತ್ತಿವೆ.

ದೇಶದ ಇತರೆ ಪ್ರಮುಖ ನಗರಗಲ್ಲಿನ ಚಿನ್ನ, ಬೆಳ್ಳಿ ದರಗಳು:

Gold and silver rate in india: ಹೈದರಾಬಾದ್ ನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಮೇಲೆ 59,670 ರೂಪಾಯಿ ಇದೆ. ಅದೇ ರೀತಿಯಾಗಿ 22 ಕ್ಯಾರೆಟ್ ಚಿನ್ನದ ದರ 54,700 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.

ಹೈದರಾಬಾದ್ ಮಾರುಕಟ್ಟೆಯಲ್ಲೂ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 500 ರೂಪಾಯಿ ಏರಿಕೆ ಆಗಿದೆ. ಪ್ರಸ್ತುತ 76,200 ರೂಪಾಯಿಗೆ ವ್ಯಾಪಾರ ಆಗುತ್ತಿದೆ. ನಿನ್ನೆ ಈ ದರ 75,700 ರೂಪಾಯಿ ಇತ್ತು.

ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,700 ಆಗಿದೆ. 24 ಕ್ಯಾರೆಟ್ ಚಿನ್ನಕ್ಕೆ 59,670 ರೂಪಾಯಿ ಇದೆ. ಇಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 76,200 ರೂಪಾಯಿಗೆ ಇದೆ. ವಿಶಾಖಪಟ್ಟಣಂ ಮಾರುಕಟ್ಟೆಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 54,700 ರೂಪಾಯಿ ಆಗಿದ್ದು, 24ಕ್ಯಾರೆಟ್ ಚಿನ್ನದ ಬೆಲೆ 59,670 ರೂಪಾಯಿಗೆ ಇಳಿದಿದೆ.

ದೇಶದ ಇತರ ನಗರಗಳಿಗೆ ಹೋಲಿಸಿಕೊಂಡಾಗ ನೆರೆಯ ಚೆನ್ನೈನಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿದೆ. ಚೆನ್ನೈನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ 200 ರೂಪಾಯಿ

ಏರಿಕೆಯಾಗಿ 55,650 ರೂಪಾಯಿಗೆ ತಲುಪಿದೆ. ನಿನ್ನೆ ಈ ದರ 55,450 ರೂಪಾಯಿ ಇತ್ತು. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 220 ರೂಪಾಯಿ ಹೆಚ್ಚಳದ ಬಳಿಕ 60,710 ರೂಪಾಯಿ ಇದೆ, ನಿನ್ನೆ 60,490 ರೂಪಾಯಿಯಲ್ಲಿ ವಹಿವಾಟು ನಡೆಸಿತ್ತು. ಚೆನ್ನೈನಲ್ಲೂ ಕೆಜಿ ಬೆಳ್ಳಿ 76,200 ರೂಪಾಯಿ ಇದೆ.

ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 54,700 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,670 ರೂಪಾಯಿ ಇದೆ. ದೇಶದ ವಾಣಿಜ್ಯ ನಗರಿಯಲ್ಲಿ ಬೆಳ್ಳಿ ಬೆಲೆಯಲ್ಲಿ 300 ರೂಪಾಯಿ ಏರಿಕೆಯಾಗಿದೆ. ಪ್ರಸ್ತುತ ಅಲ್ಲಿ ಕೆಜಿ ಬೆಳ್ಳಿ ಬೆಲೆ 73,300 ರೂಪಾಯಿ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 54,850 ರೂ., 24 ಕ್ಯಾರೆಟ್ ಚಿನ್ನದ ಬೆಲೆ 59,820 ರೂಪಾಯಿಯಲ್ಲಿ ವ್ಯಾಪಾರ ಮುಂದುವರೆಯುತ್ತಿದೆ. ಇಲ್ಲಿ ಬೆಳ್ಳಿ ಬೆಲೆ 73,300 ರೂಪಾಯಿಗೆ ವಹಿವಾಟು ನಡೆಸುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ