logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today January 27: ಚಿನಿವಾರ ಪೇಟೆಗೆ ಹುರುಪು, ಚಿನ್ನ, ಬೆಳ್ಳಿ ದರ ಏರಿಕೆ, ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ದರವೆಷ್ಟು?

Gold Price Today January 27: ಚಿನಿವಾರ ಪೇಟೆಗೆ ಹುರುಪು, ಚಿನ್ನ, ಬೆಳ್ಳಿ ದರ ಏರಿಕೆ, ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ದರವೆಷ್ಟು?

HT Kannada Desk HT Kannada

Jan 27, 2023 06:51 AM IST

Gold Price Today January 27: ಚಿನಿವಾರ ಪೇಟೆಗೆ ಹುರುಪು, ಚಿನ್ನ, ಬೆಳ್ಳಿ ದರ ಏರಿಕೆ

    • Gold Silver Price in Karnataka: ಮದುವೆ ಸೇರಿದಂತೆ ವಿವಿಧ ಶುಭ ಕಾರ್ಯಕ್ರಮ, ಹೂಡಿಕೆ, ಉಡುಗೊರೆ ಕಾರಣಗಳಿಗಾಗಿ ಚಿನ್ನ ಖರೀದಿಸಲು ಇಂದು ಚಿನಿವಾರ ಪೇಟೆಗೆ ಹೋಗುವುದಾದರೆ ನಿನ್ನೆಗಿಂತ ಇಂದು ತುಸು ಹೆಚ್ಚು ಹಣ ನೀಡಲು ಸಿದ್ಧರಿರಬೇಕು. ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯದ ಪ್ರಮುಖ ನಗರಗಳಲ್ಲಿಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.
Gold Price Today January 27: ಚಿನಿವಾರ ಪೇಟೆಗೆ ಹುರುಪು, ಚಿನ್ನ, ಬೆಳ್ಳಿ ದರ ಏರಿಕೆ
Gold Price Today January 27: ಚಿನಿವಾರ ಪೇಟೆಗೆ ಹುರುಪು, ಚಿನ್ನ, ಬೆಳ್ಳಿ ದರ ಏರಿಕೆ

ಕಳೆದ ಕೆಲವು ದಿನಗಳಿಂದ ತುಸು ಏರಿಳಿತಗಳಿಗೆ ಸಾಕ್ಷಿಯಾಗಿದ್ದ ಚಿನ್ನದ ದರ ಇಂದು ತುಸು ಹೆಚ್ಚೇ ಏರಿಕೆ ಕಂಡಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಏರಿಕೆ ಕಾಣುವ ಮುನ್ಸೂಚನೆ ದೊರಕಿದೆ. ಹಣದುಬ್ಬರ ಹೊಡೆತಕ್ಕೆ ಬಂಗಾರ ದುಬಾರಿಯಾಗಿದೆ. ಹಳದಿ ಲೋಹಗಳ ಬೆಲೆಗಳು ವೇಗವಾಗಿ ಏರಿಕೆ ಕಾಣುತ್ತಿದೆ. ಕಳೆದ ನವೆಂಬರ್‌ನಲ್ಲಿ 10 ಗ್ರಾಂ ಚಿನ್ನದ ದರ (೨೪ ಕ್ಯಾರೆಟ್‌) 53 ಸಾವಿರ ರೂ. ಇದ್ದರೆ, ಈಗ 58 ಸಾವಿರ ರೂ. ದಾಟಿದೆ. ನಿತ್ಯ ಹತ್ತಿಪ್ಪತ್ತು ರೂ. ಏರಿಕೆ, ಇಳಿಕೆ ಇದ್ದರೂ ದೀರ್ಘಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ದರ ಹೆಚ್ಚಳವಾಗುತ್ತಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಮದುವೆ, ಇತರೆ ಶುಭ ಕಾರ್ಯಕ್ರಮ, ಹೂಡಿಕೆ, ಉಡುಗೊರೆ ಕಾರಣಗಳಿಗಾಗಿ ಚಿನ್ನ ಖರೀದಿಸಲು ಇಂದು ಚಿನಿವಾರ ಪೇಟೆಗೆ ಹೋಗುವುದಾದರೆ ನಿನ್ನೆಗಿಂತ ಇಂದು ತುಸು ಹೆಚ್ಚು ಹಣ ನೀಡಲು ಸಿದ್ಧರಿರಬೇಕು. ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯದ ಪ್ರಮುಖ ನಗರಗಳಲ್ಲಿಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

ಇಂದು ಎಷ್ಟು ದುಬಾರಿ?

ಇಂದು 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 400 ರೂ. ಏರಿಕೆಯಾದರೆ, 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 440 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 100 ರೂ. ಹೆಚ್ಚಳವಾಗಿದೆ. 22 ಕ್ಯಾರೆಟ್‌ ಚಿನ್ನದ ದರ ಇಂದು ಒಂದು ಗ್ರಾಂಗೆ 40 ರೂ., 8 ಗ್ರಾಂಗೆ 320 ರೂ., 10 ಗ್ರಾಂಗೆ 400 ರೂ., ಮತ್ತು 100 ಗ್ರಾಂಗೆ 4 ಸಾವಿರ ರೂ. ಹೆಚ್ಚಳವಾಗಿದೆ. ಇದೇ ರೀತಿ 24 ಕ್ಯಾರೆಟ್‌ ಚಿನ್ನದ ದರ ಇಂದು ಒಂದು ಗ್ರಾಂಗೆ 43 ರೂ., 8 ಗ್ರಾಂ.ಗೆ 344 ರೂ., 10 ಗ್ರಾಂ.ಗೆ 430 ರೂ., 100 ಗ್ರಾಂ.ಗೆ 4300 ರೂ. ಹೆಚ್ಚಳವಾಗಿದೆ.

22 ಕ್ಯಾರೆಟ್‌ ಚಿನ್ನದ ದರ (22 carat gold rate)

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5315 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 42520 ರೂ. ನೀಡಬೇಕು. ಹತ್ತು ಗ್ರಾಂ ಚಿನ್ನದ ದರ ಇಂದು 53150 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 531500 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನದ ದರ (24 carat gold rate)

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5798 ರೂ. ಇದೆ. ಎಲ್ಲಾದರೂ ನೀವು ಎಂಟು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46384 ರೂ. ನೀಡಬೇಕು. ಹತ್ತು ಗ್ರಾಂ ಚಿನ್ನದ ದರ ಇಂದು 57980 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 579800 ರೂ. ನೀಡಬೇಕು.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 53,150 ರೂ. ಇದೆ. ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರದಲ್ಲಿ ವ್ಯತ್ಯಾಸವೂ ಇರಬಹುದು. ಹೊರರಾಜ್ಯಗಳ ದರ ಈ ಮುಂದಿನಂತೆ ಇದೆ. ಚೆನ್ನೈ – 53,800 ರೂ., ಮುಂಬೈ- 53,100 ರೂ., ದೆಹಲಿ- 53,250 ರೂ., ಕೊಲ್ಕತ್ತಾ- 53,100 ರೂ., ಹೈದರಾಬಾದ್- 53,100 ರೂ., ಕೇರಳ- 53,100 ರೂ., ಪುಣೆ- 53,100 ರೂ. ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 57,980 ರೂ. ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಹೊರರಾಜ್ಯಗಳಲ್ಲಿ ದರ ಹೀಗಿದೆ, ಚೆನ್ನೈ- 57,930 ರೂ., ಮುಂಬೈ- 57,930 ರೂ., ದೆಹಲಿ- 58,080 ರೂ., ಕೊಲ್ಕತ್ತಾ- 57,930 ರೂ., ಹೈದರಾಬಾದ್- 57,930 ರೂ., ಕೇರಳ- 57,930 ರೂ., ಪುಣೆ- 57,930 ರೂ. ಇದೆ.

ಬೆಳ್ಳಿ ದರ ಎಷ್ಟಿದೆ?

ಇಂದು ವಿವಿಧ ನಗರಗಳಲ್ಲಿ ಬೆಳ್ಳಿ ದರ ಈ ಮುಂದಿನಂತೆ ಇದೆ. ಬೆಂಗಳೂರು- 75,000 ರೂ., ಮೈಸೂರು- 75,000 ರೂ., ಮಂಗಳೂರು- 75,000 ರೂ., ಮುಂಬೈ- 72,600 ರೂ., ಚೆನ್ನೈ- 75,000 ರೂ., ದೆಹಲಿ- 72,600 ರೂ., ಹೈದರಾಬಾದ್- 75,000 ರೂ., ಕೊಲ್ಕತ್ತಾ- 72,600 ರೂ. ಇದೆ.

ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ